ಮೈಸೂರು: ಬಂಡಿಪಾಳ್ಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಿಂಭಾಗದ ಉತ್ತನಹಳ್ಳಿಗೆ ಹೋಗುವ ರಸ್ತೆ ಬದಿಯ ಉದ್ದಕ್ಕೂ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಅಲ್ಲದೆ ಈಗ ಮಳೆಯೂ ಬೀಳುತ್ತಿರುವುದರಿಂದ ಕಸದ ರಾಶಿ ಮುಗ್ಗಲು ಹಿಡಿದು ಇಲ್ಲಿ ಸಂಚರಿ ಸುವ ಸಾರ್ವಜನಿಕರ ಮೂಗಿಗೆ ದುರ್ವಾಸನೆ ಅಡರುತ್ತಿದೆ.
ಈ ರಸ್ತೆಯ ಬದಿಯಲ್ಲಿ ಕಸ ಎಸೆಯುವುದು ಸಾಮಾನ್ಯ ಸಂಗತಿಯಂತೆಯೇ ಆಗಿದೆ. ಈ ನಡುವೆ ಇಲ್ಲಿ ಬೀಸಾಡಿದ ಕಸವನ್ನು ತೆರವು ಗೊಳಿಸ ದಿರುವುದರಿಂದ ಕಸ ರಾಶಿ ರಾಶಿಯಾಗಿ ಹರಡಿ ಕೊಂಡಿದೆ. ಕಸ ಕೊಳೆತು ವಾಸನೆ ಬರುತ್ತಿರುವುದರಿಂದ ರಸ್ತೆಯಲ್ಲಿ ಓಡಾಡುವ ಜನರು ಮೂಗು ಮುಚ್ಚಿಕೊಂಡು ಸಂಚರಿಸ ಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಮೈಸೂರು ಮಹಾನಗರ ಪಾಲಿಕೆ ತ್ಯಾಜ್ಯ ಸಂಗ್ರಹಿ ಸುವ ವಾಹನವನ್ನು ಪ್ರತಿದಿನ ಬೆಳಿಗ್ಗೆ ನಗರದ ಪ್ರತಿ ನಾಗರಿಕರ ಮನೆಯ ಮುಂದಕ್ಕೆ ಕಳುಹಿಸಿ ದರೂ ಕೆಲವು ಜನರು ಅನಾಗರಿಕರಂತೆ, ಮೈಸೂರಿನ ಸ್ವಚ್ಛತೆಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಪ್ರತಿದಿನ ರಾತ್ರಿ ವೇಳೆ ಪ್ಲಾಸಿಕ್, ಮನೆಯ ಕಸ, ಹೋಟೆಲ್ ತ್ಯಾಜ್ಯ, ಅನುಪಯುಕ್ತ ತರಕಾರಿ ಮುಂತಾದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇಲ್ಲಿ ಎಸೆದು ಕೈತೊಳೆದುಕೊಳ್ಳುತ್ತಾರೆ.
ರಸ್ತೆಯ ಸಮೀಪವಿರುವ ಮನೆಗಳಲ್ಲಿ ವಾಸಿಸುವವರಿಗೆ ದುರ್ವಾಸನೆ ಕಾಡುತ್ತಿದೆ.
ಅಲ್ಲದೆ ಬೀದಿ ನಾಯಿಗಳು, ಬಿಡಾಡಿ ದನಗಳು ರಸ್ತೆ ಬದಿಯಲ್ಲಿ ಬೀಸಾಡಿದ ಚೀಲಗಳನ್ನು ಕಚ್ಚಿ ಎಳೆದೊಯ್ದು ರಸ್ತೆಯ ಮಧ್ಯೆ ತಂದು ಬಿಡುವುದಲ್ಲದೆ, ಮನೆಗಳ ಸನಿಹವೂ ಎಳೆದೊಯ್ದು ಚೀಲದಲ್ಲಿದ್ದ ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತವೆ. ಇದು ಇಲ್ಲಿ ಸಂಚರಿಸುವವರಿಗೆ ಮತ್ತು ರಸ್ತೆ ಸನಿಹವಿರುವ ಮನೆಗಳಲ್ಲಿ ವಾಸಿಸುವವರಿಗೆ ಅಸಹನೀಯವಾಗಿದೆ. ಕಸ ಬೀದಿಯಲ್ಲಿ ಹರಡುವುದರಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಎದುರಾಗಿದೆ. ಪಕ್ಕದಲ್ಲೇ ಹೋಟೆಲ್‌ಗಳು, ಟೀ ಅಂಗಡಿಗಳನ್ನು ಇಟ್ಟು ಕೊಂಡಿರುವವರಿಗೆ ವ್ಯಾಪಾರವೂ ಕಡಿಮೆಯಾಗಿದೆ.
ಪಂಜು ಗಂಗೊಳ್ಳಿ ಅವರ ಲೇಖನಗಳನ್ನು ಓದಲು ಈ ಲಿಂಕ್ ಬಳಸಿ..
ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ನಿರ್ಮಿಸಿಲ್ಲದ ಕಾರಣ ಮಳೆ ಬಂದರೆ ಮಳೆ ನೀರಿನ ಜೊತೆ ಸೇರಿ ಕೊಳಚೆ ನೀರೂ ರಸ್ತೆಯಲ್ಲೇ ಹರಿಯುತ್ತದೆ. ಈ ಸ್ಥಳವು ಹಂದಿಗಳು, ನಾಯಿಗಳು ಹಾಗೂ ಬಿಡಾಡಿ ದನಗಳ ತಾಣವಾಗಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಮೈಸೂರು ಮಹಾ ನಗರಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಿ, ಇಲ್ಲಿ ಸಂಚರಿ ಸುವವರಿಗೆ ಮತ್ತು ಅಕ್ಕ ಪಕ್ಕದ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಸ್ಥಳದಲ್ಲಿ ಹಲವು ಬಾರಿ ತಾವೇ ಸ್ವಚ್ಛತೆಯನ್ನು ಮಾಡಿಸಿದ್ದರೂ ವಾಹನಗಳಲ್ಲಿ ಬರುವವರು ರಾತ್ರಿ ಸಮಯದಲ್ಲಿ ಕಸವನ್ನು ತಂದು ಬೀಸಾಡಿ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ…
ಕೊಡಗು: ಕೊಡಗಿನಲ್ಲಿ ಕಾಡಾನೆ - ಮಾನವ ಸಂಘರ್ಷ ಅವ್ಯಾಹತವಾಗಿ ಮುಂದುವರೆದಿದ್ದು ಕಾಫಿ ಬೆಳೆಗಾರರೊಬ್ಬರು ಹತರಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಹಳೇ ಸಿದ್ದಾಪುರದ…
ಮಂಡ್ಯ : ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದ್ದು, ಇ-ಮೇಲ್ ಮೂಲಕ “ಕೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇವೆ” ಎಂದು…
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕಾ ಹಾಗೂ ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು…
ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿ ದಿನದಿಂದ ದಿನಕ್ಕೆ ಮತ್ತಷ್ಟು ಉದ್ವಿಗ್ನವಾಗುತ್ತಿದೆ. ಇರಾನ್ ಹಾಗೂ ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷದ…
ಮುಂಬೈ : ಭಾರತ ತಂಡ ಟಿ20 ವಿಶ್ವಕಪ್ 2026ರಲ್ಲಿ ನ್ಯೂಜಿಲೆಂಡ್‌ನ್ನು 96 ರನ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಫೈನಲ್‌ನಲ್ಲಿ…