ಭೇರ್ಯ ಮಹೇಶ್
ಭೇರ್ಯ: ಶಿಥಿಲಗೊಂಡಿರುವ ಕಾರಣದಿಂದ ವಾಸಿಸಲು ಹಿಂಜರಿಯುವ ವೈದ್ಯರು, ದಾದಿಯರು, ಸಹಾಯಕಿಯರು
ಭೇರ್ಯ: ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ದಾದಿಯರು, ಆರೋಗ್ಯ ಸಹಾಯಕಿಯರ ವಸತಿಗೃಹಗಳು ಪಾಳು ಬಿದ್ದು ಹತ್ತಾರು ವರ್ಷಗಳೇ ಕಳೆದರೂ ಇನ್ನೂ ದುರಸ್ತಿ ಭಾಗ್ಯ ಕಾಣದೇ ಭೂತ ಬಂಗಲೆಯಂತಾಗಿವೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಸ್ಟಾಫ್ ನರ್ಸ್, ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ, ಒಬ್ಬರು ನಿರೀಕ್ಷಕರು ಒಬ್ಬರು, ಮೂವರು ಕೇಂದ್ರ ಆರೋಗ್ಯ ಅಧಿಕಾರಿಗಳು, ಒಬ್ಬರು ಗುಮಾಸ್ತ ಮತ್ತು ಇಬ್ಬರು ಸಹಾಯಕರು ಇದ್ದಾರೆ.
ಈ ಹುದ್ದೆಗಳಿಗೆ ತಕ್ಕಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ೮ ವಸತಿಗೃಹಗಳು ಇವೆ. ಆರೋಗ್ಯ ಕೇಂದ್ರದ ವೈದ್ಯರು ಮತ್ತು ನೌಕರರು ವಾಸಿಸುತ್ತಿದ್ದ ವಸತಿ ಗೃಹಗಳ ನಿರ್ವಹಣೆ ಇಲ್ಲದ್ದರಿಂದ ಕಟ್ಟಡಗಳು ಶಿಥಿಲಾವಸ್ಥೆಗೊಂಡಿವೆ.
ತುಂಬಾ ಹಳೆಯದಾದ ಕಟ್ಟಡಗಳಾಗಿದ್ದು ಇದುವರೆಗೂ ದುರಸ್ತಿ ಭಾಗ್ಯ ಮಾತ್ರ ಕಂಡಿಲ್ಲ. ಭೇರ್ಯ ಜಿಪಂ ಕ್ಷೇತ್ರವಾಗಿದ್ದು, ಗ್ರಾಮದ ಈ ಆಸ್ಪತ್ರೆಗೆ ಸುತ್ತಮುತ್ತಲಿನ ಗ್ರಾಮಗಳವರು ಮಾತ್ರವಲ್ಲದೆ ಪಕ್ಕದ ಹೊಳೆನರಸೀಪುರ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳಿಂದಲೂ ಚಿಕಿತ್ಸೆಗಾಗಿ ರೋಗಿಗಳು ಬರುತ್ತಾರೆ.
ಇಲ್ಲಿ ವಸತಿ ಗೃಹಗಳಿದ್ದರೂ ಆರೋಗ್ಯ ಅಧಿಕಾರಿಗಳು ಇಲ್ಲಿ ವಾಸವಿಲ್ಲ. ಮನೆಗಳು ಸರಿ ಇಲ್ಲ ಎಂಬ ಕಾರಣ ಮುಂದಿಡುತ್ತಿದ್ದಾರೆ. ಅವರು ದೂರದ ಊರುಗಳಿಂದ ಆಸ್ಪತ್ರೆಗೆ ಬರುವವರೆಗೂ ರೋಗಿಗಳು ಕಾಯಬೇಕಾಗಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಸುತ್ತಲಿನ ಕೆಲವು ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರಂಭಗೊಳ್ಳುವುದಕ್ಕೂ ಮೊದಲು ಈ ಆಸ್ಪತ್ರೆಯೇ ಹೆರಿಗೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸಾ ಕೇಂದ್ರವಾಗಿತ್ತು. ದೂರದ ಗ್ರಾಮಗಳ ಮಹಿಳೆಯರು ಈ ಆಸ್ಪತ್ರೆಗೆ ಹೆರಿಗೆಗಾಗಿ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆಗೆ ದಾಖಲಾಗುತ್ತಿದ್ದರು. ಜತೆಗೆ ದಿನದ ೨೪ ಗಂಟೆಗಳೂ ರೋಗಿಗಳಿಗೆ ಇಲ್ಲಿ ಸೇವೆ ಲಭ್ಯವಿತ್ತು. ಸಿಬ್ಬಂದಿ ಕೂಡ ಕೇಂದ್ರ ಸ್ಥಾನದಲ್ಲಿದ್ದು ಸೇವೆ ಸಲ್ಲಿಸುತ್ತಿದ್ದರು. ಈಗ ವಸತಿ ಗೃಹಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿವೆ. ಗಿಡ ಗಂಟಿಗಳು ಕಟ್ಟಡಗಳನ್ನು ಆವರಿಸಿಕೊಂಡಿವೆ.
ಕಿಟಕಿ, ಬಾಗಿಲುಗಳು ಮುರಿದು ಬಿದ್ದಿವೆ. ಈ ವಸತಿ ಗೃಹಗಳಿಗೆ ದಾರಿಯೇ ಇಲ್ಲ ದಂತಾಗಿದೆ. ಆವರಣವು ಬಿಡಾಡಿ ದನಗಳು ಹಾಗೂ ನಾಯಿಗಳ ವಾಸ ಸ್ಥಾನವಾಗಿದೆ. ಸಂಜೆ ಮದ್ಯ ವ್ಯಸನಿಗಳ ತಾಣವಾಗಿ ಬದಲಾಗುತ್ತದೆ. ಮದ್ಯದ ಬಾಟಲಿಗಳು, ಪೌಚುಗಳು ಬಿದ್ದಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.
” ಈ ಆರೋಗ್ಯ ಕೇಂದ್ರ ಜಿಲ್ಲೆಯಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಎಂದು ಪ್ರಶಸ್ತಿ ಪಡೆದುಕೊಂಡಿತ್ತು. ಈಗ ಸರಿಯಾದ ನಿರ್ವಹಣೆ ಇಲ್ಲದೆ ವೈದ್ಯರು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳು ದುರಸ್ತಿ ಕಾಣದೆ ಪಾಳುಬಿದ್ದಿವೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಆರೋಗ್ಯ ಕೇಂದ್ರಗಳು ಮತ್ತು ವಸತಿಗೃಹಗಳು ಮೂಲಸೌಕರ್ಯ ವಂಚಿತವಾಗಿವೆ.”
-ಸೋಮು, ಗ್ರಾ.ಪಂ. ಮಾಜಿ ಸದಸ್ಯ
” ಆರೋಗ್ಯ ಕೇಂದ್ರದ ವಸತಿ ಗೃಹಗಳು ಶಿಥಿಲಾವಸ್ಥೆಗೊಂಡು ಪಾಳು ಬಿದ್ದಿರುವ ಬಗ್ಗೆ ಸರ್ಕಾರಕ್ಕೆ ಹಿಂದೆಯೇ ಪತ್ರ ಬರೆಯಲಾಗಿದೆ. ವಾಸಕ್ಕೆ ಯೋಗ್ಯವಲ್ಲದ ವಸತಿಗೃಹಗಳನ್ನು ಕೆಡವಲು ಲೋಕೋಪಯೋಗಿ ಇಲಾಖೆಗೆ ಕೋರಲಾಗಿದೆ. ಈ ಬಗ್ಗೆ ಸರ್ಕಾರದ ಅನುದಾನ ಕೋರಿ ಪತ್ರ ಬರೆಯಲಾಗಿದೆ.”
-ಸಿ.ನಟರಾಜು, ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳು, ಕೆ.ಆರ್.ನಗರ ಮತ್ತು ಸಾಲಿಗ್ರಾಮ
ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…
ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…
ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…