ರಾಜ್ಯ

ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನ : ಜು.31 ಕೊನೆ ದಿನ

ಬೆಂಗಳೂರು : ಬದುಕು ಸೆಂಟರ್ ಫಾರ್ ಲೈವಿಹುಡ್ಸ್ ಲರ್ನಿಂಗ್ ಸಂಸ್ಥೆ ವತಿಯಿಂದ ‘ಅಭಿವ್ಯಕ್ತಿ’ ಹೆಸರಿನ 9 ತಿಂಗಳ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರಿನ ಕನಕಪುರ ರಸ್ತೆ ಬಳಿಯ ಬಂಜಾರ ಪಾಳ್ಯದಲ್ಲಿರುವ ಪರಿಸರ ಸ್ನೇಹಿ ಕ್ಯಾಂಪಸ್‌ನಲ್ಲಿ ವಸತಿ ಸಹಿತ (ರೆಸಿಡೆನ್ಸಿಯಲ್) ಕೋರ್ಸ್ ತರಬೇತಿ ನಡೆಯಲಿದೆ. ಪತ್ರಿಕೆ, ಸುದ್ದಿ ವಾಹಿನಿ, ಮನರಂಜನಾ ವಾಹಿನಿ, ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಇರುವ, ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ಯುವಜನರು ಅರ್ಜಿ ಸಲ್ಲಿಸಬಹುದು. ಯುವತಿಯರಿಗೆ ವಿಶೇಷ ಆದ್ಯತೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸ್ ಅವಧಿಯಲ್ಲಿ ಸ್ಕಾಲರ್‌ಶಿಪ್ ನಿಡಲಾಗುತ್ತದೆ.

ಕೋರ್ಸ್‌ನಲ್ಲಿ ವರದಿಗಾರಿಕೆ, ಬರವಣಿಗೆಗೆ ಬೇಕಾದ ದೃಷ್ಟಿಕೋನ, ತಾಂತ್ರಿಕ ಕೌಶಲ್ಯದ ಜೊತೆಗೆ ಪ್ರಾಯೋಗಿಕ ಕಲಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜತೆಗೆ ಕಿರುತೆರೆ-ಹಿರಿತೆರೆಗಳಿಗೆ ಸೃಜನಶೀಲ ಸ್ಕಿಪ್ಟ್ ಬರವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್, ಪೇಜ್ ಡಿಸೈನಿಂಗ್ (ಪ್ರಿಂಟ್ / ವೆಬ್) ಬಗ್ಗೆ ಅನುಭವಿ ತಂತ್ರಜ್ಞರಿಂದ ತರಗತಿಗಳು ಇರಲಿವೆ. ಮೊಬೈಲ್ ಜರ್ನಲಿಸಮ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್, ಆನ್‌ಲೈನ್ ಜರ್ನಲಿಸಮ್‌ನ ಆಧುನಿಕ ತಂತ್ರಜ್ಞಾನದ ಕೌಶಲ್ಯ ಕಲಿಕೆಯ ಜತೆಗೆ ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ವರದಿಗಾರಿಕೆ, ಬರವಣಿಗೆ ಮುಂತಾದ ಕೌಶಲಗಳ ಪ್ರಾಯೋಗಿಕ ಕಲಿಕೆಯನ್ನು ಕೋರ್ಸ್‌ನಲ್ಲಿ ಕಲಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಜು.31 ಕೊನೆಯ ದಿನಾಂಕ. ಆಗಸ್ಟ್ ತಿಂಗಳಿನಲ್ಲಿ ಪ್ರವೇಶ ಪರೀಕ್ಷೆ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬುಹುದು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

4 hours ago

ಓದುಗರ ಪತ್ರ: ಖುಷಿ ಕೊಡುವ ಮಾತುಗಳಷ್ಟೇ ಸ್ಪಂದನೆಯೂ ಮುಖ್ಯ

ಮೈಸೂರು ಮಹಾ ನಗರಪಾಲಿಕೆ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ, ಮೈಸೂರು ಸ್ವಚ್ಛ ನಗರಿಯಾಗಲು ಪೌರ ಕಾರ್ಮಿಕರ…

5 hours ago

ಓದುಗರ ಪತ್ರ: ಬ್ಯಾಂಕ್ ಒಕ್ಕೂಟಗಳಿಗೆ ಜವಾಬ್ದಾರಿ ಇರಲಿ

ಸೆಪ್ಟೆಂಬರ್ ಕೊನೆಯಲ್ಲಿ ಆರ್ಥಿಕ ವರ್ಷದ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯಗೊಳಿಸುವ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬ್ಯಾಂಕ್ ಒಕ್ಕೂಟಗಳು (ಯುಎಫ್ಬಿ) ಮೂರು ದಿನಗಳ…

5 hours ago

ಪ್ರಶಸ್ತಿ ಪ್ರದಾನದಿಂದ ಚಿತ್ರೋತ್ಸವವರೆಗೆ ಹೊಸ ಪಯಣ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೆಹಲಿ ಸಹಜ ವಿಳಾಸವಾಗಿತ್ತು. ದೇಶದ…

5 hours ago

ಜಂಬೂಸವಾರಿಯಲ್ಲಿ ಸ್ತಬ್ಧ ಚಿತ್ರಗಳ ‘ತ್ರಿಸಂಗಮ’

ಕೆ.ಬಿ.ರಮೇಶನಾಯಕ ಕರ್ನಾಟಕ ರಾಜ್ಯದ ಗತವೈಭವ, ದೇಶದ ಅಖಂಡತೆ ಬಿಂಬಿಸುವ ಮಾದರಿಗಳ ಸವಾರಿ ೩೧ ಜಿಲ್ಲೆಗಳ ಬದಲಿಗೆ ಆಯ್ದ ೧೫ ಜಿಲ್ಲೆಗಳ…

5 hours ago