ಕೆ.ಎಸ್.ಚಂದ್ರಶೇಖರ್‌ಮೂರ್ತಿ
ಅರಮನೆಯಿಂದ ಪಂಜಿನ ಕವಾಯತುವರೆಗೂ ಅಂಗೈಯ ವೀಕ್ಷಣೆಗೆ ಅವಕಾಶ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ೨೦೨೬ರ ವರ್ಷದಲ್ಲಿ ಹತ್ತು ಹಲವು ವೈಶಿಷ್ಟ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಅದರಲ್ಲಿಯೂ ಈ ಬಾರಿ ಮೈಸೂರು ದಸರಾ ಜಾಲತಾಣಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ. ೨೦೨೫ರಿಂದ ೨೦೨೬ಕ್ಕೆ ಡಿಜಿಟಲ್ ರೂಪಾಂತರ ಮಾಡಿದ್ದು, ಇದರಲ್ಲಿ ಕೇವಲ ಮಾಹಿತಿ ಮಾತ್ರವಲ್ಲ, ಪ್ರವಾಸಿಗರ ಕೈಹಿಡಿಯುವ ಡಿಜಿಟಲ್ ಗೈಡ್ ಆಗಿ ಸಹಕಾರಿಯಾಗಲಿದೆ.
ಮೈಸೂರು ದಸರಾ ಎಂದರೆ ಅರಮನೆ, ಜಂಬೂಸವಾರಿ, ಪಂಜಿನ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ. ಆದರೆ, ೨೦೨೬ರ ದಸರಾ ಮತ್ತೊಂದು ಕಾರಣಕ್ಕೂ ಗಮನ ಸೆಳೆಯುತ್ತಿದೆ. ದಸರಾ ಕಾರ್ಯಕ್ರಮಗಳಷ್ಟೇ ಅಲ್ಲ, ಅವುಗಳ ಸಂಪೂರ್ಣ ಮಾಹಿತಿಯನ್ನು ಜನರ ಮೊಬೈಲ್‌ಗೆ ತಲುಪಿಸುವ ಅಧಿಕೃತ ಜಲತಾಣಕ್ಕೂ ಹೊಸ ರೂಪದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
೨೦೨೫ರಲ್ಲಿ ಆರಂಭಗೊಂಡಿದ್ದ ಮೈಸೂರು ದಸರಾ ಅಧಿಕೃತ ಜಲತಾಣದಲ್ಲಿ ಕಾರ್ಯಕ್ರಮಗಳ ಪಟ್ಟಿ, ವೇಳಾಪಟ್ಟಿ, ಟಿಕೆಟ್ ಹಾಗೂ ಗೋಲ್ಡ ಕಾರ್ಡ್ ಖರೀದಿ ಮತ್ತು ದಸರಾ ಕಾರ್ಯಕ್ರಮಗಳ ನೇರ ಪ್ರಸಾರದಂತಹ ಸೌಲಭ್ಯಗಳು ಪ್ರಮುಖವಾಗಿದ್ದವು. ಆದರೆ, ಇದೀಗ ೨೦೨೬ರಲ್ಲಿ ಜಲತಾಣದ ವ್ಯಾಪ್ತಿ ಮತ್ತಷ್ಟು ವಿಸ್ತರಣೆಗೊಂಡಿದೆ. ೧೧ ದಿನಗಳ ದಸರಾದ ೧೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ೧೫ಕ್ಕೂ ಹೆಚ್ಚು ಸ್ಥಳಗಳೊಂದಿಗೆ ಜೋಡಿಸಿ ಮಾಹಿತಿ ನೀಡಲಾಗಿದೆ. ದಿನವಾರು ಕಾರ್ಯಕ್ರಮ, ಸ್ಥಳವಾರು ಮಾರ್ಗದರ್ಶಿ ಹಾಗೂ ನಕ್ಷೆಯ ಸೌಲಭ್ಯವೂ ಇದೆ. ಇದೇ ಈ ವರ್ಷದ ಪ್ರಮುಖ ಆಕರ್ಷಕ ಬದಲಾವಣೆಯಾಗಿದೆ.
ಪ್ರವಾಸಿಗರು ಯಾವ ದಿನ, ಯಾವ ಕಾರ್ಯಕ್ರಮ, ಅದು ಎಲ್ಲಿದೆ, ಅಲ್ಲಿಗೆ ಹೇಗೆ ತಲುಪಬೇಕು ಎಂಬುದನ್ನು ಒಂದೇ ವೇದಿಕೆಯಲ್ಲಿ ತಿಳಿದುಕೊಳ್ಳಬಹುದಾಗಿದೆ. ರೈಲು, ಬಸ್, ಪಾರ್ಕಿಂಗ್, ಉಚಿತ ಶಟಲ್ ಸೇವೆ, ವಸತಿ ಹಾಗೂ ಆಹಾರದ ಮಾಹಿತಿಗೂ ಜಾಲತಾಣದಲ್ಲಿ ಪ್ರತ್ಯೇಕ ವಿಭಾಗಗಳಿವೆ.
೨೦೨೬ರ ದಸರಾದಲ್ಲಿ ಕಂಬಳ, ಡ್ರೋನ್ ಪ್ರದರ್ಶನ, ಯುವ ಸಂಭ್ರಮ, ಆಹಾರ ಮೇಳ, -ಲಪುಷ್ಪ ಪ್ರದರ್ಶನ, ಕ್ರೀಡಾ ದಸರಾ, ರೈತ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಲಾಗಿದೆ. ಕಂಬಳವು ಅ.೧೮ಮತ್ತು ೧೯ರಂದು ನಡೆಯಲಿದ್ದು, ಜಂಬೂಸವಾರಿ ಅ.೨೧ರಂದು ನಡೆಯಲಿದೆ. ಇದರ ಜತೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಎಐ ಆಧಾರಿತ ಚಾಟ್ ಬಾಟ್ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ Ask Gajju and Ammu’ ಎಂಬ ಹೆಸರಿಡಲಾಗಿದೆ. ಗಜ್ಜು ಅಂದರೆ ಆನೆ ಎಂದರ್ಥ ಹಾಗೂ ಅಮ್ಮು ಎಂದರೆ ಮಹಿಳೆ ಎಂದರ್ಥ.
ಈ ಮೈಸೂರು ದಸರಾ ಅಧಿಕೃತ ಜಾಲತಾಣದಲ್ಲಿ ದಸರಾದ ವಿವಿಧ ಕಾರ್ಯಕ್ರಮ, ಸ್ಥಳ ಮತ್ತು ಟಿಕೆಟ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ನೆರವಾಗುವ ವೇದಿಕೆಯಾಗಿ ಡಿಜಿಟಲ್ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ.
ಹೀಗಾಗಿ, ೨೦೨೫ರ ದಸರಾಗೆ ಹೋಲಿಸಿದರೆ ಈ ವರ್ಷದ ೨೦೨೬ರ ದಸರಾ ಜಾಲತಾಣದಲ್ಲಿ ಕೇವಲ ಕಾರ್ಯಕ್ರಮಗಳ ಸಂಖ್ಯೆಯ ಬದಲಾವಣೆ ಮಾತ್ರವಲ್ಲ, ‘ದಸರಾ ಮಾಹಿತಿ ತಾಣ’ದಿಂದ ‘ದಸರಾ ಡಿಜಿಟಲ್ ಅನುಭವ ವೇದಿಕೆ’ಯತ್ತ ಹೆಜ್ಜೆ ಇಟ್ಟಿರುವುದು ಪ್ರಮುಖ ಬದಲಾವಣೆಯಾಗಿದೆ ಎಂದು ಹೇಳಬಹುದು. ಮೈಸೂರಿನ ದಸರಾ ವೈಭವ ಅರಮನೆ ಆವರಣದಿಂದ ಹೊರಬಂದು ಮೊಬೈಲ್ ಪರದೆಗೂ ವಿಸ್ತರಿಸಿರುವುದು ಈ ಬಾರಿಯ ಡಿಜಿಟಲ್ ವಿಶೇಷತೆಯಾಗಿದೆ.
ಮೊದಲ ಬಾರಿಯ ವಿಶೇಷತೆಗಳನ್ನ ಗಮನಿಸೋದಾದ್ರೆ ದಸರಾ ಕಂಬಳ, ಸುಪ್ರಸಿದ್ಧ ಚಿತ್ರ ನಟ-ನಟಿಯರ ಆಗಮನ ಇರುವುದರಿಂದ ಈ ಬಾರಿ ೨೫ ಲಕ್ಷಕ್ಕೂ ಅಧಿಕ ಜನರು ದಸರಾಗೆ ಆಗಮಿಸುವ ನಿರೀಕ್ಷೆ ಇದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಒಟ್ಟಾರೆಯಾಗಿ, ದಸರಾ ಸಮಿತಿ ಅಧಿಕಾರಿಗಳು ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿ ದಸರಾ ಕಾರ್ಯಕ್ರಮದ ವಿವರ ನೀಡಿದ ನಂತರ ಎಲ್ಲಾ ನಿರೀಕ್ಷೆಗಳಿಗೆ ಹಾಗೂ ಕಾರ್ಯಕ್ರಮದ ವಾಸ್ತವಾಂಶ ವಿವರ ತಿಳಿಯಬಹುದಾಗಿದೆ.
ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…
ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…
ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…
ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…
ಚಂದ್ರಶೇಖರ್ ಮೂರ್ತಿ ಕೆ.ಎಸ್. ಊರಿಂದ ಊರಿಗೆ ಬಸ್ ಹತ್ತಿ ಇಳಿದು ದುಡಿಮೆ ಮಾಡೋದು ಇದೆಯಲ್ಲ ಅದು ಅನುಭವಿಸುವ ಊರು ಬಿಟ್ಟ…