ಆಂದೋಲನ 50

ನನ್ನ ಕುಟುಂಬದ ಕನಸು ನನಸು ಮಾಡಿದ್ದೇನೆ…

ರಾಜ್ಯದ ಹಾಕಿ ತವರೆಂದೇ ಹೆಸರಾಗಿರುವ ಮಂಜಿನ ನಗರಿ ಕೊಡಗು, ಈಗಲೂ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡುತ್ತಿದೆ. ತನ್ನ ತಂದೆಯ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ಭರವಸೆಯ ಯುವ ಆಟಗಾರ ಆಭರಣ್ ಸುದೇವ್ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದು, ರಾಷ್ಟ್ರ ಮಟ್ಟದ ಹಾಕಿ ತಂಡದಲ್ಲಿ ಸ್ಥಾನ ಪಡೆದು ಕೊಡಗು ಜಿಲ್ಲೆಗೆ ಗರಿ ಮೂಡಿಸಿದ್ದಾರೆ.

ಭಾರತ ಪುರುಷರ ಹಾಕಿ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಎಸ್.ವಿ.ಸುನಿಲ್, ಶೇಷೇಗೌಡ ಜೊತೆ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಆಭರಣ್ ಸುದೇವ್. ಮೂಲತಃ ಕೊಡಗಿನ ಸೋಮವಾರಪೇಟೆಯವರಾದ ಆಭರಣ್, ಕಳೆದ ೧೫-೧೬ ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದಾರೆ. ಆಡಿಟರ್ ಜನರಲ್ ಕಚೇರಿಯಲ್ಲಿ ಅಧಿಕಾರಿ ಕೂಡ ಆಗಿರುವ ಆಭರಣ್ ಸುದೇವ್ ಸುವರ್ಣ ಸಂಭ್ರಮದಲ್ಲಿರುವ ‘ಆಂದೋಲನ’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಾವು ಹಾಕಿ ಆಟಗಾರನಾಗಿ ಬೆಳೆದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಸಂದರ್ಶನ: ನವೀನ್ ಡಿಸೋಜ

ಪ್ರಶ್ನೆ: ಹಾಕಿ ತಂಡದಲ್ಲಿ ಸ್ಥಾನ ಪಡೆದಿರುವ ಬಗ್ಗೆ ನಿಮ್ಮ ಅನಿಸಿಕೆ?
ಆಭರಣ್: ೨೦೧೮ರಲ್ಲಿ ಭಾರತ ಕಿರಿಯರ ತಂಡದ ಪರ ಕೆಲ ಪಂದ್ಯಾವಳಿಗಳಲ್ಲಿ ಆಡಿದ ಬಳಿಕ ಹಿರಿಯರ ಶಿಬಿರಕ್ಕೆ ಆ್ಂಕೆುಯಾದೆ. ಆದರೆ ಹಿರಿಯರ ತಂಡದಲ್ಲಿ ಸ್ಥಾನ ಸಿಗಲು ೫ ವರ್ಷಗಳು ಕಾಯಬೇಕಾಯಿತು. ಹಲವು ಬಾರಿ ಅವಕಾಶ ವಂಚಿತನಾದರೂ ಪ್ರಯತ್ನ ಬಿಡಲಿಲ್ಲ. ಅನೇಕ ಏಳು, ಬೀಳುಗಳನ್ನು ನೋಡಿದ್ದೇನೆ. ಹೀಗಾಗಿ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡಲಿದ್ದೇನೆ ಎನ್ನುವ ಭಯ ಇಲ್ಲ. ಭಾರತ ತಂಡಕ್ಕೆ ಆ್ಂಕೆುಯಾಗಿದ್ದೇನೆ ಎಂದು ತಿಳಿದ ಕೂಡಲೇ ತಂದೆ ಕರೆ ಮಾಡಿ ನೀನು ಹಾಕಿ ಸ್ಟಿಕ್ ಹಿಡಿದಿದ್ದಕ್ಕೂ ಸಾರ್ಥಕವಾಯ್ತು ಎಂದರು. ಅದು ನನ್ನ ಪಾಲಿಗೆ ಅತ್ಯಮೂಲ್ಯ ಕ್ಷಣ. ನಾನು ಹಾಕಿ ಆಟಗಾರನಾಗಿ ಭಾರತಕ್ಕೆ ಆಡಬೇಕು ಎನ್ನುವುದು ನನ್ನ ಒಬ್ಬನ ಕನಸಲ್ಲ. ಅದು ಇಡೀ ನನ್ನ ಕುಟುಂಬದ ಕನಸು. ಇದಕ್ಕಾಗಿ ಹಲವು ತ್ಯಾಗಗಳನ್ನು ನನ್ನ ಕುಟುಂಬ ಮಾಡಿದೆ. ಚಿಕ್ಕ ವಯಸ್ಸಿಗೇ ತಂದೆ, ತಾಯಿಯನ್ನು ಬಿಟ್ಟು ಹಾಸ್ಟೆಲ್ ಸೇರಿದೆ. ವರ್ಷಕ್ಕೆ ಎರಡು, ಮೂರು ಬಾರಿ ಮಾತ್ರ ಮನೆಗೆ ಹೋಗುವುದಕ್ಕೆ ಅವಕಾಶ ಸಿಗುತ್ತಿತ್ತು. ನಾನು ಹಾಕಿಯಲ್ಲೇ ಸಾಧನೆ ಮಾಡಬೇಕು ಎನ್ನುವುದು ನಮ್ಮ ಇಡೀ ಕುಟುಂಬದ ಕನಸು. ಆ ಕನಸೀಗ ಈಡೇರಿದೆ. ಹೀಗಾಗಿ ನನ್ನ ಕುಟುಂಬದ ಕನಸು ಈಡೇರಿದ್ದಕ್ಕಾಗಿ ನನಗೆ ಸಂತಸ ಹಾಗೂ ಹೆಮ್ಮೆಯಿದೆ.


ಪ್ರಶ್ನೆ: ನಿಮ್ಮ ಈ ಸಾಧನೆಗೆ ಪೋಷಕರ ಸಹಕಾರ ಹೇಗಿತ್ತು?
ಆಭರಣ್: ನನ್ನ ತಂದೆ ಸುದೇವ್ ಕೂಡ ಹಾಕಿ ಆಟಗಾರರಾಗಿದ್ದರು ಎಂಬುದೇ ನನಗೆ ಹೆಮ್ಮೆ. ನನಗೆ ತಂದೆೆುೀಂ ಮೊದಲ ಗುರು, ಸ್ಛೂರ್ತಿ ಎಲ್ಲವೂ. ತಂದೆಯ ಹೆಸರು ಉಳಿಸಬೇಕು ಎನ್ನುವ ಕಾರಣಕ್ಕೇ ನಾನು ಹಾಕಿ ಸ್ಟಿಕ್ ಹಿಡಿದಿದ್ದು. ಊರಲ್ಲಿ ತಂದೆಯ ಆಟದ ಬಗ್ಗೆ ಊರಿನಲ್ಲಿ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುವಾಗ ಖುಷಿಯಾಗುತ್ತಿತ್ತು. ಅಣ್ಣನೂ ಹಾಕಿ ಆಡುತ್ತಿದ್ದರು. ಆದರೆ ಅವರಿಬ್ಬರಿಗೂ ದೊಡ್ಡ ಮಟ್ಟಕ್ಕೆ ಏರಲು ಸಾಧ್ಯವಾಗಲಿಲ್ಲ. ಆ ಬೇಸರವನ್ನು ನೀಗಿಸಬೇಕು. ತಂದೆಯ ಹೆಸರು ಉಳಿಸಬೇಕು ಎನ್ನುವ ಕಾರಣಕ್ಕೇ ನಾನು ಹಾಕಿ ಆಟಗಾರನಾಗಲು ನಿರ್ಧರಿಸಿದೆ. ನನ್ನ ತಾಯಿ ರಾಣಿ ಕೂಡ ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದಾರೆ. ಇದರಿಂದಲೇ ಈ ಮಟ್ಟಕ್ಕೆ ಸಾಧನೆ ಮಾಡಲು ಸಾಧ್ಯವಾಯಿತು.

ಪ್ರಶ್ನೆ: ಹಾಕಿ ತವರು ಕೊಡಗಿನ ಬಗ್ಗೆ ಹೇಳುವುದಾದರೆ?
ಆಭರಣ್: ಹಾಕಿಯಲ್ಲಿ ಅತ್ಯುತ್ತಮ ಆಟಗಾರರಾಗಿರುವ ಎಸ್.ವಿ.ಸುನಿಲ್, ರಘುನಾಥ್ ಸೇರಿದಂತೆ ಹಲವು ಮಂದಿ ಕೊಡಗಿನವರ ಆಟ ನೋಡಿಕೊಂಡೆ ನಾನೂ ಕಲಿತಿದ್ದೇನೆ. ಅಶ್ವಥ್, ಪ್ರಭಾಕರ್, ಕಟಿಗೆಯಂತಹವರ ಕೋಚಿಂಗ್‌ನೊಂದಿಗೆ ಆಟ ಕಲಿಯುತ್ತಿದ್ದೆ. ಸುನಿಲ್ ನಂತರ ಸೋಮವಾರಪೇಟೆಯ ಹೆಸರನ್ನು ಉಳಿಸುವ ಹೊಣೆ ನಿನ್ನ ಮೇಲಿದೆ ಎಂದು ನಮ್ಮ ಊರಿನವರು ನೆನಪಿಸುತ್ತಿರುತ್ತಾರೆ. ಸುನಿಲ್ ಅವರೊಂದಿಗೇ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರುವುದು ತುಂಬಾ ಖುಷಿ ಕೊಟ್ಟಿದೆ. ನಾನೂ ಅವರಂತೆೆುೀಂ ಫಾರ್ವರ್ಡ್ ಆಟಗಾರ. ಸಿಕ್ಕಿರುವ ಅವಕಾಶ ಬಳಸಿಕೊಂಡು ೨೦೨೩ರ ವಿಶ್ವಕಪ್, ೨೦೨೪ರ ಒಲಿಂಪಿಕ್ಸ್ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದ್ದೇನೆ. ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹದ ಅವಶ್ಯಕತೆ ಇದೆ. ಸೋಮವಾರಪೇಟೆಯ ಟರ್ಫ್ ಮೈದಾನ ಶೀಘ್ರ ಪೂರ್ಣಗೊಳಿಸಬೇಕು. ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸಬೇಕು.

ಪ್ರಶ್ನೆ: ನೀವು ಯಾವುದೇ ಪಂದ್ಯ ಆಡಿದರೂ ತಂದೆ ಪಂದ್ಯ ವೀಕ್ಷಿಸುತ್ತಾರಂತೆ, ನಿಜವೇ..?
ಆಭರಣ್: ನನಗೆ ೬-೭ ವಯಸ್ಸಿದ್ದಾಗ ನಾವು ಬೆಂಗಳೂರಿಗೆ ಸ್ಥಳಾಂತರಗೊಂಡೆವು. ನನ್ನ ಹಾಕಿಗಾಗಿೆುೀಂ ತಂದೆ, ತಾಯಿ ಊರು ಬಿಟ್ಟು ಬಂದರು. ಒಂದು ಹಾಕಿ ಸ್ಟಿಕ್‌ಗೆ ೬,೦೦೦- ೭,೦೦೦ ರೂ. ಆಗುತ್ತಿತ್ತು. ಈಗ ನನಗೆ ಉದ್ಯೋಗವಿದೆ, ಪ್ರಾೋಂಜಕರಿದ್ದಾರೆ. ಆದರೆ ಆಗ ಎಷ್ಟೇ ಕಷ್ಟವಾದರೂ ತಂದೆೆುೀಂ ಎಲ್ಲವನ್ನೂ ನೋಡಿಕೊಂಡರು. ನಾನು ಎಲ್ಲೇ ಪಂದ್ಯವಾಡಲಿ ನಮ್ಮ ತಂದೆ ಮೈದಾನಕ್ಕೆ ಇಂದಿಗೂ ಬಂದು ನೋಡುತ್ತಾರೆ. ಅವರಿಗೆ ಅನಿಸಿದ್ದನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.

ಪ್ರಶ್ನೆ: ಸಾಧನೆಯ ಪಯಣದಲ್ಲಿ ಎಡವಿದ ಘಟನೆ ಇದೆೆಯೇ.. ?
ಆಭರಣ್: ಶಾಲೆ, ಕಾಲೇಜಿನಲ್ಲಿದ್ದಾಗ ಅನೇಕರು ಹಾಕಿ ಏಕೆ ಆಡುತ್ತೀಯ? ಒಮ್ಮೆ ಗಾಯಗೊಂಡರೆ ಮುಗಿಯಿತು ಎನ್ನುತ್ತಿದ್ದರು. ನನ್ನ ವಿಷಯದಲ್ಲಿ ಅದು ನಿಜವೂ ಆಯಿತು. ೨೦೨೦ರಲ್ಲಿ ಜಿಮ್‌ನಲ್ಲಿ ಭಾರ ಎತ್ತುವಾಗ ಗಾಯಗೊಂಡೆ. ಆ ಬಳಿಕ ೧೪ ತಿಂಗಳ ಕಾಲ ಹಾಕಿ ಸ್ಟಿಕ್ ಮುಟ್ಟಲು ಆಗಲಿಲ್ಲ. ಆದರೆ ಲಾಕ್‌ಡೌನ್ ನನಗೆ ನೆರವಾಯಿತು. ಆಗ ಯಾವುದೇ ಪಂದ್ಯಗಳು ನಡೆಯದ ಕಾರಣ, ನಾನು ಆ್ಂಕೆುಯಲ್ಲಿ ಹಿಂದೆ ಬೀಳಲಿಲ್ಲ. ವಿಡಿೋಂ ಕಾಲ್‌ಗಳ ಮೂಲಕ ಗೊತ್ತಿದ್ದವರಿಂದ ಮಾಹಿತಿ ಪಡೆದು ಚೇತರಿಸಿಕೊಂಡೆ. ಇದನ್ನು ಬಿಟ್ಟರೆ ಎಡವಿದ್ದೇನೆ ಎಂದು ಅನಿಸುವುದಿಲ್ಲ. ನನ್ನ ಕುಟುಂಬದ ಕನಸು ನನಸು ಮಾಡಿದ್ದೇನೆ. ಇನ್ನಷ್ಟು ಸಾಧನೆ ಮಾಡುವ ವಿಶ್ವಾಸವಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago