ಮೈಸೂರು : ರಾಜ್ಯದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ರಾಜ್ಯದಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಜಲಾಶಯಗಳಲ್ಲಿ ಪ್ರತಿ ದಿನವೂ ಕೂಡ ನೀರಿನ ಮಟ್ಟ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ಜಲಾಶಯ ಎಂದೆನಿಸಿರುವ ಕೆ ಆರ್ ಎಸ್ ( ಕೃಷ್ಣ ರಾಜ ಸಾಗರ) ಹಾಗೂ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಇಂತಿದೆ.
ಕೆ ಆರ್ ಎಸ್
ಗರಿಷ್ಠ ನೀರಿನ ಮಟ್ಟ – 124.80 ಅಡಿ
ಇಂದಿನ ನೀರಿನ ಮಟ್ಟ – 100.80 ಅಡಿ
ಒಳ ಹರಿವಿನ ಪ್ರಮಾಣ – 1,686 ಕ್ಯೂ
ಹೊರ ಹರಿವಿನ ಪ್ರಮಾಣ – 4,156 ಕ್ಯೂ
ಕಬಿನಿ
ಗರಿಷ್ಠ ನೀರಿನ ಮಟ್ಟ – 2,284 ಅಡಿ
ಇಂದಿನ ನೀರಿನ ಮಟ್ಟ – 2,275.34 ಅಡಿ
ಒಳ ಹರಿವಿನ ಪ್ರಮಾಣ – 166 ಕ್ಯೂ
ಹೊರ ಹರಿವಿನ ಪ್ರಮಾಣ – 800 ಕ್ಯೂ
ಹಾರಂಗಿ
ಗರಿಷ್ಠ ನೀರಿನ ಮಟ್ಟ – 2859.00 ಅಡಿ
ಇಂದಿನ ನೀರಿನ ಮಟ್ಟ – 2,847.57 ಅಡಿ
ಒಳ ಹರಿವಿನ ಪ್ರಮಾಣ – 130 ಕ್ಯೂ
ಹೊರ ಹರಿವಿನ ಪ್ರಮಾಣ – 1,800 ಕ್ಯೂ
ಹೇಮಾವತಿ
ಗರಿಷ್ಠ ನೀರಿನ ಮಟ್ಟ – 2922.00 ಅಡಿ
ಇಂದಿನ ನೀರಿನ ಮಟ್ಟ – 2894.00 ಅಡಿ
ಒಳ ಹರಿವಿನ ಪ್ರಮಾಣ – 403 ಕ್ಯೂ
ಹೊರ ಹರಿವಿನ ಪ್ರಮಾಣ – 1,340 ಕ್ಯೂ
ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ತೀರದ ಜಿಲ್ಲೆಗಳಾಗಿರುವ ಉತ್ತರ ಕನ್ನಡ,ದಕ್ಷಿಣ ಕನ್ನಡ, ಹಾಗೂ ಉಡುಪಿ,ಮಲೆನಾಡು ಭಾಗದಲ್ಲಿ ಸಾಧಾರಣ ಮಾಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…