Andolana originals

ಮೈಸೂರು ವಿವಿಗೆ ಹಣಕಾಸು ಮುಗ್ಗಟ್ಟು

ಗಿರೀಶ್ ಹುಣಸೂರು

ರಾಜ್ಯದ ಮೊತ್ತ ಮೊದಲ ವಿವಿ ಎಂಬ ಹೆಗ್ಗಳಿಕೆಯ ಮೈಸೂರು ವಿವಿಗೆ ೧೧೦ ವರ್ಷಗಳಷ್ಟು ಹಿರಿತನವಿದೆ. ಆದರೆ, ಕೆಲವು ವರ್ಷಗಳಿಂದ ವಿವಿಯು ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಏದುಸಿರು ಬಿಡುತ್ತಿದೆ.

ವಿಶ್ವವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ)ದ ಅಭಿಪ್ರಾಯದಂತೆ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಹಾಗೂ ಸ್ನಾತಕೋತ್ತರ ಪದವಿಯ ಪ್ರಗತಿಗಾಗಿ ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ವಿವಿ ತೆರೆಯಬೇಕೆಂಬ ನೀತಿಗೆ ಅನು ಗುಣವಾಗಿ ೨೦೨೦ರಲ್ಲಿ ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ವಿವಿಗಳು ಸ್ಥಾಪನೆಯಾದ ಪರಿಣಾಮವಾಗಿ ವಿವಿಗೆ ದುಸ್ಥಿತಿ ಎದುರಾಗಿದೆ.

ಜಿಲ್ಲೆಗೊಂದು ವಿವಿ ಸ್ಥಾಪನೆಯಿಂದ ಮೈಸೂರು ವಿವಿಯ ವ್ಯಾಪ್ತಿ ಕಿರಿದಾಗಿದ್ದಲ್ಲದೇ ಪ್ರವೇಶಾತಿಯಲ್ಲೂ ಕುಸಿತ ಕಂಡಿದ್ದು, ನಿವೃತ್ತ ನೌಕರರ ಸಂಖ್ಯೆಯಲ್ಲಿನ ಏರಿಕೆಯಿಂದಾಗಿ ಹೆಚ್ಚುತ್ತಿರುವ ಪಿಂಚಣಿ ವೆಚ್ಚ, ಮೊದಲಾದ ಕಾರಣಗಳಿಂದ ವಿವಿಯ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಮೈಸೂರು ವಿವಿಯು ತನ್ನ ವಾರ್ಷಿಕ ವೆಚ್ಚವನ್ನು ಸರಿದೂಗಿಸಲು ಸಾಧ್ಯವಾಗದೆ ಸತತವಾಗಿ ಕೊರತೆ ಬಜೆಟ್ ಮಂಡಿಸುತ್ತಿದೆ. ೨೦೨೬-೨೭ನೇ ಸಾಲಿಗೆ ೫೪ ಕೋಟಿ ರೂ.ಗಳ ಕೊರತೆ ಬಜೆಟ್ ಮಂಡಿಸಿದೆ.

ಪಿಂಚಣಿಯೇ ಹೊರೆ: ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಯೇ ವಿವಿಗೆ ಬಹುದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ನೌಕರರು, ಸಿಬ್ಬಂದಿಯ ವೇತನಕ್ಕಾಗಿಯೇ ವಾರ್ಷಿಕವಾಗಿ ಸುಮಾರು ೧೬೯ ಕೋಟಿ ರೂ. ಮತ್ತು ನಿವೃತ್ತ ನೌಕರರ ಪಿಂಚಣಿಗಾಗಿ ಬರೋಬ್ಬರಿ ೧೫೭ ಕೋಟಿ ರೂ. ವೆಚ್ಚವಾಗುತ್ತಿದೆ. ಆರ್ಥಿಕ ಮುಗ್ಗಟ್ಟು ತೀವ್ರಗೊಂಡು ನಿವೃತ್ತ ನೌಕರರಿಗೆ ಪಿಂಚಣಿ ವಿಳಂಬದಿಂದ ಸಮಸ್ಯೆ ಉಂಟಾಗಿದ್ದಾಗ ಮಧ್ಯಪ್ರವೇಶಿಸಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಅವರು, ಪಿಂಚಣಿ ನೀಡಿಕೆಗಾಗಿ ಅನುದಾನ ಕೊಡಿಸಿದ್ದರು. ಪ್ರಸ್ತುತ ಪರಿಸ್ಥಿತಿ ಸುಧಾರಿಸಲು ವಿಶ್ವವಿದ್ಯಾನಿಲಯದ ಆಡಳಿತ ವರ್ಗ ರಾಜ್ಯ ಸರ್ಕಾರದ ವಿಶೇಷ ಅನುದಾನವನ್ನು ಎದುರು ನೋಡುತ್ತಿದ್ದು, ಜತೆಗೆ ವೆಚ್ಚ ಕಡಿತದಂತಹ ಕ್ರಮಕ್ಕೂ ಚಿಂತನೆ ನಡೆಸಿದೆ.

ಸಂಶೋಧನಾ ಕೇಂದ್ರಗಳು, ೧೩೮ ಹೊರಗುತ್ತಿಗೆ ಸಂಶೋಧನಾ ಕೇಂದ್ರಗಳು, ೮ ತರಬೇತಿ ಕೇಂದ್ರಗಳು, ೨೩ ವಿಶೇಷ ಕಾರ್ಯಕ್ರಮಗಳು ರಾಷ್ಟ್ರೀಯ ಸಹಯೋಗದಲ್ಲಿ ನಡೆದಿವೆ. ೧೧ ವಿಭಾಗಗಳು ರಾಷ್ಟ್ರೀಯ ಸಂಶೋಧನಾ ಸೌಲಭ್ಯ ವನ್ನು ಒಳಗೊಂಡಿವೆ. ೧೫ ಪೀಠಗಳು, ೧೩ ಅನುದಾನಿತ ಘಟಕಗಳು ಇವೆ. ಹಲವು ದೇಶಗಳ ಅನೇಕ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ವಿವಿಯು ೨೦೨೫-೨೬ನೇ ಸಾಲಿನ ಬಜೆಟ್‌ನಲ್ಲಿ ೧೫೭.೫೪ ಕೋಟಿ ರೂ. ಪಿಂಚಣಿ ಅನುದಾನದ ಬೇಡಿಕೆ ಮಂಡಿಸಿದ್ದರೆ, ರಾಜ್ಯ ಸರ್ಕಾರವು ೬೦ ಕೋಟಿ ರೂ. ಮಂಜೂರು ಮಾಡಿದೆ. ಇದರಿಂದ ಉಂಟಾಗಿರುವ ಹಣಕಾಸು ಕೊರತೆ ಬಗ್ಗೆ ಬರೆದ ಪತ್ರಕ್ಕೆ ಉತ್ತರಿಸಿರುವ ರಾಜ್ಯ ಸರ್ಕಾರ, ರಾಜ್ಯದ ಎಲ್ಲಾ ಒಂಬತ್ತು ವಿಶ್ವವಿದ್ಯಾನಿಲಯಗಳಿಗೆ ೧೨.೫೦ ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿದೆ. ಇದರಲ್ಲಿ ೪.೪೪ ಕೋಟಿ ರೂ.ಗಳು ಮೈಸೂರು ವಿವಿಗೆ ಸೇರಿದೆ.

ಹಾಸ್ಟೆಲ್‌ಗೆ ೭ರಿಂದ ೮ ಕೋಟಿ ರೂ. ವೆಚ್ಚ: ಮಾನಸ ಗಂಗೋತ್ರಿಯ ೧೭ ಹಾಸ್ಟೆಲ್‌ಗಳಲ್ಲಿ ೩,೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಹಾಸ್ಟೆಲ್‌ಗಳ ನಿರ್ವಹಣೆ ಮತ್ತು ಆಹಾರಕ್ಕಾಗಿ ೭ರಿಂದ ೮ ಕೋಟಿ ರೂ. ಖರ್ಚಾಗುತ್ತಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಜೈವಿಕ ವೈವಿಧ್ಯತೆ, ಅನ್ವೇಷಣೆ ಮತ್ತು ಸಮರ್ಥನೀಯ ಅಭಿವೃದ್ಧಿಯ ವಿಷಯಗಳಲ್ಲಿನ ಸಂಶೋಧನೆಗಾಗಿ ಮೈಸೂರು ವಿವಿಯನ್ನು ಉತ್ಕೃಷ್ಟತಾ ಸಂಸ್ಥೆಯೆಂದು ಗುರುತಿಸಿ ೧೦೦ ಕೋಟಿ ರೂ. ಅನುದಾನ ನೀಡಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿವಿಗಳು ಹಾಗೂ ಇತರೆ ಉನ್ನತ ಶಿಕ್ಷಣ ಸಂಸ್ಥೆಗಳ ೨೦೨೩- ೨೪ನೇ ಸಾಲಿನ ಮುಂದುವರಿಕೆ ಕಾರ್ಯಕ್ರಮಗಳ ಶೀರ್ಷಿಕೆಯಡಿ ವಿವಿ ಸಿಬ್ಬಂದಿಯ ವೇತನಕ್ಕಾಗಿ ೧೨,೮೦೮ ಲಕ್ಷ ರೂ.ಗಳ ಸಹಾಯಾನುದಾನ ಬಿಡುಗಡೆ ಮಾಡಿದ್ದು, ವಿಶ್ರಾಂತಿ ವೇತನ ಕ್ಕಾಗಿ ೫,೦೦೦ ಲಕ್ಷ ರೂ. ಸಹಾಯಾನುದಾನ ಸೇರಿದಂತೆ ಒಟ್ಟು ೧೭,೮೦೮ ಲಕ್ಷ ರೂ. ಬಿಡುಗಡೆ ಮಾಡಿದೆ. ೨೦೨೬-೨೭ನೇ ಸಾಲಿನ ಬಜೆಟ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿರುವ ೧೦೦ ಕೋಟಿ ರೂ. ಅನುದಾನ ಬರಬೇಕಿದೆ.

ತಾತ್ಕಾಲಿಕ ಉದ್ಯೋಗಿಗಳ ನೇಮಕವೇ ಹೊರೆ: 

೧೯೯೧-೧೯೯೭ ಪ್ರೊ.ಮಾದಯ್ಯ ಅವರು ಕುಲಪತಿ ಆಗಿದ್ದ ಅವಧಿಯಲ್ಲಿ ೭, ೧೯೯೭-೨೦೦೩ ಪ್ರೊ.ಎಸ್. ಎನ್.ಹೆಗ್ಡೆ- ೨೦, ೨೦೦೩-೨೦೦೭ ಪ್ರೊ.ಜೆ.ಶಶಿಧರ ಪ್ರಸಾದ್-೮೫, ೨೦೦೮-೨೦೧೨ ಪ್ರೊ.ವಿ.ಜಿ.ತಳವಾರ್- ೨೦೦, ೨೦೧೩-೨೦೧೭ ಪ್ರೊ.ಕೆ.ಎಸ್.ರಂಗಪ್ಪ – ೪೨೪, ೨೦೧೮-೨೦೨೨ ಪ್ರೊ.ಜಿ.ಹೇಮಂತ ಕುಮಾರ್ ಅವಽಯಲ್ಲಿ ೫೦೩ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಗಾಗಿ ಮೈಸೂರು ವಿವಿಯಲ್ಲಿ ಪ್ರಸ್ತುತ ೧,೨೩೯ ತಾತ್ಕಾಲಿಕ ಉದ್ಯೋಗಿಗಳಿದ್ದಾರೆ.

” ಮೈಸೂರು ವಿವಿ ಎದುರಿ ಸುತ್ತಿರುವ ಆರ್ಥಿಕ ಮುಗ್ಗಟ್ಟಿಗೆ ಸರ್ಕಾರದಿಂದ ಅನು ದಾನ ಕಡಿಮೆಯಾಗಿರುವುದು ಹಾಗೂ ಜಿಲ್ಲೆ ಗೊಂದು ವಿವಿ ಸ್ಥಾಪನೆಯಿಂದ ವ್ಯಾಪ್ತಿ ಕಿರಿದಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಕುಸಿತವಾಗಿರು ವುದು ಕಾರಣವಾಗಿದೆ. ಅಗತ್ಯಕ್ಕಿಂತ ಹೆಚ್ಚು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದು ಹೊರೆಯಾಗಿ ಪರಿಣಮಿಸಿದೆ.

-ಪ್ರೊ.ಶಬ್ಬೀರ್ ಮೊಹಮ್ಮದ್ ಮುಸ್ತಫಾ, ಸಿಂಡಿಕೇಟ್ ಸದಸ್ಯ, ಮೈಸೂರು ವಿವಿ

” ಜಿಲ್ಲೆಗೊಂದು ವಿವಿ ಸ್ಥಾಪನೆ ಆದ ಮೇಲೆ ೩೦೦ಕ್ಕೂ ಹೆಚ್ಚಾಗಿದ್ದ ಸಂಯೋಜಿತ ಕಾಲೇಜುಗಳ ಸಂಖ್ಯೆ ೧೨೦ಕ್ಕೆ ಇಳಿದಿದೆ. ಜತೆಗೆ ವಿಶಾಲವಾದ ಕ್ಯಾಂಪಸ್‌ನ ನಿರ್ವಹಣೆ, ಭದ್ರತೆಗಾಗಿ ನೂರಾರು ಕಾವಲುಗಾರರನ್ನು ನೇಮಕ ಮಾಡಿಕೊಂಡಿರುವುದರಿಂದ ವಿವಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ.”

– ಗೋಕುಲ್ ಗೋವರ್ಧನ್, ಸಿಂಡಿಕೇಟ್ ಸದಸ್ಯ, ಮೈಸೂರು ವಿವಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನೀರು ಸೋರಿಕೆ ತಡೆಗಟ್ಟಿ

ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…

3 hours ago

ಓದುಗರ ಪತ್ರ: ಬದಲಾಗುತ್ತಿದೆ ಚಾತುರ್ಮಾಸ ಪದದ ಅರ್ಥ

ಪ್ರತಿವರ್ಷ ಆಷಾಢ, ಶ್ರಾವಣ ಮಾಸದ ಸಮಯದಲ್ಲಿ ಎಲ್ಲ ಮಠಾಧೀಶರೂ ಚಾತುರ್ಮಾಸ ವ್ರತವನ್ನು ಆಚರಿಸುವುದು ವಾಡಿಕೆ. ಚಾತುರ್ಮಾಸ ಎಂದರೆ ನಾಲ್ಕು ತಿಂಗಳು.…

3 hours ago

ಓದುಗರ ಪತ್ರ: ದಸರಾ ಮಹೋತ್ಸವ ಸರಳವಾಗಿರಲಿ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಿನ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ…

3 hours ago

ಓದುಗರ ಪತ್ರ: ಗೃಹಲಕ್ಷ್ಮಿ: ಅರ್ಹರಿಗೆ ಅನ್ಯಾಯವಾಗದಿರಲಿ

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಆರ್ಥಿಕತೆಗೆ ನವಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ…

3 hours ago

ಎಚ್೧ಎನ್೧: ಕೊಡಗು ಜಿಲ್ಲೆಯಲ್ಲಿ 4 ಪ್ರಕರಣ ದೃಢ

ನವೀನ್ ಡಿಸೋಜ ಶೀತ, ಕೆಮ್ಮು, ಜ್ವರ ಸಂಬಂಧ ೩,೭೬೨ ಪ್ರಕರಣ ದಾಖಲು; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಮನವಿ ಮಡಿಕೇರಿ:…

3 hours ago

ಮುಂಗಾರು ವೈಫಲ್ಯ: ಬಿತ್ತನೆ ಶೇ.15.95ಕ್ಕೆ ಕುಸಿತ

ಮಹಾದೇಶ್ ಎಂ.ಗೌಡ ಹನೂರು: ಕುಡಿಯುವ ನೀರು, ಮೇವಿಗೂ ತೀವ್ರ ಹಾಹಾಕಾರ ಹನೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು,…

4 hours ago