ಬೆಂಗಳೂರು: ರಾಜ್ಯ ಸರ್ಕಾರ ನಿಗಮ-ಮಂಡಳಿಗಳ ಅಧ್ಯಕ್ಷರನ್ನಾಗಿ 36 ಕಾಂಗ್ರೆಸ್ ಶಾಸಕರನ್ನು ಮೊದಲ ಪಟ್ಟಿಯಲ್ಲಿ ನೇಮಿಸಿದ ಬೆನ್ನಲ್ಲೇ ಇದೀಗ 34 ಜನ ಕೈ ಕಾರ್ಯಕರ್ತರನು ಒಳಗೊಂಡ ಎರಡನೇ ಪಟ್ಟಿಯನ್ನು ಸಿದ್ದಪಡಿಸಿದ್ದು, ಒಂದೆರೆಡು ದಿನಗಳಲ್ಲಿ ಯಾವೆಲ್ಲಾ ಕೈ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂಬ ಬಗ್ಗೆ ಅಧಸೂಚನೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ರಾತ್ರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ಒಪ್ಪಿಗೆ ನೀಡಿರುವ 34 ಕಾರ್ಯಕರ್ತರಲ್ಲಿ ಯಾರಿಗೆ ಯಾವ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇವರಲ್ಲದರ ನೆಡುವೆ, ನಿಗಮ-ಮಂಡಳಿಗಳ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದೆ.
ಈ ಪ್ರಕಾರ ಕಾಂತಾ ನಾಯಕ್, ವಿನೋದ್ ಎಸ್ ಅಸೂಟಿ, ಮುಂಡರಗಿ ನಾಗರಾಜ್, ಡಾ. ಅಂಶುಮಂಥ್, ಬಿ.ಎಚ್. ಹರೀಶ, , ಜೆ.ಎಸ್. ಆಂಜನೇಯುಲು, ಡಾ. ಬಿ. ಯೋಗೇಶ ಬಾಬು, ಡಾ.ಎಚ್ ಕೃಷ್ಣ, ಮರಿಗೌಡ, ದೇವೀಂದ್ರಪ್ಪ ಮರ್ತೂರು, ರಾಜಶೇಖರ್ ರಾಮಸ್ವಾಮಿ, ಕೆ.ಮರೀಗೌಡ, ಜಯಣ್ಣ, ಎಸ್ ಮನೋಹರ್, ಅಯ್ಯೂಬ್ ಖಾನ್, ಮಮತಾ ಗುಟ್ಟಿ, ಜಿ. ಪಲ್ಲವಿ, ಎಸ್.ಇ ಸುಧೀಂದ್ರ, ಡಾ. ನಾಗಲಕ್ಷ್ಮೀ ಚೌಧರಿ, ಎಚ್.ಎಸ್. ಸುಂದರೇಶ್, ಆರ್.ಎಂ ಮಂಜುನಾಥ್ ಗೌಡ, ಜಯಣ್ಣ, ಸಂಪತ್ ರಾಜ್, ಸವಿತಾ ರಘು, ಪದ್ಮಾವತಿ, ಶಾಕಿರ್ ಸನದಿ, ಸರೋವರ ಶ್ರೀನಿವಾಸ್, ಸೋಮಣ್ಣ ಬೇವಿರಮರದ್, ಬಿ. ಪುಷ್ಪ ಅಮರನಾಥ್, ಮಹಬೂಬ್ ಪಾಷ, ಕೀರ್ತಿ ಗಣೇಶ್, ಮಝರ್ ಖಾನ್, ಲಲಿತ್ ರಾಘವ್, ಜಿ.ಎಸ್ ಮಂಜುನಾಥ್ ಅವರಿಗೆ ಮಂಡಳಿ ಅಧ್ಯಕ್ಷರ ಸ್ಥಾನ ಖಚಿತ ಎಂದಯ ಹೇಳಲಾಗುತ್ತಿದೆ.
ಸಿದ್ದಾಪುರ: ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ 51ನೇ ವರ್ಷದ ಹಾಗೂ ಭಗವತಿ ದೇವಾಲಯದ 25ನೇ ವಾರ್ಷಿಕೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮೂಗೆಗೌಡದೊಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಜೋಳದ ಮೆದೆ…
ಸಿದ್ದಾಪುರ: ನಿಷೇದಿತ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಇಲ್ಲಿನ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ…
ಟಿ.ನರಸೀಪುರ: ಟಿ.ನರಸೀಪುರದಲ್ಲಿರುವ ಕೆಎಸ್‌ಐಸಿ ಫಿಲೇಚರ್ ಫ್ಯಾಕ್ಟರಿ ಆವರಣದ ಐದು ಎಕರೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದೆ. ಇಂದು…
ನವದೆಹಲಿ: ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ಕೇರಳಂ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ…