Andolana originals

ಪರಂಪರೆ ಸಾರಿದ ದಸರಾ ಕುಸ್ತಿ ಪಂದ್ಯಾವಳಿ

ಚಿರಂಜೀವಿ ಸಿ.ಹುಲ್ಲಹಳ್ಳಿ

ಪೈಲ್ವಾನರ ಬೆನ್ನು ತಟ್ಟಿ ಪಂದ್ಯಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ 

ಮೈಸೂರು: ಪಟ್ಟಿಗೆ ಪ್ರತಿಪಟ್ಟು ಹಾಕಿದ ಪೈಲ್ವಾನರು, ಮೈಯನ್ನೆಲ್ಲ ಮಣ್ಣಾಗಿಸಿಕೊಂಡು ಗೆಲ್ಲುವ ಗುರಿ ಇಟ್ಟುಕೊಂಡು ಕಾದಾಡಿದರು, ಡಾವ್‌ಗಳನ್ನು ಹೊಡೆದು ಚಿತ್ ಬೀಳಿಸಿದವರ ಪರ ಜನಸ್ತೋಮ ಕೇಕೆ ಹಾಕಿದರು. ನಗರದ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆದ ದಸರಾ ಮಹೋತ್ಸವದ ಆಹಾರ ಗತವೈಭವ ಸಾರುವ ಮೈಸೂರು ಪರಂಪರೆಯ ಪ್ರಮುಖ ಆಷರ್ಕಣೆಗಳಲ್ಲಿ ಒಂದಾದ ದಸರಾ ಕುಸ್ತಿ ಪಂದ್ಯಾವಳಿಯ ಮೊದಲ ದಿನದ ದೃಶ್ಯಗಳಿವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕುಸ್ತಿಪಟುಗಳ ಬೆನ್ನು ತಟ್ಟುವ ಮೂಲಕ ಕುಸ್ತಿಗೆ ಚಾಲನೆ ನೀಡಿದರು. ಅಲ್ಲದೆ, ಕುಸ್ತಿ ವೀಕ್ಷಿಸಿ ಪೈನ್ವಾಲರನ್ನು ಪ್ರೋತ್ಸಾಹಿಸಿದರು. ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಪೈಲ್ವಾನರು ಮಟ್ಟಿ ಮುಟ್ಟಿ ಜಟ್ಟಿತನ ಮೆರೆದರು.

ಒಂದೇ ನಿಮಿಷದಲ್ಲಿ ಚಿತ್: ಮಹಿಳಾ ಕುಸ್ತಿ ವಿಭಾಗದಲ್ಲಿ ಬೆಂಗಳೂರಿನ ಪುಷ್ಪ ಮತ್ತು ಬೆಳಗಾವಿಯ ನಂದಿನಿ ನಡುವೆ ನಡೆದ ಕುಸ್ತಿ ಒಂದೇ ನಿಮಿಷಕ್ಕೆ ಫಲಿತಾಂಶ ಕಂಡಿತು. ಕುಸ್ತಿ ಪ್ರಾರಂಭವಾಗುತ್ತಿದ್ದಂತೆ ಪುಷ್ಪ ಮೇಲೆ ಎರಗಿದ ನಂದಿನಿ ಕ್ಷಣಾರ್ಧದಲ್ಲಿ ಚಿತ್ ಮಾಡಿ ಗೆಲುವಿನ ನಗೆ ಬೀರಿದರು. ಅಥಣಿಯ ಪೈಲ್ವಾನ್ ಸುರೇಶ್ ಲಂಕೋಟಿ ಹಾಗೂ ದಾವಣಗೆರೆ ಕ್ರೀಡಾ ನಿಲಯದ ಪೈಲ್ವಾನ್ ಹನುಮಂತ ವಿಠಲ ಬೇವಿನಮರದ ನಡುವೆ ನಡೆದ ಕುಸ್ತಿ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರು ಕೂಡ ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚಪ್ಪಾಳೆ, ಶಿಳ್ಳೆ ಮೂಲಕ ಪ್ರೋತಾಹಿಸಿದರು.

ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.

೪೧ ಸೆಕೆಂಡ್‌ಗಳಲ್ಲೇ ಎದುರಾಳಿ ಚಿತ್!: 

ಮೈಸೂರು: ರೋಚಕತೆಯಿಂದ ಕೂಡಿದ ದಸರಾ ಮಹೋತ್ಸವದ ಮೊದಲ ದಿನದ ನಾಡ ಕುಸ್ತಿಯಲ್ಲಿ ಪೈ. ಶಿವು ಕೇವಲ ೪೧ ಸೆಕೆಂಡ್‌ಗಳಲ್ಲೇ ಎದುರಾಳಿಯನ್ನು ಚಿತ್ ಮಾಡುವ ಮೂಲಕ ಪರಾಕ್ರಮ ಮೆರೆದರು. ದಸರಾ ಕುಸ್ತಿಯ ಮೊದಲ ದಿನದ ಅತೀ ಕಡಿಮೆ ಅವಧಿಯಲ್ಲಿ ಚಿತ್ ಮಾಡಿದ ಹೆಗ್ಗಳಿಕೆಗೆ ಪೈ.ಶಿವು ಪಾತ್ರರಾದರು. ದಸರಾ ಕುಸ್ತಿ ಅಖಾಡದಲ್ಲಿ ಸೋಮವಾರ ಪೈ.ಶಿವು ತನ್ನ ಎದುರಾಳಿ ಅಬೂಬಕರ್ ಅವರನ್ನು ಕ್ಷಣಾರ್ಧದಲ್ಲೇ ಚಿತ್ ಮಾಡಿ ಜಟ್ಟಿತನ ಪ್ರದರ್ಶಿಸಿದರು. ಬೆಳಗಾವಿಯ ಪೈ.ಸಂಜು ಮತ್ತು ದಾವಣಗೆರೆ ಪೈ.ಬಸವರಾಜ್ ಪಾಟೀಲ್ ನಡುವೆ ಅರ್ಧಗಂಟೆ ನಿಗದಿಯಾಗಿದ್ದ ದಿನದ ಎರಡನೇ ದೊಡ್ಡ ಕುಸ್ತಿ ಸಮಬಲದಲ್ಲಿಯೇ ಅಂತ್ಯಗೊಂಡು ನಿರಾಸೆ ಮೂಡಿಸಿತು.

ಆಂದೋಲನ ಡೆಸ್ಕ್

Recent Posts

ಎಐ ಮನುಷ್ಯನನ್ನು ಆಳಲಾಗದು!

ಮೊನ್ನೆ ತುಮಕೂರು ರಸ್ತೆ ಹಿಡಿದು ಬೆಂಗಳೂರಿನ ಕಡೆ ಬರುತ್ತಿರುವಾಗ, ರಸ್ತೆಯ ಬಲಭಾಗದಲ್ಲಿ ದೊಡ್ಡ ಕಲ್ಲು ಬೆಟ್ಟ ಕಾಣಿಸಿತು. ಕುಂಬಳಕಾಯಿಯನ್ನು ಚಾಕುವಿನಿಂದ…

6 hours ago

ಭಯಗೊಳಿಸುವ ಸಿನೆಮಾ ಕಥೆ ನಿಜವಾಗುವ ಸಾಧ್ಯತೆ!

ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ…

6 hours ago

‘ಎಐ’ ಅತಿ ಬಳಕೆಯ ವ್ಯಸನದ ಬಗ್ಗೆ ಎಚ್ಚರದಿಂದಿರಿ

‘ಕೃತಕ ಬುದ್ಧಿವಂತಿಕೆ’ಯನ್ನು ನಮ್ಮ ಸಹಾಯಕನಾಗಿ ಬಳಸಿಕೊಳ್ಳಬೇಕೇ ಹೊರತು, ಅದರ ಮೇಲೆ ಅವಲಂಬಿತರಾಗಬಾರದು; ಇಂದು ಶಾಲೆ, ಕಾಲೇಜಿನ ಪ್ರಾಧ್ಯಾಪಕರಿಂದ ‘ಎಲ್ಲರ ಅಸೈನ್‌ಮೆಂಟೂ…

6 hours ago

ಡೂಮರ್ಸ್ ಮತ್ತು ಬೂಮರ್ಸ್

ನಾನು ಎ.ಐ. ಅಥವಾ ಕೃತಕ  ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ.…

6 hours ago

ಮನುಷ್ಯನ ಬೆನ್ನೇರಿರುವ ಎಐ ಬೇತಾಳ

ಮಾನವ ದುಡಿಮೆಯನ್ನು ಕಡಿಮೆಗೊಳಿಸಿರುವ ಎಐಯನ್ನು ಸಂಪೂರ್ಣವಾಗಿ ಹೀಗಳೆಯುವಂತೆಯೂ ಇಲ್ಲ. ಮನುಷ್ಯ ನಿರ್ಮಿತ ಈ ಕೃತಕ ಬುದ್ಧಿಯ ಬೇತಾಳ ನಮ್ಮದೇ ಕೂಸು!…

6 hours ago

ವಂದೇ ಮಾತರಂ: ದೇಶಪ್ರೇಮ-ಬಹುತ್ವದ ಭಿನ್ನ ವ್ಯಾಖ್ಯಾನ

೧೮೭೫ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯ ರಚಿಸಿದ ‘ವಂದೇ ಮಾತರಂ’ ಸ್ವಾತಂತ್ರ್ಯ ಚಳವಳಿಯ ಭಾಗವಾಗಿತ್ತು. ಧಾರ್ಮಿಕ ಆಕ್ಷೇಪಣೆಗಳಿಂದಾಗಿ ೧೯೩೭ರಲ್ಲಿ ಕಾಂಗ್ರೆಸ್ ಮೊದಲ ಎರಡು…

6 hours ago