Andolana originals

ʼದೀಪಾವಳಿ ಸಂಭ್ರಮ ಪರಿಸರಕ್ಕೆ ಮಾರಕ ಆಗದಿರಲಿ’

• ಸಂದರ್ಶನ: ಬಾ.ನಾ.ಸುಬ್ರಹ್ಮಣ್ಯ
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ತಮ್ಮ ಚೆಲುವು, ಮುಗ್ಧತೆ ಮತ್ತು ಅಭಿನಯದಿಂದ ಎಲ್ಲರಿಗೂ ಇಷ್ಟವಾದ ನಾಯಕನಟಿ ರುಕ್ಕಿಣಿ ವಸಂತ್, ಅಲ್ಪ ಕಾಲದಲ್ಲೇ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರ ರಾಗಿದ್ದಾರೆ. ‘ಬರ’ ಮತ್ತು ಭೈರತಿ ರಣಗಲ್ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಈ ಸಂದರ್ಭದಲ್ಲಿ “ಆಂದೋಲನ’ದ ಜೊತೆಗೆ ಮಾತ್ರನಾಡಿರುವ ರುಕ್ಕಿಣಿ, ದೀಪಾವಳಿಯ ನೆನಪುಗಳು, ಈ ಬಾರಿಯ ದೀಪಾವಳಿ ಆಚರಣೆ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಆಂದೋಲನ: ದೀಪಾವಳಿ ಎಂದರೆ ನಿಮ್ಮ ಪಾಲಿಗೆ ಏನು?
ರುಕ್ಕಿಣಿ ವಸಂತ್‌: ಸಂಭ್ರಮ. ಎಲ್ಲರೂ ಒಟ್ಟಿಗೆ ಸೇರಲು ಸಿಗುವ ಅವಕಾಶ, ಖುಷಿ,

• ಆಂದೋಲನ: ದೀಪಾವಳಿ ಹಬ್ಬದ ನಿಮ್ಮ ಬಾಲ್ಯದ ನೆನಪು ಗಳೇನು? ಹೇಗೆ ಆಚರಿಸುತ್ತಿದ್ದಿರಿ?
ರುಕ್ಕಿಣಿ ವಸಂತ್‌: ನನಗೆ ದೀಪಾವಳಿ ಕುರಿತಂತೆ ಜಾಸ್ತಿ ನೆನಪುಗಳಿಲ್ಲ. ಆ ಅನುಭವದ ನೆನಪು ಮಾತ್ರ. ವಿದೇಶದಲ್ಲಿರುವ ನಮ್ಮ ಸಂಬಂಧಿಕರೆಲ್ಲ ನಮ್ಮ ಅಜ್ಜಿ ಮನೆಗೆ ಬರುತ್ತಿದ್ದರು. ಬೆಂಗಳೂರಿನಲ್ಲಿದ್ದಾಗ ನಾವು ಅಜ್ಜಿ ಮನೆಯಲ್ಲೇ ಇದ್ದೆವು. ಉಳಿದಂತೆ ಸೇನೆಯಲ್ಲಿದ್ದ ಅಪ್ಪನ ಜೊತೆಯಲ್ಲಿ ಬೇರೆ ಊರುಗಳಲ್ಲಿ ಇರುತ್ತಿದ್ದೆವು.

ಉತ್ತರ ಭಾರತದಲ್ಲಿ, ಬೇರೆ ಬೇರೆ ಕಡೆ… ದೀಪಾವಳಿ ವೇಳೆ ನಾವೆಲ್ಲ ಸೇರಿಕೊಂಡು ಅಜ್ಜಿ ಮನೆಗೆ ಹೋಗ್ತಾ ಇದ್ವಿ. ಅಲ್ಲಿ ಹಬ್ಬದೂಟ, ಹೊಸಬಟ್ಟೆ… ಕೆಲವೊಬ್ರು ಪಟಾಕಿ ಹೊಡೀತಾ ಇದ್ರು… ನನಗೆ ಆ ಶಬ್ದಇಷ್ಟ ಆಗ್ತಿರಲಿಲ್ಲ… ನಾನು ಬರೀ ಸ್ಟಾರ್ಕ್ಟರ್ ಹಿಡ್ಕೊಂಡು ಓಡಾಡುತ್ತಿದ್ದೆ ಎಲ್ಲಾ ಕಡೆ, ನನಗೆ ಹೊಸ ಬಟ್ಟೆ, ಹಬ್ಬದೂಟ, ಎಲ್ಲ ಕಡೆ ದೀಪ ಹಚ್ಚೇದು ಆ ತರಹದ ನೆನಪುಗಳಿರೋದು.

ಕುಟುಂಬದ ಎಲ್ಲರೂ ಒಟ್ಟಿಗೆ ಸೇರುವ ಖುಷಿ ಮಾತ್ರ ಮರೆಯಲಾಗದ್ದು. ಕುಟುಂಬದ ಎಲ್ಲರೂ ಒಟ್ಟಿಗೆ ಸೇರುವ ಖುಷಿ ಮಾತ್ರ ಮರೆಯಲಾಗದ್ದು. ನಾವೆಲ್ಲ ಅಜ್ಜಿ ಮನೆಯಲ್ಲಿ ಸೇರ್ಕೊಂಡು, ಇಲ್ಲಿದ್ದರೆ ಆಂಟಿ, ಅಂಕಲ್ ಮನೇಲಿ ಸೇರ್ಕೊಂಡು ಒಟ್ಟಿಗೆ ಆಚರಿಸುತ್ತಿದ್ಬಿ. ಬಹಳ ದಿನಗಳ ನಂತರ ವರ್ಷದಲ್ಲೊಮ್ಮೆ ಕುಟುಂಬದವರೆಲ್ಲರ ಜೊತೆಗೆ ಸೇರುವ ಅವಕಾಶ; ಕಸಿನ್ಸ್ ಎಲ್ಲ ಒಟ್ಟಿಗೆ ಸೇರ್ಕೊಂಡು, ಓಡಾಡಿಕೊಂಡು ಹಬ್ಬ ಆಚರಿಸಿದ ಖುಷಿಯ ಅನುಭವ.

ಆಂದೋಲನ: ಈ ಬಾರಿ ದೀಪಾವಳಿ ಹೇಗೆ ಆಚರಿಸುತ್ತೀರಿ?
ರುಕ್ಕಿಣಿ ವಸಂತ್: ಈ ದೀಪಾವಳಿ ಸ್ವಲ್ಪ ಬೇರೆ ಥರ ಇರುತ್ತೆ. ಯಾಕೆಂದ್ರೆ ಬಘೀರ ಹಾಗೂ ಭೈರತಿ ರಣಗಲ್ ಈ ಎರಡು ಚಿತ್ರಗಳು ರಿಲೀಸ್ ಆಗ್ತಿವೆ. ಹಾಗಾಗಿ ಹಿಂದಿನಂತೆ ಆಚರಿಸಲಿಕ್ಕೆ ಸಮಯಸಿಗುತ್ತಿಲ್ಲ. ನಮ್ಮ ಕುಟುಂಬದವರು ಈಗಾಗಲೇ ಇಂಡಿಯಾಕ್ಕೆ ಬಂದಿದ್ದಾರೆ. ಅವರ ಜೊತೆ ಕಾಲಕಳೆಯೋಕೆ ತುಂಬಾ ಆಸೆ. ಆದರೆ ಆಗುತ್ತಿಲ್ಲ. ಚಿತ್ರಗಳ ಪ್ರೊಮೋಶನ್‌ ಗಾಗಿ ಎಲ್ಲ ಕಡೆ ಓಡಾಡ್ತಾ ಇದ್ದೀನಿ; ಹಾಗೂ ಕೆಲವೊಂದು ಚಿತ್ರಗಳ ಚಿತ್ರೀಕರಣ ಬೇರೆ ನಡೆಯುತ್ತಿದೆ ಮಧ್ಯದಲ್ಲಿ ಹಾಗಾಗಿ ಈ ಸಲ ಪ್ರೊಫೆಶನಲ್ ದೀಪಾವಳಿ ಆಗಿಹೋಗಿದೆ. ತುಂಬಾ ಖುಷಿಯ ವಿಷಯ. ಯಾಕೆಂದರೆ ಅದು ಒಂದು ಬೇರೆಯೇ ರೀತಿಯ ಅನುಭವ.

ಆಂದೋಲನ: ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಆಶಯಗಳೇನು?
ರುಕ್ಷಿಣಿ ವಸಂತ್: ನಾನು ಈ ದೀಪಾವಳಿಗೆ ಬರೀ ಸಿನಿಮಾ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ. ನನಗೆ ವೃತ್ತಿಪರ ನಿರೀಕ್ಷೆ ಮತ್ತು ಕನಸುಗಳಿವೆ. ಬಘೀರ ಮತ್ತು ಭೈರತಿ ರಣಗಲ್ ಚೆನ್ನಾಗಿ ಓಡಬೇಕು, ಜನರಿಗೆ ಇಷ್ಟ ಆಗಬೇಕು; ನನ್ನ ಪಾತ್ರಗಳು, ನಾನು ಪಾತ್ರಗಳನ್ನು ನಿಭಾಯಿಸಿದ ರೀತಿ ಎಲ್ಲರಿಗೂ ಇಷ್ಟ ಆಗಬೇಕು ಅಂತ ಆಶಿಸುತ್ತೀನಿ.

ಆಂದೋಲನ: ನಮ್ಮ ಓದುಗರಿಗೆ, ಕನ್ನಡಿಗರಿಗೆ, ಈ ಸಂದರ್ಭದಲ್ಲಿ ಏನು ಹೇಳಲು ಬಯಸುತ್ತೀರಿ?
ರುಕ್ಕಿಣಿ ವಸಂತ್: ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ಎಲ್ಲರೂ ಈ ಹಬ್ಬಾನ ನಿಮ್ಮ ಕುಟುಂಬದ ಜೊತೆಗೆ, ಸ್ನೇಹಿತರ ಜೊತೆಗೆ ಆಚರಿಸಿ, ಸಂಭ್ರಮಿಸಿ ಪಟಾಕಿ ಹೊಡೆಯುವುದಾದರೆ ಹುಷಾರಾಗಿ ಹೊಡೆಯಿರಿ. ಹೆಚ್ಚು ಪರಿಸರ ಮಾಲಿನ್ಯ ಆಗಲು ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳುತ್ತೇನೆ.

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಲಕ್ಷಾಂತರ ತಂಗಿಯರ ಬದುಕನ್ನು ಹೊಲಿಯುವ ‘ಟೈಲರ್ ಅಣ್ಣʼ

ತಮಿಳುನಾಡಿನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸೆಲ್ವಕುಮಾರ್ ಹೊಲಿಗೆ ತರಬೇತಿ ಯೂಟ್ಯೂಬ್ ತೆರೆದು ಅದರಲ್ಲಿ ‘ಟೈಲರ್ ಬ್ರೋ’ ಎಂದು ಟೈಪಿಸಿದರೆ…

26 mins ago

ಮಡಿಕೇರಿ ನಗರದ ಅನಧಿಕೃತ ಹೋಂಸ್ಟೇಗಳಿಗೆ ನೋಟಿಸ್

ಪುನೀತ್ ಮಡಿಕೇರಿ ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಮತ್ತು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ನಗರದ ಹೋಂಸ್ಟೇಗಳಿಗೆ…

31 mins ago

ಮಿರ್ಲೆ: ಹುಣಸಮ್ಮ ತಾಯಿ ಸಿಡಿ ಉತ್ಸವಕ್ಕೆ ಸಕಲ ಸಿದ್ಧತೆ

ಕೆ.ಟಿ.ಮೋಹನ್ ಕುಮಾರ್ ಫೆ.೨೭ರಂದು ನವಗ್ರಾಮದೇವತೆ ಹುಣಸಮ್ಮತಾಯಿ ಸಿಡಿ ಉತ್ಸವ, ೨೮ರಂದು ರಥೋತ್ಸವ ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ…

35 mins ago

ಮೊಬೈಲ್ ವ್ಯಸನ; ಕೊರೊನಾ ಸಂದರ್ಭ ಮೂಲ ಕಾರಣ

ಕೆ.ಎಸ್.ಚಂದ್ರಶೇಖರಮೂರ್ತಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಚಿಂತನೆಗೆ ಶಿಕ್ಷಕ ವೃಂದ ಸ್ವಾಗತ  ಮೈಸೂರು: ಆಧುನಿಕತೆ ಬೆಳೆಯುತ್ತಾ ಹೋದಂತೆ ಆಧುನಿಕ ತಂತ್ರಜನ…

39 mins ago

‘ಮೈಸೂರು ಮತ್ತೆ ಸ್ವಚ್ಛ ನಗರಿ ಗರಿ ಧರಿಸಬೇಕು’

ಪ್ರಶಾಂತ್ ಎನ್.ಮಲ್ಲಿಕ್ ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್…

1 hour ago

ಸಫಾರಿ ಕಾಡಿನ ನಾಶಕ್ಕೆ ರಹದಾರಿ: ರೈತರ ಆರೋಪ

ಗಿರೀಶ್ ಹುಣಸೂರು ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ …

1 hour ago