ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ ಭಾಷಣಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅವರನ್ನು ಆಹ್ವಾನಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಲಾಯಿತು.
ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಘಟಿಕೋತ್ಸವದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ವಿವಿಯ ಎಂಟು ಸಿಂಡಿಕೇಟ್ ಸದಸ್ಯರು ಗೌರವ ಡಾಕ್ಟರೇಟ್‌ಗೆ ಒಂದಷ್ಟು ಸಾಧಕರ ಹೆಸರನ್ನು ಸೂಚಿಸಿ ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಾಹಿತಿ ಜಯಂತ್ ಕಾಯ್ಕಿಣಿ, ಗಾಯಕರಾದ ಬಿ.ಆರ್.ಛಾಯಾ, ಡಾ.ಶಂಕರೇಗೌಡ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ನಿವೃತ್ತ ಕೆಎಎಸ್ ಅಧಿಕಾರಿ ವೈ.ಕೆ.ಮುದ್ದುಕೃಷ್ಣ, ನಟಿ ಉಮಾಶ್ರೀ, ಗಾಯಕ ಸಿದ್ದಪ್ಪ ಸಾಬಣ್ಣ ಅವರ ಹೆಸರುಗಳನ್ನು ಸಭೆ ಶಿಫಾರಸು ಮಾಡಿದೆ.
ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರಿನಲ್ಲಿ ಚಿನ್ನದ ದತ್ತಿ ನಿಧಿ ಸ್ಥಾಪನೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರಿನಲ್ಲಿ ಚಿನ್ನದ ದತ್ತಿ ನಿಧಿ ಸ್ಥಾಪನೆ ಮಾಡಲಾಗಿದೆ. ಮೈಸೂರು ವಿವಿ ವ್ಯಾಪ್ತಿಗೆ ಸೇರಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಚಾವಣಿ ಕುಸಿದಿದೆ. ಹಾಗಾಗಿ, ೨೦ ಲಕ್ಷ ರೂ. ವೆಚ್ಚದಲ್ಲಿ ತಾರಸಿ ನವೀಕರಣ ಮಾಡಲು ಅನು ಮೋದನೆ ದೊರೆಯಿತು. ಅಲ್ಲದೆ, ರೈತ ನಾಯಕ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅಧ್ಯನ ಪೀಠ ಸ್ಥಾಪನೆ ಮಾಡುವ ವಿಚಾರ ಕುರಿತು ಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆ ನಡೆಯಿತು.
ರಾಜ್ಯ ಸರ್ಕಾರ ೧ ಕೋಟಿ ರೂ. ನೀಡಿದೆ. ಆದರೆ, ಇಂದಿನ ಕಾಲಕ್ಕೆ ಸಿಗುತ್ತಿರುವ ಬಡ್ಡಿ ದರ ಕಡಿಮೆ ಇದೆ. ಹಾಗಾಗಿ ಸರ್ಕಾರ ನೀಡಿರುವ ಹಣದಿಂದ ಪೀಠ ನಡೆಸುವುದು ಕಷ್ಟ. ಪೀಠಕ್ಕೆ ಒಬ್ಬ ಸಂದರ್ಶಕ ಪ್ರಾಧ್ಯಾಪಕರನ್ನು ನೇಮಿಸಬೇಕು. ವಿಚಾರ ಸಂಕಿರಣ ಹಾಗೂ ಜಯಂತಿ ನಡೆಸಬೇಕು. ಇದೆಲ್ಲವೂ ಈ ಹಣದಿಂದ ಸಾಧ್ಯವಿಲ್ಲ. ಹಾಗಾಗಿ ಈ ಎಲ್ಲಾ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಹೆಚ್ಚುವರಿ ಅನುದಾನಕ್ಕಾಗಿ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರದಲ್ಲಿ ಎಂಎ ಕೋರ್ಸ್ ನಲ್ಲಿ ಅಂತಿಮ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಇದು ಸಿಗಲಿದೆ. ಸ್ನಾತಕೋತ್ತರ ರಾಜ್ಯಶಾಸ್ತ್ರದಲ್ಲಿ ಎರಡನೇ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಈ ಪದಕ ಲಭಿಸಲಿದೆ. ಚಾಮರಾಜನಗರ ಸಂಸದ ಸುನಿಲ್ ಬೋಸ್ ಅವರ ಹೆಸರಿನಲ್ಲಿ ನಗದು ಬಹುಮಾನ ಸ್ಥಾಪನೆ ಮಾಡಲಾಗಿದೆ.
ಮಹಾರಾಜ ಕಾಲೇಜಿನ ಕಲಾ ವಿಭಾಗದಲ್ಲಿ ಸ್ನಾತಕ ಪದವಿ ಅಂತಿಮ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಇದು ಸಿಗಲಿದೆ. ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ತಮ್ಮ ತಂದೆ ಕೃಷ್ಣಪ್ಪಗೌಡ ಹಾಗೂ ಸಾವಿತ್ರಮ್ಮ ಅವರ ಹೆಸರಿನಲ್ಲಿ ಚಿನ್ನದ ಪದಕ ದತ್ತಿ ನಿಧಿ ಸ್ಥಾಪನೆ ಮಾಡಿದ್ದಾರೆ. ಬಿಎಸ್ಸಿ ಭೌತಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕ ಪಡೆವ ವಿದ್ಯಾರ್ಥಿಗೆ ಇದು ಸಿಗಲಿದೆ. ಅದೇ ರೀತಿ ಪ್ರೊ.ಎನ್.ಲೋಕನಾಥ್, ಕುಲಪತಿ, ಮೈವಿವಿ ಹೆಸರಿನಲ್ಲಿ ದತ್ತಿ ಸ್ಥಾಪನೆ ಮಾಡಿದ್ದಾರೆ. ಸ್ನಾತಕೋತ್ತರ ಭೌತಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಇದು ಸಿಗಲಿದೆ. ಕುಲಸಚಿವರಾದ ಎಂ.ಕೆ.ಸವಿತಾ, ಕೆಎಎಸ್, ಹಿರಿಯ ಶ್ರೇಣಿ ಚಿನ್ನದ ಪದಕ ದತ್ತಿನಿಧಿ ಘೋಷಿಸಿದ್ದಾರೆ.
ಭೂಗೋಳಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಿಳಾ ಅಭ್ಯರ್ಥಿಗೆ ಇದು ಸಿಗಲಿದೆ. ಮಹಾರಾಜ ಕಾಲೇಜಿನಲ್ಲಿ ಭೂಗೋಳಶಾಸ್ತ್ರದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ನಗದು ಬಹುಮಾನವನ್ನೂ ಸ್ಥಾಪನೆ ಮಾಡಿದ್ದಾರೆ. ಇದೇ ವೇಳೆ ಇತ್ತೀಚಿಗೆ ನಿಧನರಾದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗ್ಡೆ ಅವರಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಕುಲಸಚಿವರಾದ ಪ್ರೊ.ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜು, ಮತ್ತಿತರರು ಹಾಜರಿದ್ದರು.
ಸಿಂಡಿಕೇಟ್‌ನಲ್ಲಿ ಏನೇನು ಚರ್ಚೆಯಾಯಿತು?:
* ವಿವಿಯ ಎಲ್ಲಾ ವಿದ್ಯಾರ್ಥಿಗಳ ಸಮಗ್ರ ಡಾಟಾ ಸಂಗ್ರಹಿಸುವ ಸಲುವಾಗಿ ಒಂದು ಸಾಫ್ಟ್‌ವೇರ್ ರೂಪಿಸಬೇಕು
* ವಿವಿ ಮಾಡಿಕೊಳ್ಳುವ ಒಡಂಬಡಿಕೆ, ಕರಾರುಗಳನ್ನು ಪಾರದರ್ಶಕವಾಗಿ ಇಡುವ ಸಲುವಾಗಿ ಸಾಫ್ಟ್‌ವೇರ್ ರಚಿಸಬೇಕು
* ಪಿಎಚ್.ಡಿ ನೋಂದಣಿ ಮಾಡಿಕೊಳ್ಳದ ಪ್ರೊಫೆಸರ‍್ಸ್‌ಗೆ ನೋಟಿಸ್ ನೀಡಲು ತೀರ್ಮಾನ
ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಈ ವಿಷಯದಲ್ಲಿ ಹೈಕಮಾಂಡ್ ತೀರ್ಮಾನವೇ…
ಬೆಳಗಾವಿ: ಮೈಸೂರಿನಲ್ಲಿ ನಡೆಯುವ ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬೈಲಹೊಂಗಲ…
ಕೇರಳ: ಶ್ರೀಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.27ರಂದು ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 10.10ರಿಂದ 11.30ರವರೆಗಿನ…
ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಡಿಸೆಂಬರ್.25ರಂದು ಬಿಡುಗಡೆಯಾಗಲಿದೆ. ಹುಬ್ಬಳ್ಳಿಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮದಲ್ಲಿ ಸುದೀಪ್…
ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ? ಬಾನಂದೂರು ರಂಗಪ್ಪ ತಣ್ಣಗೆ ಕಿಟಕಿಯಾಚೆ ನೋಡಿದರು. ಮನೆಯೊಳಗೆ…
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ…