ಬೆಂಗಳೂರು: ಇಸ್ರೇಲ್-ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳ ಸತತ ಕುಸಿತ ಮುಂದುವರೆದಿದೆ.
ಇಂದೂ ಕೂಡ ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. 24 ಕ್ಯಾರೆಟ್‍ನ ಚಿನ್ನ ಗ್ರಾಂಗೆ 595 ರೂ.ನಷ್ಟು ಕುಸಿತವಾಗಿದ್ದರೆ, ಬೆಳ್ಳಿ 1 ಕೆಜಿಗೆ 15 ಸಾವಿರ ರೂ.ಗಳಷ್ಟು ಕುಸಿತವಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 595 ರೂ.ನಷ್ಟು ಇಳಿಕೆಯಾಗಿದ್ದು, 14,002 ರೂ.ಗೆ ತಲುಪಿದೆ. 22 ಕ್ಯಾರೆಟ್‍ನ ಚಿನ್ನ ಪ್ರತಿ ಗ್ರಾಂಗೆ 545 ರೂ.ನಷ್ಟು ಇಳಿಕೆಯಾಗಿದ್ದು, 12,835 ರೂ.ನಷ್ಟಿದೆ.
ಆಭರಣ ಚಿನ್ನವಾದ 18 ಕ್ಯಾರೆಟ್‍ನ ಚಿನ್ನ 446 ರೂ.ಗಳಷ್ಟು ಕಡಿಮೆಯಾಗಿದ್ದು, ಗ್ರಾಂಗೆ 10502 ರೂ.ಗೆ ತಲುಪಿದೆ. ಮಾ.14ರಿಂದ ಇಳಿಕೆಯಾಗುತ್ತಿರುವ ಚಿನ್ನದ ದರವು ಮಾ.17 ರಂದು 24 ಕ್ಯಾರೆಟ್‍ನ ಗ್ರಾಂ ಚಿನ್ನ 66 ರೂ. ಹಾಗೂ 22 ಕ್ಯಾರೆಟ್‍ನ ಚಿನ್ನ ಗ್ರಾಂಗೆ 60 ರೂ. ಏರಿಕೆಯಾಗಿರುವುದನ್ನು ಹೊರತುಪಡಿಸಿದರೆ ನಿರಂತರ ಇಳಿಕೆಯಾಗಿದೆ.
ಅಂದು 24 ಕ್ಯಾರೆಟ್‍ನ ಚಿನ್ನ 15,966 ರೂ.ನಷ್ಟಿತ್ತು. ಇಂದು 14,002 ರೂ.ಗೆ ಇಳಿದಿದ್ದು, 964 ರೂ.ನಷ್ಟು ಇಳಿಕೆಯಾಗಿದೆ. ಅದೇ ರೀತಿ 22 ಕ್ಯಾರೆಟ್‍ನ ಚಿನ್ನ ಮಾ.14 ರಂದು 14,635 ರೂ.ನಷ್ಟಿತ್ತು. ಇಂದು 12,835 ರೂ.ನಷ್ಟಿದೆ. ಸುಮಾರು 1,800 ರೂ.ಗಳಷ್ಟು ಪ್ರತಿ ಗ್ರಾಂಗೆ ಇಳಿಕೆಯಾಗಿರುವುದು ಕಂಡುಬಂದಿದೆ.
ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಬೆಳ್ಳಿಯು ಇಂದು ಪ್ರತಿ ಕೆಜಿಗೆ 15,000 ರೂ.ನಷ್ಟು ಇಳಿಕೆಯಾಗಿದ್ದು, 2,30,000 ರೂ.ಗೆ ತಲುಪಿದೆ. ಚಿನ್ನದಂತೆ ಬೆಳ್ಳಿಯೂ ಸತತವಾಗಿ ಇಳಿಕೆಯಾಗುತ್ತಿದ್ದು, ಮಾ.14ರ ನಂತರ ಇಂದಿನವರೆಗೆ ಇಳಿಕೆಯಾಗಿರುವುದು ಕಂಡುಬಂದಿದೆ. ಆದರೆ ಮಾ.17 ರಂದು 5 ಸಾವಿರದಷ್ಟು ಏರಿಕೆಯಾಗಿತ್ತು. ಮಾ.14 ರಂದು 2,75,000 ರೂ.ಗಳಿದ್ದ ಬೆಳ್ಳಿದರವು ಇಂದು 2,30,000 ರೂ.ಗೆ ಕುಸಿದಿದ್ದು, 9 ದಿನದಲ್ಲಿ 40 ಸಾವಿರ ರೂ.ನಷ್ಟು ಕುಸಿತವಾಗಿದೆ.
ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಅದರ ಪರಿಣಾಮ ಷೇರುಪೇಟೆ ಮೇಲೆ ಉಂಟಾಗುತ್ತಿದೆ. ಜೊತೆಗೆ ಚಿನಿವಾರಪೇಟೆಯಲ್ಲೂ ಕುಸಿತ ಉಂಟಾಗಿದ್ದು, ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿದರಗಳು ಏರಿಕೆಯಾಗುವ ಸಾಧ್ಯತೆ ವಿರಳ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಳ್ಯ ಗ್ರಾಮದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಕಷ್ಟಪಟ್ಟು ಬೆಳೆದಿದ್ದ ತೆಂಗಿನ ಮರ ಸಂಪೂರ್ಣ ನಾಶವಾಗಿರುವುದರಿಂದ…
ಹಾಸನ: ಹಾಸನದ ಅಧಿದೇವತೆ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ಕುರಿತು ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾಹಿತಿ…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕು ಟಿಎಪಿಸಿಎಂಎಸ್‌ನ ಎಂಟು ಜನ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಂಗೀಕಾರ ಮಾಡಲು ಮತ್ತು…
ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…