Andolana originals

ಮಳೆ ಕೊರತೆ; ಭರ್ತಿಯಾಗದ ಉಡುತೊರೆ ಜಲಾಶಯ

ಹನೂರು ತಾಲ್ಲೂಕು ವ್ಯಾಪ್ತಿಯ ರೈತರಲ್ಲಿ ಆತಂಕ

ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಉಡುತೊರೆ ಜಲಾಶಯ ಭರ್ತಿಯಾಗದೆ, ಇರುವ ನೀರು ಕೂಡ ಖಾಲಿಯಾಗುತ್ತಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ.

ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಮಳೆಯಾಗದೆ ಜಲಾಶಯಗಳೆಲ್ಲ ಬರಿದಾಗುತ್ತಿದ್ದು, ಮುಂದಿನ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ದಿನ ನಿರಂತರವಾಗಿ ಭಾರಿ ಮಳೆ ಬಿದ್ದ ಪರಿಣಾಮ ಉಡುತೊರೆ ಜಲಾಶಯಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಹರಿದು ಜಲಾಶಯ ಅರ್ಧ ಭರ್ತಿಯಾಗಿತ್ತು. ಕುಡಿಯುವ ನೀರಿಗೆ ಹಾಗೂ ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದರಿಂದ ಉಡುತೊರೆ ಜಲಾಶಯದಿಂದ ಮಾರ್ಟಳ್ಳಿ ಸಮೀಪದ ಕೀರೆಪಾತಿ ಹಾಗೂ ಕೌದಳ್ಳಿ ಭಾಗದ ಹಲವು ಗ್ರಾಮಗಳಿಗೆ ಹಳ್ಳದ ಮೂಲಕ ನೀರು ಹರಿಸಲಾಗಿತ್ತು. ಇದೀಗ ಜಲಾಶಯದಲ್ಲಿನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಈ ಭಾಗದರೈತರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗಬಹುದು ಎಂಬ ಆತಂಕ ಎದುರಾಗಿದೆ.

ಕ್ಷೇತ್ರ ವ್ಯಾಪ್ತಿಯ ಮೂರು ಜಲಾಶಯಗಳಿಗೆ ಮಾತ್ರ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದೆ. ಉಳಿದ ಜಲಾಶಯಗಳಿಗೂ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿದರೆ ಕ್ಷೇತ್ರ ವ್ಯಾಪ್ತಿಯ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

” ಈ ಬಾರಿ ಸಮರ್ಪಕವಾಗಿ ಮಳೆಯಾಗದೆ ಜಲಾಶಯ ಭರ್ತಿಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಜಲಾಶಯದಿಂದ ನೀರು ಬಿಡಲಾಗಿದೆ. ಜಲಾಶಯದಲ್ಲಿ ೦.೧ ಟಿಎಂಸಿ ನೀರು ಮಾತ್ರ ಇದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಜಲಾಶಯದಿಂದ ನೀರು ಹರಿಸಿದರೆ ಸಂಪೂರ್ಣ ಖಾಲಿಯಾಗಲಿದೆ. ಮಳೆಯಾದರೆ ಬೇಸಿಗೆ ಸಮಯದಲ್ಲಿ ಅನುಕೂಲವಾಗಲಿದೆ. ಇಲ್ಲದಿದ್ದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.”

ಕರುಣಾಮಯಿ, ಎಇಇ, ಕಾವೇರಿ ನೀರಾವರಿ ನಿಗಮ

ಆಂದೋಲನ ಡೆಸ್ಕ್

Recent Posts

ಹೂ ಮಳೆಗಾಗಿ ಕಾದಿರುವ ಕಾಫಿ ಬೆಳೆಗಾರರು

ನವೀನ್ ಡಿಸೋಜ ಕೆಲವೆಡೆ ಸ್ಪಿಂಕ್ಲರ್ ಮೊರೆ ಹೋದ ಕೃಷಿಕರು; ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ  ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…

2 hours ago

ಫೆ.26, 27ಕ್ಕೆ ಕಡಬೂರಿನಲ್ಲಿ ಶಿವ, ಗಣೇಶ ದೇವಸ್ಥಾನ ಲೋಕಾರ್ಪಣೆ

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಫೆ.೨೬ ಮತ್ತು ೨೭ರಂದು ನೂತನವಾಗಿ ನಿರ್ಮಾಣವಾಗಿರುವ ಶಿವ ಮತ್ತು ಗಣೇಶ ದೇವಾಲಯದ…

3 hours ago

ಅವ್ಯವಸ್ಥೆಯಿಂದ ಕೂಡಿದ ಚರಂಡಿ ಕಾಮಗಾರಿ: ಆರೋಪ

ಮಂಜು ಕೋಟೆ ಕೋಟೆ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ ಎಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ.…

3 hours ago

ನಾ.ದಿವಾಕರ ಅವರ ವಾರದ ಅಂಕಣ: ಎಳೆ ಪ್ರತಿಭೆಗೆ ಸಾಕ್ಷಿಯಾದ ರಂಗ ಪ್ರಯೋಗ

ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ.  ನಾ.ದಿವಾಕರ ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು…

3 hours ago

ಶಂಕರಾಚಾರ್ಯರ ಬಂಧನಕ್ಕೆ ವೇದಿಕೆ ಸಿದ್ಧ!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ‘ಧರ್ಮ ಯುದ್ಧ’ ಸಾರಿರುವ ಆದಿಗುರು ಶಂಕರಾಚಾರ್ಯರೇ ಸ್ಥಾಪನೆ ಮಾಡಿದ ಜ್ಯೋತಿರ್ ಪೀಠದ…

3 hours ago

ಮೊಬೈಲ್ ಮಿತ ಬಳಕೆ; ವಿದ್ಯಾರ್ಥಿಗಳ ಬಯಕೆ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ…

3 hours ago