Andolana originals

ಬುದ್ಧನ ಪ್ರತಿಮೆ ಮುಂದೆಯೇ ಮದ್ಯ ಮಾರಾಟ!

ನಂಜನಗೂಡು: ಸಾರ್ವಜನಿಕರು, ಸಂಘಟನೆಗಳವರಿಂದ ತೀವ್ರ ಆಕ್ರೋಶ

ನಂಜನಗೂಡು: ದುಶ್ಚಟಗಳನ್ನು ತ್ಯಜಿಸಿ ಎಂದು ಲೋಕಕ್ಕೆ ಸಂದೇಶ ಸಾರಿದ ಮಹಾ ದಾರ್ಶನಿಕ ಗೌತಮ ಬುದ್ಧರ ಆಳೆತ್ತರದ ಪ್ರತಿಮೆ ಪ್ರತಿಷ್ಠಾಪಿಸಿ ಅದರ ಮುಂದೆಯೇ  ಮದ್ಯ ಮಾರಾಟ ಮಾಡುತ್ತಿರುವ ಘಟನೆ ಮಹದೇವ ನಗರದಲ್ಲಿ ನಡೆದಿದ್ದು, ಇದಕ್ಕೆ ನಂಜನಗೂಡಿನ ಅನೇಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಮದ್ಯ ಮಾರಾಟ ಮಳಿಗೆ ಪಕ್ಕದಲ್ಲೇ ಕಲ್ಯಾಣ ಮಂಟಪವೂ ಇದ್ದು, ಅಲ್ಲಿನ ಶುಭ ಕಾರ್ಯಗಳಲ್ಲಿ ಮದ್ಯದ ಸಮಾರಾಧನೆ ಅಕ್ರಮವಾಗಿ ನಡೆಯುತ್ತಿರುವುದು ಜಗಜ್ಜಾಹೀರಾಗಿದ್ದು, ಈ ಮದ್ಯದ ಅಂಗಡಿಯನ್ನು  ಸ್ಥಳಾಂತರಿಸುವಂತೆ ಅಧಿಕಾರಿಗಳನ್ನು ಮಹದೇವನಗರದ ನಿವಾಸಿಗಳು  ಆಗ್ರಹಿಸಿದ್ದಾರೆ.

ತಾಲ್ಲೂಕಿನ ಬದನವಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮರಾಜನಗರ ಹೆದ್ದಾರಿಯಲ್ಲಿರುವ ಮಹದೇವನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ  ಕಲ್ಯಾಣ ಮಂಟಪದ ಕಿಟಕಿ ತೆಗೆದು ಲಿಕ್ಕರ್ ಅಂಗಡಿಯಿಂದ ಲಿಕ್ಕರ್ ಪಡೆಯಲಾಗುತ್ತದೆ ಎಂದು ಸಂಘಟಕರು ದೂರಿನಲ್ಲಿ ಆರೋಪಿಸಿದ್ದಾರೆ.

ಬಾರ್ ಅಂಡ್ ರೆಸ್ಟೋರೆಂಟ್ ಮುಂಭಾಗವೇ ಗೌತಮ ಬುದ್ಧನ ಪ್ರತಿಮೆ ನಿರ್ಮಿಸಿ ಆ ಮಹಾ ದಾರ್ಶನಿಕನಿಗೆ  ಅಗೌರವ ಸೂಚಿಸಿ, ಅಪಚಾರ ಮಾಡಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್‌ಗೆ ನೀಡಿದ ಅನುಮತಿ ಅವಧಿ ಪೂರ್ಣಗೊಂಡಿದ್ದರೂ ಅದರ ಪರವಾನಗಿಯನ್ನು  ನವೀಕರಿಸದೆ ವಹಿವಾಟು ನಡೆಸಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಈಗಾಗಲೇ ಅಬಕಾರಿ ಇಲಾಖೆಗೆ ದೂರು ನೀಡಿದ್ದು, ಬಾರ್ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಾರ್ ಅಂಡ್ ರೆಸ್ಟೋರೆಂಟ್ ಅನ್ನು ಮುಚ್ಚಬೇಕು. ಇಲ್ಲವಾದಲ್ಲಿ ಗ್ರಾಮಸ್ಥರ ಜೊತೆಗೂಡಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

” ಬದನವಾಳು ಗ್ರಾಮ ಪಂಚಾಯಿತಿಯಿಂದ ಹೋಟೆಲ್ ಗೆ ಪಡೆದ ಅನುಮತಿ ಅವಧಿಯೂ ಮುಗಿದಿದ್ದು ಅದನ್ನು ನವೀಕರಿಸದೆ ವ್ಯಾಪಾರ ಮಾಡಲಾಗುತ್ತಿದೆ.  ಮದ್ಯದ ಅಂಗಡಿಯ ಮುಂಭಾಗದಲ್ಲೇ ಗೌತಮ ಬುದ್ಧರ ಪ್ರತಿಮೆಯನ್ನು  ಸ್ಥಾಪಿಸಿ ಮದ್ಯ ಮಾರಾಟ ಮಾಡುತ್ತಿರುವುದು ಬುದ್ಧನಿಗೆ ಮಾಡುತ್ತಿರುವ ಅಪಮಾನ. ಮದ್ಯ ಮಾರಾಟ ನಿಲ್ಲಿಸದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.”

 -ರಂಗದಾಸ, ಮಾಜಿ ಸದಸ್ಯ,  ಬದನವಾಳು  ಗ್ರಾಪಂ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಿಜವಾದ ಭಾವೈಕ್ಯತೆಯ ಸಂಗಮ

ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…

24 seconds ago

ಓದುಗರ ಪತ್ರ: ನಾಡಿಗೆ ಮಾದರಿ!

ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…

2 mins ago

ಓದುಗರ ಪತ್ರ: ಪ್ರೀತಿಯ ಅಣ್ಣ ಪ್ರತಾಪ್ ಸಿಂಹ…

ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…

3 mins ago

ದಸರಾ ಬರುತ್ತಿದೆ, ಮೈಸೂರು ಸಿದ್ಧವಾಗುತ್ತಿದೆಯೇ?

ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ  ಮೈಸೂರು ದಸರಾ ಎಂದರೆ ಕೇವಲ ಹತ್ತು…

7 mins ago

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

12 mins ago

ಕೊಡಗಿನಲ್ಲಿ ಅಂದಾಜು ೨,೨೭೯ ಹೆಕ್ಟೇರ್ ಬೆಳೆ ಹಾನಿ

ನವೀನ್ ಡಿಸೋಜ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ೧.೯೩ ಕೋಟಿ ರೂ. ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಮಡಿಕೇರಿ: ಸಾಮಾನ್ಯವಾಗಿ ಮುಂಗಾರು ಮಳೆಯೊಂದಿಗೆ…

19 mins ago