ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಗುರುವಾರದಿಂದ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.
ಮಾರ್ಚ್.6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ 17ನೇ ಬಜೆಟ್ ಅನ್ನು ಮಂಡಿಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಇಂದಿನಿಂದ ಬಜೆಟ್ ತಯಾರಿಕೆಗೆ ಚಾಲನೆ ನೀಡಿದ್ದಾರೆ.
ಅರಣ್ಯ-ಪರಿಸರ-ಜೀವಿ ಶಾಸ್ತ್ರ, ಕಾನೂನು-ನ್ಯಾಯ-ಮಾನವ ಹಕ್ಕುಗಳು-ಸಂಸದೀಯ ವ್ಯವಹಾರಗಳು-ಶಾಸನ ರಚನೆ-ಪ್ರವಾಸೋದ್ಯಮ, ತೋಟಗಾರಿಕೆ-ಗಣಿ-ಭೂ ವಿಜ್ಞಾನ, ಕಾರ್ಮಿಕ, ಒಳಾಡಳಿತ, ಕನ್ನಡ-ಸಂಸ್ಕೃತಿ-ಹಿಂದುಳಿದ ವರ್ಗಗಳು, ಉನ್ನತ ಶಿಕ್ಷಣ ಸೇರಿದಂತೆ ಹಲವು ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
ಆಯಾ ಇಲಾಖೆಗಳಿಂದ 2026- 27ನೇ ಸಾಲಿಗೆ ಘೋಷಿಸಬೇಕಾದ ಹೊಸ ಯೋಜನೆಗಳ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ. ಹಿಂದಿನ ಬಜೆಟ್ಟಿನಲ್ಲಿ ಘೋಷಿಸಲಾದ, ಅನುದಾನ, ಬಿಡುಗಡೆಯಾಗಿರುವುದು, ಮತ್ತು ವೆಚ್ಚವಾಗಿರುವ ಹಣದ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳು, ಬಜೆಟ್ ನಲ್ಲಿ ಅವುಗಳ ಘೋಷಣೆ ಮತ್ತು ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಬಜೆಟ್‌ನಲ್ಲಿ ಈ ಮೊದಲು ಘೋಷಿಸಲಾದ ಯೋಜನೆಗಳ ಕಾರ್ಯಾನುಷ್ಠಾನದ ಬಗ್ಗೆಯೂ ಚರ್ಚೆಯಾಗಿದೆ. ಬಜೆಟ್ ಕಾರ್ಯಕ್ರಮಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಧಿಕಾರಿಗಳು ಅದನ್ನು ಬಜೆಟ್ ಅಂಗೀಕಾರಗೊಂಡ ಎರಡು ತಿಂಗಳ ಒಳಗಾಗಿ ಕಾರ್ಯಾದೇಶಗಳನ್ನು ಹೊರಡಿಸಬೇಕು ಎಂದು ಸೂಚಿಸಲಾಗಿದೆ.
ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…
ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಕಾಣಿಸಿಕೊಂಡಿದೆ. ರಾಜ್ಯ ಸರ್ಕಾರ ಈಗಾಗಲೇ ಸುಮಾರು ೧೭೦…
ತಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಮಹಾತ್ಮಗಾಂಧಿಯವರನ್ನುಬ್ರಿಟಿಷರು ಬಂಧಿಸಲಿಲ್ಲ . ಏಕೆಂದರೆ ಗಾಂಧಿಜಿ ಯವರು ನ್ಯಾಯಯುತವಾಗಿ ಅಹಿಂಸಾ ತ್ಮಕವಾಗಿ ಸ್ವಾತಂತ್ರ್ಯ ಕೇಳುತ್ತಿದ್ದರು,…
ವಸಂತಕುಮಾರ್ ಮೈಸೂರಮಠ್, ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ, ಮೈಸೂರು ಹೊರೆಯನ್ನು ಕಡಿಮೆ ಮಾಡಲು ಪರ್ಯಾಯ ಮಾರ್ಗವಿಲ್ಲವೇ? ಮೈಸೂರಿನ ಮಹಾನ್ ಯದುಕುಲ…
ಕೆ.ಬಿ.ರಮೇಶ ನಾಯಕ ಮೈಸೂರು: ಐದು ವರ್ಷಗಳಿಗೂ ಹೆಚ್ಚು ಕಾಲದಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಜಿಪಂ, ತಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು…