ರಾಜ್ಯ

ಹಾಡುಹಕ್ಕಿಯ ದಸರಾ ನೆನಪುಗಳು

  • ಸಿರಿ ಮೈಸೂರು

ಆಗೆಲ್ಲಾ ದಸರಾ ಎಂದರೆ ಅದೊಂಥರಾ ಹೇಳಲಾಗದ ವೈಭವ. ಸಂಭ್ರಮಕ್ಕೆ ಮತ್ತೊಂದು ಹೆಸರೇ ದಸರಾ ಅನಿಸುತ್ತಿತ್ತು….
ಹೀಗೆ ಹೇಳುತ್ತಿದ್ದಾಗ ಮೈಸೂರಿನ ಹಾಡುಹಕ್ಕಿ ಹೆಚ್.ಆರ್.ಲೀಲಾವತಿ ಅವರ ಮುಖದಲ್ಲಿ ಮಂದಹಾಸ ಇತ್ತು. ಗತವೈಭವದ ನೆನಪಿನಿಂದ ಮುಖದಲ್ಲಿ ಹೆಮ್ಮೆ ಮೂಡಿತ್ತು. 89ರ ಹರೆಯದಲ್ಲೂ ಚಟುವಟಿಕೆಯಿಂದ ಮನೆಯೆಲ್ಲಾ ಓಡಾಡಿಕೊಂಡು, ಪುಸ್ತಕ ಓದುತ್ತಾ, ಕವನ ಬರೆುಯುತ್ತಾ ಸಮಯ ಕಳೆಯುವ ಇವರು ಇರುವುದು ಮೈಸೂರಿನ ಸರಸ್ವತಿಪುರದಲ್ಲಿ. ತಂದೆ-ತಾಯಿ, ಸಹೋದರರೆಲ್ಲರಿಗೂ ಸಂಗೀತದ ನಂಟು ಇದ್ದ ಕಾರಣ ಲೀಲಾವತಿುಂವರೂ ಏಳನೇ ವಯಸ್ಸಿನಿಂದಲೇ ಸಂಗೀತ ಕಲಿಯಲು ಆರಂಭಿಸಿದರಂತೆ. ಮನೆ ಮುಂದೆ ತಂಬೂರಿ ಹಿಡಿದು ಹಾಡಲು ಬರುತ್ತಿದ್ದ ನೀಲಗಾರ ರಾಮಸ್ವಾಮಿಯವರೇ ಇವರ ಮೊದಲ ಗುರುಗಳು. ಅವರ ಅದ್ಭುತ ಸಂಗೀತವನ್ನು ಕೇಳಿದ ಲೀಲಾವತಿಯವರ ತಂದೆ ಅಠಾಣಾ ರಾಮಣ್ಣನವರು ಅವರನ್ನೇ ಗುರುಗಳನ್ನಾಗಿ ನೇಮಿಸಿದರಂತೆ. ಆಗಿನಿಂದಲೂ ಸಂಗೀತ ಇವರ ಜೀವನದ ಅವಿಭಾಜ್ಯ ಅಂಗ.

ದಸರಾ ಸಂದರ್ಭ ಬಂತೆಂದರೆ ತಾವು ಮೊದಲ ಬಾರಿಗೆ ದಸರಾ ಕಾರ್ಯಕ್ರಮದಲ್ಲಿ ಹಾಡಿದ್ದನ್ನು ನೆನಪು ಮಾಡಿಕೊಂಡು ಪುಳಕಿತರಾಗುತ್ತಾರೆ ಲೀಲಾವತಿಯವರು. ಅದು 1956. ಆ ಸಮುಂದಲ್ಲಿ ಲೀಲಾವತಿಯವರು ದೆಹಲಿಯಲ್ಲಿ ಅಣ್ಣ ಬಾಪು ಸತ್ಯನಾರಾಯಣರ ಮನೆಯಲ್ಲಿದ್ದರು. ಆಗ ಮೈಸೂರಿನಿಂದ ಬಿ.ವಿ.ಕೆ.ಶಾಸ್ತ್ರಿಯವರ ಕರೆ ಬರುತ್ತದೆ. ನಾವು ನಿಮ್ಮ ಹಾಡುಗಳನ್ನು ಆಕಾಶವಾಣಿಯಲ್ಲಿ ಕೇಳಿದ್ದೇವೆ. ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಸುಗಮ ಸಂಗೀತ ಹಾಡಿಸುವ ನಿರ್ಧಾರ ಮಾಡಿದ್ದೇವೆ. ಮಾನ್ಯ ಸಚಿವರಾದ ಬಸವಲಿಂಗಂಯ್ಯನವರು ನಿಮ್ಮಿಂದ ಹಾಡಿಸಲೇಬೇಕೆಂದು ಅಪೇಕ್ಷೆಪಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದೇ ಮೊದಲ ಬಾರಿಗೆ ಟೌನ್‌ಹಾಲ್‌ನಲ್ಲಿ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಆ ಕ್ಷಣವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಮೈಸೂರಿನಂತಹ ಐತಿಹಾಸಿಕ ಸಾಮ್ರಾಜ್ಯದಲ್ಲಿ ಇಷ್ಟು ಮೊದಲುಗಳಿಗೆ ಸಾಕ್ಷಿಯಾಗುವ ಸದಾವಕಾಶವನ್ನು ಇಲ್ಲ ಎನ್ನುವ ಪ್ರಶ್ನೆಯಾದರೂ ಇದೆಯೇ ನಮ್ಮ ಕುಟುಂಬದವರಿಗೆ, ನನಗೆ ಇದು ಅವಿಸ್ಮರಣೀಯ ಕ್ಷಣ. ಕೂಡಲೆ ಮೈಸೂರಿಗೆ ಬಂದೆ. ಕಾರ್ಯಕ್ರಮದಲ್ಲಿ ನನ್ನ ಗುರುಗಳಾದ ಕೃಷ್ಣಮಾಚಾರ್ ಅವರ ಪಿಟೀಲು ನುಡಿಸಿದರೆ ಎಂ.ಎಸ್.ಶೇಷಪ್ಪ ಅವರು ತಬಲ ನುಡಿಸಿದರು. ಟೌನ್‌ಹಾಲ್ ತುಂಬಾ ನೂರಾರು ಜನರು ನೆರೆದಿದ್ದರು. ಸುಮಾರು ಒಂದು ಗಂಟೆಕಾಲ ಹಾಡಿದೆ’ ಎನ್ನುತ್ತಾ ಆ ದಿನವನ್ನು ಅಷ್ಟೇ ಸಂಭ್ರಮದಿಂದ ಮರುಜೀವಿಸುತ್ತಾರೆ ಲೀಲಾವತಿಯವರು.

ದಸರೆಯಲ್ಲಿ ಒಮ್ಮೆ ಕಾರ್ಯಕ್ರಮ ಕೊಟ್ಟ ನಂತರ ಇನ್ನೂ ಹಲವು ಬಾರಿ ಅವರಿಗೆ ಅದೇ ಅವಕಾಶ ಸಿಕ್ಕಿತ್ತಂತೆ. ಪ್ರತಿ ಬಾರಿ ದಸರಾದಲ್ಲಿ ಹಾಡುವಾಗಲೂ ಸಹ ಅವರಿಗೆ ಅಷ್ಟೇ ಸಂಭ್ರಮವಾಗುತ್ತಿತ್ತು. ಆನಂತರ ಜಯ ಚಾಮರಾಜ ಒಡೆಯರ್ ಅವರು ಭಾಗವಹಿಸುತ್ತಿದ್ದ ಎಲ್ಲ ಕಾರ್ಯಕ್ರಮಗಳಿಗೂ ತೆರಳಿ ಪ್ರಾರ್ಥನಾ ಗೀತೆ ಹಾಡುತ್ತಿದ್ದ ಹೆಗ್ಗಳಿಕೆ ಇವರದ್ದು. ಪ್ರತಿ ಕಾರ್ಯಕ್ರಮದ ಮುನ್ನವೂ ಇವರಿಗೆ ಅರಮನೆಯಿಂದಲೇ ಆಹ್ವಾನ ಬರುತ್ತಿತ್ತಂತೆ, ಗೋಪಾಲಕೃಷ್ಣ ಅಡಿಗರ ಆರದಿರು, ಆರದಿರು, ಓ ನನ್ನ ಬೆಳಕೇ ಗೀತೆಯನ್ನು ಹಾಡುತ್ತಿದ್ದರಂತೆ. ಮೊದಲೊಮ್ಮೆ ಅವರಿದ್ದ ಕಾರ್ಯಕ್ರಮದಲ್ಲಿ ಈ ಪ್ರಾರ್ಥನಾ ಗೀತೆ ಹಾಡಿದ್ದೆ. ಬಹುಶಃ ಅವರಿಗೆ ಅದು ಇಷ್ಟವಾಗಿತ್ತೆಂದು ಕಾಣುತ್ತದೆ. ಪ್ರತಿ ಬಾರಿಯೂ ಅರಮನೆಯವರು ನನಗೆ ಅದೇ ಹಾಡು ಹೇಳುವಂತೆ ತಿಳಿಸುತ್ತಿದ್ದರು. ಪ್ರಾರ್ಥನಾ ಗೀತೆ ಹಾಡಲು ಹುಣಸೂರು, ತಿ.ನರಸೀಪುರಕ್ಕೆಲ್ಲಾ ಹೋಗಿದ್ದಿದೆ. ಇವೆಲ್ಲಾ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳು ಎಂಬುದು ಲೀಲಾವತಿಯವರ ಮನದ ಮಾತು.

ಮೈಸೂರಿನಲ್ಲೇ ಹುಟ್ಟಿ ಬೆಳೆದ ಲೀಲಾವತಿಯವರು ಚಿಕ್ಕ ವಯಸ್ಸಿನಿಂದಲೇ ದಸರಾ ವೈಭವವನ್ನು ಕಣ್ತುಂಬಿಕೊಂಡವರು. ಚಿನ್ನದ ಅಂಬಾರಿಯೊಳಗೆ ಸ್ವತಃ ಮಹಾರಾಜರೇ ಕುಳಿತುಕೊಳ್ಳುತ್ತಿದ್ದುದನ್ನು ಇವರುನೋಡಿದ್ದಾರೆ. ನಾಡು ಕಂಡ ಶ್ರೇಷ್ಠ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಇಬ್ಬರನ್ನೂ ಅಂಬಾರಿಯೊಳಗೆ ನೋಡಿದ ನೆನಪು ಕಣ್ಣಿಗೆ ಕಟ್ಟಿದಂತಿದೆ ಎನ್ನುತ್ತಾರೆ ಲೀಲಾವತಿುಂವರು. ರಾಜರು ಬರುತ್ತಿದ್ದ ಹಾದಿಯಲ್ಲಿ ಜನರೆಲ್ಲಾ ಹೂವು ಹಿಡಿದು ನಿಲ್ಲುತ್ತಿದ್ದರು. ರಾಜರು ಬರುತ್ತಿದ್ದಂತೆ ನಮ್ಮಪ್ಪ ದೊರೆಯಯೇ ಎನ್ನುತ್ತಾ ಹೂವು ಎರಚುತ್ತಿದ್ದರು. ಕೀಲುಕುದುರೆ, ಮರಗಾಲು, ಆನೆಗಳು, ಕುದುರೆಗಳು, ಒಂಟೆಗಳು, ಕಪ್ಪು ಜುಬ್ಬಾ ಹಾಗೂ ಬಿಳಿ ವಲ್ಲಿ ಧರಿಸಿದ ಅರಮನೆಯವರು, ಅಲ್ಲಿ ಬತ್ತಾಸು, ಪುರಿಗಳನ್ನು ಮಾರುತ್ತಾ ಬರುತ್ತಿದ್ದ ಜನರು… ಆಹಾ! ಎಲ್ಲವೂ ಅದೆಷ್ಟು ಚೆಂದವಾಗಿತ್ತುಎಂದು ರಸವತ್ತಾಗಿ ಆಗಿನ ದಿನಗಳ ದಸರೆಯ ವೈಭವವನ್ನು ಕಟ್ಟಿಕೊಡುತ್ತಾರೆ ಲೀಲಾವತಿಯವರು.

ಈಗಲೂ ಇವರು ಶಾಸ್ತ್ರೀಯ, ಸುಗಮ, ಜಾನಪದ ಮಾತ್ರವಲ್ಲದ ಪಾಶ್ಚಿವಾತ್ಯ, ನವೀನ, ಜಾಝ್ ಪ್ರಕಾರದ ಸಂಗೀತಗಳನ್ನು ಕೇಳುತ್ತಾರೆ.ಸಂಗೀತಕ್ಕೆ ಭಾಷೆಯೆಲ್ಲುಂಟು ಹೇಳಿ? ಸಂಗೀತವೇ ಒಂದು ಭಾಷೆ. ಯಾರಾದರೂ ವಾದ್ಯ ನುಡಿಸುತ್ತಿದ್ದರೆ ನಾವು ಯಾವ ಭಾಷೆ ಎಂದು ಕೇಳುತ್ತೇವೆಯೇ ಸಂಗೀತ ಎಲ್ಲವನ್ನೂ ಮೀರಿದ್ದು. ಪವಿತ್ರವಾದದ್ದು ಎನ್ನುತ್ತಾ ತಮ್ಮ ಸಂಗೀತ ಪ್ರೇಮವನ್ನು ಬಿಚ್ಚಿಡುತ್ತಾರೆ ಲೀಲಾವತಿ.

 

lokesh

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

11 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

12 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

12 hours ago