ಆಂದೋಲನ 50

ವೃತ್ತಿ ಧರ್ಮಕ್ಕೆ ವಿರುದ್ಧವಾಗಿ ಕೋಟಿ ಅವರ ಬರವಣಿಗೆ ಇರಲಿಲ್ಲ : ಎಚ್‌ಸಿಎಂ

ಸಾರ್ಥಕ ಪಯಣ ಸಮಾರಂಭದಲ್ಲಿ ರಾಜಶೇಖರ ಕೋಟಿ ಅವರ ಬದುಕುನ್ನು ಸ್ಮರಿಸಿದ ಮಾಜಿ ಸಚಿವರು 

ತಿ.ನರಸೀಪುರ: ಧರ್ಮ, ಜಾತಿ, ಗುಂಪು, ಪಂಗಡದ ಬಗ್ಗೆ ಇರದೇ ವಸ್ತು ನಿಷ್ಠವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದ ರಾಜಶೇಖರ ಕೋಟಿ ಅವರು ವೃತ್ತಿಧರ್ಮಕ್ಕೆ ವಿರುದ್ಧ ಬರವಣಿಗೆ ಮಾಡಲಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪಟ್ಟಣದ ವಿದ್ಯೋದಯ ಕಾಲೇಜಿನ ಸಭಾಂಗಣದಲ್ಲಿ ‘ಆಂದೋಲನ ದಿನಪತ್ರಿಕೆ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ತಿ.ನರಸೀಪುರ ತಾಲ್ಲೂಕಿನ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕೋಟಿ ಅವರು ಜಾತಿ, ಧರ್ಮದ ಪ್ರೇರೇಪಣೆಗೆ ಒಳಗಾದವರಲ್ಲ. ಪಾಟೀಲ್ ಪುಟ್ಟಪ್ಪ, ಪಿ.ಲಂಕೇಶ್, ಪ್ರೊ.ಕೆ.ರಾಮದಾಸ್, ದೇವನೂರ ಮಹಾದೇವ, ರಘುರಾಮ್ ಶೆಟ್ಟಿ, ವೇದಾಂತ ಹೆಮ್ಮಿಗೆ, ಪ್ರೊ.ಲಿಂಗದೇವರು ಹಳೆಮನೆ, ಪ.ಮಲ್ಲೇಶ್ ಅವರಂತಹವರ ಜತೆಗೂಡಿ ಬಂದವರು. ಒಬ್ಬ ಹೋರಾಟಗಾರನಾಗಿದ್ದರಿಂದಲೇ ದಲಿತರು, ಕಾರ್ಮಿಕ, ರೈತ ಚಳವಳಿಯನ್ನು ಬೆಂಬಲಿಸಿ ಪ್ರೇರಣೆಯಾಗಿ ನಿಲ್ಲುತ್ತಿದ್ದರು ಎಂದು ಹೇಳಿದರು.

‘ಆಂದೋಲನ’ ಜನರ ಪರ ಮತ್ತು ಅಭಿವೃದ್ಧಿ ಪರವಾಗಿ ಇರುತ್ತದೆ. ಪ್ರಚೋದನಾಕಾರಿ ಮತ್ತು ಪತ್ರಿಕಾ ಮೂಲಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳದಂತೆ ನೋಡಿಕೊಂಡು ೫೦ ವರ್ಷಗಳ ಕಾಲ ಅದರಲ್ಲಿ ಯಶಸ್ವಿಯಾಗಿ ನಡೆದುಕೊಂಡಿದ್ದಾರೆ. ಕೋಟಿ ನಿಜವಾಗಿಯೂ ಕೋಟಿ. ಜಾತಿ, ಧರ್ಮ, ಗುಂಪು ಸೀಮಿತವಾಗಿಲ್ಲದೆ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ದೇಶ ಬಂಡವಾಳಶಾಹಿಗಳ ಕಪಿಮುಷ್ಠಿಯ ಹಿಡಿತದಲ್ಲಿ ಸಿಲುಕಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ವ್ಯವಸ್ಥೆಯನ್ನು ಕತ್ತು ಹಿಸುಕಿ ಅದರ ಆಶುಂವನ್ನು ಭಂಗಗೊಳಿಸುವ ಕೆಲಸ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮೊದಲಿಗಿಂತಲೂ ಈಗ ಹೆಚ್ಚು ಜವಾಬ್ದಾರಿಯಿಂದ ಪತ್ರಿಕಾಧರ್ಮ ಅರಿತು ಕೆಲಸ ಮಾಡಬೇಕಾಗಿದೆ ಎಂದರು.
ಜಿ.ಜನಾರ್ಧನರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿದ್ದನ್ನೂ ದೃಶ್ಯ ಮಾಧ್ಯಮದಲ್ಲಿ ದಿನಗಟ್ಟಲೇ ತೋರಿಸಲಾಗುತ್ತದೆ. ಆದರೆ, ಬೆಂಗಳೂರಿನಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಸಮಾವೇಶ ಮಾಡಿದರೆ ಆ ದೃಷ್ಯವನ್ನು ಒಂದು ಕ್ಷಣವೂ ತೋರಿಸಲ್ಲ ಅಂದರೆ ಮನಸ್ಸಿಗೆ ಎಷ್ಟು ನೋವಾಗಬಾರದು ಎಂದು ಪ್ರಶ್ನಿಸಿದರು.

ರಾಜಶೇಖರ ಕೋಟಿ ಅವರಾಗಲೀ ಅಥವಾ ‘ಆಂದೋಲನ’ವಾಗಲಿ ಎಂದೂ ಜಾಹೀರಾತಿನ ಹಿಂದೆ ಬಿದ್ದವರಲ್ಲ. ಸದಾ ಓದುಗರನ್ನು ನೋಡುವುದು ಅವರ ಬಯಕೆಯಾಗಿದೆ ಎಂದು ನುಡಿದರು.

ಇಂದು ನಾವು ನಗಬೇಕು ಅಥವಾ ನಗಿಸಬೇಕು. ಅದೇ ನಿಜವಾದ ಪ್ರಜಾಪ್ರಭುತ್ವ. ಮುಖವನ್ನು ಆ ಕಡೆ ತಿರುಗಿಸಿಕೊಳ್ಳುವುದು, ಮುಖ ಗಂಟಾಕಿಕೊಳ್ಳುವುದು ಅಲ್ಲ. ಎದುರಿಗೆ ಬಂದು ಮಾತನಾಡಿಸಿದರೆ ಮುಖ ಬೇರೆ ಕಡೆಗೆ ತಿರುಗಿಸುವ ಬದಲಿಗೆ ಅವರನ್ನು ಮಾತನಾಡಿಸಿಬಿಟ್ಟರೆ ಮನಸ್ಸು ಹಗುರವಾಗಲಿದೆ ಎಂಬುದನ್ನು ಅರಿಯಬೇಕು ಎಂದರು.


‘ಆಂದೋಲನ’ ಐವತ್ತು ವರ್ಷಗಳನ್ನು ಕಳೆದರೂ ಮದುವಣಗಿತ್ತಿಯ ಸಡಗರ ಕಡಿಮೆ ಮಾಡಿಕೊಂಡಿಲ್ಲ. ಪತ್ರಿಕಾ ಧರ್ಮವನ್ನು ಬಿಟ್ಟು ಯಾರೊಂದಿಗೂ ರಾಜಿ ಮಾಡಿಕೊಂಡಿಲ್ಲ. ಪತ್ರಿಕೆಯು ಜನರ ನಂಬಿಕೆ ಉಳಿಸಿಕೊಂಡು ವಿಶ್ವಾರ್ಹತೆ ಇರಿಸಿಕೊಂಡಿದೆ. ಪ್ರಾದೇಶಿಕತೆ ಉಳಿಸಿಕೊಂಡು ರಾಷ್ಟ್ರೀಯ ಮಾನ್ಯತೆ ಪಡೆದಿದೆ. ಪತ್ರಿಕೆಯನ್ನು ನಡೆಸುವುದು ಸುಲಭವಲ್ಲದಿದ್ದರೂ ಅದನ್ನು ಬೆಳೆಸಿರುವುದು ದೊಡ್ಡ ಸಾಧನೆ. ರಾಜಶೇಖರ ಕೋಟಿ ಅವರನ್ನು ನೆನಪಿಸಿಕೊಳ್ಳದೆ ‘ಆಂದೋಲನ’ದ ಬಗ್ಗೆ ಮಾತನಾಡಿದರೆ ಅಪೂರ್ಣವಾಗಲಿದೆ.

-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು.

andolanait

Recent Posts

ಮೈಸೂರಲ್ಲಿ ನಾಳೆಯಿಂದ ಮಾಗಿ ಉತ್ಸವ

ಮೈಸೂರು: ಹೊಸ ವರ್ಷಾಚರಣೆ ಹಾಗೂ ಕ್ರಿಸ್‌ಮಸ್‌ಗೆ ಮೈಸೂರು ನಗರಕ್ಕೆ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಅರಮನೆ ಆವರಣದಲ್ಲಿ  ಫಲಪುಷ್ಪ ಪ್ರದರ್ಶನ ಒಳಗೊಂಡ…

2 mins ago

ಮಂಡ್ಯ ಜಿಲ್ಲೆ ಅಪ್ಪಟ ಕನ್ನಡಿಗರು ವಾಸಿಸುವ ನಾಡು: ಸಿಎಂ ಸಿದ್ದರಾಮಯ್ಯ

ಮಂಡ್ಯ: ಈ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆಯಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ…

7 mins ago

10ನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು: ಗೊ.ರು.ಚ ಹಕ್ಕೊತ್ತಾಯ

ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…

21 mins ago

ಕಾರು ಪಲ್ಟಿ; ಇಬ್ಬರಿಗೆ ಗಾಯ

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…

34 mins ago

ಸಂವಿಧಾನ ವಿಧಿ 371(ಜೆ) ಅಡಿಯಲ್ಲಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ: ಪ್ರಿಯಾಂಕ್‌ ಖರ್ಗೆ

ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ‌ ಹಾಗೂ…

1 hour ago

ಕಾಂಗ್ರೆಸ್ ಸರ್ಕಾರದಲ್ಲಿ ಅಕ್ಷರಶಃ ಕರ್ನಾಟಕ ರೌಡಿಗಳ ರಾಜ್ಯವಾಗಿದೆ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು…

2 hours ago