ಬೆಂಗಳೂರು: ಆಹಾರ ಪ್ರಿಯರಿಗೆ ಶಾಕಿಂಗ್ ಸುದ್ದಿ ಎದುರಾಗಿದ್ದು, ಲಕ್ಷಾಂತರ ಭಾರತೀಯರು ಇಷ್ಟಪಡುವ ಐಕಾನಿಕ್ ಮ್ಯಾಗಿ ಶೀಘ್ರದಲ್ಲೇ ದುಬಾರಿಯಾಗಲಿದೆ.
ಈ ನಿರೀಕ್ಷಿತ ಬೆಲೆಯ ಏರಿಕೆಯು ಅಂತರಾಷ್ಟ್ರೀಯ ವ್ಯಾಪಾರ ಸಂಬಂಧಗಳಲ್ಲಿನ ಮಹತ್ವದ ಬೆಳವಣಿಗೆಗೆ ಸಂಬಂಧಿಸಿದೆ.
ಸ್ವಿಟ್ಜರ್ಲೆಂಡ್ ತನ್ನ 1994ರ ಡಬಲ್ ಟ್ಯಾಕ್ಸೇಶನ್ ಅವಾಯ್ಡನ್ಸ್ ಅಗ್ರಿಮೆಂಟ್ ಅಡಿಯಲ್ಲಿ ಭಾರತದೊಂದಿಗೆ ಜನವರಿ.1,2025ರಿಂದ ಜಾರಿಗೆ ಬರುವಂತೆ ಮೋಸ್ಟ್ ಫೇವರ್ಡ್ ನೇಷನ್ ಷರತ್ತನ್ನು ಅಮಾನತುಗೊಳಿಸಲು ನಿರ್ಧರಿಸಿದೆ.
ಈ ನಿರ್ಧಾರವು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ನೆಸ್ಲೆ ಮ್ಯಾಗಿ ಸೇರಿದಂತೆ ಸ್ವಿಸ್ ಕಂಪನಿಗಳಿಗೆ ವೆಚ್ಚವನ್ನು ಹೆಚ್ಚಿಸಲು ಕಾರಣವಾಗಬಹುದು.
ಈ ವಿವಾದದ ಮೂಲ 2023ರ ಭಾರತದ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿದೆ. ಇದು DTAAನಲ್ಲಿರುವ MFN ಷರತ್ತು ಸ್ವಯಂಚಾಲಿತವಾಗಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇತರ ರಾಷ್ಟ್ರಗಳೊಂದಿಗೆ ಭಾರತದ ಒಪ್ಪಂದಗಳ ಆಧಾರದ ಮೇಲೆ 5% ಕಡಿಮೆ ತೆರಿಗೆ ದರವನ್ನು ಕೋರಿದ ನೆಸ್ಲೆ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕಾರ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಜನವರಿಯಿಂದಲೇ ಮ್ಯಾಗಿ ನ್ಯೂಡಲ್ಸ್ ಮತ್ತು ಇತರೆ ನೆಸ್ಲೆ ಉತ್ಪನ್ನಗಳು ಬೆಲೆಯನ್ನು ಹೆಚ್ಚಿಸುತ್ತವೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗು: ಕೊಡಗು ಜಿಲ್ಲೆ ಶನಿವಾರಸಂತೆ ಬಳಿಯ ಗುಡುಗಳಲೆಯಲ್ಲಿ ಸಿಮೆಂಟ್ ತುಂಬಿದ್ದ ಲಾರಿ ಉರುಳಿಬಿದ್ದಿದೆ. ಶನಿವಾರಸಂತೆ–ಅರಕಲಗೂಡು ರಸ್ತೆಯ ಗುಡುಗಳಲೆ ತಿರುವಿನಲ್ಲಿ ಘಟನೆ…
ಕುಶಾಲನಗರ: ದುಬಾರೆ ಆನೆ ಶಿಬಿರದಲ್ಲಿದ್ದ ಸುಮಾರು 19 ವರ್ಷ ಪ್ರಾಯದ ಗಂಡಾನೆಯೊಂದು ಐದು ತಿಂಗಳಿಗೂ ಹೆಚ್ಚು ಕಾಲ ನಿರಂತರ ಚಿಕಿತ್ಸೆ…
ಮೈಸೂರು: ಪ್ರೀತಿಗೆ ನಿರಾಕರಿಸಿದ ಪರಿಣಾಮ ಯುವಕನೋರ್ವ ಯುವತಿಯನ್ನು ತಬ್ಬಿಕೊಂಡು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ವಿಜಯನಗರದ ಬಳಿ…
ಮಂಡ್ಯ: ಮನ್ಮುಲ್ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮನ್ ಮುಲ್ ಅಧ್ಯಕ್ಷ ಶಿವಕುಮಾರ್(ಶಿವಪ್ಪ)…
ಹನೂರು: ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಕ್ಷೇತ್ರದ ಹಲವು ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಲಕ್ಷಾಂತರ ರೂಪಾಯಿ…
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಸ್ತೆ ಬದಿ ನಿಂತಿದ್ದ ಒಂದೂವರೆ ವರ್ಷದ ಪುಟ್ಟ…