ಆಂದೋಲನ 50

ಮಿಂಚಿ ಮರೆಯಾದ ‘ಜಂಗಲ್ ಜಾಕಿ’

ಹಾಡಿಯ ಹುಡುಗನೊಬ್ಬ ಹಾಲಿವುಡ್ ಗೆ ಹಾರಿ ಮಹಾನ್ ನಟನಾಗಿ ಬೆಳೆದ ಸಾಬು ದಸ್ತಗೀರ್ ಕಥೆ ಎಲ್ಲರಿಗೂ ಸ್ಪೂರ್ತಿ ನೀಡುವಂತದ್ದು. ಇದೇ ರೀತಿ ಪ್ರೇರಣೆಯಾಗಬೇಕಿದ್ದ ಕೋಟೆಯ ಇನ್ನೊಬ್ಬ ಹಾಡಿ ಹುಡುಗನ ಜೀವನ ದುರಂತದಲ್ಲಿ ಕೊನೆಗೊಂಡಿದ್ದನ್ನು ರಾಜ್ಯದ ಜನತೆ ಈಗಲೂ ನೆನಪಿಸಿಕೊಳ್ಳುತ್ತಾರೆ.

ನೈಜ ಗಂಧದ ಮರಗಳ ಪರಿಮಳವನ್ನು ಆಘ್ರಾಣಿಸುತ್ತಿದ್ದ ಎಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯ ಯುವಕ ರಾಜೇಶ್, ಸ್ಯಾಂಡಲ್‌ವುಡ್ ಸ್ಪಾಟ್‌ಲೈಟ್‌ನ ಪ್ರಖರತೆ ತಾಳಲಾರದೆ ನಕ್ಷತ್ರದಂತೆ ಉರಿದು ಹೋಗಿ ಈಗ ದಶಕವೇ ಸಂದಿದೆ.

ರಾಜೇಶ್ ೨೦೧೦ರಲ್ಲಿ ಖಾಸಗಿ ಚಾನೆಲ್‌ನಲ್ಲಿ ಬಿತ್ತರವಾದ ‘ಹಳ್ಳಿ ಹೈದ ಪ್ಯಾಟ್ಗೆ ಬಂದ’ ರಿಯಾಲಿಟಿ ಶೋನಲ್ಲಿ ೧೦ ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದುಕೊಂಡು ರಾತ್ರಿ ಬೆಳಗಾಗುವುದರೊಳಗೆ ಸೆಲೆಬ್ರಿಟಿಯಾಗಿದ್ದ. ಹಾಡಿಗೆ ಬಂದ ತರುವಾಯ ಕಪ್ಪು ಪಲ್ಸರ್ ಬೈಕ್ ಖರೀದಿಸಿ ನಾಲ್ಕೈದು ಹೈಕ್ಳನ್ನು ಕೂರಿಸಿಕೊಂಡು ಆ ಕಡೆ ಕೇರಳಕ್ಕೆ ಈ ಕಡೆ ಕೋಟೆಗೆ ತಿರುಗಾಟ ಆರಂಭವಾಗಿತ್ತು. ಇದೇ ಸಮಯದಲ್ಲಿ ‘ಜಂಗಲ್ ಜಾಕಿ’ ಎನ್ನುವ ಸಿನಿಮಾಕ್ಕೆ ನಾಯಕನಾಗಿ ಆಯ್ಕೆಯಾದ. ಚಿತ್ರ ತೋಪಾಯಿತು. ವಿವಾದಿತ ನಟಿ ಪೂನಂ ಪಾಂಡೆ ಜತೆ ನಟಿಸಿದ್ದ ‘ಲವ್ ಇಸ್ ಪಾಯಿಸನ್’ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು. ಇವುಗಳ ಮಧ್ಯೆ ಏನೇನೋ ಘಟನೆಗಳು, ವಿವಾದಗಳು.. ಮಾನಸಿಕ ಖಿನ್ನತೆಗೆ ಒಳಗಾದ ರಾಜೇಶ್, ಬಿಗ್‌ಬಾಸ್- ಮೊದಲ ಸೀಸನ್‌ನಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟರೂ ಎರಡೇ ದಿನಕ್ಕೆ ವಾಪಸ್ ಹೋಗಿಬಿಟ್ಟ. ಮುಂದೆ ಕೆಲವೇ ದಿನಗಳಲ್ಲಿ ಬಳಿಕ ಮೈಸೂರಿನ ಪಕ್ಕದ ಹಳ್ಳಿಯೊಂದರಲ್ಲಿ ತಾನು ವಾಸವಾಗಿದ್ದ ಮನೆಯಲ್ಲಿಯೇ ಬಾದ ಲೋಕಕ್ಕೆ ಪಯಣಿಸಿದ. ತನ್ನ ಹೆಗಲೇರಿದ ‘ಕೀರ್ತಿಶನಿ’ಯನ್ನು ನಿಭಾಯಿಸುವ ಕಲೆ ಆತನಿಗೆ ತಿಳಿದಿರಲಿಲ್ಲ.

andolana

Recent Posts

ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಬಸ್‌ ಸೌಲಭ್ಯ ಕಲ್ಪಿಸಲು ಡಿಪೋ ನಿರ್ಮಾಣ: ಶಾಸಕ ಎಂ.ಆರ್.‌ಮಂಜುನಾಥ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಕೆಎಸ್‌ಆರ್‌ಟಿಸಿ ಸೌಲಭ್ಯ ಕಲ್ಪಿಸಲು ತಾಲೂಕು ಕೇಂದ್ರದಲ್ಲಿ…

5 hours ago

ಶ್ರೀರಂಗಪಟ್ಟಣ: ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವು

‌ಶ್ರೀರಂಗಪಟ್ಟಣ: ವಿದ್ಯುತ್‌ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್‌ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ.…

5 hours ago

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆ: ಜನಜೀವನ ಅಸ್ತವ್ಯಸ್ತ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಧಾರಾಕಾರ ಮಳೆಯಾಗಿದ್ದು, ಭಾರೀ ಅವಾಂತರ ಸೃಷ್ಟಿ ಮಾಡಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ…

5 hours ago

ಹನೂರು: 153 ದಿನಗಳಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಅಂತ್ಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಟಳ್ಳಿ, ಕೌದಳ್ಳಿ, ಶೆಟ್ಟಳ್ಳಿ, ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ…

6 hours ago

ಮೈಸೂರಿನಲ್ಲಿ ಅವೈಜ್ಞಾನಿಕ ಟ್ರಾಫಿಕ್‌ ಸಿಗ್ನಲ್‌ ಆರೋಪ: ಸಚಿವ ಮಹದೇವಪ್ಪ ಪ್ರತಿಕ್ರಿಯೆ

ಮೈಸೂರು: ಅರಮನೆಗಳ ನಗರಿ ಮೈಸೂರಿನಲ್ಲಿ ಅವೈಜ್ಞಾನಿಕವಾಗಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲಾಗಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ…

6 hours ago

ದೀದಿ ಸರ್ಕಾರದ ವಿರುದ್ಧ ಅಮಿತ್‌ ಶಾ ಚಾರ್ಜ್‌ಶೀಟ್‌ ರಿಲೀಸ್‌

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹ ಸಚಿವ…

6 hours ago