Andolana originals

ಗೂಗಲ್ ಮಹಾತ್ಮೆ: ಗೂಗಲ್ ಮಾತ್ರ ಸತ್ಯ, ಉಳಿದೆಲ್ಲವೂ ಮಿಥ್ಯ?

ರಮಾನಂದ ಶರ್ಮ

ಯಾವುದೋ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಟೆಕ್ಕಿಯೊಬ್ಬರು ವೈದ್ಯರ ಬಳಿ ಹೋಗಿದ್ದರಂತೆ. ವೈದ್ಯರು ಅವರನ್ನು ಸ್ಥೂಲವಾಗಿ ಪರೀಕ್ಷಿಸಿ, ಮೂರು ದಿನ ನಿಯಮಿತವಾಗಿ ತೆಗೆದುಕೊಳ್ಳುವಂತೆ ಒಂದೆರಡು ಮಾತ್ರೆಗಳನ್ನು ಬರೆದು ಕೊಟ್ಟರಂತೆ. ಟೆಕ್ಕಿಯು ವೈದ್ಯರ ಬಿಲ್‌ನ್ನು ಕೊಟ್ಟು ಹೊರಬಂದು ತಕ್ಷಣ ತಮ್ಮ ಮೊಬೈಲ್ ತೆಗೆದು “ಸರ್ಚ್”ನಲ್ಲಿ ವೈದ್ಯರು ಬರೆದ ಔಷಧಿಯನ್ನು ಹುಡುಕಾಡಿ, ಏನೋ ಗಲಿಬಿಲಿಗೊಂಡವರಂತೆ ಪುನಾ ಡಾಕ್ಟರ್ ಬಳಿ ತೆರಳಿ “ಸಾರ್, ನೀವು ಸರಿಯಾಗಿ ಔಷಧವನ್ನು ಬರೆದಂತಿಲ್ಲ.

ಈ ಔಷಧವನ್ನು “ಈ ರೋಗಕ್ಕೆ” ನೀಡುತ್ತಾರೆ ಎಂದು ಗೂಗಲ್‌ನಲ್ಲಿ ಬರೆದಿದೆ” ಎನ್ನುತ್ತಾ ತಮ್ಮ ಮೊಬೈಲ್‌ನ್ನು ವೈದ್ಯರಿಗೆ ತೋರಿಸುತ್ತಾರಂತೆ. ಸ್ವಲ್ಪ ಚಕಿತಗೊಂಡ ವೈದ್ಯರು ತಾವು ಬರೆದು ಕೊಟ್ಟ ಚೀಟಿಯನ್ನು ವಾಪಸ್ ಪಡೆದು, ತಮ್ಮ ಸಲಹಾ ಶುಲ್ಕವನ್ನು ಟೆಕ್ಕಿಗೆ ಹಿಂತಿರುಗಿಸುತ್ತಾ, “ನೀವು ಯಾವುದಾದರೂ ಗೂಗಲ್ ಡಾಕ್ಟರ ಬಳಿ ಚಿಕಿತ್ಸೆ ಪಡೆಯಿರಿ” ಎಂದು ಶಾಂತವಾಗಿ ಹೇಳಿ, wish you quick remedy ಎನ್ನುತ್ತಾ ಆ ಟೆಕ್ಕಿಯನ್ನು ಸಾಗಹಾಕುತ್ತಾರಂತೆ.

“ಗೂಗಲ್ ಸತ್ಯ ಮತ್ತು ಸಾಕ್ಷಿಯ ಮುಂದೆ ನಾವು ಜೀರೋ” ಎಂದು ನಗುತ್ತಾ ಈ ಪ್ರಹಸನವನ್ನು ಮುಂದುವರಿಸದೆ ತೆರೆ ಎಳೆಯುತ್ತಾ ಮುಂದಿನ ಪೇಷಂಟನ್ನು ಕರೆದರಂತೆ… ಮಾನವನ ಬದುಕನ್ನು ಸುಗಮವಾಗಿರಿಸಲು ಜಗತ್ತಿನಲ್ಲಿ ಕೋಟ್ಯಂತರ ಆವಿಷ್ಕಾರಗಳು ಅನಾವರಣಗೊಂಡಿವೆ. ಈ ಲಿಸ್ಟ್‌ಗೆ ನಿರಂತರವಾಗಿ ಹೊಸ ಹೊಸ, ಕಂಡು ಕೇಳರಿಯದ ಆವಿಷ್ಕಾರಗಳು ಸೇರ್ಪಡೆಗೊಳ್ಳುತ್ತಿವೆ. ಪುರಾಣ ಪುಣ್ಯಕಥೆಯಲ್ಲಿ ಕೇಳಿದ ಪುಷ್ಪಕ ವಿಮಾನ ಕೇವಲ ಪರಿಕಲ್ಪನೆಯಾಗಿ ಉಳಿದಿಲ್ಲ. ಎಲ್ಲೋ ಕುಳಿತು ಎಲ್ಲೋ ನಡೆಯುವುದನ್ನು (ಟಿವಿ) ನೋಡಬಹುದಾಗಿದೆ.

ಅಂಗೈಯಗಲದ ಆವಿಷ್ಕಾರದಿಂದ ಕುಳಿತ ಸ್ಥಳದಿಂದಲೇ ಜಗತ್ತಿನ ಯಾವ ಮೂಲೆಯಲ್ಲಿದ್ದವರೊಂದಿಗೂ ಮಾತನಾಡಬಹುದು. ಬ್ಯಾಂಕಿಗೆ ತೆರಳದೇ ಎಲ್ಲೋ ಕುಳಿತು ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದು. ಮುಂಜಾನೆ ಉಪಾಹಾರವನ್ನು ಮುಂಬೈಯಲ್ಲಿ ಮಾಡಿ ಮಧ್ಯಾಹ್ನ ಊಟವನ್ನು ದೆಹಲಿಯಲ್ಲಿ ಮಾಡಿ, ಸಂಜೆ ತಿಂಡಿಯನ್ನು ಚೆನ್ನೈಯಲ್ಲಿ ಸವಿದು, ರಾತ್ರಿ ಬೆಂಗಳೂರಿಗೆ ಮರಳಿ ಗೂಡು ಸೇರಬಹುದಾಗಿದೆ. ಇವುಗಳೆಲ್ಲವನ್ನೂ ನಿವಾಳಿಸಿ ತೆಗೆಯುವಂತೆ, ಮರೆಸುವಂತೆ ಮಾಡಿರುವ ಆವಿಷ್ಕಾರವೇ ಗೂಗಲ್ ಕನೆಕ್ಷನ್. ಇದನ್ನು ಅಂಗೈಯಲ್ಲಿ ಅರಮನೆ, ಆಧುನಿಕ ಸರ್ವಜ್ಞ. ಬೆರಳ ತುದಿಯಲ್ಲಿ ನಿತ್ಯ ಬದುಕಿನ ಕೈಪಿಡಿ ಎಂದೆಲ್ಲಾ ಬಣ್ಣಿಸುವುದರಲ್ಲಿ ಅತಿಶಯೋಕ್ತಿಯಿಲ್ಲ. ಕೈಯಲ್ಲಿ ಮೊಬೈಲ್, ಲ್ಯಾಪ್‌ಟಾಪ್- ತೋರಿಸುವ ಬ್ರಹ್ಮಾಂಡವನ್ನು ನೋಡದಿದ್ದರೆ, ಏನೋ ಕಳೆದುಕೊಂಡವರಂತೆ ಇಂದಿನ ಪೀಳಿಗೆ ಚಡಪಡಿಸುತ್ತಾರೆ. ಅಷ್ಟರಮಟ್ಟಿಗೆ ಇದು ಜನರನ್ನು, ಅವರ ಬದುಕನ್ನು ಆವರಿಸಿದೆ. ಜಗತ್ತಿನ, ಬದುಕಿನ ಯಾವುದೇ ವಿಷಯವನ್ನು ಒಂದು ಬಟನ್ ಪ್ರೆಸ್ ಮಾಡುವುದರ ಮೂಲಕ ಪಡೆಯುವ ಈ ಆವಿಷ್ಕಾರ ಇಂದು ಯುವ ಜನತೆಯ ಕ್ರೇಜ್ ಆಗಿದೆ… ಪರೀಕ್ಷೆಯಲ್ಲಿ ನಕಲು ಮಾಡುವವರೂ ಇದರ ಮೂಲಕ ತಮ್ಮ ಗುರಿ ತಲುಪುತ್ತಾರಂತೆ. ತೀರಾ ಇತ್ತೀಚಿನವರೆಗೆ ಯಾವುದಾದರೂ ವಿಷಯವನ್ನು ತಾರ್ಕಿಕ ಅಂತ್ಯ ಕಾಣಿಸಬೇಕಾದರೆ ಪುಸ್ತಕಗಳನ್ನು, ಪತ್ರಿಕೆಗಳನ್ನು ಉಲ್ಲೇಖಿಸುತ್ತಿದ್ದರು. ಆದರೆ, ಇಂದು ಗೂಗಲ್‌ನ್ನು ಉಲ್ಲೇಖಿಸುತ್ತಾರೆ. ಜನರ ಬದುಕು ಮತ್ತು ಚಿಂತನೆ “ಗೂಗಲ್ ಮಾತ್ರ ಸತ್ಯ ಉಳಿದಿರುವುದೆಲ್ಲಾ ಮಿಥ್ಯ” ಎನ್ನುವಂತಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ, ಗೂಗಲ್ ತಿಳಿಸದ ಮಾಹಿತಿ ಇಲ್ಲ ಎನ್ನುವುದು ಉತ್ಪ್ರೇಕ್ಷೆಯಲ್ಲ. ಜಗತ್ತಿನಲ್ಲಿ ಪ್ರತಿ ಸೆಕೆಂಡ್‌ಗೆ ೬೦,೦೦೦ ಜನ ಗೂಗಲ್ ಸರ್ಚ್ ಮಾಡುತ್ತಾರಂತೆ ಯುಟ್ಯೂಬ್‌ನ್ನು ಗೂಗಲ್ ಖರೀದಿಸಿದ ನಂತರ ಟಿವಿ ವೀಕ್ಷಕರ ಸಂಖ್ಯೆಯೂ ಕಡಿಮೆಯಾಗಿದೆಯಂತೆ.

ಇಂದು ರಸ್ತೆಯಲ್ಲಿ ನಿಂತು ಯಾರೂ ದಾರಿ ಕೇಳುವುದಿಲ್ಲ. ಗೂಗಲ್ ೮೦ ಲಕ್ಷ ೪೬ ಸಾವಿರ ಕಿ.ಮೀ. ಉದ್ದದಷ್ಟು ಫೋಟೋಗಳನ್ನು ತನ್ನ ° Street View Map ಗಾಗಿ ತೆಗೆದುಕೊಂಡಿದ್ದು, ಇದು ರಸ್ತೆ ಮತ್ತು ಸ್ಥಳ ಹುಡುಕುವವರಿಗೆ ದಾರಿದೀಪ ಮತ್ತು ಮಾರ್ಗದರ್ಶಿಯಾಗಿದೆ. ಇದು ಹಿಂದೆ ಇಂಗ್ಲಿಷರು ಭಾರತದಲ್ಲಿ ಕಾಡು-ಬೀಡು, ಹೊಳೆ-ಹಳ್ಳ, ದಿನ್ನೆ-ಗುಡ್ಡ- ಪರ್ವತ ಕಣಿವೆಗಳನ್ನು ಕಾಲು ನಡಿಗೆಯಲ್ಲಿ ಅಡ್ಡಾಡಿ, ಜಾಲಾಡಿ ಇಡೀ ದೇಶವನ್ನು ಸರ್ವೆ ಮಾಡಿ ಗಡಿಕಲ್ಲು ಅಥವಾ ಬಾಂದುಕಲ್ಲುಗಳನ್ನು ಹಾಕಿದ್ದನ್ನು ನೆನಪಿಸುತ್ತದೆ. ಇಂಗ್ಲಿಷರು ತಾವು ಆಳಿದ ದೇಶದಲ್ಲಿ ಈ ಕೆಲಸ ಮಾಡಿದರೆ ಗೂಗಲ್ ಇಡೀ ಜಗತ್ತಿನಲ್ಲಿ ಈ ಕೆಲಸ ಮಾಡಿದೆ.

ಗೂಗಲ್ ಒಂದು ದೈತ್ಯ ಮೀಡಿಯಾ ಕಂಪೆನಿ. ೧೯೯೮ರಲ್ಲಿ ಕ್ಯಾಲಿಫೋರ್ನಿಯಾದ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಜಿ ಬ್ರಿಮ್ ಇದರ ಸ್ಥಾಪಕರು. ಅಲ್ಗೋರಿದಮ್ ಮೂಲಕ ಆರಂಭವಾದ ಈ ಕಂಪೆನಿ ೧೯೯೬ ರಲ್ಲಿ ಬ್ಯಾಕ್ ರಬ್ ಹೆಸರಿನಲ್ಲಿತ್ತು. ೨೦೦೪ರ ಹೊತ್ತಿಗೆ ಇದೊಂದು ಜಗತ್ತಿನ ಅತಿ ದೊಡ್ಡ ಮೀಡಿಯಾ ಕಂಪೆನಿಯಾಗಿ ಹೊರಹೊಮ್ಮಿತ್ತು. ೨೦೦೨ರಲ್ಲಿ ಗೂಗಲ್ ನ್ಯೂಸ್, ೨೦೦೪ರಲ್ಲಿ ಜಿ-ಮೇಲ್ ಮತ್ತು ೨೦೦೫ರಲ್ಲಿ ಜಗತ್ತನ್ನೇ ದಿಗ್ಭ್ರಮೆಗೊಳಿಸಿದ ಗೂಗಲ್ ಮ್ಯಾಪ್ ಅನಾವರಣಗೊಳಿಸಿತು. ತನ್ನ expansion drive ನಲ್ಲಿ ಈವರೆಗೆ ೮೨೭ ಕಂಪೆನಿಗಳನ್ನು ಖರೀದಿಸಿದ್ದು, ಸದ್ಯ ೪೦ ದೇಶಗಳಲ್ಲಿ ೭೦ ಕಚೇರಿಗಳನ್ನು ಹೊಂದಿದ್ದು, ಜಗತ್ತಿನಾದ್ಯಂತ ೪,೨೦,೦೦೦ ಉದ್ಯೋಗಿಗಳನ್ನು ಹೊಂದಿದೆಯಂತೆ. ಹಾಗೆಯೇ ಗೂಗಲ್‌ನ ನಿಜವಾದ ಹೆಸರು Google ಆಗಿದ್ದು, ಟೈಪಿಂಗ್ ತಪ್ಪಿನಿಂದಾಗಿ ಎಟಟಜ್ಝಛಿ ಆಗಿದ್ದು, ಅದೇ ಖಾಯಂ ಆಗಿ ಮುಂದುವರಿದಿದೆಯಂತೆ. ಈ ಸತ್ಯ ಯಾವ ಗೂಗಲ್ ಬಳಕೆದಾರರಿಗೂ ತಿಳಿಯದು. ಕೆಲವು ಆವಿಷ್ಕಾರಗಳು, ಅವುಗಳ ಪ್ರಯೋಜನ ಮತ್ತು ಬಳಕೆ ಸಮಾಜದ ಕೆಲವೇ ವರ್ಗಗಳಿಗೆ ಸೀಮಿತವಾಗುತ್ತವೆ. ಆದರೆ, ಗೂಗಲ್ ಈ ಕಟ್ಟುಪಾಡನ್ನು ಮೀರಿ ಪ್ರತಿಯೊಬ್ಬರ ಬಳಕೆಗೆ ಲಭ್ಯವಾಗಿರುವುದು ಗೂಗಲ್ ಜನಪ್ರಿಯತೆಯ ಹಿಂದಿನ ಗುಟ್ಟು. ಗೂಗಲ್‌ನಿಂದ ದಿನ ಆರಂಭವಾಗಿ ಗೂಗಲ್‌ನಿಂದ ದಿನ ಮುಗಿಯುತ್ತದೆ ಎನ್ನುವುದು ಕೇವಲ ಜೋಕ್ ಆಗಿರುವುದಿಲ್ಲ.

ಈಗ ಗೂಗಲ್ ಹೋಮ್ ಪೇಜ್‌ನಲ್ಲಿ ೮೮ ಭಾಷೆಗಳನ್ನು ಅಳವಡಿಸಲಾಗಿದೆ. ಈ ಕಂಪೆನಿಯನ್ನು one of the best employer of the world ಎಂದು ಹೇಳಲಾಗುತ್ತಿದ್ದು,employee attrition rate ಇಲ್ಲ ಅಥವಾ ತುಂಬಾ ಕಡಿಮೆಯಂತೆ. ಗೂಗಲ್‌ನಲ್ಲಿ ಕೆಲಸ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ಉದ್ಯೋಗಾಂಕ್ಷಿಯ ಕನಸಂತೆ. ಈ ಕಂಪೆನಿ ನೀಡುವ ಸಂಬಳ ಸೌಲಭ್ಯ ನೋಡಿ ಇತರ ಕಂಪೆನಿಗಳ ಉದ್ಯೋಗಿಗಳು ಅಸೂಯೆಪಡುತ್ತಾರಂತೆ. ಗೂಗಲ್ ಮಹಾತ್ಮೆಯನ್ನು ನೋಡಿದಾಗ ಡಾಕ್ಟರ್ ಬಳಿ ಮರು ವಿಚಾರಿಸಿದ ಆ ಟೆಕ್ಕಿ ತಪ್ಪು ಎಸಗಿದ್ದಾನೆಂದು ಹೇಳಲಾಗದು.

” ಇಂದು ರಸ್ತೆಯಲ್ಲಿ ನಿಂತು ಯಾರೂ ದಾರಿ ಕೇಳುವುದಿಲ್ಲ. ಗೂಗಲ್ ೮೦ ಲಕ್ಷ ೪೬ ಸಾವಿರ ಕಿ.ಮೀ. ಉದ್ದದಷ್ಟು ಫೋಟೋಗಳನ್ನು ತನ್ನ Street View Mapಗಾಗಿ ತೆಗೆದುಕೊಂಡಿದ್ದು, ಇದು ರಸ್ತೆ ಮತ್ತು ಸ್ಥಳ ಹುಡುಕುವವರಿಗೆ ದಾರಿದೀಪ ಮತ್ತು ಮಾರ್ಗದರ್ಶಿಯಾಗಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

3 hours ago

ಓದುಗರ ಪತ್ರ: ಟ್ರಾಫಿಕ್ ದಂಡ: ಸುಪ್ರೀಂ ಸಲಹೆ ಸ್ವಾಗತಾರ್ಹ

ಟ್ರಾಫಿಕ್ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಂದ ಹಣ ವಸೂಲಿ ಮಾಡಲು, ಆ ದಂಡದ ಮೊತ್ತವನ್ನು ಅವರ ಮನೆ…

3 hours ago

ಓದುಗರ ಪತ್ರ: ಆಕಾಶದಲ್ಲಿ ಶೌರ‍್ಯಪ್ರದರ್ಶನಕ್ಕೊಂದು ಸಲಾಂ

ತನ್ನ ಪ್ರಾಣವನ್ನೇ ಒತ್ತೆಯಿಟ್ಟು ದುಬೈನಿಂದ ಇಸ್ರೇಲ್‌ನ ಅವೀವ್‌ಗೆ ತೆರಳುತ್ತಿದ್ದ -ದುಬೈ ವಿಮಾನ ಹೈಜಾಕ್ ತಪ್ಪಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್…

3 hours ago

ಬ್ರೇಕ್ ಕಿತ್ತ ಬಸ್ಸಿನಲ್ಲಿ ಇಳಿಜಾರಿನಲ್ಲಿ ಸಾಗುತ್ತಿದ್ದೇವೆ…

ಡಾ . ಚೇತನ ಗುರುರಾಜು, ಮುಖ್ಯ ಶಿಕ್ಷಕಿ, ಅರಿವು ವಿದ್ಯಾಸಂಸ್ಥೆ, ಮೈಸೂರು  ಸಾಮಾಜಿಕ ಮಾಧ್ಯಮಗಳ ಬಲೆಗೆ ಸಿಲುಕಿವೆ ಹಲವು ದೇಶಗಳು…

3 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಸ್ವಾವಲಂಬನೆಯ ಸಂಕೇತ ಮಹಾತ್ಮ ಗಾಂಧೀಜಿ ಮಹಾತ್ಮ ಗಾಂಧೀಜಿ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಹಾಗೂ ರಾಷ್ಟ್ರಪಿತ ಎಂದು…

3 hours ago

ಜಗದ ಸೌಹಾರ್ದ ನದಿ ಗಾಂಧಿ

ಪರಶುರಾಮ್, ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ ಗಾಂಧಿ ವಿಚಾರಗಳನ್ನು ಸಂವಾದದ ಮೂಲಕ ಮುನ್ನಡೆಸಲು ಸಾಧ್ಯವೇ? ಅಥವಾ ಅನುಸರಿಸಲು ಸಾಧ್ಯವಾಗದಿರುವ ನಡೆಯನ್ನು…

3 hours ago