Andolana originals

ಕೋರ್ಟ್ ಮೆಟ್ಟಿಲೇರಿದ್ದ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ತೆರೆ

ಮಂಜು ಕೋಟೆ

ಕೋಟೆ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷರಾಗಿ ಮೊಳಿಯೂರು ಆನಂದ್ ಮುಂದುವರಿಕೆಗೆ ನ್ಯಾಯಾಲಯದ ತೀರ್ಪು

ಎಚ್.ಡಿ.ಕೋಟೆ: ತಾಲ್ಲೂಕು ಕುರುಬ ಸಮಾಜದಲ್ಲಿ ಸಂಘದ ಅಧ್ಯಕ್ಷರ ವಿಚಾರವಾಗಿ ಒಂದು ವರ್ಷದಿಂದ ಮೊಳಿಯೂರು ಆನಂದ್ ಮತ್ತು ಕ್ಯಾತನಹಳ್ಳಿ ಮಾಲೇಗೌಡರವರ ಗುಂಪುಗಳ ನಡುವೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಜಿಲ್ಲಾ ನಿಬಂಧಕರು, ನ್ಯಾಯಾಲಯದ ಮುಖಾಂತರ ಸಮಾಜದ ಅಧ್ಯಕ್ಷರು ಮತ್ತು ಕನಕ ಭವನದ ಗೊಂದಲಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮೂಲಕ ಸಂಘರ್ಷಕ್ಕೆ ತೆರೆ ಎಳೆದಿದ್ದಾರೆ.

ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಮತ್ತು ಕನಕ ಭವನದ ನಿರ್ವಹಣೆಗೆ ಸಂಬಂಽಸಿದಂತೆ ಎರಡು ಗುಂಪುಗಳ ನಡುವೆ ತೀವ್ರ ಸಂಘರ್ಷ ಎದುರಾಗಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದವು. ಮುಖ್ಯಮಂತ್ರಿಗಳ ಆಪ್ತರಾಗಿರುವ ಮೊಳೆಯೂರು ಆನಂದ್ ಸಮಾಜದ ಅಧ್ಯಕ್ಷರಾಗಿ ಮುಂದುವರಿಯಲಿದ್ದು, ಜ.೩೦ರಂದು ಜಿಲ್ಲಾ ನಿಬಂಧಕರು, ಸಹಕಾರ ಸಂಘಗಳ ನ್ಯಾಯಾಲಯದಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಬಿ.ಆನಂದ್‌ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಗೊಂದಲಕ್ಕೆ ತೆರೆ ಬಿದ್ದಿದೆ.

೨೦೨೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕುರುಬ ಸಂಘದ ಅಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ಹಾಗೂ ತಾಲ್ಲೂಕು ಸಮಾಜದ ಮುಖಂಡರುಗಳ ಸಮ್ಮುಖದಲ್ಲಿ ಮೊಳೆಯೂರು ಆನಂದ್‌ರನ್ನು ಸಮಾಜದ ಅಧ್ಯಕ್ಷರೆಂದು ಆಯ್ಕೆ ಮಾಡಿದ್ದು, ನಂತರ ಸಂಘವನ್ನು ನವೀಕರಣ ಮಾಡಿಕೊಂಡು ಕನಕ ಭವನದಲ್ಲಿ ಮೂಲ ಸೌಕರ್ಯಗಳಿಲ್ಲದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲು ಕೆಲವರ ಸಹಕಾರದಿಂದ ಮುಂದಾಗಿದ್ದರು.

ಸಮಾಜದ ಎರಡು ಬಣಗಳ ನಡುವೆ ಕನಕ ಭವನದ ಖರ್ಚು ವೆಚ್ಚ, ಕಾಮಗಾರಿಗಳು ಮತ್ತು ಅಧ್ಯಕ್ಷರ ವಿಚಾರವಾಗಿ ಮತ್ತಷ್ಟು ಸಂಘರ್ಷ ಎದುರಾಗಿ ೨೦೨೫ರ ಫೆಬ್ರವರಿಯಲ್ಲಿ ಕನಕ ಭವನದ ಮುಂಭಾಗದಲ್ಲಿ ಸಮಾಜದ ಉಪಾಧ್ಯಕ್ಷರಾದ ವೀರೇಗೌಡ ಮತ್ತು ಶಿರಮಳ್ಳಿ ಚಿಕ್ಕಣ್ಣ, ಸಿಂಡನಹಳ್ಳಿ ಯತೀಶ್ ಕುಮಾರ್ ಹಾಗೂ ಅನೇಕರು ಸಭೆ ನಡೆಸಿ ಅಧ್ಯಕ್ಷರಾದ ಆನಂದ್ ಸೇರಿದಂತೆ ಇನ್ನಿತರರನ್ನು ಪದಚ್ಯುತಿಗೊಳಿಸಿ ಕ್ಯಾತನಹಳ್ಳಿ ಮಾಲೇಗೌಡರನ್ನು ಸಮಾಜದ ಅಧ್ಯಕ್ಷರೆಂದು ಘೋಷಣೆ ಮಾಡಿ ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಶಿವಪ್ಪ ಕೋಟೆ ಮತ್ತು ಮಾಲೇಗೌಡರ ಬಣದವರು, ಮೈಸೂರು ಜಿಲ್ಲಾ ನಿಬಂಧಕರು ಸಹಕಾರ ಸಂಘದ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಪರಿಶೀಲಿಸಿ ವಿಚಾರಣೆ ನಡೆಸಿದ ನ್ಯಾಯಾಧಿಶರು ಮಾಲೇಗೌಡರ ಅರ್ಜಿಗಳನ್ನು ವಜಾಗೊಳಿಸಿ ಹಿಂದೆ ಇದ್ದ ಅಧ್ಯಕ್ಷರಾದ ಆನಂದ್ ಸಂಘದ ಬೈಲಾದ ಪ್ರಕಾರಅಧ್ಯಕ್ಷರೆಂದು ಹಾಗೂ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಿರಮಳ್ಳಿ ಚಿಕ್ಕಣ್ಣ ಹಾಗೂಖಜಾಂಚಿ ಯತೀಶ್ ಕುಮಾರ್ ಇವರುಗಳಹುದ್ದೆಗಳನ್ನು ರದ್ದುಗೊಳಿಸಿ ಸಮಾಜದ ಪ್ರಧಾನ  ಕಾರ್ಯದರ್ಶಿಯಾಗಿ ಮಹದೇವೇಗೌಡ, ಖಜಾಂಚಿಯಾಗಿ ಬೈಪಾಸ್ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನಿಬಂಧಕರು, ಜಿಲ್ಲಾ ಸಹಕಾರ ಸಂಘದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

” ಸಂಘದ ಮತ್ತುಸಮುದಾಯದಸಾವಿರಾರು ಜನರುನಡೆಸಿದ ವಿಶೇಷ ಮಹಾಸಭೆಯ ನಿರ್ಣಯವನ್ನೇ ಕೆಲವರ ಪ್ರಭಾವದಿಂದ ನ್ಯಾಯಾಲಯದ ಮುಖಾಂತರ ನಮಗೆ ಸೋಲು ಮಾಡಿಸಿರಬಹುದು. ಮುಂದಿನ ದಿನಗಳಲ್ಲಿ ಸಮುದಾಯದ ಪರವಾಗಿ ನ್ಯಾಯ ಸಿಗಲಿದೆ.”

 -ಕ್ಯಾತನಹಳ್ಳಿ ಮಾಲೇಗೌಡ, ಮಾಜಿ ಅಧ್ಯಕ್ಷ 

” ಸಮಾಜದ ಮತ್ತು ಕನಕ ಭವನದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನ್ಯಾಯಾಲಯದ ಆದೇಶದಂತೆ ಸಂಘದ ಅಧ್ಯಕ್ಷನಾಗಿ ಮುಂದುವರಿಯುತ್ತೇನೆ. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಸತ್ಯಕ್ಕೆ ಜಯ ಸಿಗಲಿದೆ. ಎಲ್ಲರೂ ಒಗ್ಗಟ್ಟಿನಿಂದ ಸಮಾಜ ಕಟ್ಟುವ ಕೆಲಸ ಮಾಡೋಣ.”

 – ಮೊಳೆಯೂರು ಆನಂದ್, ಅಧ್ಯಕ್ಷರು, ತಾಲ್ಲೂಕು ಕುರುಬ ಸಮಾಜ

 

 

ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

9 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

9 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

11 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

11 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

16 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

16 hours ago