Andolana originals

ಚಾ.ನಗರ ವಿವಿಗೆ ಅತಿಥಿ ಅಧ್ಯಾಪಕರೇ ಆಧಾರ!

ಚಾಮರಾಜನಗರ ವಿವಿ ಪ್ರಾರಂಭವಾಗಿ ೩ ವರ್ಷಗಳನ್ನು ಪೂರೈಸಿದೆ. ಈ ಬಾರಿ ಪ್ರಪ್ರಥಮ ಘಟಿಕೋತ್ಸವದ ಸಂಭ್ರಮದಲ್ಲಿದೆ. ಆದರೆ ಇನ್ನೂ ಅತಿಥಿ ಅಧ್ಯಾಪಕರು, ಹೊರಗುತ್ತಿಗೆ ನೌಕರರಿಂದಲೇ ವಿವಿ ಮುನ್ನಡೆಯುತ್ತಿದೆ.

೨೦೨೩ರಲ್ಲಿ ಸ್ವತಂತ್ರ ಚಾ.ನಗರ ವಿವಿ ಸ್ಥಾಪನೆಯಾಯಿತು. ಪ್ರೊ.ಎಂ.ಆರ್.ಗಂಗಾಧರ್ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಯಲ್ಲಿ ಬೆರಳೆಣಿಕೆ ಮಂದಿ ಬಿಟ್ಟರೆ, ಹೊರಗುತ್ತಿಗೆಯಡಿ ೯೦ ಮಂದಿ ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲಾ ೬೦ ಬೋಧಕರು ಅತಿಥಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಗೆ ಮಂಜೂರಾಗಿರುವ ಬೋಧಕರ ಹುದ್ದೆಗಳ ಸಂಖ್ಯೆ ೩೬. ಅರೆಕಾಲಿಕ ಅಧ್ಯಾಪಕರ ನೇಮ ಕಾತಿಯ ಕಾರಣದಿಂದಾಗಿ ಮಂಜೂರಾತಿ ಹುದ್ದೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಅಧ್ಯಾಪಕರಿದ್ದಾರೆ!

ಚಾ.ನಗರ ವಿವಿಯಿಂದ ಜಿಲ್ಲೆಯ ಬಡವರ್ಗದವರಿಗೆ, ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಹಾಸ್ಟೆಲ್ ಇರುವುದರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಓದುವವರ ಸಂಖ್ಯೆ ಹೆಚ್ಚಳವಾಗಿದೆ. ಹೆಣ್ಣು ಮಕ್ಕಳನ್ನು ಹೆಚ್ಚಿನ ಜನರು ವಿವಿಧ ಕಾರಣದಿಂದ ಮೈಸೂರಿಗೆ ಕಳುಹಿಸುತ್ತಿರಲಿಲ್ಲ. ಹಾಗಾಗಿ ಬಹಳಷ್ಟು ಹೆಣ್ಣು ಮಕ್ಕಳಿಗೆ ಪದವಿ ಶಿಕ್ಷಣ ಮೊಟಕಾಗುತಿತ್ತು. ಈಗ ಸಮಸ್ಯೆ ಇಲ್ಲ ಎನ್ನುತ್ತಾರೆ ಕುಲಪತಿ ಗಂಗಾಧರ್. ಎಂಬಿಎ, ಎಂಕಾಂ, ಅರ್ಥ ಶಾಸ್ತ್ರ, ಸಮಾಜ ಸೇವೆ ವಿಷಯಗಳಿಗೆ ವಿವಿಯಲ್ಲಿ ಬಹುಬೇಡಿಕೆ ಇದೆ. ಎಂಎ, ಎಂಎಸ್ಸಿ , ಎಂಎಸ್‌ಡಬ್ಲ್ಯು ಸೇರಿದಂತೆ ೧೩ ವಿಷಯವಾರು ವಿಭಾಗಗಳಿಗೆ ಸಂಬಂಽಸಿದಂತೆ ಬೋಧಕರು ಸಮರ್ಪಕವಾಗಿದ್ದಾರೆ ಎಂಬ ತೃಪ್ತಿ ವಿವಿಯದು. ವಿವಿಯ ಕ್ಯಾಂಪಸ್ ೫೪.೨೦ ಎಕರೆ ಭೂ ಪ್ರದೇಶವನ್ನು ಹೊಂದಿದೆ. ಹಿಂದಿನಂತೆ ಈಗ ನೀರಿನ ಸಮಸ್ಯೆ ಇಲ್ಲ. ಸಂಸದ ಸುನಿಲ್ ಬೋಸ್ ಅವರ ನಿರ್ದೇಶನದ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೂರು ಡಿಜಿಟಲ್ ಕ್ಲಾಸ್ ರೂಂಗಳು ಸಿದ್ಧವಾಗಿವೆ. ಕ್ಲಾಸ್ ಮಾಡುವಾಗ ಎಲ್ಲವೂ ರೆಕಾರ್ಡ್ ಆಗುತ್ತದೆ. ಗೈರಾದ ವಿದ್ಯಾರ್ಥಿಗಳು ಅಂದಿನ ಕ್ಲಾಸಿನಲ್ಲಿ ಏನು ಮಾಡಲಾಗಿತ್ತು ಎಂಬುದನ್ನು ಅನುಮತಿ ಪಡೆದು ಬೋಧನೆ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.

ಪ್ರಸಕ್ತ ಸಾಲಿನಿಂದ ಇಲ್ಲಿನ ಸ್ನಾತಕೋತ್ತರ ಪದವೀಧರರಿಗೆ ಈ ಶೈಕ್ಷಣಿಕ ವರ್ಷದಿಂದಲೇ ಪಿಎಚ್.ಡಿ. ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಗಿದೆ. ವಿವಿ ಕಟ್ಟಡದ ಮೂರು ಮಹಡಿಗಳಲ್ಲಿಯೂ ಡೇಟಾ ಸೆಂಟರ್ ಈಗಷ್ಟೇ ಸಿದ್ಧವಾಗಿದೆ. ಎಂಸಿಎ ಸೇರಿದಂತೆ ೧೩ ವಿಭಾಗಗಳಲ್ಲಿ ತಲಾ ಇಬ್ಬರು ಅಸಿಸ್ಟೆಂಟ್ ಪ್ರೊಫೆಸರ್‌ಗಳು ೯ ಅಸೋಸಿಯೇಟ್ ಪ್ರೊಫೆಸರ್‌ಗಳು ಮತ್ತು ಮೂವರು ಪ್ರೊಫೆಸರ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ, ದಕ್ಷಿಣ ಕರ್ನಾಟಕಕ್ಕೆ ಸೇರಿದ ಹೊರಜಿಲ್ಲೆಗಳ ನೂರಕ್ಕೂ ಹೆಚ್ಚು ಸ್ನಾತಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

” ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ೫೬ ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಈಗಾಗಲೇ ತಿಳಿಸಿದೆ. ಆ ಸಂದರ್ಭದಲ್ಲಿ ರಾಜ್ಯದ ವಿವಿಗಳಲ್ಲಿ ಖಾಲಿ ಇರುವ ೧,೫೦೦ ಹುದ್ದೆಗಳಿಗೂ ನೇಮಕಾತಿಯ ಭರವಸೆ ನೀಡಿದೆ. ಆಗನಮ್ಮ ವಿವಿಗೂ ಸಾಕಷ್ಟು ಖಾಯಂ ನೌಕರರು ಬರಲಿದ್ದಾರೆ.”

-ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ಚಾ.ನಗರ ವಿವಿ

” ಚಾಮರಾಜನಗರ ವಿವಿ ಉತ್ತಮವಾಗಿ ನಡೆಯುತ್ತಿದೆ. ಗಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ.”

– ಗುರುರಾಜ್ ಯರಗನಹಳ್ಳಿ, ಅಧ್ಯಾಪಕರು, ಕನ್ನಡ ವಿಭಾಗ

” ಜಿಲ್ಲೆಯಾದ್ಯಂತ ವಿವಿ ವ್ಯಾಪ್ತಿಯಲ್ಲಿ ಒಟ್ಟು ೨೦ ಪದವಿ ಕಾಲೇಜುಗಳಿವೆ. ಈ ವರ್ಷ ಪ್ರಥಮ ಘಟಿಕೋತ್ಸವಕ್ಕೆ ಚಾಮರಾಜನಗರ ವಿವಿ ಸಾಕ್ಷಿಯಾಗಲಿದೆ. ಪ್ರಸ್ತುತ ವಿವಿಯಲ್ಲಿ ೮೦೦ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ೭,೫೦೦ಕ್ಕೂ ಹೆಚ್ಚು ಪದವಿ ವಿದ್ಯಾರ್ಥಿಗಳು ಇದ್ದಾರೆ.”

ಆಂದೋಲನ ಡೆಸ್ಕ್

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

3 hours ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

3 hours ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

4 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

5 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

5 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

8 hours ago