Andolana originals

ಸಹಸ್ರಾರು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಅಮಾನ್ಯ

ಬೋಗಸ್ ಕಾರ್ಡ್ ಹೆಸರಿನಲ್ಲಿ ಕ್ರಮ; ನೈಜ ಕಾರ್ಮಿಕರಿಗೆ ಸಮಸ್ಯೆ

ಕೃಷ್ಣ ಸಿದ್ದಾಪುರ

ಸಿದ್ದಾಪುರ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ನೀಡುತ್ತಾ ಬರುತ್ತಿದ್ದು, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಜಿಲ್ಲೆಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರ ಗುರುತಿನ ಚೀಟಿಗಳು ಅಮಾನ್ಯಗೊಂಡಿವೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೈಕ್ಷಣಿಕ ಅನುದಾನ ಕಡಿತಗೊಳಿಸುವುದರೊಂದಿಗೆ ಇಲಾಖೆಯೇ ವಿತರಿಸಿದ ನೋಂದಣಿ ಕಾರ್ಡ್ ನಕಲಿ ಎಂದು ಹೇಳುವ ಮೂಲಕ ನಕಲಿ ಕಾರ್ಡ್ ಪತ್ತೆ ಮಾಡುವುದಾಗಿ ಹೇಳಿ ನವೀಕರಣ ಹಾಗೂ ಹೊಸ ಕಾರ್ಡ್ ಪಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಪರಿಣಾಮವಾಗಿ ೫ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‌ಗಳು ಅಮಾನ್ಯಗೊಂಡಿವೆ.

ಈ ಹಿಂದೆ ನೋಂದಾಯಿತ ಕಾರ್ಮಿಕರ ಗುರುತಿನ ಚೀಟಿಗಳನ್ನು ಮೂರು ವರ್ಷಗಳಿಗೆ ಒಮ್ಮೆ ನವೀಕರಣ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಕಾರ್ಮಿಕ ಇಲಾಖೆಗೆ ಪ್ರತ್ಯೇಕ ತಂತ್ರಾಂಶ ಅಳವಡಿಸುವುದರೊಂದಿಗೆ ನಕಲಿ ಕಾರ್ಡ್‌ಗಳ ಪತ್ತೆಗಾಗಿ ಪ್ರತೀವರ್ಷ ನವೀಕರಿಸಲು ಆದೇಶ ಮಾಡಲಾಗಿದೆ. ಇದರ ಪರಿಣಾಮವಾಗಿ ಇದೀಗ ಸಾವಿರಾರು ನೈಜ ಫಲಾನುಭವಿಗಳ ಕಾರ್ಡ್‌ಗಳು ನವೀಕರಣಗೊಳ್ಳದೆ ರದ್ದಾಗಿವೆ.

ಚಿಕಿತ್ಸಾ ಸೌಲಭ್ಯ ಹೊರತುಪಡಿಸಿ ಉಳಿದೆಲ್ಲಾ ಸಹಾಯ ಧನಸಹಾಯವನ್ನು ನೋಂದಣಿ ಹಿರಿತನದ ಆಧಾರದಲ್ಲಿ ವಿತರಿಸಲಾಗುತ್ತಿದ್ದು, ಹಲವು ಕಾರ್ಮಿಕರು ಕಳೆದ ಏಳೆಂಟು ವರ್ಷ ಗಳಿಂದ ಹೊಂದಿದ್ದ ಕಾರ್ಡ್‌ಗಳು ರದ್ದಾಗಿರುವುದರಿಂದ ಸೌಲಭ್ಯ ವಂಚಿತರಾಗಿದ್ದಾರೆ.

ತಾಲ್ಲೂಕು ಹಿರಿಯ ಕಾರ್ಮಿಕ ನಿರೀಕ್ಷಕರು ಪರಿಶೀಲಿಸಿ ರುಜುವಾತು ಮಾಡಿ ವಿತರಿಸಿದ ಕಟ್ಟಡ ಕಾರ್ಮಿಕರ ಕಾರ್ಡ್ ಗಳನ್ನು ಇಲಾಖೆಯೇ ನಕಲಿ ಎನ್ನುತ್ತಿದ್ದು, ತನ್ನದಲ್ಲದ ತಪ್ಪಿಗೆ ಸಾವಿರಾರು ಮಂದಿ ಕಾರ್ಮಿಕರು ಬಲಿಪಶುಗಳಾಗಿದ್ದಾರೆ.  ಸರ್ಕಾರ ಮತ್ತು ಕಲ್ಯಾಣ ಮಂಡಳಿ ಈ ಬಗ್ಗೆ ಕ್ರಮವಹಿಸಿ ಕಾರ್ಮಿಕರ ಹಿತ ಕಾಪಾಡಲು ಮುಂದಾಗಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.

ಕಟ್ಟಡ ನಿರ್ಮಾಣ ವ್ಯಾಪ್ತಿಯ ಬಹುತೇಕ ಕಾರ್ಮಿಕರು ಅನಕ್ಷರಸ್ಥರೇ ಆಗಿರುವುದರಿಂದ ತಮ್ಮ ಗುರುತಿನ ಚೀಟಿ ನವೀಕರಣ ದಿನಾಂಕವನ್ನು ಅರಿಯದೆ ಪಿಂಚಣಿ, ಮದುವೆ, ಶೈಕ್ಷಣಿಕ ಧನ ಸಹಾಯ ಸೇರಿದಂತೆ ಮಂಡಳಿಯ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ೨೦೨೩-೨೪ರಲ್ಲಿ ನವೀಕರಣಗೊಳ್ಳದ ಬಹುತೇಕ ಕಾರ್ಡ್‌ಗಳು ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದು, ನವೀಕರಿಸಲು ಅವಕಾಶ ವಿಲ್ಲದೆ ಪರಿತಪಿಸುವಂತಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಹೊಸ ಹೊಸ ನಿಯಮಗಳನ್ನು ಅಳವಡಿಸುವ ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸದೆ ನೈಜ ಕಾರ್ಮಿಕರನ್ನು ವಂಚಿಸುತ್ತಿದ್ದು, ಈ ಹಿಂದಿನಂತೆ ಮೂರುವರ್ಷಗಳಿಗೆ ಒಮ್ಮೆ ನವೀಕರಣಕ್ಕೆ ಅವಕಾಶ ನೀಡಿದಲ್ಲಿ ನೋಂದಣಿ ಹಿರಿತನವನ್ನು ಕಾಪಾಡಿಕೊಂಡು ಸೌಲಭ್ಯಗಳನ್ನು ಪಡೆಯಲು ಅವಕಾಶ ಲಭಿಸಲಿದೆ ಎನ್ನುವುದು ಕಾರ್ಮಿಕ ಸಂಘಟನೆಗಳ ಒತ್ತಾಯವಾಗಿದೆ.

” ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಇಷ್ಟು ದೊಡ್ಡಮಟ್ಟಿಗೆ ಕಾರ್ಮಿಕರ ನೋಂದಣಿ ಕಾರ್ಡ್ ರದ್ದಾಗಿರುವುದು ಕಾರ್ಮಿಕ ಸಂಘ ಟನೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ಕಾರ ಮತ್ತು ಇಲಾಖೆಯ ಏಕಪಕ್ಷೀಯ ತೀರ್ಮಾನವಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆದು ಉಚ್ಚ ನ್ಶಾಯಾಲಯದಲ್ಲಿ ಕಾನೂನು ಸಮರ ನಡೆಸಿ ಕಾರ್ಮಿಕರಿಗೆ ನ್ಯಾಯ ಕಲ್ಪಿಸಲಾಗುವುದು.”

-ಗಿರೀಶ್, ರಾಜ್ಯ ಕಾರ್ಯದರ್ಶಿ, ಕಟ್ಟಡ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂಘಟನೆ,ಎಐಟಿಯುಸಿ

” ತಾಲ್ಲೂಕು ಹಿರಿಯ ಕಾರ್ಮಿಕ ನಿರೀಕ್ಷಕರು ಪರಿಶೀಲಿಸಿದ್ದ ಕಟ್ಟಡ ಕಾರ್ಮಿಕರ ಕಾರ್ಡ್ ಗಳನ್ನು ಇಲಾಖೆಯೇ ನಕಲಿ ಎಂದು ಪರಿಗಣಿಸಿರುವ ಪರಿಣಾಮ ಹಲವಾರು ಮಂದಿ ಸಮಸ್ಯೆಗೆ ಸಿಲುಕಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಅನರ್ಹಗೊಂಡ ಕಾರ್ಡ್‌ಗಳು ಸಾಕಷ್ಟು ಇದ್ದು, ಸಿಐಟಿಯು ಸಂಘಟನೆಯೊಂದರಲ್ಲೆ ಐವತ್ತಕ್ಕೂ ಹೆಚ್ಚು ಅನರ್ಹ ಕಾರ್ಡ್‌ಗಳಿವೆ. ಇಲಾಖೆ ನೀಡಿದ ಅಂಕಿ ಅಂಶಗಳು ತಪ್ಪಾಗಿವೆ. ಈ ಸಂಬಂಧ ಮತ್ತೊಮ್ಮೆ ಪರಾಮರ್ಶಿಸಿ ನವೀಕರಣಕ್ಕೆ ಅವಕಾಶ ಕಲ್ಪಿಸಿಕೊಡಬೇಕು.”

-ಎ.ಸಿ. ಸಾಬು. ಅಧ್ಯಕ್ಷರು, ಸಿಐಟಿಯು ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆ

” ನನಗೆ ಈ ಬಾರಿ ೬೦ ವರ್ಷಗಳಾಗುತ್ತಿದ್ದು, ಮಂಡಳಿ ಸಾದರ ಪಡಿಸಿದ ತಂತ್ರಾಂಶ ದಲ್ಲಿ ನವೀಕರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿದ್ದೇನೆ. ನವೀಕರಿಸಲು ಸಾಧ್ಯವಾಗದೇ ಹೋದರೆ ಪಿಂಚಣಿ ಸೌಲಭ್ಯ ವಂಚಿತನಾಗುವ ಭಯವಿದೆ.”

-ಸಿ.ಮಣಿ, ಕಟ್ಟಡ ಕಾರ್ಮಿಕ, ನೆಲ್ಯಹುದಿಕೇರಿ

ಆಂದೋಲನ ಡೆಸ್ಕ್

Recent Posts

ಮಾದಕ ವಸ್ತು ಮಾರಾಟ, ಬಳಕೆ ವಿರುದ್ಧ ಕಾರ್ಯಾಚರಣೆ

ನವೀನ್ ಡಿಸೋಜ ೩ ತಿಂಗಳಲ್ಲಿ ೧೩೮ ಎನ್‌ಡಿಪಿಎಸ್ ಪ್ರಕರಣ ದಾಖಲು; ೬ ಕೆ.ಜಿ. ೬೬೪ ಗ್ರಾಂ ಗಾಂಜಾ, ೩೫.೬೬ ಗ್ರಾಂ…

2 hours ago

ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ತಾಲ್ಲೂಕಿನ ೨೫ ಗ್ರಾಮ ಪಂಚಾಯಿತಿಗಳ ಪೈಕಿ ೨೧ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೪೭ ಶುದ್ಧ ಕುಡಿಯುವ ನೀರಿನ…

2 hours ago

ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಅಪಘಾತಗಳಿಗೆ ಆಹ್ವಾನ

ಎಸ್.ನಾಗಸುಂದರ್ ರೈತನಿಗೆ ಕೈಮೂಳೆ ಮುರಿತ: ಪಾಂಡವಪುರದಲ್ಲಿ ಅವಗಢ, ಸಾರ್ವಜನಿಕರ ಆಕ್ರೋಶ ಪಾಂಡವಪುರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿ ಮತ್ತು…

2 hours ago

ಅರ್ಜುನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ

ಎರಡನೇ ಬಾರಿ ಪ್ರಶಸ್ತಿ ಪಡೆದು ಗಮನಸೆಳೆದ ಪಂಚಾಯಿತಿ ಭೇರ್ಯ ಮಹೇಶ್ ಕೆ.ಆರ್.ನಗರ : ತಾಲೂಕಿನ ಅರ್ಜುನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮೀಣಾಭಿವೃದ್ಧಿ…

2 hours ago

ಊರ ಜಾತ್ರೆ ಒಂದು ನೆನಪು…

ನಂಜನಗೂಡಿನ ಜಾತ್ರೆ ಅಂದು ಹೇಗಿತ್ತೋ ಇಂದೂ ಹಾಗೆ ತನ್ನ ಆಚರಣೆಯ ಮುಗ್ಧತೆ ಉಳಿಸಿಕೊಂಡಿದೆ  ಡಾ.ಹೆಚ್.ಸಿ.ಮಹದೇವಪ್ಪ, ಸಚಿವರು ನಂಜನಗೂಡಿನಿಂದ ಕೆಲವೇ ಮೈಲಿಗಳ…

2 hours ago

ಯುದ್ಧ: ಕಟ್ಟಡ ನಿರ್ಮಾಣ ವಲಯಕ್ಕೆ ಬೆಲೆ ಏರಿಕೆಯ ಬಿಸಿ

ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರು: ಮಧ್ಯಪ್ರಾಚ್ಯ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜನಸಾಮಾನ್ಯರಿಗೆ ನಿತ್ಯ ಒಂದಲ್ಲಾ ಒಂದು ಬಿಸಿ ತಟ್ಟುತ್ತಿದೆ. ಕಟ್ಟಡ…

2 hours ago