‘ಸಂಚಾರ ನಿಯಂತ್ರಣ ಪೊಲೀಸರ ಆದ್ಯ ಕರ್ತವ್ಯ ಆಗಲಿ’
ಪಿ.ಜೆ.ರಾಘವೇಂದ್ರ, ನ್ಯಾಯವಾದಿ, ಮೈಸೂರು
ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಪ್ರಸ್ತಾವನೆಯ ಮೇರೆಗೆ ಬಾಕಿ ಇರುವ ಇ-ಚಲನ್ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.೫೦ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು, ಸಾರ್ವಜನಿಕರಿಗೆ ಜೂ.೨೧ರಿಂದ ಜು.೧೦ರವರೆಗೆ ಮಾತ್ರ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂಬುದು ಮಾಧ್ಯಮಗಳ ವರದಿ.
ಸಂಚಾರ ನಿಯಮಗಳನ್ನು ಉಲ್ಲಂಸುವ ವಾಹನ ಸವಾರ/ಚಾಲಕರ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಇದುವರೆಗೆ ದಂಡ ವಸೂಲು ಮಾಡುವಲ್ಲಿ ಸಂಚಾರ ಪೊಲೀಸರು ವಿಫಲವಾಗಿದ್ದಾರೆ ಎಂಬುದಕ್ಕೆ ಈ ಆದೇಶ/ಪ್ರಕಟಣೆಯೇ ಸಾಕ್ಷಿ!
ಇನ್ನೇನು ಕೆಲವೇ ದಿನಗಳಲ್ಲಿ ಸಂಗ್ರಹದಲ್ಲಿರುವ ಹಲವು ಉತ್ಪನ್ನಗಳು ಯೋಗ್ಯತೆಯನ್ನು ಕಳೆದುಕೊಳ್ಳುತ್ತವೆ ಎಂಬ ವಿಷಯ ತಿಳಿದೊಡನೆ ನಗರದ ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಯವರು (ಮಾಲ್) ತಮ್ಮಲ್ಲಿರುವ ಐಸ್ ಕ್ರೀಂ, ಬಿಸ್ಕೆಟ್, ಪನೀರ್ ಮುಂತಾದಮಾಲುಗಳನ್ನು ಶೇ.೫೦ ರಿಯಾಯಿತಿ ದರದಲ್ಲಿ ಅಥವಾ ಒಂದು ಕೊಂಡರೆ ಒಂದು ಉಚಿತ ಎಂಬ ಘೋಷಣೆಯೊಂದಿಗೆ ಆಫರ್ ನೀಡಿ ಗ್ರಾಹಕರನ್ನು ಆಕರ್ಷಿಸಿ ಯಾಮಾರಿಸುವಂತೆಯೇ ರಾಜ್ಯ ಸರ್ಕಾರವು ಸಂಚಾರ ನಿಯಮ ಉಲ್ಲಂಸಿ ದಂಡ ಕಟ್ಟದೇ ಅಡ್ಡಾಡುತ್ತಿರುವ ವಾಹನ ಸವಾರರಿಗೆ ಶೇ.೫೦ ರಿಯಾಯಿತಿಯ ಆಫರ್ ನೀಡಿದೆ! ಸಂಚಾರ ನಿಯಮಗಳನ್ನು ಉಲ್ಲಂಸಿದ ವಾಹನ ಸವಾರ/ಚಾಲಕರು ದಂಡ ಕಟ್ಟುವುದರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರೆ ಅಂತಹವರ ವಾಹನಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೇ ಜಪ್ತಿ ಮಾಡಲು ಕ್ರಮ ಕೈಗೊಳ್ಳಬೇಕಿತ್ತು.
ಸಂಚಾರ ನಿಯಮ ಉಲ್ಲಂಸಿದವರಿಂದ ದಂಡ ವಸೂಲು ಮಾಡುವುದೊಂದೇ ಪೊಲೀಸರ ಕರ್ತವ್ಯ ಅಲ್ಲ. ಸಂಚಾರ ನಿಯಂತ್ರಣ ಮಾಡುವುದೇ ಸಂಚಾರ ಪೊಲೀಸರ ಕರ್ತವ್ಯವಾಗಬೇಕು. ಕೇವಲ ದಂಡವನ್ನು ಮಾತ್ರ ವಿಧಿಸಬಹುದಾದ ಇಂತಹ ಲಘು ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆಯಾದ ೬ ತಿಂಗಳ ಅವಧಿಯೊಳಗೆ ದಂಡ ವಸೂಲು ಮಾಡಬಹುದು. ನಿಯಮ ಉಲ್ಲಂಘನೆಯಾದ ಆರು ತಿಂಗಳ ನಂತರ ಕಾಲ ಪರಿಮಿತಿ ಮೀರಿ ದಂಡ ವಿಧಿಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ ಕಲಂ ೫೧೪ (೨)(ಎ) ಅನ್ವಯ ನ್ಯಾಯಾಲಯಗಳಿಗೂ ಅಧಿಕಾರವಿಲ್ಲ.
ಹೀಗಿರುವಾಗ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು ಆರು ತಿಂಗಳ ಕಾಲಾವಧಿ ಮೀರಿರುವ ಇಂತಹ ಲಘು ಪ್ರಕರಣಗಳಲ್ಲಿ ರಿಯಾಯಿತಿ/ ಆಫರ್ ನೀಡುವ ಆಮಿಷ ಒಡ್ಡಿ ಕಾನೂನು ಬಾಹಿರವಾಗಿ ದಂಡ ವಸೂಲು ಮಾಡಲು ಇಂತಹ ಆದೇಶ/ ಪ್ರಕಟಣೆ ಹೊರಡಿಸಿರಬಹುದು. ಈ ವಿಚಾರವಾಗಿ ನ್ಯಾಯಾಲಯಗಳೇ ಪೊಲೀಸ್ ಹಾಗೂ ಸರ್ಕಾರಕ್ಕೆ ಕಿವಿಹಿಂಡಿ ಚಾಟಿ ಬೀಸಬೇಕಾಗಿದೆ. ಸಂಚಾರ ನಿಯಮ ಉಲ್ಲಂಸಲು ಅವಕಾಶ ನೀಡಿದ ನಂತರ ೫೦% ರಿಯಾಯಿತಿ ಆಮಿಷ ಒಡ್ಡಿ ದಂಡಯಾತ್ರೆ ಮಾಡುವ ಬದಲಾಗಿ ಇನ್ನು ಮುಂದಾದರೂ, ಸಂಚಾರ ಪೊಲೀಸರು ರಸ್ತೆಗಿಳಿದು ಸಂಚಾರ ನಿಯಂತ್ರಣ ಮಾಡಲು ಮುಂದಾಗಲಿ.
” ಕೇವಲ ದಂಡವನ್ನು ಮಾತ್ರ ವಿಽಸಬಹುದಾದ ಇಂತಹ ಲಘು ಪ್ರಕರಣಗಳಲ್ಲಿ ನಿಯಮಉಲ್ಲಂಘನೆಯಾದ ೬ ತಿಂಗಳ ಅವಧಿಯೊಳಗೆ ದಂಡ ವಸೂಲು ಮಾಡಬಹುದು. ನಿಯಮ ಉಲ್ಲಂಘನೆಯಾದ ಆರು ತಿಂಗಳ ನಂತರ ಕಾಲಪರಿಮಿತಿ ಮೀರಿ ದಂಡ ವಿಧಿಸಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ೨೦೨೩ ಕಲಂ ೫೧೪ (೨)(ಎ) ಅನ್ವಯ ನ್ಯಾಯಾಲಯಗಳಿಗೂ ಅಧಿಕಾರವಿಲ್ಲ”
ಮೈಸೂರು: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ಲೈನ್‌ಮ್ಯಾನ್ ಕಾರ್ತಿಕ್ ಅವರ ಆರೋಗ್ಯ ಸ್ಥಿತಿ ಗಂಭೀರ, ಆದರೆ ಸ್ಥಿರವಾಗಿದೆ ಎಂದು ವೈದ್ಯರು…
ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ…
ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ…
೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…
ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…
ಸಮಾಜಕ್ಕೆ ವಿeನಿಗಳು ನೀಡಿರುವ, ನೀಡುತ್ತಿರುವ ಅಪಾರವಾದ ಕೊಡುಗೆಯಿಂದಾಗಿ ತಂತ್ರeನದ ಕ್ರಾಂತಿಯ ಜೊತೆಗೆ ನಾನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಜಗತ್ತಿನ ಅಭಿವೃದ್ಧಿ…