Andolana originals

ರಕ್ತದ ಕ್ಯಾನ್ಸ್‌ರ್‌ಗೆ ಅಸ್ತ್ರ ʼಭಾರತ್‌ ಕ್ಯಾನ್ಸರ್‌ ಆಸ್ಪತ್ರೆʼ

ಮೈಸೂರಿನ ಭಾರತ್‌ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ

ಆಂದೋಲನ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮ

ಮೈಸೂರು : ಕ್ಯಾನ್ಸರ್ ಎಂದ ಕೂಡಲೇ ಭೀತಿಗೊಳಗಾಗುವುದು ಸಹಜ. ಏಕೆಂದರೆ ಇದು ಯಾವುದೇ ಸುಳಿವು ನೀಡದೆ ಪ್ರಾಣ ತೆಗೆಯುವಂತಹ ಕಾಯಿಲೆ.

ಕ್ಯಾನ್ಸರ್‌ನಲ್ಲಿ ಹಲವಾರು ವಿಧಗಳಿವೆ. ಒಂದು ರಕ್ತದ ಕ್ಯಾನ್ಸರ್. ಇದು ರಕ್ತದ ಅಂಗಾಂಶಗಳು, ಮೂಳೆ ಮಜ್ಜೆ ಮತ್ತು ದುಗ್ಧರಸ ಗ್ರಂಥಿ ಮೇಲೆ ಪರಿಣಾಮ ಬೀರಬಹುದು. ಆದರೆ, ಆರಂಭದಲ್ಲೇ ಈ ಕಾಯಿಲೆಯನ್ನು ಪತ್ತೆ ಮಾಡಿದರೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ಇದಕ್ಕಾಗಿ ಉತ್ತಮ ಚಿಕಿತ್ಸೆ ಅಗತ್ಯವಷ್ಟೆ.

ಕ್ಯಾನ್ಸರ್ ಕಾಯಿಲೆ ಗುಣಪಡಿಸಲು ರಾಜ್ಯದಲ್ಲಿಯೇ ಹೆಸರುವಾಸಿಯಾಗಿ ಜನರ ವಿಶ್ವಾಸ ಗಳಿಸಿರುವ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರಕ್ತ ಕ್ಯಾನ್ಸರ್ ಪರಿಣಾಮಗಳು, ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ಗೆ ಉತ್ತಮ ಚಿಕಿತ್ಸೆ ನೀಡಲು ವೈದ್ಯರ ತಂಡ ಸಜ್ಜಾಗಿದೆ. ‘ಆಂದೋಲನ’ ದಿನಪತ್ರಿಕೆ ಕಚೇರಿಯಲ್ಲಿ ಸೋಮವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ರಕ್ತ ಕ್ಯಾನ್ಸರ್ ತಜ್ಞ ಡಾ. ಕೆ. ಎನ್. ಸಂತೋಷ್ ಮತ್ತು ಮಕ್ಕಳ ಕ್ಯಾನ್ಸರ್ ತಜ್ಞರಾದ ಡಾ. ಕೆ. ಸೌಮ್ಯ ರಕ್ತ ಕ್ಯಾನ್ಸರ್, ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯ ಗೊಂದಲ, ಸಂದೇಹಗಳನ್ನು ಬಗೆಹರಿಸುವ ಜೊತೆಗೆ ಪರಿಹಾರಗಳನ್ನು ಸೂಚಿಸಿದರು.

ಕ್ಯಾನ್ಸರ್ ಕೋಶಗಳು ಬೆಳೆದಂತೆ ಅವು ಕೆಂಪು ರಕ್ತ ಕಣ, ಬಿಳಿ ರಕ್ತ ಕಣ ಮತ್ತು ಪ್ಲೇಟ್‌ಲೆಟ್ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯಕ್ಕಿಂತ ಕಡಿಮೆ ರಕ್ತ ಕಣಗಳನ್ನು ಹೊಂದಿರುವುದು ರಕ್ತ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದು. ರಕ್ತದಲ್ಲಿ ನಿಗದಿತ ಪ್ರಮಾಣದ ರಕ್ತ ಕಣಗಳು ಇಲ್ಲದೇ ಇದ್ದರೆ ಅದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ.

ರಕ್ತದ ಕ್ಯಾನ್ಸರ್ ಲಕ್ಷಣಗಳೇನು?
ರಕ್ತ ಕ್ಯಾನ್ಸರ್ ದೇಹದ ರಕ್ತ ಕಣಗಳ ಉತ್ಪಾದನೆ ಮತ್ತು ಕಾರ್ಯಕ್ಷಮತೆಯನ್ನು ಹಾನಿಗೊಳಿಸುತ್ತದೆ. ಇದರಿಂದ ಮುಖ್ಯವಾಗಿ ಕೆಂಪು ರಕ್ತ ಕಣಗಳು (S@A) ಮತ್ತು ಪ್ಲೇಟ್ ಲೆಟ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಕೆಂಪು ರಕ್ತಕಣಗಳ ಬೆಳವಣಿಗೆ ಕಡಿಮೆಯಾದಾಗ ರಕ್ತಹೀನತೆ (ಅನಿಮಿಯಾ) ಉಂಟಾಗುತ್ತದೆ.

ಸಾಮಾನ್ಯವಾಗಿ ಕೆಂಪು ರಕ್ತ ಕಣಗಳು ಶ್ವಾಸಕೋಶದಿಂದ ದೇಹದ ವಿವಿಧ ಅಂಗಾಂಗಗಳಿಗೆ ಆಮ್ಲಜನಕವನ್ನು ಸಾಗಿಸುವುದಲ್ಲದೆ, ಕಾರ್ಬನ್ ಡೈ ಆಕ್ಸೈಡ್ ಅನ್ನು ಮರು ಶ್ವಾಸಕೋಶಕ್ಕೆ ತರುತ್ತವೆ. ಆದರೆ, ರಕ್ತ ಕ್ಯಾನ್ಸರ್‌ನಿಂದ ಈ ಪ್ರಕ್ರಿಯೆ ನಡೆಯುವುದಿಲ್ಲ. ಇದರ ಪರಿಣಾಮವಾಗಿ ದೇಹದಲ್ಲಿ ದೌರ್ಬಲ್ಯ, ನಿಶ್ಶಕ್ತಿ ಮತ್ತು ಇತರೆ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ಡಾ. ಸಂತೋಷ್ ಕುಮಾರ್ ಮಾಹಿತಿ ನೀಡಿದರು.

ಇನ್ನೊಂದೆಡೆ, ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಗ್ಗುವಿಕೆ ಕಂಡುಬಂದರೆ ರಕ್ತದ ಹೆಪ್ಪುಗಟ್ಟುವಿಕೆ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ಸಣ್ಣ ಗಾಯವಾದರೂ ರಕ್ತ ಸುಲಭವಾಗಿ ನಿಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಹೊರ ಹೋಗುವ ಸಾಧ್ಯತೆ ಇದೆ. ಇದು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ರಕ್ತ ಕ್ಯಾನ್ಸರ್‌ನ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಯಾಗಿ ಕಾಣಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಇವು ಬೇರೆ ಕಾಯಿಲೆಗಳ ಲಕ್ಷಣಗಳಂತೆ ಕಾಣಬಹುದು. ಆದ್ದರಿಂದ, ಶಂಕಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯ ರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಅವಶ್ಯ ಎಂದು ಡಾ. ಸಂತೋಷ್ ಕುಮಾರ್ ಹೇಳಿದರು.

 

ಸಾಮಾನ್ಯವಾಗಿ ಕಂಡುಬರುವ ಕೆಲವು ಲಕ್ಷಣಗಳು ?

  • ಅನಿರೀಕ್ಷಿತವಾಗಿ ತೂಕ ಇಳಿಕೆಯಾಗುವುದು
  • ರಾತ್ರಿ ಸಮಯದಲ್ಲಿ ಹೆಚ್ಚು ಬೆವರುವುದು
  • ಹಸಿವು ಕಡಿಮೆಯಾಗುವುದು
  • ನಿಶ್ಶಕ್ತಿ ಮತ್ತು ದೌರ್ಬಲ್ಯ
  • ಲಿಂಫ್ ಗ್ರಂಥಿಗಳ(ದುಗ್ದ ಗ್ರಂಥಿ) ಹಿಗ್ಗುವಿಕೆ
  • ಹೊಟ್ಟೆ ತುಂಬಿದಂತ ಭಾವನೆ

ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಎಂದರೇನು? ಚಿಕಿತ್ಸೆ ಏಕೆ ಅವಶ್ಯಕ?
ರಕ್ತ ಕ್ಯಾನ್ಸರ್ ಸೇರಿದಂತೆ ಕೆಲವು ಗಂಭೀರ ರಕ್ತ ಸಂಬಂಧಿ ಕಾಯಿಲೆಗಳ ಸಂದರ್ಭದಲ್ಲಿ ರೋಗಿಯ ಅಸ್ಥಿಮಜ್ಜೆ ಬೋನ್ ಮ್ಯಾರೋ ಹಾನಿಗೊಳಗಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯಕರ ಸ್ಟೆಮ್ ಸೆಲ್‌ಗಳನ್ನು ದೇಹಕ್ಕೆ ಸೇರಿಸುವ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಯು ಪರಿಣಾಮಕಾರಿ ಮಾರ್ಗವಾಗಿದೆ.

ಹಿಂದೆ ಸ್ಟೆಮ್ ಸೆಲ್‌ಗಳನ್ನು ನೇರವಾಗಿ ಅಸ್ಥಿ ಮಜ್ಜೆಯಿಂದಲೇ ಸಂಗ್ರಹಿಸಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ‘ಅಫೆರೆಸಿಸ್’ ವಿಧಾನದಿಂದ ರಕ್ತದ ಮೂಲಕವೇ ಸ್ಟೆಮ್ ಸೆಲ್‌ಗಳನ್ನು ಸುಲಭವಾಗಿ ಸಂಗ್ರಹಿಸುವುದು ಹೆಚ್ಚಾಗಿದೆ. ಈ ಚಿಕಿತ್ಸೆಯಲ್ಲಿ ಪ್ರಮುಖ ಅಂಶವೆಂದರೆ ಡೋನರ್ ಮತ್ತು ರೋಗಿಯ ನಡುವಿನ ‘ಎಚ್‌ಎಲ್‌ಎ ಮ್ಯಾಚಿಂಗ್’ ಸರಿಯಾದ ಮ್ಯಾಚ್ ಇದ್ದಲ್ಲಿ ಟ್ರಾನ್ಸ್‌ಪ್ಲಾಂಟ್ ಯಶಸ್ಸಿನ ಸಾಧ್ಯತೆ ಹೆಚ್ಚು ಇರಲಿದೆ ಎಂದು ಡಾ. ಸಂತೋಷ್ ಕುಮಾರ್ ಹೇಳಿದರು.

ಟ್ರಾನ್ಸ್‌ಪ್ಲಾಂಟ್ ನಂತರ ದೇಹಕ್ಕೆ ಸೇರಿಸಲಾದ ಹೊಸ ಸೆಲ್‌ಗಳು ‘ಎಂಗ್ರಾಫ್ಟ್’ ಆಗಿ ಕಾರ್ಯನಿರ್ವಹಿಸಲು ಆರಂಭಿಸಬೇಕು. ಸಾಮಾನ್ಯವಾಗಿ ಎರಡು ವಾರಗಳೊಳಗೆ ಹೊಸ ರಕ್ತ ಕಣಗಳ ಉತ್ಪಾದನೆ ಆರಂಭವಾಗುತ್ತದೆ. ಈ ಚಿಕಿತ್ಸೆ ಕೆಲವು ಅಡ್ಡಪರಿಣಾಮಗಳನ್ನು ಬೀರಬಹುದು. ಆದರೆ, ಇವು ಹೆಚ್ಚಿನ ಪ್ರಮಾಣದಲ್ಲಿ ರೋಗಿಯನ್ನು ಬಾಧಿಸುವುದಿಲ್ಲ. ಮರಣದ ಪ್ರಮಾಣವು ಕೇವಲ ಶೇ. ೧ರಿಂದ ೫ರಷ್ಟು ಇರಲಿದೆ. ಇಂತಹ ರೋಗಿಯ ಮರಣಕ್ಕೆ ಇನ್ಛೆಕ್ಷನ್ ಪ್ರಮುಖ ಕಾರಣವಾಗಿದೆ.

ಈ ಅಪಾಯಗಳನ್ನು ಕಡಿಮೆ ಮಾಡಲು ವೈದ್ಯರು ಕಠಿಣ ಇನ್ಛೆಕ್ಷನ್ ನಿಯಂತ್ರಣ ಕ್ರಮಗಳು, ಸರಿಯಾದ ಡೋನರ್ ಆಯ್ಕೆ, ನಿಕಟ ನಿಗಾ (ಕ್ಲೋಸ್ ಮಾನಿಟರಿಂಗ್) ಹಾಗೂ ವಿಶೇಷ ಚಿಕಿತ್ಸಾ ವ್ಯವಸ್ಥೆಗಳನ್ನು ಅನುಸರಿಸಲಾಗುತ್ತದೆ. ಅದು ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಡಾ. ಸಂತೋಷ್ ಕುಮಾರ್ ತಿಳಿಸಿದರು.

ಮಕ್ಕಳಲ್ಲಿ ರಕ್ತದ ಕ್ಯಾನ್ಸರ್
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಲ್ಯುಕೇಮಿಯಾ ಅಥವಾ ರಕ್ತದ ಕ್ಯಾನ್ಸರ್ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ರೀತಿಯ ಕ್ಯಾನ್ಸರ್ ಆಗಿದೆ. ಬಾಲ್ಯದಿಂದ ೧೮ ವರ್ಷದವರೆಗಿನ ಮಕ್ಕಳಲ್ಲಿ ಕ್ಯಾನ್ಸರ್ ಕಂಡುಬರುತ್ತಿದೆ. ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಭಾರತ್ ಕ್ಯಾನ್ಸರ್ ಆಸ್ಪತ್ರೆ ಒದಗಿಸುತ್ತಿದೆ.

ಮಕ್ಕಳಲ್ಲಿ ಲ್ಯುಕೇಮಿಯಾ(ರಕ್ತ ಕ್ಯಾನ್ಸರ್) ಕಾಣಿಸಿಕೊಂಡರೂ, ಆರೋಗ್ಯದಲ್ಲಿ ಅಸಾಮಾನ್ಯ ಲಕ್ಷಣಗಳು ತಕ್ಷಣ ಗೋಚರಿಸುವುದಿಲ್ಲ. ಇದು ಮುಖ್ಯವಾಗಿ ರೋಗ ನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಇಮ್ಯುನಿಟಿ ಕಡಿಮೆಯಾಗುವ ಪರಿಣಾಮವಾಗಿ ವಿವಿಧ ರೀತಿಯ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳಲಿವೆ.

ಮಕ್ಕಳು ಹೆಚ್ಚು ಆಯಾಸಗೊಂಡಂತೆ ಕಾಣುವುದು, ಆಟ-ಪಾಠಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು, ಅಲ್ಪ ಪೆಟ್ಟಿಗೂ ಹೆಚ್ಚು ರಕ್ತಸ್ರಾವವಾಗುವುದು ಅಥವಾ ದೇಹದಲ್ಲಿ ಸುಲಭವಾಗಿ ಮೂಗೇಟುಗಳು ಕಾಣಿಸಿಕೊಳ್ಳುವುದು. ಇವು ರಕ್ತದ ಸಮಸ್ಯೆಗಳ ಸೂಚನೆಯಾಗಿರಬಹುದು. ನಿರಂತರ ಜ್ವರ ಪ್ರಮುಖ ಸೂಚನೆಯಾಗಿದ್ದು, ಈ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಸು ವುದು ಅಗತ್ಯ ಎಂದು ಡಾ. ಕೆ. ಸೌಮ್ಯ ತಿಳಿಸಿದರು.

ಸಂಬಂಧಿಕರ ಕುಟುಂಬದಲ್ಲಿ ವಿವಾಹವಾದರೆ ಮಕ್ಕಳಿಗೆ ಅನುವಂಶೀಯ ರಕ್ತ ಸಂಬಂಧಿತ ಕಾಯಿಲೆ, ಕ್ಯಾನ್ಸರ್ ಹರಡುವ ಸಾಧ್ಯತೆಯಿದೆ. ಅದಕ್ಕೆ ಮುನ್ನಚ್ಚ ರಿಕೆ ಕ್ರಮ ಏನು?
ಡಾ. ಸೌಮ್ಯ: ಕೆಲವೊಮ್ಮೆ ರಕ್ತಹೀನತೆ(ಅನಿಮಿಯಾ)ಗಳಿರುತ್ತವೆ. ಅದರಲ್ಲಿ ಥಲಸೇ ಮಿಯಾನಂತಹ ರೋಗ ಲಕ್ಷಣಗಳು ಅನುವಂಶೀಯವಾಗಿ ಹರಡುವ ಸಾಧ್ಯತೆಯಿದೆ. ತಂದೆ ತಾಯಿಯಲ್ಲಿ ಸಂಬಂಧಿತ ಕಾಯಿಲೆಗಳಿಲ್ಲದಿದ್ದರೂ, ಅದಕ್ಕೆ ಕಾರಣವಾಗುವ ಜೀನ್ಸ್(ವಂಶವಾಹಿನಿಗಳು) ಪೋಷಕರಲ್ಲಿ ಇದ್ದರೆ, ಆ ಕಾಯಿಲೆ ಮಕ್ಕಳಿಗೆ ಹರಡುವ ಸಾಧ್ಯತೆಗಳಿದೆ. ಇದೊಂದು ಅಂಶವಾದರೆ, ಹಿಮೊಫಿಲಿಯಾ ಎಂಬ ಮತ್ತೊಂದು ಅನುವಂಶೀಯ ಕಾಯಿಲೆ. ಇವು ರಕ್ತ ಸಂಬಂಧಿತ ಕಾಯಿಲೆಗಳು. ಇಂತಹ ಸಂದರ್ಭದಲ್ಲಿ ಕುಟುಂಬ ಸಂಬಂಧಿ ವಿವಾಹಗಳು ಕಾರಣ ವಾಗಬಹುದು. ಸಮಸ್ಯೆಗಳಿಗೆ ಕುಟುಂಬದ ಇತಿಹಾಸ ಮತ್ತು ಸಂಪೂರ್ಣ ಮಾಹಿತಿ ಪಡೆದು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಭವಿಷ್ಯದಲ್ಲಿ ಕುಟುಂಬದಲ್ಲಿ ವಿವಾಹವಾಗಲು ಬಯಸುವವರು, ಈ ರೀತಿ ಅನುವಂಶೀಯ ಕಾಯಿಲೆಯ ಬಗ್ಗೆ ಅನುಮಾನವಿರುವವರಿಗೆ ಮುನ್ನಚ್ಚರಿಕೆಯಾಗಿ ಸಂಬಂಧಿತ ರಕ್ತದ ಪರೀಕ್ಷೆಗಳು, ತಜ್ಞರ ಸಮಾಲೋಚನೆ ನಡೆಸಿ ಕಾಯಿಲೆ ಪತ್ತೆ ಹಚ್ಚಿ ಮಕ್ಕಳಲ್ಲಿ ಅನುವಂಶೀಯ ಕಾಯಿಲೆ ಹರಡದಂತೆ ತಡೆಯುವ ಸಾಕಷ್ಟು ಅವಕಾಶಗಳಿವೆ.

ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಜ್ವರ ಕಾಣಿಸಿಕೊಂಡರೆ ಬಿಳಿ ರಕ್ತ ಮತ್ತು ಹಿಮೋಗ್ಲೋಬಿನ್ ಕಣಗಳ ಕೊರತೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಏನು?
ಡಾ. ಸೌಮ್ಯ : ಬಿಳಿ ರಕ್ತ ಕಣಗಳು ವೈರಲ್ ಜ್ವರದಿಂದ ಕಡಿಮೆಯಾಗುತ್ತವೆ. ಇದು ಸಾಮಾನ್ಯ ಪ್ರಕ್ರಿಯೆ. ಇತ್ತೀಚೆಗೆ ಬಿಳಿ ರಕ್ತ ಕಣಗಳ ಕೊರತೆ ಬಗ್ಗೆ ಹೆಚ್ಚು ಪತ್ತೆಯಾಗುತ್ತಿದೆ. ಹಿಂದೆ ರಕ್ತ ಪರೀಕ್ಷೆಗಳು ಮತ್ತು ವೈದ್ಯರ ತಪಾಸಣೆಗಳು ಪ್ರಸ್ತುತಕ್ಕೆ ಹೋಲಿಸಿದರೆ ಕಡಿಮೆಯಿತ್ತು. ಆದರೆ, ಪತ್ತೆ ಹಚ್ಚುವಿಕೆ ಇತ್ತೀಚೆಗೆ ಹೆಚ್ಚಿದೆ. ವೈರಲ್ ಜ್ವರದಿಂದ ಕಡಿಮೆಯಾಗಿ ಮತ್ತೆ ಹೆಚ್ಚುತ್ತದೆ. ರಕ್ತ ಸಂಬಂಧಿತ ಕಾಯಿಲೆಗಳಲ್ಲಿ ಬಿಳಿ ರಕ್ತ ಕಣದ ಜತೆಗೆ ಹಿಮೋಗ್ಲೋಬಿನ್ ಕೊರತೆ, ಡಬ್ಲ್ಯೂಬಿಸಿ ಯಂತಹ ರಕ್ತದ ಕಣಗಳು ಹೆಚ್ಚು ಅಥವಾ ಕಡಿಮೆಯಾಗುತ್ತದೆ.

ಭಾರತ್ ಕ್ಯಾನರ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ
ಕ್ಯಾನ್ಸರ್ ರೋಗಿಗೆ ಟ್ರಾನ್ಸ್‌ಪ್ಲಾಂಟ್ ಸಮಯದಲ್ಲಿ ನವಜಾತ ಶಿಶುವಿನಂತೆ ಉಪಚರಿಸಬೇಕು. ಇದಕ್ಕಾಗಿ ನಮ್ಮಲ್ಲಿ ಆಧುನಿಕ ತಂತ್ರಜ್ಞಾನದ ಉತ್ತಮ ಚಿಕಿತ್ಸೆಯ ವ್ಯವಸ್ಥೆಗಳಿವೆ. ಬಿಎಂಟಿ ಯೂನಿಟ್, ಐಸಿಯು ರೇಡಿಯಾಲಜಿ, ಇಂಟರ್‌ವೆನ್ಷನಲ್ ರೇಡಿಯಾಲಜಿ ಮತ್ತು ಸರ್ಜಿಕಲ್ ತಂಡ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿನ ತಜ್ಞ ವೈದ್ಯರ ತಂಡ ಗಂಭೀರ ಸಮಸ್ಯೆಗಳನ್ನು ಬಗೆಹರಿಸಿ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ. ಎಂಜಿಎಸ್ ಮತ್ತು ಜೆನೆಟಿಕ್ ಟೆಸ್ಟ್‌ಗಳ ಮೂಲಕ ೪೮ ಗಂಟೆಗಳೊಳಗೆ ಖಚಿತ ನಿರ್ಣಯವನ್ನು ನೀಡುವ ಸಾಮರ್ಥ್ಯ ಹೊಂದಿದ್ದೇವೆ. ಚಿಕಿತ್ಸೆಯಲ್ಲಿ ನಾವು ಟಾರ್ಗೆ ಟೆಡ್ ಥೆರಪಿ ಮತ್ತು ಇಮ್ಯುನೋಥೆರಪಿ ಗಳಂತಹ ಹೊಸ ವಿಧಾನಗಳನ್ನು ಅಳವಡಿಸಿಕೊಂಡಿದ್ದೇವೆ. ಇದರಿಂದ ಹಲವಾರು ಪ್ರಕರಣಗಳಲ್ಲಿ ಕಿಮೋಥೆರಪಿಯ ಅವಶ್ಯಕತೆ ಕಡಿಮೆಯಾಗುತ್ತಿದೆ.

ಆಂದೋಲನ ಡೆಸ್ಕ್

Recent Posts

ಟಿವಿಕೆ ಗೆಲುವು : ಹನೂರಲ್ಲಿ ಸಂಭ್ರಮಾಚರಣೆ

ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…

10 hours ago

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…

10 hours ago

ಹನೂರು | ಕಾಡು ಹಂದಿ ದಾಳಿ ; ರೈತನಿಗೆ ಗಂಭೀರ ಗಾಯ

ಹನೂರು : ತಾಲ್ಲೂಕಿನ ದಿನ್ನಳ್ಳಿ ರಸ್ತೆಯ ಸಮೀಪದ ಜಮೀನೊಂದರಲ್ಲಿ ಕಾಡು ಹಂದಿ ದಾಳಿ ನಡೆಸಿ ರೈತನಿಗೆ ಗಂಭೀರ ಗಾಯಗೊಳಿಸಿರುವ ಘಟನೆ…

11 hours ago

ಡಿಎಂಕೆ-ಎಐಎಡಿಎಂಕೆ ಮೈತ್ರಿ ವದಂತಿ ; ಸ್ಟಾಲಿನ್‌ ಹೇಳಿದ್ದೇನು?

ಚೆನ್ನೆ : ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಜೋರಾಗಿದೆ. 108 ಸ್ಥಾನಗಳೊಂದಿಗೆ ಅತಿ ದೊಡ್ಡ…

11 hours ago

ಮೇಲು-ಕೀಳು ಕಳೆಯಲಿ ; ಸರ್ವರೂ ಒಂದೇ ಎಂಬ ಮನೋಭಾವ ಮೂಡಲಿ : ಮೋಹನ್‌ ಭಾಗವತ್‌

ಮೈಸೂರು : ಮೇಲು-ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು ಎಂದು ರಾಷ್ಟ್ರೀಯ…

11 hours ago

ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌ ಪಂದ್ಯ : ಕೆಎಸ್‌ಸಿಎ ಹೇಳಿದ್ದೇನು?

ಬೆಂಗಳೂರು : ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್) 2026ರ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಅಧಿಕೃತವಾಗಿ ಸ್ಥಳಾಂತರಿಸಿದ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್…

11 hours ago