ಆಂದೋಲನ 50

ಗಿಡಗಂಟಿಗಳ ನಡುವೆ ಮುಚ್ಚಿ ಹೋಗಿದೆ ಪಾರಂಪರಿಕ ಸೇತುವೆ

ಮೈಸೂರು-ನಂಜನಗೂಡು ರಸ್ತೆಗೆ ಅಡ್ಡವಾಗಿ ಕಪಿಲಾ ನದಿಗೆ ನಿರ್ಮಿಸಲಾದ ರಾಜ್ಯದ ಅತ್ಯಂತ ಪುರಾತನವಾದ ಸೇತುವೆ ನಂಜನಗೂಡಿನ ಹಿರಿಮೆಯನ್ನು ಹೆಚ್ಚಿಸಿದೆ. ೧೭೩೫ ರಲ್ಲಿ ನಿರ್ಮಿಸಿದ ದಾಖಲೆ ಇರುವ ಈ ಸೇತುವೆ ರಾಜ್ಯದ ಅತ್ಯಂತ ಹಳೆಯ ಸೇತುವೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಆಧುನಿಕ ಸೇತುವೆಗಳು ಲೋಕಾರ್ಪಣೆಯಾದ ಕೆಲವರ್ಷಗಳಲ್ಲೇ ನೆಲಕಚ್ಚುವ ಸ್ಥಿತಿಯನ್ನು ಕಾಣುತ್ತಿರುವ ಈ ಕಾಲದಲ್ಲಿ ನಂಜನಗೂಡಿನ ಕಪಿಲಾ ಸೇತುವೆ ಈಗಲೂ ಸಾಕಷ್ಟು ಭದ್ರವಾಗಿಯೇ ಇ ದೆಎಂಬುದು ರಾಜ್ಯಕ್ಕೊಂದು ಹೆಮ್ಮೆಯ ವಿಷಯವಾಗಿದೆ. ಪ್ರಾರಂಭದಲ್ಲಿ ಎತ್ತಿನ ಗಾಡಿ, ಕುದುರೆ ಗಾಡಿಗಳ ಸಂಚಾರಕ್ಕಾಗಿ ಎಂಬಂತಾಗಿ ದ ಈ ಸೇತುವೆಯಲ್ಲಿ ೧೯ನೇ ಶತಮಾನ ದಲ್ಲಿ ಮೋಟಾರು ವಾಹನಗಳು ಸಂಚರಿಸಲಾರಂಭಿಸಿದ್ದವು.

ಶತಮಾನಗಳ ಹಿಂದೆೆಯೇ ನಂಜನಗೂಡಿಗೆ ರೈಲು ಸಂಪರ್ಕ ಕಲ್ಪಿತವಾದಾಗ ಈ ಸೇತುವೆಯಲ್ಲಿ ಮೋಟಾರು ಹಾಗೂ ರೈಲುಗಳೆರಡರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಮೀಟರ್‌ ಗೇಜಿ ನಿಂದ ಬ್ರಾಡ್‌ ಗೇಜಾಗಿ ಇಲ್ಲಿನ ರೈಲು ಬದಲಾಗುವವರೆಗೂ (೨೦೦೮) ಇದೇ ಸೇತುವೆ ಮೇಲೆ ರೈಲು ಸರಾಗವಾಗಿ ಸಂಚರಿಸುತ್ತಿತ್ತು. ಮೈಸೂರು- ನಂಜನಗೂಡು ನಡುವೆ ಸುಗಮ ಸಂಚಾರಕ್ಕಾಗಿ ದಳವಾಯಿ ದೇವರಾಜ ಎನ್ನುವವರು ಬೆಲ್ಲ, ಸುಣ್ಣ ದ ಗಾರೆ ಹಾಗೂ ಇಟ್ಟಿಗೆಗಳಿಂದ ಈ ಬಲಿಷ್ಠ ಸೇತುವೆಯನ್ನು ೧೭೩೫ ರಲ್ಲಿ ನಿರ್ಮಿಸಿ ದರು. ಸುಮಾರು ೨೭೩ ವರ್ಷಗಳ ಕಾಲ ಸಂಚಾರ ದ ವ್ಯವಸ್ಥೆಗೆ ಸಾಕ್ಷಿಯಾಗಿ ಈಗ ೨೮೬ ವರ್ಷ ಕಳೆದರೂ ಸಾಕಷ್ಟು ಗಟ್ಟಿಯಾಗಿ ಇರುವ ಈ ಸೇತುವೆ ಅಪರೂಪದ ವಾಸ್ತು ಶೈಲಿಯಿಂದ ಕೂಡಿದ್ದು ಅದನ್ನು ನಾವೀಗ ಉಳಿಸಿಕೊಳ್ಳ ಬೇಕಿದೆ. ಈಸ್ಟ್‌ ಇಂಡಿಯಾ ಕಂಪನಿಯ ರಾಯಭಾರಿ ಡ್ಯಾನೀಷ್‌ ರೇವ್‌ ಎಂಬವರು ಕಪಿಲಾ ನದಿಯಾ ಈ ಸೇತುವೆ ಕುರಿತು ೧೭೭೯ ಆಗಸ್ಟ್‌ ೨೩ ರಂದು ದಾಖಲಿಸಿದ್ದಾರೆ.

೧೦ ಅಡಿ ವಿಸ್ತಾರದ ಗೋಥಿಕ್‌ ಶೈಲಿಯ ಇತಿಹಾಸ ಹೊಂದಿರುವ ಕಮಾನುಗಳ ಸರಣಿಯಿಂದ ಕೂಡಿದ ಈ ಸೇತುವೆ ೮ ಅಡಿ ಅಗಲದ ಮಧ್ಯಸ್ಥಿಕೆಯ ಬೃಹತ್ತಾದ ಸ್ತಂಭಗಳನ್ನು ಹೊಂದಿದೆ. ಆರ್ಚ್‌ ಕ್ರೈಸ್ಟ್‌ ಮೇಲೆ ೫ ಅಡಿಗಳಿಗಿಂತ ಹೆಚ್ಚು ಅಗಲದ ಅಡಿಪಾಯದ ಕಲ್ಲಿನ ಸ್ತರಗಳ ಮೇಲೆ ಇದನ್ನು ನಿಲ್ಲಿಸಲಾಗಿದೆ. ಮೂರು ಶತಮಾನಗಳ ಇತಿಹಾಸ ಹೊಂದಿರುವ ಈ ಸೇತುವೆಮ ಕಪಿಲೆಯಲ್ಲಿ ಬಂದ ಪ್ರವಾಹಗಳಿಗೆ ಜಗ್ಗದೆ ಅಳುಕದೆ ನಮ್ಮ ಮುಂದೆ ನಿಂತಿರುವುದೇ ನಮ್ಮವರ ಅಂದಿನ ಕಾಲದ ತಾಂತ್ರಿಕತೆಗೆ ಸಾಕ್ಷಿಯಾಗಿದೆ.

andolana

Recent Posts

ದಸರಾ ಚಿತ್ರೋತ್ಸವ ರದ್ದಾಗದಿರಲಿ

ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…

4 hours ago

ಚಲನೆ ಕೇವಲ ವ್ಯಾಯಾಮವಲ್ಲ ಆರೋಗ್ಯದ ಶಕ್ತಿ

ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…

4 hours ago

ಒಂದು ಸೈನ್ಯದ ಆತ್ಮಾಹುತಿ ತಡೆದಿದ್ದರು ಅರಸು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…

4 hours ago

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

15 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

16 hours ago