ಅವಿಭಜಿತ ಎಚ್.ಡಿ.ಕೋಟೆಯ ಸಮಸ್ಯೆಗಳಿಗೆ ಕಳೆದ ನಲವತ್ತು ವರ್ಷಗಳಿಂದ ಸ್ಪಂದಿಸಿದ ಆಂದೋಲನ ದಿನಪತ್ರಿಕೆ ಇಂದಿಗೂ ಈ ಕೈಂಕರ‌್ಯ ಮುಂದುವರಿಸುತ್ತಾ ಬಂದಿದೆ. ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿಯವರು ಎಚ್.ಡಿ.ಕೋಟೆ ತಾಲ್ಲೂಕಿನ ಬಗ್ಗೆ ಸದಾ ಕಾಳಜಿಯನ್ನು ಇಟ್ಟುಕೊಂಡಿದ್ದರು. ತಾಲ್ಲೂಕಿನ ಸಮಸ್ಯೆಗಳು, ಬಡತನ, ಇಲ್ಲಿನ ಜಾತಿ ವ್ಯವಸ್ಥೆ, ಬಡವರ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ಹೀಗೆ ಪ್ರತಿಯೊಂದು ವಿಚಾರಗಳನ್ನು ಹತ್ತಿರದಿಂದ ಕಂಡಿದ್ದರಿಂದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನ ಜನರೊಂದಿಗೆ ಅವರ ನಂಟು ಬಲವಾಗಿತ್ತು.
ಅದು ೧೯೮೨-೮೩ರ ಸಂದರ್ಭ. ತಾಲ್ಲೂಕಿನ ದೇವಲಾಪುರ ಗ್ರಾಮದ ಅರಣ್ಯ ಇಲಾಖೆಯ ವಶದಲ್ಲಿದ್ದ ಸುಮಾರು ೩೫೦ ಎಕರೆ ಕುರುಚಲು ಕಾಡನ್ನು ಎಲ್ಲಾ ವರ್ಗದ ಸುಮಾರು ೧೫೦ ಭೂಹೀನ ಬಡ ರೈತರಿಗೆ ಹಂಚಿಕೆ ಮಾಡಲಾಗಿತ್ತು. ಅಲ್ಲಿ ಬೆಳೆಯನ್ನು ಹಾಕಲಾಗಿತ್ತು. ಆದರೆ ಬೆಳೆ ಕಟಾವಿಗೆ ಬರುವ ಹಂತದಲ್ಲಿ ಅರಣ್ಯ ಇಲಾಖೆ ಜಾಗ ತನಗೆ ಸೇರಿದ್ದೆಂದು ಅದನ್ನು ವಶಪಡಿಸಿಕೊಳ್ಳುವ ಜೊತೆಗೆ ಹಂಚಿಕೆಯ ಮುಂದಾಳತ್ವ ವಹಿಸಿದ್ದವರ ಮೇಲೆ ಪ್ರಕರಣ ಹಾಕಿ ಅವರನ್ನು ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ರೈತರ ಬೆಂಬಲಕ್ಕೆ ನಿಂತ ಆಂದೋಲನ ಪತ್ರಿಕೆ ಕಾನೂನು ಮತ್ತು ರಾಜಕೀಯ ಪರಿಹಾರದ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಲು ಶ್ರಮಿಸಿತು.
೧೯೯೬ ಡಿ.೨೩ರಂದು ಮೈಸೂರಿನಲ್ಲಿ ಆಯೋಜನೆಯಾಗಿದ್ದ ಶೋಷಿತ ಶಕ್ತಿಗಳ ಐಕ್ಯತಾ ಸಮಾವೇಶಕ್ಕೆ ಸುಮಾರು ೩೦೦೦ದಷ್ಟು ಜನ ೨೫-೩೦ ಲಾರಿಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಲಾರಿ ಉರುಳಿ ಬಿದ್ದು ೧೦ ಜನ ಮೃತಪಟ್ಟರು. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸರಕಾರದಿಂದ ಮೃತರ ಕುಟುಂಬಕ್ಕಾಗಲಿ, ಗಾಯಾಳುಗಳಿಗಾಗಲಿ ಯಾವುದೇ ಪರಿಹಾರ ಸಿಗಲಿಲ್ಲ. ಆಗ ರಾಜಶೇಖರ ಕೋಟಿಯವರು, ಪತ್ರಿಕೆಯ ಮೂಲಕ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವ ಮೂಲಕ ನೊಂದ ಕುಟುಂಬಗಳಿಗೆ ನೆರವು ನೀಡಿದರು. ದೇವಲಾಪುರ ಗ್ರಾಮಕ್ಕೆ ಬಂದು ಅದನ್ನು ವಿತರಿಸುವ ಮೂಲಕ ಪತ್ರಿಕೆ ನೊಂದವರ ಪರವಾಗಿದೆ ಎಂಬ ಸಂದೇಶ ಸಾರಿದರು.
ಸದಾ ಜನಜಂಗುಳಿಯಿಂದ ಕೂಡಿದ ಎಚ್.ಡಿ. ಕೋಟೆ ಪಟ್ಟಣ ಮತ್ತು ಹ್ಯಾಂಡ್ ಪೋಸ್ಟಿನಲ್ಲಿ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಜೊತೆಗೆ ತಾಲ್ಲೂಕಿನ ಪ್ರತಿ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ರೈತ ಚಳುವಳಿಗಳು, ದಲಿತಪರ ಚಳುವಳಿಗಳಲ್ಲಿ ಬೆನ್ನೆಲುಬಾಗಿ ನಿಂತ ಕೋಟಿ ಅವರು ಸಾಕಷ್ಟು ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮಾಜದ ಬದಲಾವಣೆಯ ಕನಸು ಕಂಡವರು.
ಮೈಸೂರು-ಮಾನಂದವಾಡಿ ಮತ್ತು ಕಬಿನಿ ರಸ್ತೆ ಅಭಿವೃದ್ಧಿಯಲ್ಲಿ ಕೋಟಿಯವರ ಪಾತ್ರವೂ ಇದೆ. ಆ ದಿನಗಳಲ್ಲಿ ತೀರ ಹದಗೆಟ್ಟಿದ್ದ ರಸ್ತೆಯ ಕುರಿತು ಪತ್ರಿಕೆಯಲ್ಲಿ ಸರಣಿ ವರದಿಗಳು ಬಂದ ಬಳಿಕವೇ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆಯಿತು. ಕ್ಷೇತ್ರದ ಚುನಾಯಿತ ಶಾಸಕರೆಲ್ಲರೂ ಕೋಟಿ ಅವರ ನಿಕಟ ಸಂಬಂಧವಿಟ್ಟುಕೊಂಡು ಮಾರ್ಗದರ್ಶನ ಪಡೆಯುತ್ತಿದ್ದರು.
ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…
ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…
ಬೆಂಗಳೂರು : ಸಫಾರಿಯಿಂದ ಬರುವ ಆದಾಯದಲ್ಲಿ ಶೇ.35ರಷ್ಟನ್ನು ಕಾಡಿನಂಚಿನ ಗ್ರಾಮದ ಜನರ ಕಲ್ಯಾಣಕ್ಕಾಗಿ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಗ್ರಾಮಗಳಲ್ಲಿ…
ಬೆಂಗಳೂರು : ಅರಣ್ಯದಂಚಿನ ಜಮೀನುಗಳಲ್ಲಿ ವನ್ಯಜೀವಿಗಳ ಸಂಚಾರದ ಬಗ್ಗೆ ಕಮಾಂಡ್ ಕೇಂದ್ರಕ್ಕೆ ಮಾಹಿತಿ ಬಂದ ಕೂಡಲೇ ತೋಟದ ಬೆಳೆಗಾರರ ಸಂಘಟನೆ…
ಚಿಕ್ಕಬಳ್ಳಾಪುರ : ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿಜಿರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪಿಸುವವರೆಗೆ ದೇಶಾದ್ಯಂತ ಕಾಂಗ್ರೆಸ್…