ಸಂಸತ್ತಿನಲ್ಲಾಗಲಿ ಅಥವಾ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಾಗಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯದೆ ಗದ್ದಲ, ಧರಣಿ, ಪ್ರತಿ ಭಟನೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದಕ್ಕೆ ಆಡಳಿತ ಪಕ್ಷ ಎಷ್ಟು ಹೊಣೆಯೋ ಅಷ್ಟೇ ಜವಾಬ್ದಾರಿ ಪ್ರತಿಪಕ್ಷಗಳದ್ದೂ ಇದೆ. ಎಲ್ಲದಕ್ಕೂ ರಾಜಕೀಯ ಬೆರೆಸಿದರೆ ಆಗುವ ಪಾಡು ಇದು. ಶಾಸನ ಸಭೆಗಳಿಂದ ಹೊರಗೆ ಮಾಡಬೇಕಾದ ಹೋರಾಟ, ಪ್ರತಿಭಟನೆ, ಧರಣಿ ಸದನದ ಒಳಗೆ ನಡೆಯುತ್ತಿವೆ. ರಾಜಕೀಯ ಪಕ್ಷಗಳು ಸದನವನ್ನು ತಮ್ಮ ರಾಜಕೀಯ ಪ್ರತಿಷ್ಠೆಗೆ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಸದನಕ್ಕೆ ಮಾತಿನ ಮನೆ ಎಂದೇ ಹೆಸರು. ಇಲ್ಲಿ ವಾದ ಮಂಡಿಸಬೇಕು, ಚರ್ಚೆ ಸಾಗಬೇಕು. ಆದರೆ, ಅಂತಹ ವಾತಾವರಣ ಈಗ ಅಪರೂಪ ಎನಿಸಿದೆ.
ಸಂಸತ್ತು ಹಾಗೂ ವಿಧಾನಮಂಡಲಗಳನ್ನು ಪ್ರಜಾ ಪ್ರಭುತ್ವದ ದೇಗುಲ ಅಂತ ಕರೆಯುತ್ತಾರೆ. ಆದರೆ, ಪ್ರಜಾ ಪ್ರಭುತ್ವದಲ್ಲಿ ಚರ್ಚೆ ನಡೆಯಬೇಕು. ಗುಣಮಟ್ಟದ ಚರ್ಚೆ ಗಳಾಗಬೇಕು. ಆದರೆ, ಇವತ್ತಿನ ದಿನಗಳಲ್ಲಿ ಸದನದ ಅಧಿವೇಶನಗಳಲ್ಲಿ ಗಂಭೀರವಾಗಿ ಚರ್ಚೆ ನಡೆಯುವುದೇ ಅಪರೂಪವಾಗಿದೆ. ಶಾಸನಗಳನ್ನು ರೂಪಿಸ ಬೇಕಾದ ಶಾಸನಸಭೆಗಳು ವಿಧೇಯಕಗಳ ಮೇಲೆ ಗಂಭೀರವಾಗಿ ಚರ್ಚೆ ನಡೆಸುವುದೇ ವಿರಳವಾಗಿದೆ. ಗುಣಮಟ್ಟದ ಗಂಭೀರ ಚರ್ಚೆಗಳು ನಡೆಯಬೇಕೆಂಬ ಆಶಯವನ್ನು ಎಲ್ಲ ರಾಜಕೀಯ ಪಕ್ಷಗಳೂ ವ್ಯಕ್ತಪಡಿಸುತ್ತವೆ. ಆದರೆ, ವಾಸ್ತವವಾಗಿ ಅದು ಸಾಧ್ಯವಾಗಿಸಲು ಯಾವ ಪಕ್ಷಗಳೂ ಸಿದ್ಧವಿಲ್ಲ. ಸದನವನ್ನು ರಾಜಕೀಯದಲ್ಲಿ ಮೇಲುಗೈ ಸಾಧಿಸಲು ವೇದಿಕೆಯನ್ನಾಗಿಸಿಕೊಳ್ಳುವ ಪ್ರವೃತ್ತಿಯೇ ಹೆಚ್ಚಾಗಿ ಕಂಡು ಬರುತ್ತಿವೆ. ಆಡಳಿತ ಪಕ್ಷದಲ್ಲಿದ್ದಾಗ ಒಂದು ಧೋರಣೆ, ಅದೇ ಪಕ್ಷಗಳು ಪ್ರತಿಪಕ್ಷದ ಸಾಲಿನಲ್ಲಿ ಕುಳಿತಾಗ ಮತ್ತೊಂದು ಧೋರಣೆ. ಆಡಳಿತದಲ್ಲಿದ್ದಾಗ ಸದನದಲ್ಲಿ ಧರಣಿ, ಪ್ರತಿಭಟನೆಯನ್ನು ವಿರೋಧಿಸುವುದು, ಅದೇ ಪಕ್ಷ ಪ್ರತಿಪಕ್ಷದಲ್ಲಿ ಕುಳಿತಾಗ ಸದನದಲ್ಲಿ ಪ್ರತಿಭಟನೆ, ಧರಣಿಗೆ ಮುಂದಾಗುತ್ತವೆ. ಇದು ದ್ವಂದ್ವ ನೀತಿ. ಇದು ಸರಿಯಲ್ಲ.
ರಾಜ್ಯ ವಿಧಾನಮಂಡಲದ ಉಭಯ ಸದನಗಳು ಆಗಸ್ಟ್ ೧೩ರಂದು ಆರಂಭವಾಗಿವೆ. ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜಾ.ದಳ ಬಲವಾಗಿ ವಿರೋಽಸಿವೆ. ಯೋಜನಾ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಕಲಾಪಗಳಿಗೆ ಅಡ್ಡಿಪಡಿಸಿವೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮದಲ್ಲಿ ಆರೋಪ ಹೊತ್ತ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಆಗ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವಿದ್ಯಮಾನ ನಡೆದ ಎರಡು ವರ್ಷಗಳ ನಂತರ ಮುಖ್ಯಮಂತ್ರಿ ಶಿವಕುಮಾರ್ ತಮ್ಮ ಸಚಿವ ಸಂಪುಟಕ್ಕೆ ನಾಗೇಂದ್ರ ಅವರನ್ನು ಮತ್ತೆ ಸೇರ್ಪಡೆ ಮಾಡಿದ್ದಾರೆ. ಇದನ್ನು ಪ್ರತಿಪಕ್ಷಗಳು ವಿರೋಧಿಸಿ ರಾಜೀನಾಮೆಗೆ ಪಟ್ಟು ಹಿಡಿದಿವೆ. ನಾಗೇಂದ್ರ ಆರೋಪ ಮುಕ್ತವಾದ ನಂತರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತು. ಆದರೆ, ಕಾಂಗ್ರೆಸ್ ಪಕ್ಷ ನಾಗೇಂದ್ರ ಪರ ಬಲವಾಗಿ ನಿಂತಿದೆ. ರಾಜ್ಯದ ಅನೇಕ ಕಡೆ ಬರ ಪರಿಸ್ಥಿತಿ ಇದೆ. ಕಾವೇರಿ ನದಿ ನೀರಿನ ಹಂಚಿಕೆ ವಿವಾದ ತಲೆದೋರಿದೆ. ಬಿಡದಿ ಟೌನ್‌ಶಿಪ್ ನಿರ್ಮಾಣದ ವಿವಾದವಿದೆ.
ನಕಲಿ ಔಷಧಿಗಳ ದಂಧೆ ಬಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆಯೇ ಎದುರಾಗಿದೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಾದ ಸದನದಲ್ಲಿ ಕಲಾಪಗಳು ಸುಸೂತ್ರವಾಗಿ ನಡೆಯುತ್ತಿಲ್ಲ. ಹನೂರು ತಾಲ್ಲೂಕಿನ ಅರಣ್ಯಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬೇಟೆಗಾರರು ಹತ್ಯೆಯಾದ ವಿಷಯ ಬಿಟ್ಟರೆ ಸದನದಲ್ಲಿ ಹೆಚ್ಚು ಚರ್ಚೆ ನಡೆದಿಲ್ಲ. ಗದ್ದಲದ ನಡುವೆಯೇ ಕೆಲವು ವಿಧೇಯಕಗಳು ಚರ್ಚೆಯಿಲ್ಲದೇ ಅಂಗೀಕಾರವಾಗಿವೆ. ಸದನದ ಅಧಿವೇಶನಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ಇದು ಜನರ ತೆರಿಗೆಯ ಹಣ. ಸದನಗಳಲ್ಲಿ ಚರ್ಚೆಯೇ ನಡೆಯದೇ ಅಧಿವೇಶನಗಳು ವ್ಯರ್ಥವಾಗಿ ಕೊನೆಗೊಂಡರೆ ಯಾರು ಹೊಣೆ?
” ಗುಣಮಟ್ಟದ ಗಂಭೀರ ಚರ್ಚೆಗಳು ನಡೆಯಬೇಕೆಂಬ ಆಶಯವನ್ನು ಎಲ್ಲ ರಾಜಕೀಯ ಪಕ್ಷಗಳೂ ವ್ಯಕ್ತಪಡಿಸುತ್ತವೆ. ಆದರೆ, ವಾಸ್ತವವಾಗಿ ಅದು ಸಾಧ್ಯವಾಗಿಸಲು ಯಾವ ಪಕ್ಷಗಳೂ ಸಿದ್ಧವಿಲ್ಲ. ಸದನವನ್ನು ರಾಜಕೀಯದಲ್ಲಿ ಮೇಲುಗೈ ಸಾಧಿಸಲು ವೇದಿಕೆಯನ್ನಾಗಿಸಿಕೊಳ್ಳುವ ಪ್ರವೃತ್ತಿಯೇ ಹೆಚ್ಚಾಗಿ ಕಂಡು ಬರುತ್ತಿವೆ. ಆಡಳಿತ ಪಕ್ಷದಲ್ಲಿದ್ದಾಗ ಒಂದು ಧೋರಣೆ, ಅದೇ ಪಕ್ಷಗಳು ಪ್ರತಿಪಕ್ಷದ ಸಾಲಿನಲ್ಲಿ ಕುಳಿತಾಗ ಮತ್ತೊಂದು ಧೋರಣೆ. ಆಡಳಿತದಲ್ಲಿದ್ದಾಗ ಸದನದಲ್ಲಿ ಧರಣಿ, ಪ್ರತಿಭಟನೆಯನ್ನು ವಿರೋಧಿಸುವುದು, ಅದೇ ಪಕ್ಷ ಪ್ರತಿಪಕ್ಷದಲ್ಲಿ ಕುಳಿತಾಗ ಸದನದಲ್ಲಿ ಪ್ರತಿಭಟನೆ, ಧರಣಿಗೆ ಮುಂದಾಗುತ್ತವೆ. ಇದು ದ್ವಂದ್ವ ನೀತಿ. ಇದು ಸರಿಯಲ್ಲ.”
ರಮೇಶ್ ಹೆಚ್.ಕೆ. ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ ಸುದೀರ್ಘವಾದ ಒಳ ಮೀಸಲಾತಿ ಹೋರಾಟದ ಬಳಿಕ ಸದ್ಯ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ಸಾಹದ ಕುದುರೆಯ ಮೇಲಿದ್ದಾರೆ. ಈ ಕುದುರೆಯನ್ನು ಸಮರ್ಥವಾಗಿ ಓಡಿಸುವ ವಿಶ್ವಾಸ ಇರುವುದರಿಂದ…
ಮಂಜು ಕೋಟೆ ಎಚ್.ಡಿ.ಕೋಟೆ: ರಾಜ್ಯದ ಗಡಿಭಾಗ ಕಬಿನಿ ಹಿನ್ನೀರಿನ ಪ್ರದೇಶವಾದ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ, ಡಿ.ಬಿ.ಕುಪ್ಪೆಯಿಂದ…
ಅಣ್ಣೂರು ಸತೀಶ್ ೩೦ ಹಾಸಿಗೆಯ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ; ತುರ್ತು ಚಿಕಿತ್ಸೆಯೂ ಲಭ್ಯವಿಲ್ಲ ಭಾರತೀನಗರ: ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ…
ಕೃಷ್ಣ ಸಿದ್ದಾಪುರ ಸ್ಥಳಾಂತರಿಸಿದ್ದ ಪುಂಡಾನೆ ಪುನಃ ಕೊಡಗಿನಲ್ಲಿ ಸಂಚಾರ: ನರಹಂತಕ ಆನೆಯನ್ನು ಸೆರೆ ಹಿಡಿದು ಪಳಗಿಸುವಂತೆ ಗ್ರಾಮಸ್ಥರ ಆಗ್ರ ಸಿದ್ದಾಪುರ:…
ಕೆ.ಎಸ್.ಚಂದ್ರಶೇಖರಮೂರ್ತಿ ರಾಮಕೃಷ್ಣ ನಗರದ ನಂದನವನ ಈಗ ಕುಡುಕರ ತಾಣ, ಬಯಲು ಶೌಚಾಲಯ ! ಮೈಸೂರು: ಸಾರ್ವಜನಿಕರಿಗೆ ವಿಶ್ರಾಂತಿಯ ತಾಣವಾಗಬೇಕಿದ್ದ ಉದ್ಯಾನವನ…