Andolana originals

5 ಸಾವಿರ ಆಶ್ರಯ ಮನೆಗಳಿಗೆ ಖಾತೆಯೇ ಇಲ್ಲ!

ಹೆಚ್. ಎಸ್. ದಿನೇಶ್‌ಕುಮಾರ್

ರಮಾಬಾಯಿನಗರ, ಗೊರೂರು, ವಿವೇಕಾನಂದನಗರ, ರಾಮಕೃಷ್ಣನಗರ ನಿವಾಸಿಗಳಿಗೆ ಆತಂಕ
ಮಾಲೀಕರಿಂದ 20 ವರ್ಷದ ಅವಧಿಗೆ ಮುನ್ನವೇ ಪರಭಾರೆ; ನಿಯಮ ಮೀರಿ ನೋಂದಣಿ

ಮೈಸೂರು: ಇದು ಜನರಿಂದ ಆದ ಪ್ರಮಾದವೊ, ಅಧಿಕಾರಿಗಳ ಬೇಜವಾಬ್ದಾರಿಯೊ. ಒಟ್ಟಾರೆ ನಗರದ ವಿವಿಧ ಭಾಗಗಳ ಸುಮಾರು ೫ ಸಾವಿರ ಆಶ್ರಯ ಮನೆಗಳು ಹಾಗೂ ನಿವೇಶನಗಳಿಗೆ ಇದುವರೆವಿಗೂ ಖಾತೆಯೇ ಆಗಿಲ್ಲದಿರುವುದು ಬೆಳಕಿಗೆ ಬಂದಿದೆ.

ಇದಕ್ಕೆ ಸಮರ್ಪಕವಾದ ಉತ್ತರವನ್ನು ವಿವಿಧ ಇಲಾಖೆಯ ಅಧಿಕಾರಿಗಳೇ ನೀಡ ಬೇಕು. ಬೇಕು ಬೇಡದವರೆಲ್ಲರೂ ತಮ್ಮ ತಮ್ಮ ರಾಜಕೀಯ ವರ್ಚಸ್ಸು ಹಾಗೂ ಅಽಕಾರಿಗಳ ಪ್ರಭಾವವನ್ನು ಬಳಸಿಕೊಂಡು ಆಶ್ರಯ ನಿವೇಶನ ಹಾಗೂ ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.

ಆಶ್ರಯ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದಂತೆ ನಗರಪಾಲಿಕೆ, ನೋಂದಣಿ ಇಲಾಖೆ, ನೋಟರಿ ಮುಂತಾದವರು ಹಲವಾರು ನಿಯಮಗಳನ್ನು ಗಾಳಿಗೆ ತೂರಿದ್ದ ರಿಂದಾಗಿ ಇಂದು ಆಶ್ರಯ ನಿವೇಶನದಲ್ಲಿ ವಾಸಿಸುತ್ತಿರುವವರು ಆತಂಕದಲ್ಲಿ ದಿನ ದೂಡುವಂತಾಗಿದೆ.

ನಗರದ ರಮಾಬಾಯಿನಗರ, ಗೊರೂರು, ವಿವೇಕಾನಂದನಗರ, ರಾಮಕೃಷ್ಣನಗರ, ಎನ್. ಆರ್. ಮೊಹಲ್ಲಾ ಸೇರಿದಂತೆ ವಿವಿಧೆಡೆ ಒಟ್ಟು ೧೦ ಸಾವಿರ ಆಶ್ರಯ ನಿವೇಶನಗಳು ಹಾಗೂ ಮನೆಗಳಿವೆ. ಇವುಗಳಲ್ಲಿ ನರಸಿಂಹರಾಜ ಕ್ಷೇತ್ರದ ಕೆಲ ನಿವೇಶನಗಳ ಜಾಗ ,ಮೂಲ ಮಾಲೀಕರ ಮನೆಗಳಿಗೆ ಖಾತೆಯಾಗಿರುವುದನ್ನು ಹೊರತುಪಡಿಸಿದಲ್ಲಿ ಉಳಿದ ಮನೆಗಳು ಹಾಗೂ ನಿವೇಶನಗಳಿಗೆ ಖಾತೆಯೂ ಆಗಿಲ್ಲ.

ಕಂದಾಯವೂ ನಿಗದಿಯಾಗಿಲ್ಲ. ನಗರಪಾಲಿಕೆ ನೀಡುವ ನೀರು, ವಿದ್ಯುತ್, ಒಳ ಚರಂಡಿ ವ್ಯವಸ್ಥೆ ಎಲ್ಲವನ್ನೂ ಆಶ್ರಯ ನಿವಾಸಿಗಳು ಪಡೆದಿದ್ದಾರೆ. ಆದರೆ ಇದುವರೆವಿಗೂ ಅವರುಗಳ ನಿವೇಶನ ಹಾಗೂ ಮನೆಗಳಿಗೆ ಮಾತ್ರ ನಗರಪಾಲಿಕೆಯಿಂದ ಖಾತೆಯಾಗಿಲ್ಲ.

ಹೀಗಾಗಿ ಹಲವಾರು ವರ್ಷಗಳಿಂದ ಅವರು ನಗರಪಾಲಿಕೆಗೆ ಕಂದಾಯವನ್ನೂ ಪಾವತಿಸುತ್ತಿಲ್ಲ. ಈ ಆಶ್ರಯ ನಿವೇಶನಗಳಿಂದ ತೆರಿಗೆ ರೂಪದಲ್ಲಿ ನಗರಪಾಲಿಕೆಗೆ ಪ್ರತೀ ವರ್ಷ ಕೋಟಿಗೂ ಹೆಚ್ಚು ಆದಾಯ ಬರುತ್ತದೆಂಬ ಸತ್ಯ ತಿಳಿದಿದ್ದರೂ, ಅಧಿಕಾರಿಗಳು ಮಾತ್ರ ಇದುವರೆವಿಗೂ ಸಮಸ್ಯೆಯನ್ನು ಪರಿಹರಿಸದೆ ಜೀವಂತವಾಗಿ ಉಳಿಸಿದ್ದಾರೆ.

ಮೈಸೂರು ಸುತ್ತ ಮುತ್ತ ನಿವೇಶನಗಳ ಮೌಲ್ಯ ದಿಢೀರನೆ ಹೆಚ್ಚಾದ ಕೂಡಲೆ ಆಶ್ರಯ ಮನೆ ಹಾಗೂ ನಿವೇಶನವನ್ನು ಖರಿದಿಸಿದ್ದವರು ಖಾತೆ ಮಾಡಿಕೊಡುವಂತೆ ನಗರಪಾಲಿಕೆಗೆ ಅಲೆಯತೊಡಗಿದರು. ಆದರೆ ಕಾನೂನಾತ್ಮಕ ತೊಡಕಿರುವುದರಿಂದ ಅಧಿಕಾರಿಗಳು ಖಾತೆ ಮಾಡಿಕೊಡಲು ನಿರಾಕರಿಸಿದ್ದಾರೆ. ನಂತರದ ದಿನಗಳಲ್ಲಿ ಇದರ ತಲೆನೋವೇ ಬೇಡವೆಂದು ನಿರ್ಧರಿಸಿದ ಅಧಿಕಾರಿಗಳು ಸಾವಿರಾರು ಮಂದಿ ಮೂಲ ಮಾಲೀಕರಿಗೂ ಖಾತೆ ಮಾಡಿಕೊಡಲು ಮುಂದಾಗಿಲ್ಲ. ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಯಾಗಿರುವುದರಿಂದ ಖಾತೆಯನ್ನು ಮಾಡಿಕೊಡಿ ಎಂದು ಸಾರ್ವಜನಿಕರು ಹಕ್ಕೊತ್ತಾಯ ಮಾಡುತ್ತಿದ್ದಾರೆ.

ಇದು ಪ್ರತಿನಿತ್ಯ ನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಆಶ್ರಯ ನಿವಾಸಿಗಳ ಜಟಾಪಟಿಗೆ ಕಾರಣವಾಗುತ್ತಿದೆ. ಒಟ್ಟಾರೆ ಸರ್ಕಾರ ರೂಪಿಸುವ ಕಾನೂನುಗಳನ್ನು ಜನರು ಪಾಲಿಸಬೇಕೆಂಬುದು ಎಷ್ಟು ನಿಜವೊ, ಕಾನೂನು ಪಾಲಿಸುವಾಗ ಸಾರ್ವಜನಿಕರಿಂದ ತಪ್ಪಾದರೆ ಅದನ್ನು ತಿಳಿಹೇಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಈ ಜವಾಬ್ದಾರಿಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಿದ್ದಲ್ಲಿ ಇಂದು ಇಂತಹ ಬೃಹತ್ ಸಮಸ್ಯೆ ಎದುರಾಗುತ್ತಿರಲಿಲ್ಲ. ಕಾನೂನಾತ್ಮಕ ವಿಚಾರಗಳ ಅರಿವಿಲ್ಲದ ಸಾವಿರಾರು ಮಂದಿ ಸಾಲ ಸೋಲ ಮಾಡಿ ಆಶ್ರಯ ನಿವೇಶನ ಹಾಗೂ ಮನೆಗಳನ್ನು ಖರೀದಿಸಿದ್ದಾರೆ. ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ.

ಸಮಸ್ಯೆಗೆ ಕಾರಣವೇನು?
ಈ ಹಿಂದೆ ನಿವೇಶನಗಳಿಗೆ ಇಂದಿನಂತೆ ಹೆಚ್ಚಿನ ಪ್ರಮಾಣದ ಮೌಲ್ಯವಿರಲಿಲ್ಲ. ಹೀಗಾಗಿ ಅಗತ್ಯವಿಲ್ಲದವರೂ ತಾವು ಮಂಜೂರು ಮಾಡಿಸಿಕೊಂಡಿದ್ದ ಆಶ್ರಯ ಮನೆ ಹಾಗೂ ನಿವೇಶನಗಳನ್ನು ಅಲ್ಪ ಪ್ರಮಾಣದ ಲಾಭವನ್ನು ಪಡೆದು ಅನ್ಯರಿಗೆ ಮಾರಾಟ ಮಾಡಿದ್ದರು. ಆಶ್ರಯ ಯೋಜನೆಯ ನಿಯಮದಂತೆ ಫಲಾನುಭವಿಗಳು ಮಂಜೂ ರಾದ ೨೦ ವರ್ಷಗಳವರೆಗೂ ನಿವೇಶನ ಹಾಗೂ ಮನೆಗಳನ್ನು ಯಾರಿಗೂ ಪರಭಾರೆ ಮಾಡುವಂತಿರಲಿಲ್ಲ. (ಈಗ ೧೫ ವರ್ಷಗಳಿಗೆ ಮಿತಿಗೊಳಿಸಲಾಗಿದೆ). ಇದನ್ನು ಉಲ್ಲಂಘಿಸಿದ ಮೂಲ ಮಾಲೀಕರು, ಕೇವಲ ೨೦ ರೂ. ಛಾಪಾ ಕಾಗದದಲ್ಲಿ ಮಾರಾಟ ಕರಾರು ಪತ್ರವನ್ನು ಮಾಡಿಸಿ ನಿವೇಶನ ಹಾಗೂ ಮನೆಗಳನ್ನು ಮಾರಾಟ ಮಾಡಿದ್ದಾರೆ. ಇವುಗಳನ್ನು ಖರೀದಿಸಿದವರು ನಿವೇಶನಗಳಿಗೆ ಸಂಬಂಽಸಿದಂತೆ ಖಾತೆ ಮಾಡಿಸಿಕೊಳ್ಳುವ ಗೋಜಿಗೆ ಹೋಗದೇ ನಗರಪಾಲಿಕೆ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಹಾಯಾಗಿದ್ದುಬಿಟ್ಟರು.

 

ಆಶ್ರಯ ಮನೆ ಹಾಗೂ ನಿವೇಶನ ಗಳಿಗೆ ಖಾತೆ ಮಾಡಿಕೊಡಲು ನಿಯಮಗಳಿವೆ. ಸೂರಿಲ್ಲದವರಿಗೆ ನೀಡುವ ಮನೆಗಳನ್ನು ಅವಧಿಗಿಂತ ಮುಂಚಿತವಾಗಿ ಮಾರಾಟ ಮಾಡಿರುವುದು ಫಲಾನುಭವಿಗಳ ತಪ್ಪು. ಸರ್ಕಾರದ ನಿಯಮಗಳನ್ನು ಗಮನಿಸದೆ ಹಣ ನೀಡಿ ಮನೆಗಳನ್ನು ಖರೀದಿಸಿರುವುದೂ ಸರಿಯಲ್ಲ. ಈ ನಿಟ್ಟಿನಲ್ಲಿ ನಿವೇಶನ ಹಾಗೂ ಮನೆಗಳನ್ನು ಖರೀದಿಸಿರುವವರು ಮೂಲ ಮಾಲೀಕರ ಮೂಲಕ ಅರ್ಜಿ ಹಾಕಿಸಿದಲ್ಲಿ ಖಾತೆ ಮಾಡಿಕೊಡಲಾಗುವುದು.
ಅಶಾದ್ ಉರ್ ರೆಹಮಾನ್ ಷರೀಫ್, ನಗರಪಾಲಿಕೆ ಆಯುಕ್ತರು.

 

ಆಂದೋಲನ ಡೆಸ್ಕ್

Recent Posts

ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಾಧ್ಯಕ್ಷರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವರಾದ…

10 hours ago

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

24 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

24 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

24 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

24 hours ago