ಸದ್ದಿಲ್ಲದೆ ಕೈಗೊಂಡ ತೀರ್ಮಾನಕ್ಕೆ ಬೆಚ್ಚಿದ ರಿಯಲ್ ಎಸ್ಟೇಟ್ ಉದ್ಯಮಿಗಳು; ಮೂರು ಪಕ್ಷಗಳಲ್ಲೂ ತಳಮಳ
ಕೆ.ಬಿ.ರಮೇಶನಾಯಕ
ಮೈಸೂರು : ಕಳೆದ ಎರಡು ವರ್ಷಗಳ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಖ್ಯಿಗೆ ಮುಯ್ಯ ತೀರಿಸಿಕೊಂಡಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಬದಲಿ ನಿವೇಶನಗಳನ್ನುರದ್ದುಪಡಿಸುವತೀರ್ಮಾನದಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ತಲ್ಲಣ ಉಂಟಾಗಿದೆ. ಅಲ್ಲದೆ, ರಿಯಲ್ ಎಸ್ಟೇಟ್ ಉದ್ದಿಮೆ ಪರ ಇರುವ ಆಡಳಿತ ಮತ್ತು ಪ್ರತಿಪಕ್ಷಗಳಲ್ಲಿರುವ ವ್ಯಕ್ತಿಗಳ ಮನದಲ್ಲಿ ಕೂಡ ಆತಂಕ ಸೃಷ್ಟಿಯಾಗಿದೆ. ಎರಡು ಸಾವಿರ ಕೋಟಿ ರೂ. ಮೌಲ್ಯದ1,100 ನಿವೇಶನಗಳನ್ನುರದ್ದುಪಡಿಸಿದ್ದರೂ ಕೂಡ ಮತ್ತಷ್ಟು ನಿವೇಶನಗಳ ಹಂಚಿಕೆ ಮಾಡಿರುವುದರ ರದ್ದತಿಗೆ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ಎಂಡಿಎ (ಮೈಸೂರು ಅಭಿವೃದ್ಧಿ ಪ್ರಾಧಿಕಾರ) ಮೂಲಗಳು ಹೇಳಿವೆ.
ಬದಲಿ ನಿವೇಶನ ಹಂಚಿಕೆ, ಭೂ ಪರಿಹಾರದ ಬದಲಿಗೆ ನಿವೇಶನ ಹಂಚಿಕೆ ವಿಚಾರ ಬೆಳಕಿಗೆ ಬಂದ ಬಳಿಕ ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ದೇವನೂರು ಎರಡನೇ ಹಂತದ ಜಮೀನಿನ ಪರಿಹಾರದ ಬದಲಿಗೆ ವಿಜಯನಗರದಲ್ಲಿ ಹದಿನಾಲ್ಕು ನಿವೇಶನಗಳನ್ನು ಹಂಚಿಕೆ ಮಾಡಿರುವ ವಿಚಾರವನ್ನು ಮುಂದಿಟ್ಟು ಬಿಜೆಪಿ ಪಾದಯಾತ್ರೆ ನಡೆಸಿತ್ತು. ಹೀಗಾಗಿ, ಪಾರ್ವತಿ ಅವರುಬದಲಿ ನಿವೇಶನಗಳನ್ನು ಹಿಂದಿರುಗಿಸಿದ್ದರು. ನಂತರ ಪಿ.ಎನ್.ದೇಸಾಯಿ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು. ಈ ಆಯೋಗವು ಆರು ತಿಂಗಳುಗಳ ಕಾಲ 2004ರಿಂದ ಭೂಮಿ ಸ್ವಾಧೀನ, ಪರಿಹಾರ, ಬದಲಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ ವರದಿ ನೀಡಿತ್ತು.
ಇದರ ಪರಿಣಾಮವಾಗಿ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಅಮಾನತು ಪಡಿಸಿತ್ತು. ಇದಲ್ಲದೆ ಮುಡಾವನ್ನು ವಿಸರ್ಜಿಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಹದಗೆಟ್ಟಿದ್ದ ಆಡಳಿತವನ್ನು ಸರಿದಾರಿಗೆ ತರಲು ಹಲವಾರು ಬದಲಾವಣೆ ಮಾಡಿತ್ತು. ಇದೆಲ್ಲದರ ಬೆಳವಣಿಗೆ ನಡುವೆ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಡಾ.ಯತೀಂದ್ರ ಎರಡೇ ತಿಂಗಳಲ್ಲಿ ಮುಟ್ಟಿನೋಡಿ ಕೊಳ್ಳುವಂತೆ ಮಾಡಿದ್ದಾರೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಂಚಿಕೆಯಾಗಿ ರುವ ಬದಲಿ ನಿವೇಶನಗಳ ಮಾಹಿತಿಯನ್ನು ಪಡೆದುಕೊಂಡು ರದ್ದುಪಡಿಸಿ ಆದೇಶ ಹೊರಬಿದ್ದಿರುವ ಹಿಂದೆ ಯತೀಂದ್ರರ ಚಾಣಾಕ್ಷತನ ಎದ್ದುಕಾಣುತ್ತದೆ.
ಮೂರು ಪಕ್ಷಗಳಲ್ಲೂ ತಳಮಳ ;
ಬದಲಿ ನಿವೇಶನ ಹಂಚಿಕೆ ರದ್ದುಪಡಿಸಿದ ವಿಚಾರದಲ್ಲಿ ಮೇಲ್ನೋಟಕ್ಕೆ ಹಂಚಿಕೆ ರದ್ದುಪಡಿಸಿದ ವಿಚಾರದಲ್ಲಿ ಮೇಲ್ನೋಟಕ್ಕೆ ಸ್ವಾಗತದ ಮಾತನ್ನಾಡಿದರೂ ಆಂತರಿಕವಾಗಿ ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲಿಯೂ ಗುರುತಿಸಿ ಕೊಂಡು, ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ವ್ಯಕ್ತಿಗಳ ನಿದ್ದೆಗೆಡಿಸಿದೆ. ಬದಲಿ ನಿವೇಶನ ಪಡೆದುಕೊಂಡು ಮಾರಾಟ
ತೀರ್ಮಾನ ಮಾಡಿರುವುದಲ್ಲದೆ, ಬದಲಿ ನಿವೇಶನಗಳನ್ನೂ ಪಡೆದು ಕೊಂಡಿದ್ದಾರೆ. ಹೀಗಾಗಿ ಅನೇಕರು ಮುಂದೇನೂ ಎನ್ನುವ ಚಿಂತೆಯಲ್ಲಿ ಇದ್ದಾರೆ. ಡಾ.ಯತೀಂದ್ರ ಅವರೇ ಈಗ ನಗರಾಭಿವೃದ್ಧಿ ಸಚಿವರಾಗಿ ಕೈಗೊಂಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ವ್ಯಕ್ತಿಗಳ ಬಾಯಿ ಮುಚ್ಚಿಸುವಂತೆ ಮಾಡಿದೆ. ಕೆಲವರು ವಿಶೇಷವಾಗಿ ತಮ್ಮ ಪ್ರಭಾವವನ್ನು ಬಳಸಿಕೊಂಡು ಪ್ರಾಧಿಕಾರದ ಸಭೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿಸಿದ್ದಾರೆ. ಇಂತಹ ಸೈಟುಗಳನ್ನು ಮಾರಾಟ ಹಾಗೂ ಖರೀದಿ ಮಾಡಿದವರಲ್ಲಿ ದೊಡ್ಡ ಚಿಂತೆಯನ್ನುಂಟು ಮಾಡಿಸಿದೆ.
ಮೊದಲಬಾರಿಗೆ ರಾಷ್ಟ್ರರಾಜಧಾನಿಯಿಂದ ಹೊರಗೆ ಆಯೋಜನೆ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಮೊದಲ ಬಾರಿಗೆ ನವದೆಹಲಿಯಿಂದ…
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…
ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…
ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…
ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…