ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬಂಧನವಾಗಿ 20 ದಿನಗಳೇ ಕಳೆದಿವೆ. ಹೀಗಿದ್ದರೂ ಕನ್ನಡ ಚಿತ್ರರಂಗದ ಹಲವರು ಈವರೆಗೆ ದರ್ಶನ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇಪ್ಪತ್ತು ದಿನಗಳ ಬಳಿಕೆ ಇದೇ ಮೊದಲ ಬಾರಿಗೆ ದರ್ಶನ್ ತಾಯಿ ಎಂದೇ ಪ್ರಖ್ಯಾತಿಯಾಗಿರುವ ಸುಮಲತಾ ಅಂಬರೀಶ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ಇಂದು (ಜುಲೈ. 4) ಮೊದಲ ಬಾರಿಗೆ ತಮ್ಮ ಮೊದಲ ಪುತ್ರ ದರ್ಶನ್ ಬಗ್ಗೆ ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮಾತನಾಡಿದ್ದಾರೆ. ದರ್ಶನ್ ಒಬ್ಬ ಜನಸ್ನೇಹಿ ವ್ಯಕ್ತಿಯಾಗಿದ್ದು, ಈ ಕೊಲೆ ಮಾಡಿಲ್ಲ ಎಂದು ಹೇಳಿದ್ದಾರೆ.
ಈ ಪ್ರಕರಣ ಸಂಬಂಧ ಮಾತನಾಡಿರುವ ಅವರು, ಅವನು ನನಗೆ ಯಾವತ್ತಿಗು ಮೊದಲನೇ ಮಗನೇ. ಪೊಲೀಸರ ಬಳಿಯಿರುವ ಮಾಹಿತಿ ಅಥವಾ ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿರುವ ಬಗ್ಗೆ ನನ್ನ ಬಳಿ ಮಾಹಿಯಿಲ್ಲ. ಈ ಬಗ್ಗೆ ನಾನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಈ ವಿಚಾರ ಕೋರ್ಟ್‌ನಲ್ಲಿರುವುದರಿಂದ ಈ ಬಗ್ಗೆ ಮಾತನಾಡಲು ನಮಗೆ ಯಾವುದೇ ರೈಟ್ಸ್ ಇಲ್ಲ. ಕಾನೂನಿಗೆ ನಾನು ಗೌರವ ನೀಡುತ್ತೇನೆ. ಅದು ಅದರ ಕೆಲಸವನ್ನು ಮಾಡುತ್ತದೆ ಅದಕ್ಕಿಂತ ಇಲ್ಲಿ ಯಾರೂ ದೊಡ್ಡವರಿಲ್ಲ.
ದರ್ಶನ್ ಒಬ್ಬ ಜನಸ್ನೇಹಿ ನಾಯಕ. ನನ್ನ ಚುನಾವಣೆಯಲ್ಲಿಯೇ ದರ್ಶನ್ ವ್ಯಕ್ತಿತ್ವವನ್ನು ನೋಡಿದ್ದೀರಿ ಆತ ಎಂದಿಗೂ ಯಾರಿಗೂ ಕೆಡುಕನ್ನು ಬಯಸದ ವ್ಯಕ್ತಿಯಾಗಿದ್ದು, ದರ್ಶನ್ ಅವರನ್ನು ನಾವು ಹಾಗೆಯೇ ನೋಡಿದ್ದೇವೆ. ಇನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಯಾವುದೇ ಮಾಹಿತಿಲ್ಲ. ನಾನೊಬ್ಬ ತಾಯಿಯಾಗಿ ದರ್ಶನ್ ಕೊಲೆ ಮಾಡಿಲ್ಲ ಎಂದಷ್ಟೆ ಹೇಳಬಲ್ಲೆ. ನನಗೆ ಅನಿಸಿದ್ದನ್ನು ಹಂಚಿಕೊಂಡಿದ್ದೇನೆ ಎಂದು ಸುಮಲತಾ ಹೇಳಿದರು.
ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…
ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…