Andolana originals

ಓದುಗರ ಪತ್ರ: ಖಾಸಗಿ ಕಾಲೇಜುಗಳ ಅನಗತ್ಯ ಶುಲ್ಕ ಹೆಚ್ಚಳ ನಿಯಂತ್ರಿಸಿ

ರಾಜ್ಯದಲ್ಲಿ ಸರ್ಕಾರಿ ವಿಶ್ವವಿದ್ಯಾನಿಲಯಗಳ ಸಂಯೋಜಿತ ಕೆಲವು ಖಾಸಗಿ ಕಾಲೇಜುಗಳು ವರ್ಷದಿಂದ ವರ್ಷಕ್ಕೆ ಕಾಲೇಜು ಅಭಿವೃದ್ಧಿಯ ಹೆಸರಿನಲ್ಲಿ, ವಿಶ್ವವಿದ್ಯಾನಿಲಯದ ಸೂಚನೆ ಹೆಸರಿನಲ್ಲಿ ಹಾಗೂ ಕೆಲವು ಸಮಂಜಸವಲ್ಲದ ಕಾರಣಗಳನ್ನು ಹೇಳಿ ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಿ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಬರೆ ಎಳೆಯುತ್ತಿವೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು, ಕುಟುಂಬದ ವಾರ್ಷಿಕ ಆದಾಯ ಅತ್ಯಂತ ಕಡಿಮೆ ಇರುವ ವಿದ್ಯಾರ್ಥಿಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಿಂದ ಬರುವ ವಿದ್ಯಾರ್ಥಿಗಳು ಇಂತಹ ಕೆಲವು ಖಾಸಗಿ ಕಾಲೇಜುಗಳಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯುವ ಕನಸು ಹೊತ್ತು, ಕಷ್ಟಪಟ್ಟು ಹಣ ಹೊಂದಿಸಿ ಅಥವಾ ಮತ್ತೊಬ್ಬರಿಂದ ಸಾಲ ಪಡೆದು ಶುಲ್ಕ ಭರಿಸಿ ಪ್ರವೇಶಾತಿ ಪಡೆದಿರುತ್ತಾರೆ. ಇಂತಹ ವಿದ್ಯಾರ್ಥಿಗಳು ಸರ್ಕಾರ ನೀಡುವ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತವಾಗಿರುತ್ತಾರೆ. ಆದರೆ ಈ ರೀತಿಯ ದಿಢೀರ್ ಶುಲ್ಕ ಹೆಚ್ಚಳದಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಕೆಲವರಿಗಂತೂ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಆದ್ದರಿಂದ ಸರ್ಕಾರ ಮತ್ತು ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಖಾಸಗಿ ಕಾಲೇಜುಗಳು ಅನಗತ್ಯವಾಗಿ ಶುಲ್ಕ ಹೆಚ್ಚಳ ಮಾಡದಂತೆ ನಿಯಂತ್ರಣ ಹೇರಬೇಕು.

 – ದರ್ಶನ್ ಚಂದ್ರ ಎಂ. ಪಿ., ಮುಕ್ಕಡಹಳ್ಳಿ, ಚಾಮರಾಜನಗರ ತಾ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂದೂಕು ಹಿಡಿದಿರುವ ನಾಯಕನ ಚಿತ್ರದ ಜಾಹೀರಾತಿಗೆ ‘ಇಲ್ಲೂ’ ಪ್ರೋತ್ಸಾಹ ಏಕೆ?

ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು…

2 mins ago

ಓದುಗರ ಪತ್ರ: ಒಟಿಟಿ ವೇದಿಕೆಗಳು ಕನ್ನಡ ಭಾಷೆಗೂ ಆದ್ಯತೆ ನೀಡಲಿ

ಇಂದು ಒಟಿಟಿ ವೇದಿಕೆಗಳಾದ ಅಮೆಜನ್ ಪ್ರೈಮ, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್, ಜೀ೫, ಸೋನಿಲಿವ್ ಮುಂತಾದವುಗಳು ನಮ್ಮ ಮನರಂಜನೆಯ ಅವಿಭಾಜ್ಯ ಅಂಗವಾಗಿವೆ. ಮನೆಯಲ್ಲಿಯೇ…

5 mins ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ ಮೂರಡಿಯ ಮೂರ್ತಿಗೆ ಡಾಕ್ಟರಾದ ಕೀರ್ತಿ

ಕೋರ್ಟ್ ಮೆಟ್ಟಿಲು ಏರಿ ವೈದ್ಯಕೀಯ ಸೀಟು ಪಡೆದ ಸಾಹಸಿ ಗುಜರಾತಿನ ಭಾವನಗರದ ಗೋರ್ಕಿ ಗ್ರಾಮದ ಗಣೇಶ್ ಬರಯ್ಯ ಎಂಟು ಜನ…

9 mins ago

ಬರದಲ್ಲೂ ಜಾನುವಾರುಗಳ ಮೇವಿಗಿಲ್ಲ ಕೊರತೆ

ಕೆ.ಬಿ.ರಮೇಶನಾಯಕ ಹೋಬಳಿಗೊಂದರಂತೆ ೨೯ ಮೇವು ಬ್ಯಾಂಕ್ ತೆರೆಯಲು ಪ್ರಸ್ತಾವನೆ  ಮೈಸೂರು: ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಮಳೆಯಾಶ್ರಿತ…

14 mins ago

ಮಂಜಿನ ನಡುವೆ ಕೇಸರಿ ರೈಲು; ಕಾಗಿನೆರೆ ದೃಶ್ಯ ವೈರಲ್

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಧಾನಿ ಮೋದಿ, ರೈಲ್ವೆ  ಸಚಿವ ಅಶ್ವಿನಿ ವೈಷ್ಣವ್ ಗಮನ ಸೆಳೆದ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಸೋಮವಾರಪೇಟೆ: ಪಶ್ಚಿಮಘಟ್ಟದ…

20 mins ago

ಕೋಟೆ ಟಿಎಪಿಸಿಎಂಎಸ್ ಚುನಾವಣೆಗೆ ಕೊನೆಗೂ ದಿನಾಂಕ ನಿಗದಿ

ಮಂಜು ಕೋಟೆ ಗುರುವಾರ ಚುನಾವಣೆ: ಅಧಿಕಾರ ಹಿಡಿಯಲು ಪಕ್ಷಗಳ ಪೈಪೋಟಿ; ಜನರಲ್ಲಿ ಕುತೂಹಲ ಹೆಚ್.ಡಿ.ಕೋಟೆ: ಬಿಜೆಪಿ-ಜಾ.ದಳ ಮೈತ್ರಿ ಮತ್ತು ಕಾಂಗ್ರೆಸ್…

27 mins ago