Andolana originals

ರಸ್ತೆ ಬದಿಯಲ್ಲಿ ಕಸದ ರಾಶಿ, ಜನರಿಗೆ ರೋಗದ ಭೀತಿ!

ಮೈಸೂರು: ಬಂಡಿಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಿಂಭಾಗದ ಉತ್ತನಹಳ್ಳಿಗೆ ಹೋಗುವ ರಸ್ತೆ ಬದಿಯ ಉದ್ದಕ್ಕೂ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಅಲ್ಲದೆ ಈಗ ಮಳೆಯೂ ಬೀಳುತ್ತಿರುವುದರಿಂದ ಕಸದ ರಾಶಿ ಮುಗ್ಗಲು ಹಿಡಿದು ಇಲ್ಲಿ ಸಂಚರಿ ಸುವ ಸಾರ್ವಜನಿಕರ ಮೂಗಿಗೆ ದುರ್ವಾಸನೆ ಅಡರುತ್ತಿದೆ.

ಈ ರಸ್ತೆಯ ಬದಿಯಲ್ಲಿ ಕಸ ಎಸೆಯುವುದು ಸಾಮಾನ್ಯ ಸಂಗತಿಯಂತೆಯೇ ಆಗಿದೆ. ಈ ನಡುವೆ ಇಲ್ಲಿ ಬೀಸಾಡಿದ ಕಸವನ್ನು ತೆರವು ಗೊಳಿಸ ದಿರುವುದರಿಂದ ಕಸ ರಾಶಿ ರಾಶಿಯಾಗಿ ಹರಡಿ ಕೊಂಡಿದೆ. ಕಸ ಕೊಳೆತು ವಾಸನೆ ಬರುತ್ತಿರುವುದರಿಂದ ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಂಚರಿಸ ಬೇಕಾದ ಪರಿಸ್ಥಿತಿ ಉದ್ಭವಿಸಿದೆ.

ಮೈಸೂರು ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹಿ ಸುವ ವಾಹನವನ್ನು ಪ್ರತಿದಿನ ಬೆಳಿಗ್ಗೆ ನಗರದ ಪ್ರತಿ ನಾಗರಿಕರ ಮನೆಯ ಮುಂದಕ್ಕೆ ಕಳುಹಿಸಿ ದರೂ ಕೆಲವು ಜನರು ಅನಾಗರಿಕರಂತೆ, ಮೈಸೂರಿನ ಸ್ವಚ್ಛತೆಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಪ್ರತಿದಿನ ರಾತ್ರಿ ವೇಳೆ ಪ್ಲಾಸಿಕ್, ಮನೆಯ ಕಸ, ಹೋಟೆಲ್ ತ್ಯಾಜ್ಯ, ಅನುಪಯುಕ್ತ ತರಕಾರಿ ಮುಂತಾದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇಲ್ಲಿ ಎಸೆದು ಕೈತೊಳೆದುಕೊಳ್ಳುತ್ತಾರೆ.

ರಸ್ತೆಯ ಸಮೀಪವಿರುವ ಮನೆಗಳಲ್ಲಿ ವಾಸಿಸುವವರಿಗೆ ದುರ್ವಾಸನೆ ಕಾಡುತ್ತಿದೆ.

ಅಲ್ಲದೆ ಬೀದಿ ನಾಯಿಗಳು, ಬಿಡಾಡಿ ದನಗಳು ರಸ್ತೆ ಬದಿಯಲ್ಲಿ ಬೀಸಾಡಿದ ಚೀಲಗಳನ್ನು ಕಚ್ಚಿ ಎಳೆದೊಯ್ದು ರಸ್ತೆಯ ಮಧ್ಯೆ ತಂದು ಬಿಡುವುದಲ್ಲದೆ, ಮನೆಗಳ ಸನಿಹವೂ ಎಳೆದೊಯ್ದು ಚೀಲದಲ್ಲಿದ್ದ ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಇದು ಇಲ್ಲಿ ಸಂಚರಿಸುವವರಿಗೆ ಮತ್ತು ರಸ್ತೆ ಸನಿಹವಿರುವ ಮನೆಗಳಲ್ಲಿ ವಾಸಿಸುವವರಿಗೆ ಅಸಹನೀಯವಾಗಿದೆ. ಕಸ ಬೀದಿಯಲ್ಲಿ ಹರಡುವುದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ. ಪಕ್ಕದಲ್ಲೇ ಹೋಟೆಲ್‌ಗಳು, ಟೀ ಅಂಗಡಿಗಳನ್ನು ಇಟ್ಟು ಕೊಂಡಿರುವವರಿಗೆ ವ್ಯಾಪಾರವೂ ಕಡಿಮೆಯಾಗಿದೆ.

ಪಂಜು ಗಂಗೊಳ್ಳಿ ಅವರ ಲೇಖನಗಳನ್ನು ಓದಲು ಈ ಲಿಂಕ್‌ ಬಳಸಿ.. 

ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿಲ್ಲದ ಕಾರಣ ಮಳೆ ಬಂದರೆ ಮಳೆ ನೀರಿನ ಜೊತೆ ಸೇರಿ ಕೊಳಚೆ ನೀರೂ ರಸ್ತೆಯಲ್ಲೇ ಹರಿಯುತ್ತದೆ. ಈ ಸ್ಥಳವು ಹಂದಿಗಳು, ನಾಯಿಗಳು ಹಾಗೂ ಬಿಡಾಡಿ ದನಗಳ ತಾಣವಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಮೈಸೂರು ಮಹಾ ನಗರಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಇಲ್ಲಿ ಸಂಚರಿ ಸುವವರಿಗೆ ಮತ್ತು ಅಕ್ಕ ಪಕ್ಕದ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸ್ಥಳದಲ್ಲಿ ಹಲವು ಬಾರಿ ತಾವೇ ಸ್ವಚ್ಛತೆಯನ್ನು ಮಾಡಿಸಿದ್ದರೂ ವಾಹನಗಳಲ್ಲಿ ಬರುವವರು ರಾತ್ರಿ ಸಮಯದಲ್ಲಿ ಕಸವನ್ನು ತಂದು ಬೀಸಾಡಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಆಂದೋಲನ ಪುರವಣಿಯಲ್ಲಿ ಬರುವ ಲೇಖನಗಳ ಓದಿಗೆ ಈ ಲಿಂಕ್‌ ಬಳಸಿ.. 

ಆಂದೋಲನ ಡೆಸ್ಕ್

Recent Posts

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

6 mins ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

15 mins ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

22 mins ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

4 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

10 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

10 hours ago