ಪಿ. ಪಟ್ಟಣ: ಜೆಜೆಎಂ ಯೋಜನೆಯಡಿ ಟೆಂಡರ್ ಆಗಿ ವರ್ಷ ಸಮೀಪಿಸಿದರೂ ಪ್ರಾರಂಭವಾಗದ ಕಾಮಗಾರಿ
ಮಹೇಶ ಕೋಗಿಲವಾಡಿ
ಪಿರಿಯಾಪಟ್ಟಣ: ‘ಮನೆ ಮನೆಗೆ ಗಂಗೆ’ ಎಂಬ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯಿಂದ ಪ್ರತಿ ಮನೆಗೂ ನೀರನ್ನು ಒದಗಿಸುವ ಯೋಜನೆಯಲ್ಲಿ ಅನೇಕ ಲೋಪಗಳು ಕಂಡು ಬರುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಕೋಗಿಲವಾಡಿ ಗ್ರಾಮದ ವಡ್ಡನಕಟ್ಟೆ ಹಾಡಿ ಜನರಿಗೆ ಹಾಗೂ ಸುಬ್ಬನಕಟ್ಟೆ ಗ್ರಾಮದ ಜನರಿಗೆ ಜಲಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಒದಗಿಸುವ ಕಾಮಗಾರಿ ವರ್ಷವಾದರೂ ಆರಂಭವಾಗಿಲ್ಲ.
೪೩,೨೮,೦೦೦ ರೂ. ವೆಚ್ಚದಲ್ಲಿ ನಂಜುಂಡೇಗೌಡ ಎಂಬ ಗುತ್ತಿಗೆದಾರ ರಿಗೆ ಕಾಮಗಾರಿಯ ಟೆಂಡರ್ ಆಗಿ, ೨೦೨೩ರ ಡಿ. ೧೩ರಂದು ಕಾಮಗಾರಿ ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದ್ದು, ಇದಾಗಿ ಒಂದು ವರ್ಷ ಕಳೆಯುತ್ತಿದ್ದರೂ ಕಾಮಗಾರಿಯನ್ನು ಪ್ರಾರಂಭಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದಾಗಿ ಗ್ರಾಮಗಳ ನಿವಾಸಿಗಳು ಪ್ರತಿನಿತ್ಯ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ, ಗುತ್ತಿಗೆದಾರರು ಮತ್ತು ಅಽಕಾರಿಗಳು ಕೇವಲ ನಾಮ-ಲಕಗಳನ್ನು ಅಳವಡಿಸಿ ಕಾಮಗಾರಿ ನಡೆಸದೆ ಮೌನವಾಗಿ ರುವುದು ಜನರಲ್ಲಿ ಹಲವು ಅನುಮಾನಗಳನ್ನು ಮೂಡಿಸಿದೆ.
ಅಲ್ಲದೆ ಫಲಕಗಳಲ್ಲಿಯೂ ಅನೇಕ ದೋಷಗಳು ಕಂಡುಬರುತ್ತಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತಾರದೆ ಅಧ್ಯಕ್ಷರು ಮತ್ತು ಸದಸ್ಯರ ಹೆಸರನ್ನು ತಪ್ಪಾಗಿ ನಮೂದಿಸಲಾಗಿದೆ. ಬೇರೆ ಗ್ರಾಮದ ಸದಸ್ಯರು ಮತ್ತು ಅಧ್ಯಕ್ಷರ ಹೆಸರನ್ನು ಬರೆಯಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಅಧಿಕಾರಿಗಳನ್ನು ಕೇಳಿದರೆ ಮೂಲ ಗುತ್ತಿಗೆದಾರರು ಯಾರೆಂಬುದೇ ನಮಗೆ ತಿಳಿದಿಲ್ಲ. -ಲಕಗಳನ್ನು ಅಳವಡಿಸುವ ಸಂದರ್ಭ ದಲ್ಲಿ ಕೆಲಸವನ್ನು ಪ್ರಾರಂಭಿಸುವ ದಿನದ ಬಗ್ಗೆ ಕೇಳಿದಾಗ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ಟೆಂಡರ್ ಆದ ಆರು ತಿಂಗಳ ಒಳಗೆ ಕಾಮಗಾರಿ ಪ್ರಾರಂಭಿಸಬೇಕು ಎಂಬ ಸರ್ಕಾರದ ಆದೇಶವಿದ್ದರೂ ಒಂದು ವರ್ಷ ಕಳೆದರೂ ಕೆಲಸ ಪ್ರಾರಂಭವಾಗದೆ ಇರುವುದಕ್ಕೆ ಕಾರಣವೇನು ಎಂಬುದು ತಿಳಿದಿಲ್ಲ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಽಕಾರಿಗಳು ಮತ್ತು ಸರ್ಕಾರ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವ ಜನಿಕರ ಆಗ್ರಹವಾಗಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಸರ್ಕಾರ ನೀಡು ವಂತಹ ಅನೇಕ ಮೂಲಸೌಲಭ್ಯಗಳು ನಮಗೆ ದೊರೆಯುತ್ತಿಲ್ಲ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಪ್ರತಿನಿತ್ಯ ತೊಂದರೆಪಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಾಗಲಿ, ಯಾರೂ ಕೂಡ ನಮ್ಮ ನೋವನ್ನು ಕೇಳುತ್ತಿಲ್ಲ. -ಸ್ವಾಮಿ, ಸುಬ್ಬನಕಟ್ಟೆ ನಿವಾಸಿ
ಟೆಂಡರ್ ಆಗಿ ಒಂದು ವರ್ಷ ಮುಗಿಯುವ ಹಂತದಲ್ಲಿದ್ದರೂ ಕಾಮಗಾರಿಯನ್ನು ಪ್ರಾರಂಭಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. -ಲಕಗಳನ್ನು ಅಳವಡಿಸುವ ಸಂದರ್ಭದಲ್ಲಿ ನಮ್ಮ ಗ್ರಾಪಂ ಗಮನಕ್ಕೂ ತಾರದೆ ಕೆಲಸ ನಿರ್ವಹಿಸುತ್ತಿರುವುದು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ.
-ಮೋಹನ್ ಕುಮಾರ್, ಪಿಡಿಒ, ಚೌತಿ ಗ್ರಾಪಂ
ದೊಡ್ಡ ಕವಲಂದೆ : 112 ತುರ್ತು ವಾಹನ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಕವಲಂದೆ…
ವಾಷಿಂಗ್ಟನ್ : ದೀರ್ಘಕಾಲದಿಂದ ಬಾಕಿ ಉಳಿದಿರುವ ರಕ್ಷಣಾ ಖರೀದಿ ಮಾತುಕತೆ ಹಾಗೂ ವಾಣಿಜ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಭಾರತದ ಪ್ರಧಾನಿ…
ಕೊಡಗು : ಕರುನಾಡಿನ ಕೊಡಗಿನ ಸುಂದರಿ ಸಿನಿ ತಾರೆ ರಶ್ಮಿಕಾ ಮಂದಣ್ಣ ದೇಶ-ವಿದೇಶಗಳಲ್ಲೂ ಖ್ಯಾತಿ ಪಡೆದಿದ್ದಾರೆ. ಹೀಗಾಗಿ ಅವರು ಆಗಾಗ್ಗೆ…
ನಂಜನಗೂಡು : ಅಪ್ರಾಪ್ತೆಯ ಹಿಂದೆ ಬಿದ್ದು ಪ್ರೀತಿಗೆ ಒತ್ತಾಯಿಸಿ ಮದುವೆ ಆಗುವಂತೆ ಪೀಡಿಸಿ ಮಾನಸಿಕ ಕಿರುಕುಳ ನೀಡಿದ ಹಿನ್ನಲೆ ವಿಧ್ಯಾರ್ಥಿನಿ…
ಮೈಸೂರು : ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ರಾಷ್ಟ್ರ ಮಟ್ಟಕ್ಕೆ ಹೋಗಲಿಲ್ಲ ಅಂದ್ರೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಆಗುತ್ತಾ?…
ಮೈಸೂರು : ರಾಜ್ಯದಲ್ಲಿ ಸರಿಯಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಫಲರಾಗಿದ್ದು, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೇಗೆಲ್ಲಾ ಅನುಷ್ಠಾನ…