ಎಸ್.ಎಸ್.ಭಟ್
ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ ನಂಜನಗೂಡು ತಲುಪಲು ಅಶ್ವಮೇಧ ಬಸ್ ಹತ್ತಿದವರೆಲ್ಲರಿಗೂ ಈ ಆಘಾತ ಎದುರಾಗಿದೆ.
ಆ ಬಸ್‌ನಲ್ಲಿ ಮೈಸೂರಿನಿಂದ ನಂಜಗೂಡಿಗೆ ಅಥವಾ ನಂಜನಗೂಡಿನಿಂದ ಮೈಸೂರಿಗೆ ಟಿಕೆಟ್ ಕೇಳಿದರೆ ಬಸ್ ನಿರ್ವಾಹಕ ಮೈಸೂರು-ತಿ.ನರಸೀಪುರ ಅಥವಾ ತಿ.ನರಸೀಪುರ-ಮೈಸೂರು ಎಂದು ಮುದ್ರಿತವಾಗಿರುವ ಟಿಕೆಟ್ ನೀಡುತ್ತಾರೆ. ಹಾಗಂತ ಪ್ರಯಾಣಿಕರೇನು ಗಾಬರಿಪಡಬೇಕಿಲ್ಲ. ಏಕೆಂದರೆ ಆ ಬಸ್ ತಿ.ನರಸೀಪುರಕ್ಕೆ ಹೋಗುವುದಿಲ್ಲ. ಅದು ನೇರವಾಗಿ ನಂಜನಗೂಡಿಗೆ ತಲುಪುತ್ತದೆ. ನಂಜನಗೂಡಿಂದಾದರೆ ಮೈಸೂರು ನಗರಕ್ಕೆ ಬರುತ್ತದೆ.
ಆದರೆ ಪ್ರಯಾಣಿಕರು ಆ ಬಸ್ ಹತ್ತಿ ಪ್ರಯಾಣ ಮಾಡಿದ ತಪ್ಪಿಗೆ ೪೬ ರೂ. ಬದಲಿಗೆ ೪೮ ರೂ. ಅಂದರೆ ೨ ರೂ. ಹೆಚ್ಚು ದರ ನೀಡಬೇಕಾಗುತ್ತದೆ. ಈ ೨ ರೂ. ಹೆಚ್ಚಳವಾಗಿರುವುದು ೧೨-೨-೨೦೨೬ ಗುರುವಾರದಿಂದ. ಈ ಹೆಚ್ಚಳದ ಕುರಿತಂತೆ ಸಾರಿಗೆ ನಿಗಮದ ನಂಜನಗೂಡು ಡಿಪೋದ ಅDiಕಾರಿ ಸುಮಾ ಅವರನ್ನು ಪ್ರಶ್ನಿಸಿದರೆ, ಈ ವಿಚಾರ ನನ್ನ ಗಮನಕ್ಕೇನೂ ಬಂದಿಲ್ಲ. ಹಾಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ.
” ಮಲೆ ಮಹದೇಶ್ವರ ಬೆಟ್ಟಕ್ಕೆ ೧೩-೨-೨೦೨೬ರಿಂದ ೩೦ ಅಶ್ವಮೇಧ ಬಸ್‌ಗಳನ್ನು ಬಿಡಲಾಗಿದ್ದು ಅವರು ನಂಜನಗೂಡಿಗೆ ಟ್ರಿಪ್ ಹೋಗುವ ಹಾಗೇ ಇಲ್ಲ. ಟಿಕೆಟ್ ನೀಡುವಂತೆಯೂ ಇಲ್ಲ. ನಂಜನಗೂಡು-ಮೈಸೂರು ನಡುವಿನ ಪ್ರಯಾಣ ದರ ಹೆಚ್ಚಳವಾಗಿಯೇ ಇಲ್ಲ. ಅದನ್ನು ಈಗ ನಾವು ಪರಿಶೀಲಿಸಬೇಕಿದೆ.”
ವೀರೇಶ, ಡಿಸಿ, ಸಾರಿಗೆ ನಿಗಮ
” ಮೈಸೂರು-ತಿ.ನರಸೀಪುರ ಮಾರ್ಗದ ಮುದ್ರಿತ ಟಿಕೆಟ್ ಪಡೆದು ನಂಜನ ಗೂಡಿಗೆ ಪ್ರಯಾಣ ಬೆಳೆಸಿದರೆ ಆಗುವ ಅನಾಹುತದ ಅರಿವು ಯಾರಿಗೂ ಇಲ್ಲ. ಅಕಸ್ಮಿಕ ವಾಗಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ಆ ಬಸ್ ಅಪಘಾತವಾದರೆ ವಿಮೆಯ ಜಾರಿಯಲ್ಲಿ ಭಾರೀ ತೊಡಕಾಗುವುದು ಖಚಿತ. ಹಾಗಾದಾಗ ಯಾರು ಜವಾಬ್ದಾರರು?”
ಎಂ.ಎನ್.ಚಂದ್ರಶೇಖರ್, ಜೆ.ಪಿ.ನಗರ, ಮೈಸೂರು
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…