ಬೆಳಗಾವಿ: 2025ರ ಫೆಬ್ರವರಿ ತಿಂಗಳ ಕೊನೆಯವರೆಗೆ ಪ್ರೌಢಶಾಲಾ ಸಹ ಶಿಕ್ಷಕರ ಬಡ್ತಿ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ವಿ ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದರು. ಪ್ರೌಢ ಶಾಲಾ ಸಹ ಶಿಕ್ಷಕರು ಬಹು ದಿನಗಳಿಂದ ಬಡ್ತಿಯ ಬಗ್ಗೆ ಆಗ್ರಹಿಸುತ್ತಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸಚಿವರು, ಮೊದಲು ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ, ನಂತರ ತಾತ್ಕಾಲಿಕ ಪಟ್ಟಿ ಪ್ರಕಟಿಸುತ್ತೇವೆ. ಆಕ್ಷೇಪಣೆಗಳ ಸಲ್ಲಿಕೆಯ ನಂತರ ಅವುಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಇದಾದ ಮೇಲೆ ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಈಗಾಗಲೇ 2013ರ ಸಾಲಿನವರಿಗೆ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. 2024ರ ಮಾರ್ಚ್‌ನಲ್ಲಿ ಜೇಷ್ಠತಾ ಪಟ್ಟಿ ತಯಾರಿಕೆ ಸಂಬಂಧ ಮಾರ್ಗದರ್ಶನ ಕೋರಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೀಡಿರುವ ಅಭಿಪ್ರಾಯದಂತೆ ನಾಲ್ಕು ಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಶಿಕ್ಷಕರ ಜೇಷ್ಠತಾ ಪಟ್ಟಿ ಪರಿಶೀಲಿಸಿ ನಂತರ ಅಂತಿಮ ರಾಜ್ಯ ಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…
ಮೈಸೂರು: ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…
ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…
ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…
ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು " ನಾನು…
ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…