Andolana originals

ಕೊಡಗು ಜಿಲ್ಲೆಯಲ್ಲಿ ೪.೧೧ ಲಕ್ಷ ಮತದಾರರು’

ನವೀನ್ ಡಿಸೋಜ

ಎಸ್‌ಐಆರ್‌ನಲ್ಲಿ ೫೬೭ ಮಂದಿ ಅನರ್ಹ; ಕರಡು ಪಟ್ಟಿಗಿಂತ ೫,೮೨೯ ಮತದಾರರ ಹೆಚ್ಚಳ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೪,೧೧,೬೩೨ ಮತದಾರರು ನೋಂದಣಿಯಾಗಿದ್ದಾರೆ. ಕರಡು ಮತದಾರರ ಪಟ್ಟಿಗೆ ಹೋಲಿಸಿದರೆ ೫,೮೨೯ ಮತದಾರರ ನಿವ್ವಳ ಹೆಚ್ಚಳವಾಗಿದೆ.

ಜಿಲ್ಲೆಯ ಒಟ್ಟು ಮತದಾರರಲ್ಲಿ ೨,೦೦,೮೮೫ ಪುರುಷರು, ೨,೧೦,೭೪೩ ಮಹಿಳೆಯರು ಹಾಗೂ ನಾಲ್ವರು ಇತರ ಮತದಾರರಿದ್ದಾರೆ. ಜಿಲ್ಲೆಯಾದ್ಯಂತ ೫೬೭ ಮತಗಟ್ಟೆಗಳಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆಗಳು, ತಾಲ್ಲೂಕು ಕಚೇರಿಗಳು, ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಕರ್ನಾಟಕ ಮುಖ್ಯ ಚುನಾವಣಾಽಕಾರಿಗಳ ವೆಬ್‌ಸೈಟ್ ಮತ್ತು ಕೊಡಗು ಜಿಲ್ಲಾಡಳಿತದ ವೆಬ್‌ಸೈಟ್ ಮೂಲಕವೂ ಪಟ್ಟಿಯನ್ನು ಪರಿಶೀಲಿಸಬಹುದು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ೨೮೫ ಮತಗಟ್ಟೆಗಳಲ್ಲಿ ಒಟ್ಟು ೨,೧೨,೨೪೪ ಮತದಾರರಿದ್ದಾರೆ. ಇವರಲ್ಲಿ ೧,೦೨,೭೩೭ ಪುರುಷರು, ೧,೦೯,೫೦೫ ಮಹಿಳೆಯರು ಹಾಗೂ ಇಬ್ಬರು ಇತರ ಮತದಾರರು ಸೇರಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ೨೮೨ ಮತಗಟ್ಟೆಗಳಲ್ಲಿ ೨,೦೦,೩೮೮ ಮತದಾರರಿದ್ದು, ೯೮,೧೪೮ ಪುರುಷರು, ೧,೦೧,೨೩೮ ಮಹಿಳೆಯರು ಹಾಗೂ ಇಬ್ಬರು ಇತರ ಮತದಾರರಿದ್ದಾರೆ. ೨೦೨೬ರ ಆಗಸ್ಟ್ ೨೪ರಂದು ಪ್ರಕಟಿಸಿದ್ದ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ೪,೦೫,೮೦೩ ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ ೫,೮೨೯ ಮತದಾರರು ನಿವ್ವಳವಾಗಿ ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

೨೦೨೬ರ ಜೂನ್ ೧೬ರಿಂದ ಸೆಪ್ಟೆಂಬರ್ ೨೩ರವರೆಗೆ ನಡೆದ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ನಮೂನೆ-೬ರ ಅಡಿಯಲ್ಲಿ ೫,೪೮೬ ಮಂದಿ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ೫,೩೭೨ ಯುವ ಮತದಾರರ ಹೆಸರುಗಳನ್ನು ಪಟ್ಟಿಗೆ ಸೇರಿಸಲಾಗಿದೆ. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಸೇವಾ ಮತದಾರರ ಪಟ್ಟಿಯನ್ನೂ ಅ.೨೭ರಂದು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ೧,೧೬೦ ಪುರುಷರು ಹಾಗೂ ೫೩ ಮಹಿಳೆಯರು ಸೇರಿದಂತೆ ಒಟ್ಟು ೧,೨೧೩ ಸೇವಾ ಮತದಾರರಿದ್ದಾರೆ

೫೮,೮೮೩ ಮಂದಿಗೆ ನೋಟಿಸ್:  ಎಸ್‌ಐಆರ್ ಪ್ರಕ್ರಿಯೆಯಡಿ ಮ್ಯಾಪಿಂಗ್ ಆಗದ ಹಾಗೂ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದ ಮತದಾರರಿಗೆ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ನೋಂದಣಾಧಿಕಾರಿಗಳು ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾರೆ. ಜಿಲ್ಲೆಯ ೫೬೭ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು ೫೮,೮೮೩ ಮಂದಿಗೆ ನೋಟಿಸ್ ನೀಡಿ ಮಾಹಿತಿ ಸಂಗ್ರಹಿಸಲಾಗಿತ್ತು. ಪರಿಶೀಲನೆಯ ಬಳಿಕ ೫೬೭ ಮಂದಿ ಮಾತ್ರ ಮತದಾರರ ಪಟ್ಟಿಯಲ್ಲಿ ಮುಂದುವರಿಯಲು ಅನರ್ಹರಾಗಿದ್ದಾರೆ. ಅನರ್ಹರೆಂದು ಗುರುತಿಸಲಾದವರಲ್ಲಿ ೧೨೫ ಮಂದಿ ಮೃತಪಟ್ಟಿದ್ದಾರೆ. ೨೪೦ ಮಂದಿ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರು. ೧೮೬ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. ಎಂಟು ಮಂದಿ ವಿದೇಶದಲ್ಲಿ ನೆಲೆಸಿದ್ದು, ಸ್ವಯಂಪ್ರೇರಣೆಯಿಂದ ಹೆಸರು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ. ಉಳಿದ ಎಂಟು ಮಂದಿ ಪತ್ತೆಯಾಗದ ಗೈರುಹಾಜರಿ ಮತದಾರರಾಗಿದ್ದಾರೆ.

” ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಅಂತಿಮ ಸೇವಾ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಂತೆ ಜಿಲ್ಲೆಯಲ್ಲಿ ೪,೧೧,೬೩೨ ಮತದಾರರು ಇದ್ದು, ಇವರಲ್ಲಿ ೨,೦೦,೮೮೫ ಪುರುಷ ಮತದಾರರು ಮತ್ತು ೨,೧೦,೭೪೩ ಮಹಿಳಾ ಮತದಾರರು, ೪ ಇತರ ಮತದಾರರು ಇದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕಾರ್ಯವು ನಿರಂತರ ಪ್ರಕ್ರಿಯೆಯಾಗಿದ್ದು, ೧೮ ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು.”

-ಎಸ್.ಜೆ.ಸೋಮಶೇಖರ್, ಜಿಲ್ಲಾಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್‌ ಪ್ರಯಾಣವೂ ದುಬಾರಿಯಾಗುತ್ತಾ?

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಬಸ್‌ ಟಿಕೆಟ್‌ ದರವೂ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಅಕ್ಟೋಬರ್‌ 29ರಂದು…

57 seconds ago

ಅರ್ನಬ್ ಬೆನ್ನಲ್ಲೇ ಮತ್ತೊಂದು ಆತಂಕ: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ!

ನವದೆಹಲಿ: ಅರ್ನಬ್ ಚಂಡಮಾರುತದ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವ್ಯವಸ್ಥೆ ರೂಪುಗೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಹಾಗೂ…

7 mins ago

ಓದುಗರ ಪತ್ರ: ಶಿಕ್ಷಕರ ‘ಮೂಲ’ ಕರ್ತವ್ಯಕ್ಕೆ ಆದ್ಯತೆ ನೀಡಿ

ಪ್ರತಿವರ್ಷ ಸೆಪ್ಟೆಂಬರ್ ಐದನೇ ತಾರೀಕು ಶಿಕ್ಷಕರನ್ನು ಹೊಗಳಲು ಇರುವ ದಿನ ಎಂದು ಕರೆಯಬಹುದು. ಆ ದಿನ ದೇಶದ ಎಲ್ಲೆಡೆ ತುಂಬಾನೆ…

9 mins ago

ಓದುಗರ ಪತ್ರ: ಮೈಸೂರು ರಾಜರ ಕೊಡುಗೆ ಮರೆಯುವಂತಿಲ್ಲ

ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ…

11 mins ago

ಓದುಗರ ಪತ್ರ: ಸಂತೋಷ ಸಂಕಟ ತರಬಾರದು

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಅನೇಕ ರಸ್ತೆಗಳಿಗೆ ಹಾಕಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ…

12 mins ago

‘ರಾಮಾಯಣ’ವೂ, ‘ಪ್ರೇಮಾಯಣ’ವೂ ನಡುವೆ ‘ಕಾಂತಾರ’ವೂ

ವೈಡ್‌ ಆಂಗಲ್:ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ   ಭಾರತೀಯ ಚಿತ್ರರಂಗದ ಮೂರು ವಿಭಿನ್ನ ಮಾರ್ಗಗಳು ಮುಂದಿನ ತಿಂಗಳ ಮೊದಲ ವಾರ ವಿಶ್ವಾದ್ಯಂತ…

15 mins ago