ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ
‘ತಿಣಿಕಿದನು -ಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂ ತಿಣೀಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ’ ಎಂದು ಹೇಳಿ ಕುಮಾರವ್ಯಾಸ ಭಾರತದತ್ತ ಹೊರಳಿದ್ದು ಆಗ. ಹಾಗಂತ ರಾಮಾಯಣವನ್ನು ಮತ್ತೆ ಯಾರೂ ಬರೆಯಲಿಲ್ಲವೇ? ಬರೆದರು. ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಬರೆದರು ಕುವೆಂಪು. ಅದು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಾತ್ರವಲ್ಲದೆ, eನಪೀಠ ಪ್ರಶಸ್ತಿಯನ್ನೂ ತಂದುಕೊಟ್ಟಿತು.
ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಸಹಸ್ರಾರು ವರ್ಷಗಳಿಂದ ಭಾರತೀಯ ಜನಪದದ ಅಂಗವಾಗಿಯೇ ಇದೆ. ತಾಳೆಓಲೆ ಹಸ್ತಪ್ರತಿಗಳಿಂದ ಆರಂಭವಾಗಿ, ಕಾಗದದ ಸಚಿತ್ರ ಹಸ್ತಪ್ರತಿಗಳು, ಮುದ್ರಿತ ಪುಸ್ತಕಗಳ ಮೂಲಕ ಒಂದೆಡೆಯಾದರೆ, ಜನಪದ, ರಂಗಭೂಮಿ, ಯಕ್ಷಗಾನ ಮತ್ತಿತರ ಕಲಾ ಪ್ರಕಾರಗಳ ಮೂಲಕ, ಬೆಳ್ಳಿತೆರೆಯ ಆಗಮನದ ನಂತರ, ಮೂಕಿ ಚಿತ್ರಗಳು, ವಾಕ್ಚಿತ್ರಗಳು, ನಂತರ ದೂರದರ್ಶನ ಧಾರಾವಾಹಿಗಳ ಮೂಲಕ ಹರಿದು ಬಂದ ಈ ಕಥಾನಕ ಇದೀಗ ಹೊಸ ತಂತ್ರeನದ ಮೂಲಕ ವಿಶ್ವದ ಗಮನ ಸೆಳೆಯಲು ಸಿದ್ಧವಾಗುತ್ತಿದೆ.
ಮುದ್ರಣ ಯುಗಕ್ಕೂ ಮೊದಲು ರಾಮಾಯಣವನ್ನು ತಾಳೆಓಲೆ, ಭೂರ್ಜಪತ್ರ ಮತ್ತು ಕೈಬರಹದ ಕಾಗದದ ಹಸ್ತಪ್ರತಿಗಳಲ್ಲಿ ಸಂರಕ್ಷಿಸಲಾಗುತ್ತಿತ್ತು. ಭಾರತೀಯ ರಾಷ್ಟ್ರೀಯ ಕಲಾ ಮತ್ತು ಸಾಂಸ್ಕೃತಿಕ ಪರಂಪರೆ ಕೇಂದ್ರದ ಪ್ರಕಾರ, ರಾಮಾಯಣವು ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಹಸ್ತಪ್ರತಿ ರೂಪದಲ್ಲಿ ಹರಡಿದ ಅತ್ಯಂತ ಪ್ರಭಾವಶಾಲಿ ಕೃತಿಗಳಂದು ಸಂಸ್ಕೃತದ ವಾಲ್ಮೀಕಿ ರಾಮಾಯಣ, ಹಿಂದಿಯಲ್ಲಿ ತುಳಸಿದಾಸರ ರಾಮಚರಿತ ಮಾನಸಂ ಸೇರಿದಂತೆ, ಭಾರತದ ವಿವಿಧ ಭಾಷೆಗಳಲ್ಲಿ ರಾಮಾಯಣ ಕೃತಿಗಳಿವೆ. ಭಾರತದಲ್ಲಿ ಮಾತ್ರವಲ್ಲದೆ ಥೈಲ್ಯಾಂಡ್, ಇಂಡೋನೇಷ್ಯಾ, ಕಂಬೋಡಿಯಾ, ಲಾವೋಸ್, ನೇಪಾಳ, ಶ್ರೀಲಂಕಾ ಮುಂತಾದ ದೇಶಗಳಲ್ಲಿಯೂ ರಾಮಾಯಣದ ಸ್ವತಂತ್ರ ರೂಪಗಳಿವೆ.
ಚಲನಚಿತ್ರಗಳ ಆರಂಭವಾದ ಮೇಲೆ ಮೂಕಿ ಚಿತ್ರಗಳ ದಿನಗಳಲ್ಲಿ ರಾಮಾಯಣದ ಹಿನ್ನೆಲೆಯ ಚಿತ್ರಗಳು ತಯಾರಾಗಿದ್ದವು. ದಾದಾ ಸಾಹೇಬ್ ಫಾಲ್ಕೆ ೧೯೧೭ರಲ್ಲಿ ತಯಾರಿಸಿದ ‘ಲಂಕಾದಹನ’ ಭಾರತದ ಮೊದಲ ಪ್ರಮುಖ ರಾಮಾಯಣ ಚಿತ್ರವಾಗಿತ್ತು. ಅದು ಹನುಮಂತನ ಲಂಕಾದಹನ ಪ್ರಸಂಗ ಆಧರಿಸಿತ್ತು. ವಾಕ್ಚಿತ್ರ ಯುಗ ಆರಂಭವಾದ ಮೇಲೆ, ಭಾರತದ ಬಹುತೇಕ ಭಾಷೆಗಳಲ್ಲಿ ರಾಮಾಯಣ, ರಾಮಾಯಣ ಆಧರಿಸಿದ ಚಿತ್ರಗಳು ಬಂದವು. ರಾಮರಾಜ್ಯ, ರಾಮಬಾಣ್, ಸಂಪೂರ್ಣ ರಾಮಾಯಣ, ಆದಿಪುರುಷ್ ಹೀಗೆ ಹಿಂದಿಯಲ್ಲಿ ಚಿತ್ರಗಳು ತಯಾರಾಗಿದ್ದವು. ಅವೆಲ್ಲಕ್ಕೂ ಕಿರೀಟವಿಟ್ಟಂತೆ ಇದೀಗ ನಮಿತ್ ಮಲ್ಹೋತ್ರಾ ರಾಮಾಯಣ ಸಿದ್ಧವಾಗುತ್ತಿದೆ.
ಇಂದು ಅಮೆರಿಕದಲ್ಲಿ ಈ ಚಿತ್ರದ ಟ್ರೈಲರ್ ಲೋಕಾರ್ಪಣೆ ಆಗಲಿದೆ. ಕಳೆದ ವಾರ ಈ ಚಿತ್ರದ ಟ್ರೈಲರ್ ವೀಕ್ಷಣೆ, ಪ್ರಥಮ ಸಂಕಲ್ಪ ಹೆಸರಿನಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿತ್ತು. ದೇಶಾದ್ಯಂತ ಮಾಧ್ಯಮಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ವಿಶೇಷ ಆಹ್ವಾನಿತರು, ಮಾಧ್ಯಮ ಮಂದಿಯ ಮುಂದೆ ಈ ಟ್ರೈಲರ್‌ಪ್ರದರ್ಶನದ ಮೊದಲು, ಚಿತ್ರದ ಕುರಿತಂತೆ, ತಮ್ಮ ಮಹತ್ವಾಕಾಂಕ್ಷೆಯ ಕುರಿತಂತೆ ನಮಿತ್ ಮಲ್ಹೋತ್ರಾ ಮಾತನಾಡಿದರು. ‘ರಾಮಾಯಣ’ವನ್ನು ನಿತೀಶ್ ತಿವಾರಿ ನಿರ್ದೇಶಿಸುತ್ತಿದ್ದು, ಎರಡು ಭಾಗಗಳಲ್ಲಿ ಅದು ತೆರೆಗೆ ಬರಲಿದೆ. ಮೊದಲ ಭಾಗ ಈ ದೀಪಾವಳಿಗೆ, ಎರಡನೇ ಭಾಗ ಮುಂದಿನ ದೀಪಾವಳಿಗೆ ಬಿಡುಗಡೆ ಆಗಲಿದೆ. ದೀಪಾವಳಿ ಎಂದರೆ ರಾಮನು ವನವಾಸ ಮುಗಿಸಿ ಆಯೋಧ್ಯೆಗೆ ಹಿಂದಿರುಗಿದ ವೇಳೆ ಎನ್ನುವುದು ಪ್ರಚಲಿತದಲ್ಲಿದೆ.
ರಾಮಾಯಣ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ನಿರ್ಮಾಣ ಸಂಸ್ಥೆ ಪ್ರೈಮ್ -ಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಶನ್ಸ್ ಜೊತೆಯಾಗಿ ನಿರ್ಮಿಸುತ್ತಿವೆ. ಕಳೆದ ಹತ್ತು ವರ್ಷಗಳಲ್ಲಿ ಏಳು ಬಾರಿ ವಿಎಫ್ಎಕ್ಸ್‌ಗಾಗಿ ಅಕಾಡೆಮಿ ಪ್ರಶಸ್ತಿ ಮತ್ತಿತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಡಿಎನ್‌ಇಜಿ ಸಂಸ್ಥೆ ‘ರಾಮಾಯಣ’ ಚಿತ್ರಕ್ಕೂ ಈ ಕೆಲಸ ಮಾಡಲಿದೆ. ಆಕಾಡೆಮಿ ಪ್ರಶಸ್ತಿ ಪಡೆದ ಎ.ಆರ್.ರೆಹಮಾನ್ ಮತ್ತು ಹಾನ್ಸ್ ಝಿಮ್ಮರ್ ಸಂಗೀತ ಸಂಯೋಜಕರು.
ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿಪಲ್ಲವಿ, ರಾವಣನಾಗಿ ಯಶ್ ಅಭಿನಯಿಸಲಿzರೆ ಎನ್ನುವುದು ಅದಾಗಲೇ ಪ್ರಕಟವಾಗಿದೆ. ಅವರೊಂದಿಗೆ ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ, ದಶರಥನಾಗಿ ಅರುಣ್ ಗೋವಿಲ್ (ರಾಮಾಯಣ ಧಾರಾವಾಹಿಯ ರಾಮ), ಕೈಕೇಯಿ ಆಗಿ ಲಾರಾ ದತ್ತ, ಕೌಸಲ್ಯೆಯಾಗಿ ಇಂದಿರಾ ಕೃಷ್ಣನ್, ಊರ್ಮಿಳೆಯಾಗಿ ಸೋನಿಯಾ ಬಲಾನಿ, ಮಂಡೋದರಿಯಾಗಿ ಕಾಜಲ್ ಅಗರ್ವಾಲ, ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್, ಮಂಥರೆಯಾಗಿ ಶೀಬಾ ಛಡ್ಡಾ, ವಿದ್ಯಜ್ಜಿಹ್ವನಾಗಿ ವಿವೇಕ್ ಓಬೆರಾಯ್ ನಟಿಸಲಿದ್ದಾರೆ. ಅನುಪಮ್ ಖೇರ್ ಜಟಾಯು ಪಾತ್ರಕ್ಕೆ ದನಿ ನೀಡಲಿದ್ದಾರೆ.
ನಮಿತ್ ಮಲ್ಹೋತ್ರಾ ಅವರ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್ ಮತ್ತು ಅದರ ಅಂಗಸಂಸ್ಥೆ ಡಿಎನ್‌ಇಜಿ ಅಂತಾರಾಷ್ಟೀಯ ಮಟ್ಟದಲ್ಲಿ ಹೆಸರಾದವುಗಳು. ಮೊದಲು ಡಬಲ್ ನೆಗೆಟಿವ್ ಎಂದಿದ್ದ ಹೆಸರು ಈಗ ಡಿಎನ್‌ಇಜಿ ಆಗಿದೆ. ಈ ಸಂಸ್ಥೆ ವಿಶ್ವದ ಅಗ್ರಮಾನ್ಯ ವಿಎಫ್ಎಕ್ಸ್, ಅನಿಮೇಶನ್, ಮತ್ತು ಸಿಜಿಐ ಸಂಸ್ಥೆಗಳಲ್ಲಿ ಒಂದು. ಇಂದು ಡಿಎನ್‌ಇಜಿಗೆ ಭಾರತ (ಮುಂಬೈ, ಚೆನ್ನೈ, ಬೆಂಗಳೂರು, ಚಂಡೀಗಢ), ಇಂಗ್ಲೆಂಡ್, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಕೇಂದ್ರಗಳಿದ್ದು, ಸಾವಿರಾರು ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ.
ಜಗತಿಕ ಮಟ್ಟದ ಸೇವೆಯನ್ನು ಒದಗಿಸುತ್ತಿರುವ ಡಿಎನ್‌ಇಜಿ ವಾರ್ನರ ಬ್ರದರ್ಸ್, ಯುನಿವರ್ಸಲ್ ಪಿಕ್ಚರ್ಸ್, ವಾಲ್ಟ ಡಿಸ್ನಿ ಸ್ಟುಡಿಯೋಸ್, ಮಾರ್ವೆಲ್ ಸ್ಟುಡಿಯೋಸ್, ನೆಟ್‌ಫ್ಲಿಕ್ಸ್ , ಅಮೆಜನ್ ಎಂಜಿಎಂ ಸ್ಟುಡಿಯೋಸ್ ಮುಂತಾದ ಪ್ರಮುಖ ಸ್ಟುಡಿಯೋಗಳಿಗೆ ತಂತ್ರeನ ಒದಗಿಸುತ್ತದೆ. ಭಾರತದಲ್ಲಿ ವಿಶ್ವಮಟ್ಟದ ವಿಎಫ್ಎಕ್ಸ್ ಪ್ರತಿಭೆಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಸಂಸ್ಥೆ ಭಾರತೀಯ ವಿಎ-ಎಕ್ಸ್ ಉದ್ಯಮವನ್ನು ಹಾಲಿವುಡ್ ಮಟ್ಟಕ್ಕೆ ಒಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಇದಕ್ಕೆ ಪೂರಕ ದಾರಿಯನ್ನು ನಮಿತ್ ಮಲ್ಹೋತ್ರಾ ಅವರ ‘ರಾಮಾಯಣ’ ತೋರಿಸಲಿದೆ. ಅವರ ಪ್ರಕಾರ ಈಗಾಗಲೇ ವಿಶ್ವದ ಬೇರೆಬೇರೆ ಕಡೆ ಸುಮಾರು ಹತ್ತು ಸಾವಿರ ಮಂದಿ ರಾಮಾಯಣ; ಚಿತ್ರದ ಬೇರೆಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ನಮಿತ್ ಮಲ್ಹೋತ್ರಾರ ರಾಮಾಯಣ, ಅತ್ಯಾಧುನಿಕ ಡಿಜಿಟಲ್ ತಂತ್ರeನ, ವಿಎಫ್ಎಕ್ಸ್ ಮತ್ತು ವರ್ಚುವಲ್ ಪ್ರೊಡಕ್ಷನ್ ತಂತ್ರಜ್ಞಾನದ ಗರಿಷ್ಟ ಬಳಕೆಯ ಚಿತ್ರವಾಗಲಿದೆ. ಇದು ಭಾರತೀಯ ಚಿತ್ರರಂಗದ ಅತಿ ದೊಡ್ಡ ವಿಎಫ್ಎಕ್ಸ್ ಆಧಾರಿತ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಈ ಚಿತ್ರದ ಜೊತೆ ಸೇರಲು ಅವಕಾಶ ನೀಡಿದ್ದಕ್ಕಾಗಿ ನಟ ಯಶ್ ನಮಿತ್ ಮಲ್ಹೋತ್ರಾ ಅವರಿಗೆ ಕೃತಜ್ಞತೆ ಹೇಳಿದರು. ತಮ್ಮದೇನಿದ್ದರೂ ಆಸ್ಕರ್ ಕನಸು ಎನ್ನುತ್ತಿದ್ದ ಯಶ್‌ಗೆ ತನ್ನ ಕ್ಷೇತ್ರದಲ್ಲಿ ಆಸ್ಕರ್ ಪಡೆದ ನಮಿತ್ ಮಲ್ಹೋತ್ರಾ ಜೊತೆಯಾಗಿzರೆ, ದೀಪಾವಳಿಗೆ ‘ರಾಮಾಯಣ’ ಬಂದರೆ, ಅದಕ್ಕೂ ಮೊದಲು ಅವರ ‘ ಟಾಕ್ಸಿಕ್’ ತೆರೆಗೆ ಬರಲಿದೆ. ಈ ಬಾರಿ ಕನ್ನಡ ಮಾತ್ರವಲ್ಲದೆ, ಇಂಗ್ಲಿಷಿನಲ್ಲೂ ಆ ಚಿತ್ರವನ್ನು ಚಿತ್ರಿಸಿದ್ದಾರೆ. ಅದರ ಹಿಂದಿನ ಲೆಕ್ಕಾಚಾರ ವಿಶ್ವಮಟ್ಟದಲ್ಲಿ ತಮ್ಮ ಚಿತ್ರವನ್ನು ಪರಿಚಯಿಸುವುದು ಇರಬಹುದು, ಜೊತೆಗೆ ಅಕಾಡೆಮಿ ಪ್ರಶಸ್ತಿಯ ಗಮನವೂ ಕೂಡಾ.
ಪ್ರಥಮ ಸಂಕಲ್ಪದ ದಿನ ‘ರಾಮಾಯಣ’ ಚಿತ್ರದ ಪ್ರಮುಖ ನಟನಟಿಯರಿದ್ದರು. ಯಶ್ ಬರುತ್ತಾರೆ, ಇಲ್ಲ ಎನ್ನುವ ಮಾತುಗಳಿದ್ದವು. ‘ಟ್ರೈಲರ್’ ಪ್ರದರ್ಶನ ಮುಗಿಯುತ್ತಲೇ ‘ಒನ್ಸ್‌ಮೋರ್’ ಕೂಗಿತ್ತು. ಅದರ ನಡುವೆ ಒಂದಷ್ಟು ಮಾತುಗಳು. ಮತ್ತೆ ಪ್ರದರ್ಶನ ಆರಂಭವಾಗುತ್ತಲೇ, ನಮಿತ್ ಮಲ್ಹೋತ್ರಾ, ‘ ಇದಾದ ಮೇಲೆ ನಿಮಗೆ ಅಚ್ಚರಿಯ ವಿಷಯ ಇದೆ’ ಎಂದು ಪ್ರಕಟಿಸಿದರು.
ಸಭಾಂಗಣದಲ್ಲಿ ಪ್ರದರ್ಶನಕ್ಕಾಗಿ ಕತ್ತಲಾಯಿತು. ಇನ್ನೂ ಟ್ರೈಲರ್ ಪ್ರದರ್ಶನಕ್ಕೆ ಮೊದಲೇ ಮತ್ತೆ ಲೈಟ್ಸ್ ಆನ್! ಯಶ್ ವೇದಿಕೆಯಲ್ಲಿದ್ದರು. ಸಭಾಂಗಣದಲ್ಲಿ ಕೇಕೆ, ಚಪ್ಪಾಳೆ, ವಿಶಲ.. ‘ ಎಲ್ಲರಿಗೂ ನಮಸ್ಕಾರ’ ಎಂದು ಆರಂಭಿಸಿ, ನಾಲ್ಕೈದು ಭಾಷೆಗಳಲ್ಲಿ ಅದನ್ನು ಹೇಳಿ ‘ರಾಮಾಯಣ’ ಕುರಿತು, ಅದರ ಪಾತ್ರಧಾರಿಗಳ ಕುರಿತು, ನಿರ್ಮಾಣ ಕುರಿತು ಹೇಳಿದರು. ರಾಮಾಯಣ, ನಮ್ಮ ಸತ್ಯ, ನಮ್ಮ ಚರಿತ್ರೆ ಆಧುನಿಕ ತಂತ್ರeನ, ವಿಶೇಷ ಪರಿಣಾಮಗಳೊಂದಿಗೆ ವಿಶ್ವ ಪರ್ಯಟನೆ ಮಾಡುವ ಮುನ್ನ, ರಾಜಧಾನಿಯ ಭಾರತ ಮಂಟಪದಲ್ಲಿ ಪ್ರಥಮ ಸಂಕಲ್ಪದ ದಿನ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ನೇರ ಪ್ರಸಾರವೂ ಆಗುತ್ತಿತ್ತು.
ಈ ತಿಂಗಳ ಮೊದಲ ವಾರದಲ್ಲಿ ಆಗಬೇಕಾಗಿದ್ದ ಈ ಪ್ರಶಸ್ತಿ ಪ್ರಕಟಣೆ ಅಂದು ಆಯಿತು. ‘ಮಿಥ್ಯ’ ಕನ್ನಡದ ಅತ್ಯುತ್ತಮ ಚಿತ್ರಕ್ಕಿಂತ ಹೆಚ್ಚಿನದನ್ನು ಪಡೆಯುವ ನಿರೀಕ್ಷೆಗೆ ಇನ್ನೆರಡು ಚಿತ್ರಗಳು ಅಡ್ಡಬಂದವು. ಚೊಚ್ಚಲ ನಿರ್ದೇಶನದ ಚಿತ್ರವೋ, ಅತ್ಯುತ್ತಮ ಮಕ್ಕಳ ಚಿತ್ರವೋ ಅದಾಗಲಿಲ್ಲ. ಆದರೆ ಆ ಚಿತ್ರ ಇನ್ನೆರಡು ಪ್ರಶಸ್ತಿ ತಂದು ಗರಿ ಮೂಡಿಸಿದ್ದಂತೂ ಹೌದು. ಸ್ಪರ್ಧೆಯಲ್ಲಿಇದ್ದ ಕನ್ನಡ ಚಿತ್ರಗಳು ಅಂತಿಮ ಹಂತಕ್ಕೆ ಬಂದವುಗಳ ವಿವರ ಸಾಕಷ್ಟು ಗೌಪ್ಯವಾಗಿ ಇದ್ದ ಹಾಗಿತ್ತು. ರಾಷ್ಟ್ರೀಯ ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಾ, ಅಂತಾರಾಷ್ಟ್ರೀಯ ಮಟ್ಟದ ನಿರೀಕ್ಷೆಗೆ ಶುಭ ಕೋರೋಣ.
” ಸಭಾಂಗಣದಲ್ಲಿ ಪ್ರದರ್ಶನಕ್ಕಾಗಿ ಕತ್ತಲಾಯಿತು. ಇನ್ನೂ ಟ್ರೈಲರ್ ಪ್ರದರ್ಶನಕ್ಕೆ ಮೊದಲೇ ಮತ್ತೆ ಲೈಟ್ಸ್ ಆನ್! ಯಶ್ ವೇದಿಕೆಯಲ್ಲಿದ್ದರು. ಸಭಾಂಗಣದಲ್ಲಿ ಕೇಕೆ, ಚಪ್ಪಾಳೆ, ವಿಶಲ.. ‘ ಎಲ್ಲರಿಗೂ ನಮಸ್ಕಾರ’ ಎಂದು ಆರಂಭಿಸಿ, ನಾಲ್ಕೈದು ಭಾಷೆಗಳಲ್ಲಿ ಅದನ್ನು ಹೇಳಿ ‘ರಾಮಾಯಣ’ ಕುರಿತು, ಅದರ ಪಾತ್ರಧಾರಿಗಳ ಕುರಿತು, ನಿರ್ಮಾಣ ಕುರಿತು ಹೇಳಿದರು.”
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದಿಲ್ಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ಕುಮ್ಮಕ್ಕು ಹಾಗೂ ಪೊಲೀಸರ…
ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ…
ಮೈಸೂರಿನ ಕುವೆಂಪು ನಗರದ ಎಂ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವು, ಕಳೆದ ಮೂರು ತಿಂಗಳಿಂದ ಮುಚ್ಚಿದೆ. ಇದಕ್ಕೆ ಕಾರಣ ತಿಳಿದಿಲ್ಲ.…
ಪುನೀತ್ ಜಿಲ್ಲೆಯಲ್ಲಿ ಕ್ಷೀಣಿಸಿದ ಮಳೆಯಿಂದ ಬೇಡಿಕೆ ಕುಸಿತ; ಕುಲಕಸುಬಿಗೆ ಹೊಡೆತ ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆಯ ವಾತಾವರಣ ಇಲ್ಲದ ಕಾರಣ…
ಕೆ.ಬಿ.ರಮೇಶನಾಯಕ ೨೦೧೫, ೨೦೧೬ರ ಅವಧಿಯಲ್ಲಿ ಇದ್ದಷ್ಟೇ ಈ ಬಾರಿಯೂ ಜಲಾಶಯಗಳಲ್ಲಿ ನೀರು ಮೈಸೂರು: ಕೇರಳದ ವಯನಾಡು, ಕೊಡಗಿನ ಭಾಗಮಂಡಲ ಭಾಗದಲ್ಲಿ…
ಗಿರೀಶ್ ಹುಣಸೂರು ಜಿಲ್ಲೆಯಲ್ಲಿ ಈವರೆಗೆ ೬,೯೧೦ ರೈತರಿಂದಷ್ಟೇ ಬೆಳೆ ವಿಮೆ ನೋಂದಣಿ ಮೈಸೂರು: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಪ್ರಸಕ್ತ ವರ್ಷ…