Andolana originals

ಕಾಫಿ ಬೆಳೆಗೆ ಕಾಯಿಕೊರಕ ಕೀಟದ ಹಾವಳಿ

ಲಕ್ಷ್ಮಿಕಾಂತ್ ಕೊಮಾರಪ್ಪ

ಕಾಫಿ ಬೀಜದ ಗುಣಮಟ್ಟದಲ್ಲಿ ವ್ಯತ್ಯಾಸ, ಇಳುವರಿ ಕುಂಠಿತ; ಕೀಟದ ಸಮಗ್ರ ಹತೋಟಿಗೆ ಕೆವಿಕೆ ಸಲಹೆ

ಸೋಮವಾರಪೇಟೆ: ಜಿಲ್ಲೆಯಲ್ಲಿ ಕಾಫಿ ಕಾಯಿಕೊರಕ (ಬರ್ರಿ ಬೋರರ್) ಕೀಟದ ಹಾವಳಿ ಹೆಚ್ಚಾಗಿದ್ದು, ಕಾಫಿ ಬೀಜದಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಜೊತೆಗೆ ಬೆಳೆಯ ಇಳುವರಿಯಲ್ಲಿ ಕುಂಠಿತ ಕಂಡುಬಂದಿದೆ. ಆದ್ದರಿಂದ ಗೋಣಿಕೊಪ್ಪಲುವಿನ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ಈ ಕೀಟದ ಸಮಗ್ರ ಹತೋಟಿಯ ಬಗ್ಗೆ ರೈತರಿಗೆ ಸಲಹೆ ನೀಡಿದೆ.

ಕಾಫಿ ಕಾಯಿಕೊರಕ (ಹೈಪೋತೆನಮಸ್ ಹ್ಯಾಂಪಿ) ವಿಶ್ವದೆಲ್ಲೆಡೆ ಕಾಫಿ ಬೆಳೆಯನ್ನು ಹೆಚ್ಚಾಗಿ ಬಾಽಸುವ ಪ್ರಮುಖ ಕೀಟವಾಗಿದೆ. ಭಾರತದಲ್ಲಿ ಪ್ರಥಮವಾಗಿ ಈ ಕೀಟದ ಬಾಧೆಯು ೧೯೯೦ರಲ್ಲಿ ತಮಿಳುನಾಡಿನ ನೀಲಗಿರಿ ಪ್ರದೇಶದ ಕೆಲವು ತೋಟಗಳಲ್ಲಿ ಕಾಣಿಸಿಕೊಂಡಿತು. ನಂತರ ಕೇರಳದ ವಯನಾಡು ಮತ್ತು ಕಾನೂರಲ್ಲಿ ಕಾಣಿಸಿಕೊಂಡು ಕರ್ನಾಟಕದ ದಕ್ಷಿಣ ಕೊಡಗಿನ ತೋಟಗಳಿಗೂ ಈ ಕೀಟದ ಬಾಧೆ ವಿಸ್ತಾರವಾಯಿತು. ಈ ಕೀಟದ ಬಾಧೆಗೆ ಬಲಿಯುವ ಹಾಗೂ ಬಲಿತ ಕಾಫಿ ಕಾಯಿಗಳು ಹಾನಿಗೆ ತುತ್ತಾಗುತ್ತವೆ. ಪ್ರಾರಂಭದಲ್ಲಿ ಕೀಟವು ಬಲಿಯುವ ಹಾಗೂ ಬಲಿತ ಕಾಯಿಗಳ ಮೂಲಕ ಒಳಸೇರುತ್ತದೆ. ಇದರಿಂದ ಬಾಧೆಗೂಳಗಾದ ಕಾಫಿ ಕಾಯಿಗಳ ಮುಂಭಾಗದಲ್ಲಿ ಕೊರೆದಿರುವ ರಂಧ್ರ ಕಾಣಿಸುತ್ತದೆ. ನಂತರ ಕಾಯಿಯ ಒಳಭಾಗಕ್ಕೆ ಹೋಗಿ ಒಳಗಿನ ಸಾರವನ್ನೆಲ್ಲಾ ತಿಂದು ಹಾಳುಮಾಡುತ್ತದೆ.

ಕೀಟಗಳು ಎಳೆಯ ಕಾಯಿಯೊಳಗೆ ಸಂತಾನಾಭಿವೃದ್ದಿ ಮಾಡಲಾಗದಿದ್ದರೂ ಕೂಡ ಇದರ ಬಾಧೆಗೆ ತುತ್ತಾದ ಕಾಯಿಗಳು ಗಾಯದ ಪರಿಣಾಮವಾಗಿ ಉದುರುತ್ತವೆ. ಬಲಿತ ಕಾಯಿಯೊಳಗಿನ ಗಟ್ಟಿಗೊಂಡ ಬೀಜದಳದಲ್ಲಿ ಮಾತ್ರ ಇದರ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಕೆಲವು ಸಂದರ್ಭದಲ್ಲಿ ಈ ಕೀಟದ ಬಾಧೆ ತೀವ್ರವಾಗಿದ್ದರೆ ಶೇ.೩೦ರಿಂದ ೮೦ರಷ್ಟು ಕಾಯಿಗಳು ಕೂಡ ಹಾನಿಗೆ ತುತ್ತಾಗುತ್ತವೆ.

ಒಮ್ಮೆ ಕಾಫಿ ತೋಟಗಳಿಗೆ ಇದು ದಾಳಿ ಮಾಡಲಾರಂಭಿಸಿದರೆ ನಂತರ ಆ ತೋಟವನ್ನು ಸದಾ ಪೀಡಿಸುತ್ತಲೇ ಇರುತ್ತದೆ. ಈ ಕೀಟದ ಬಾಧೆಗೆ ತುತ್ತಾದ ಕಾಫಿಯು ತನ್ನ ಗುಣಮಟ್ಟವನ್ನು ಕಳೆದುಕೂಂಡು ಬೆಳೆಗಾರರಿಗೆ ಗಣನೀಯ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡುತ್ತದೆ.

” ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗೆ ಕಾಯಿಕೊರಕದ (ಬರ್ರಿ ಬೋರರ್) ಹಾವಳಿ ತೀವ್ರಗತಿಯಲ್ಲಿ ಹರಡಿದ್ದು, ಮುಂದಿನ ಸಾಲಿನ ಫಸಲು ಮತ್ತು ಕಾಫಿಯ ಗುಣಮಟ್ಟಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಕೀಟದ ಬಾಧೆಯನ್ನು ತಡೆಗಟ್ಟಲು ಸೂಕ್ತ ನಿಯಂತ್ರಣ ಕ್ರಮಗಳನ್ನು ಸಕಾಲದಲ್ಲಿ ಅನುಸರಿಸಿ ಕಾಫಿ ಕೃಷಿಯನ್ನು ಇನ್ನೂ ಹೆಚ್ಚು ಲಾಭದಾಯಕ ಕೃಷಿಯನ್ನಾಗಿ ಮಾಡಬೇಕಾಗಿದೆ. ಸೂಕ್ತ ಬೇಸಾಯ ಪದ್ಧತಿಗಳು, ಜೈವಿಕ ಮತ್ತು ರಾಸಾಯನಿಕ ಹತೋಟಿ ಕ್ರಮಗಳೂ ಸೇರಿದಂತೆ ಸಮಗ್ರ ನಿರ್ವಹಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅಳವಡಿಸುವಿಕೆಯಿಂದ ಈ ಕೀಟದ ಬಾಧೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.”

-ಡಾ.ಕೆ.ವಿ.ವೀರೇಂದ್ರ ಕುಮಾರ್, ವಿಜ್ಞಾನಿ, ಸಸ್ಯ ಸಂರಕ್ಷಣೆ ವಿಭಾಗ, ಕೃಷಿ ವಿಜ್ಞಾನ ಕೇಂದ್ರ

ಪ್ರಮುಖ ಹತೋಟಿ ಕ್ರಮಗಳು…

ಗಿಡಗಳಲ್ಲಿರುವ ಅಕಾಲಿಕ ಕಾಯಿ ಮತ್ತು ಹಿಂದಿನ ವರ್ಷ ಕುಯ್ಯದೆ ಉಳಿದುಕೊಂಡಿರುವ ಹಣ್ಣುಗಳನ್ನು ಪೂರ್ತಿಯಾಗಿ ಕಿತ್ತು ನಾಶಪಡಿಸಬೇಕು. ಇವುಗಳಲ್ಲಿರುವ ಕೀಟದ ಸಂತತಿ ಮುಂದಿನ ಬಾರಿಯೂ ಹರಡಲು ಕಾರಣವಾಗುತ್ತದೆ. ಹಣ್ಣುಗಳನ್ನು ಕೊಯ್ಲು ಮಾಡುವಾಗ ನೆಲದ ಮೇಲೆ ಪಿಕ್ಕಿಂಗ್ ಮ್ಯಾಟ್ ಅಥವಾ ಪಾಲಿಥೀನ್ ಹಾಳೆಗಳನ್ನು ಹರಡಿ ಹಣ್ಣುಗಳು ನೆಲಕ್ಕೆ ಬೀಳದಂತೆ ತಡೆಯುವುದು ಮತ್ತು ಗಿಡಗಳಲ್ಲಿ ಯಾವುದೇ ಹಣ್ಣನ್ನು ಉಳಿಸದೆ ಪೂರ್ತಿಯಾಗಿ ಕೊಯ್ಲು ಮಾಡಬೇಕು. ಹಾನಿಗೊಳಗಾದ ಕಾಫಿ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಒಂದರಿಂದ ಎರಡು ನಿಮಿಷಗಳವರೆಗೆ ಅದ್ದಿ ತೆಗೆದು ಒಣಗಿಸಬೇಕು. ಬೆವೇರಿಯಾ ಬಾಸ್ಸಿಯಾನ ಎಂಬ ರೋಗಕಾರಕ ಶಿಲೀಂಧ್ರವನ್ನು ಜುಲೈ- ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಯಿ ಕೊರಕದ ಹತೋಟಿಗೆ ೧.೫ ಕೆ.ಜಿ.ಯನ್ನು ೨೦೦ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಕಾಯಿಗಳ ಮೇಲೆ ಸಿಂಪಡಿಸಬೇಕು.

ಆಂದೋಲನ ಡೆಸ್ಕ್

Recent Posts

ಪ್ರತ್ಯೇಕ ಪ್ರಕರಣ: ಮನೆ, ದೇವಸ್ಥಾನದಲ್ಲಿ ಕಳವು

ಹನಗೋಡು: ಹಾಡಹಗಲೇ ಮನೆ ಬೀಗ ಒಡೆದು ಚಿನ್ನಾಭರಣ ಮತ್ತು ನಗದು ಕಳವು ಮಾಡಿರುವ ಘಟನೆ ನಡೆದಿದೆ. ಹನಗೋಡು ಹೋಬಳಿಯ ಕಡೇಮನುಗನಹಳ್ಳಿ…

9 hours ago

ಜಿಲ್ಲಾಧಿಕಾರಿ ಆದೇಶ ಮೀರಿ ಶಾಲೆ ಸಮಯದಲ್ಲಿ ಸಂಚಾರ: 6 ಟಿಪ್ಪರ್ ವಶ

ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಟಿಪ್ಪರ್‌ಗಳ ಹಾವಳಿ ಹೆಚ್ಚಾಗಿ ಶಾಲಾ ಮಕ್ಕಳ ವಾಹಕ ಅಪಘಾತಕ್ಕೀಡಾಗಿ ಹಲವು ಮಕ್ಕಳಿಗೆ ಗಾಯಗಳಾಗಿದ್ದ ಪ್ರಕರಣದ ಬಳಿಕ ತಾಲ್ಲೂಕಿನಾದ್ಯಂತ…

9 hours ago

ಗೃಹಲಕ್ಷ್ಮೀ ಹಣದ ದುರುಪಯೋಗ ತಡೆಗೆ ಬಯೋಮೆಟ್ರಿಕ್‌

ಬೆಂಗಳೂರು: ಕರ್ನಾಟಕ ಸರ್ಕಾರದ 'ಗೃಹಲಕ್ಷ್ಮಿ' ಯೋಜನೆಯಡಿ ಫಲಾನುಭವಿಗಳಿಗೆ ನೇರವಾಗಿ ಜಮೆ ಆಗುವ ಹಣದ ದುರುಪಯೋಗವನ್ನು ತಡೆಯಲು ಮತ್ತು ಅರ್ಹ ಫಲಾನುಭವಿಗಳಿಗೆ…

11 hours ago

ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಸೂರಜ್ ಹೆಗ್ಡೆ ಅಂತ್ಯಕ್ರಿಯೆ

ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು…

12 hours ago

ವಿಶಾಖಪಟ್ಟಣ ಉಕ್ಕು ಕಾರ್ಖಾನೆಯಲ್ಲಿ ಅವಘಡ: ಸ್ವತಂತ್ರ ತನಿಖೆಗೆ ಆದೇಶಿಸಿದ ಕೇಂದ್ರ ಸಚಿವ ಎಚ್‌ಡಿಕೆ

ವಿಶಾಖಪಟ್ಟಣ: ಇಲ್ಲಿನ ವಿಶಾಖ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ಅವಘಡದಲ್ಲಿ ಹಲವು ಕಾರ್ಮಿಕರು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿ ಬಂದ…

12 hours ago

ಮಂಡ್ಯ: ಒಂದೇ ಕುಟುಂಬದ ಮೂವರು ಸಾವು

ಮಂಡ್ಯ: ಒಂದೇ ಕುಟುಂಬದ ಮೂವರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯದ ನೆಹರು ನಗರದಲ್ಲಿ ನಡೆದಿದೆ. ತಂದೆ ಪ್ರಭಾಕರ್‌, ತಾಯಿ ಜ್ಯೋತಿ…

13 hours ago