Andolana originals

ಹೆಸರಿಗಷ್ಟೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ!

ಮಹೇಂದ್ರ ಹಸಗೂಲಿ

ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಎಂದು ಸಿಎಂ ಘೋಷಣೆ ಮಾಡಿದರೂ ಹಣ ಪಡೆದು ಪಾಸ್ ವಿತರಣೆಗೆ ಆಕ್ರೋಶ 

ಗುಂಡ್ಲುಪೇಟೆ: ರಾಜ್ಯ ಸರ್ಕಾರ ಮೊದಲು ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿತ್ತು. ಈಗ ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾದ ನಂತರ ಗಂಡು ಮಕ್ಕಳಿಗೂ (ವಿದ್ಯಾರ್ಥಿಗಳಿಗೆ) ಬಸ್ ಪ್ರಯಾಣ ಉಚಿತ ಎಂದು ಘೋಷಣೆ ಮಾಡಿದ್ದರೂ ಹಣ ಪಾವತಿಸಿಕೊಂಡು ಬಸ್ ಪಾಸ್ ವಿತರಿಸುತ್ತಿರು ವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಘೋಷಣೆ ಹೊರಡಿಸಿದ ನಂತರವಾದರೂ ಇದರ ಬಗ್ಗೆ ಶಿಕ್ಷಕರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಬಡ ವಿದ್ಯಾರ್ಥಿಗಳಿಗೆ ಉಚಿತ ಯೋಜನೆಯ ಅವಕಾಶ ಸಿಗುವುದಿಲ್ಲ ಎಂಬುದು ಪೋಷಕರ ಅನಿಸಿಕೆಯಾಗಿದೆ.

ಸೈಬರ್ ಸೆಂಟರ್‌ಗೆ ತೆರಳಿ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿದರೆ ಅದು ಕೆಎಸ್‌ಆರ್‌ಟಿಸಿ ಮೂಲಕ ಪಾಸ್ ಅನ್ನು ಶಾಲೆಗೆ, ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಶಾಲಾ ವಿದ್ಯಾರ್ಥಿಗಳಿಂದ ಬಸ್ ಪಾಸ್‌ಗೆ ವಾರ್ಷಿಕ ೭೫೦ ರೂ. ಹಾಗೂ ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಂದ ೧,೫೦೦ ರೂ. ಪಡೆದುಕೊಂಡು ಬಸ್ ಪಾಸ್ ವಿತರಿಸಲಾಗುತ್ತಿದೆ.

ಸರ್ಕಾರದಿಂದ ಆದೇಶ ಬಾರದಿದ್ದರೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿರುವುದು ವ್ಯರ್ಥ. ಅಲ್ಲಿಯವರೆಗೆ ಎಲ್ಲರೂ ಬಸ್ ಪಾಸ್ ಮಾಡಿಸಿರುತ್ತಾರೆ. ಸರ್ಕಾರ ಹಾಗೂ ಕೆಎಸ್ ಆರ್‌ಟಿಸಿ ನಿಗಮದ ವಿಳಂಬ ನೀತಿ ಸರಿಯಲ್ಲ ಎಂದು ಪೋಷಕರು ಕಿಡಿಕಾರಿದ್ದಾರೆ.

” ಸರ್ಕಾರದಿಂದ ಈಗಾಗಲೇ ಘೋಷಣೆ ಮಾಡಿರುವಂತೆ ಉಚಿತ ಬಸ್ ಪಾಸ್ ಆದೇಶವನ್ನು ಶನಿವಾರ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸದೆ ಆದೇಶದ ಪ್ರತಿ ಬರುವವರೆಗೆ ಕಾಯಬೇಕು.”

-ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ

” ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯದ ಬಗ್ಗೆ ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದೇಶ ಬಂದರಷ್ಟೇ ನಾವು ಪಾಸ್ ವಿತರಿಸದೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬಹುದು. ಇಲ್ಲದಿದ್ದರೆ ಹಣ ನೀಡಿ ಪಾಸ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ.”

ಕುಮಾರ್ ನಾಯಕ್, ಸಾರಿಗೆ ಘಟಕದ ವ್ಯವಸ್ಥಾಪಕ 

 

 

ಆಂದೋಲನ ಡೆಸ್ಕ್

Recent Posts

ಕೊಳೆಗೇರಿ ಮಕ್ಕಳ ಬದುಕು ರೂಪಿಸುವ ‘ಖೇಲ್ ಘರ್’ ಎಂಬ ಆಟದ ಮನೆ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ೧೯೯೬ರಲ್ಲಿ ‘ಪಾಲಕ್ ನೀತಿ ಪರಿವಾರ್’ ಎಂಬ ಸರ್ಕಾರೇತರ ಸಂಸ್ಥೆಯಡಿ ‘ಈ ಮನೆ’ ಆರಂಭ ಪುಣೆಯ…

1 hour ago

ಮಡಿಕೇರಿ ಅರಮನೆಗೆ ಕೇಂದ್ರದಿಂದ ಸಂರಕ್ಷಿತ ಸ್ಮಾರಕ ಸ್ಥಾನಮಾನ

ಪುನೀತ್ ಮಡಿಕೇರಿ ಡಿಜಿಟಲ್ ಮ್ಯೂಸಿಯಂ ಕನಸು ಸಾಕಾರಕ್ಕೆ ಕೇಂದ್ರ ಸರ್ಕಾರದ ನೆರವು ಕೊಡಗಿನ ಹೆಮ್ಮೆಯ ಸಂಕೇತವಾದ ಮಡಿಕೇರಿ ಅರಮನೆಗೆ ಕೇಂದ್ರ ಸರ್ಕಾರದಿಂದ…

1 hour ago

ಎಲೆ ತೋಟ; ಸ್ಥಳೀಯರಿಗೆ ಅನೈರ್ಮಲ್ಯದ ಸಂಕಟ

ಚಿರಂಜೀವಿ ಸಿ.ಹುಲ್ಲಹಳ್ಳಿ ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆಯ ೧೩ನೇ ಕ್ರಾಸ್ ನಿವಾಸಿಗಳ ಪರದಾಟ ಮೈಸೂರು: ಮನೆಯ ಬಾಗಿಲು ತೆರೆದರೆ ಮೂಗಿಗ…

2 hours ago

ಪ್ರತ್ಯೇಕ ಪ್ರಕರಣ: ಮನೆ, ದೇವಸ್ಥಾನದಲ್ಲಿ ಕಳವು

ಹನಗೋಡು: ಹಾಡಹಗಲೇ ಮನೆ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ನಡೆದಿದೆ. ಹನಗೋಡು ಹೋಬಳಿಯ ಕಡೇಮನುಗನಹಳ್ಳಿ…

15 hours ago

ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ಸಮಯದಲ್ಲಿ ಸಂಚಾರ: 6 ಟಿಪ್ಪರ್ ವಶ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿ ಶಾಲಾ ಮಕ್ಕಳ ವಾಹಕ ಅಪಘಾತಕ್ಕೀಡಾಗಿ ಹಲವು ಮಕ್ಕಳಿಗೆ ಗಾಯಗಳಾಗಿದ್ದ ಪ್ರಕರಣದ ಬಳಿಕ ತಾಲ್ಲೂಕಿನಾದ್ಯಂತ…

15 hours ago