Andolana originals

ಜಂಬೂ ಸವಾರಿ: ಈ ಬಾರಿ ಶ್ರೀಕಂಠದತ್ತನ ಸವಾರಿ!

ಚಿರಂಜೀವಿ ಸಿ.ಹುಲ್ಲಹಳ್ಳಿ

ಮೊದಲ ಬಾರಿಗೆ ದಸರಾದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೇಮಾವತಿ, ರೂಪ ಆನೆಗಳೂ ಭಾಗಿ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ದೈತ್ಯದೇಹಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ೧೧ ವರ್ಷದ ಹೇಮಾವತಿ ಮತ್ತು ರೂಪ ಆನೆಗಳು  ಭಾಗವಹಿಸುತ್ತಿದ್ದು, ಜಂಬೂ ಸವಾರಿಗೆ ಮೆರುಗು ನೀಡಲಿವೆ.

ಆನೆ ಶಿಬಿರಗಳಲ್ಲಿರುವ ಬಹುಪಾಲು ಹೆಣ್ಣಾನೆಗಳ ವಯಸ್ಸು ೫೦ ದಾಟಿರುವುದರಿಂದ ವನ್ಯಜೀವಿ ಕಾಯ್ದೆಯಡಿ ಅವುಗಳನ್ನು ದಸರೆಗೆ ಕರೆತರಲು ಆಗದ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಆನೆಗಳು ಮೈಸೂರಿನ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕಲು ಸಜ್ಜುಗೊಳಿಸಲಾಗಿದೆ. ಕಳೆದ ಬಾರಿ ಭಾಗವಹಿಸಿದ್ದ ರೋಹಿತ, ಹಿರಣ್ಯ ಮತ್ತು ವರಲಕ್ಷ್ಮೀ ಆನೆಗಳ ಬದಲಾಗಿ ಅಜಾನುಬಾಹು ಶ್ರೀಕಂಠ, ರೂಪ ಮತ್ತು ಹೇಮಾವತಿ ಆನೆಗಳನ್ನು ದಸರಾಗೆ ಪರಿಚಯಿಸಲಾಗುತ್ತಿದೆ. ಜೊತೆಗೆ ಎರಡನೇ ಹಂತದ ಆನೆಗಳನ್ನು ಸಿದ್ಧಗೊಳಿಸುವ ಉದ್ದೇಶದಿಂದ ತರಬೇತಿಗೆ ಅರಣ್ಯ ಇಲಾಖೆ ಮುಂದಾಗಿದೆ.

ಹುಲಿಗೆ ಅಂಜದ ದೈತ್ಯ ಶ್ರೀಕಂಠ!:

೨೦೧೪ರಲ್ಲಿ ಅರಣ್ಯ ಇಲಾಖೆ ಸೆರೆ ಹಿಡಿದಿದ್ದ ದೈತ್ಯ ಕಾಡಾನೆಯೊಂದಕ್ಕೆ ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನೆನಪಿಗಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂದು ಹೆಸರಿಡಲಾಗಿದೆ. ೨೦೧೪ರಲ್ಲಿ ಶನಿವಾರಸಂತೆ ಅರಣ್ಯ ಭಾಗದಲ್ಲಿ ಸೆರೆಹಿಡಿದಿದ್ದ ನಾಲ್ಕು ಆನೆಗಳ ಪೈಕಿ ಅಜಾನುಬಾಹು ಆನೆಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಎಂದು ಹೆಸರಿಡಲಾಗಿತ್ತು. ಮತ್ತಿಗೋಡು ಆನೆ ಶಿಬಿರದಲ್ಲಿರುವ ಶಾಂತ ಸ್ವಭಾವದ ೫೬ ವರ್ಷದ ಈ ಆನೆ ೫,೫೦೦ ತೂಕ ಹೊಂದಿದೆ.

ಕಳೆದ ವರ್ಷ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟ ಪರಾಕ್ರಮಿ ಅರ್ಜುನನಂತೆ ಭಾರಿ ಮೈಕಟ್ಟು ಹೊಂದಿರುವ ಈ ಆನೆಯು ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಳಗಿದೆ. ಅದರಲ್ಲೂ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಯಾವ ಅಂಜಿಕೆಯಿಲ್ಲದೇ ಮುನ್ನುಗ್ಗುವ ಶ್ರೀಕಂಠ ಅಜಾನುಬಾಹು ಅಷ್ಟೇ ಅಲ್ಲದೇ ಧೈರ್ಯಶಾಲಿ ಆನೆ ಆಗಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್: 

ವಯಸ್ಸು: ೫೬ ವರ್ಷ

ಎತ್ತರ: ೨.೮೬ ಮೀಟರ್

ಉದ್ದ: ೩.೨೫ ಮೀಟರ್

ತೂಕ: ೫,೫೦೦ ಕೆಜಿ

ಶಿಬಿರ: ಮತ್ತಿಗೋಡು

ಮಾವುತ: ರಾಧಾಕೃಷ್ಣ

ಕಾವಾಡಿ: ಓಂಕಾರ್

ಸರ್ಕಸ್ ಮಾಡುತ್ತಿದ್ದ ರೂಪ!: 

ಶ್ರೀಕಂಠನ ಜೊತೆಗೆ ಭೀಮನಕಟ್ಟೆ ಆನೆ ಶಿಬಿರದ ರೂಪ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದೆ. ೨೦೧೬ರಲ್ಲಿ ಪ್ರಕೃತಿ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಸ್ ಕಂಪೆನಿಯಿಂದ ರಕ್ಷಿಸಿ ಅರಣ್ಯ ಇಲಾಖೆಯವರು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಇದು ಎಲ್ಲರ ನೆಚ್ಚಿನ ಆನೆಯಾಗಿz

ರೂಪ

ವಯಸ್ಸು: ೪೪ ವರ್ಷ

ಎತ್ತರ: ೨.೪೫ ಮೀ.

ಉದ್ದ: ೨.೯೦ ಮೀ.

ತೂಕ: ೩,೫೦೦ ಕೆ.ಜಿ

ಶಿಬಿರ: ಭೀಮನಕಟ್ಟೆ

ಮಾವುತ: ಮಂಜುನಾಥ್

ಕಾವಾಡಿ: ಮಂಜು

ಶಾಂತ ಸ್ವರೂಪಿ ೧೧ ವರ್ಷದ ಹೇಮಾವತಿ:  ಪ್ರಪ್ರಥಮ ಬಾರಿಗೆ ಮೈಸೂರಿನ ರಾಜ ಬೀದಿಗಳಲ್ಲಿ ಹೆಜ್ಜೆ ಹಾಕಲು ಶಾಂತ ಸ್ವಭಾವದ ೧೧ ವರ್ಷದ ಹೇಮಾವತಿ ಆನೆ ಸಜ್ಜಾಗಿದೆ. ೨೦೧೪ರ ನವೆಂಬರ್ ತಿಂಗಳಲ್ಲಿ ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಜನಿಸಿದೆ. ಅಲ್ಲಿಯೇ ಆಡಿ ಬೆಳೆದಿದೆ. ಮನುಷ್ಯರನ್ನು ಚೆನ್ನಾಗಿ ಹೊಂದಿಕೊಂಡಿದೆ. ಶಿಬಿರದ ವಾತಾವರಣಕ್ಕೆ ಹೊಂದಿಕೊಂಡಿರುವ ಹೇಮಾವತಿ, ಮಾವುತರು ನೀಡಿದ ತರಬೇತಿಯಿಂದ ಶಿಸ್ತು, ಶಾಂತ ಸ್ವಭಾವ ಮತ್ತು ಕೌಶಲಗಳ ಮೂಲಕ ಗಮನ ಸೆಳೆದಿದೆ. ಇದೀಗ ಈ ಆನೆಯು ಮೊದಲ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾಗಿದೆ.

ಹೇಮಾವತಿ

ವಯಸ್ಸು: ೧೧ ವರ್ಷ

ಎತ್ತರ: ೨.೨೫ ಮೀ.

ಉದ್ದ: ೨.೮ ಮೀ.

ತೂಕ: ೨,೫೦೦ ಕೆಜಿ

ಶಿಬಿರ: ದುಬಾರೆ

ಮಾವುತ: ನಯಾಜ್  ಪಾಷ

ಕಾವಾಡಿ: ಜೆ.ಎನ್.ಅಬಿಲ್

ಆಂದೋಲನ ಡೆಸ್ಕ್

Recent Posts

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ

ಕಠ್ಮಂಡು: ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತದ ಆರ್ಭಟ ಮುಂದುವರಿದಿದ್ದು, ಕೇವಲ 8 ಸೆಕೆಂಡ್‌ಗಳಲ್ಲಿ ಪರ್ವತವೇ ಕುಸಿದು ಬಿದ್ದಿದೆ! ವಿವಿಧೆಡೆ ಸಂಭವಿಸಿದ…

9 hours ago

ಕಾಡುಹಂದಿ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪಳನಿಮೇಡ್ ಗ್ರಾಮದಲ್ಲಿ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿದ್ದು,…

10 hours ago

ಶೀಘ್ರದಲ್ಲೇ ಅಕ್ರಮ ಸೈಟ್‌ಗಳ ಪಟ್ಟಿ ಬಿಡುಗಡೆ: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಮುಡಾ 50:50 ಸೈಟ್‌ ವಿಚಾರದಲ್ಲಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಹತ್ವದ ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲೇ ಅಕ್ರಮ ಸೈಟ್‌ಗಳ…

11 hours ago

ಮೈಸೂರು ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಿಲ್ಲ: ಗವಿಸಿದ್ಧೇಶ್ವರ ಶ್ರೀಗಳಿಂದ ಸ್ಪಷ್ಟನೆ

ಕೊಪ್ಪಳ: ಮೈಸೂರು ದಸರಾ ಉದ್ಘಾಟನೆ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ತೆರೆ ಎಳೆದಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ…

13 hours ago

ಬ್ಯಾಂಕ್‌ ಗ್ರಾಹಕರಿಗೆ ಗುಡ್‌ನ್ಯೂಸ್‌: ಇಂದಿನಿಂದ 3 ದಿನ ಕರೆ ನೀಡಿದ್ದ ಬ್ಯಾಂಕ್‌ ಮುಷ್ಕರ ಮುಂದೂಡಿಕೆ

ನವದೆಹಲಿ: ಬ್ಯಾಂಕ್‌ ಗ್ರಾಹಕರಿಗೆ ಯಾವುದೇ ಆತಂಕ ಬೇಡ. ಇಂದಿನಿಂದ ನಡೆಯಬೇಕಿದ್ದ 3 ದಿನಗಳ ಬ್ಯಾಂಕ್‌ ಮುಷ್ಕರ ಮುಂದೂಡಿಕೆಯಾಗಿದೆ. ಬ್ಯಾಂಕ್‌ ಸೇವೆಗಳಲ್ಲಿ…

13 hours ago

ಎಸ್‌ಐಆರ್: ಜನಾಗ್ರಹಕ್ಕೆ ದೊರೆಯಲಿ ಮನ್ನಣೆ

ಪ್ರಜಾತಂತ್ರ ವ್ಯವಸ್ಥೆಯ ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಂಸತ್ತು ಮತ್ತು ವಿಧಾನಸಭೆಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಮೂಲಕ…

17 hours ago