ಧರ್ಮಸ್ಥಳ: ಯಾವಾಗಲೂ ಯುದ್ಧ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆಯುತ್ತೇನೆ. ಅದೇ ರೀತಿ ಈ ಬಾರಿಯೂ ಮಂಜುನಾಥನ ದರ್ಶನಕ್ಕೆ ಬಂದಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮಂಗಳವಾರ (ಮಾ.೨೬) ಬೆಳಿಗ್ಗೆ ಧರ್ಮಸ್ಥಳ ದೇಗುಲಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎಂಬ ಮಾತಿದೆ. ನನ್ನ ಜೀವನದಲ್ಲಿ ಮಂಜುನಾಥ, ಈಶ್ವರ, ಗಂಗಾಧರ ಅಜ್ಜ ರಕ್ಷಣೆ ಮಾಡಿದ್ದಾರೆ. ಹಾಗಾಗಿ ಈ ಯುದ್ಧ ಆರಂಭಿಸುವ ಮುನ್ನ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿ ದರ್ಶನ ಮಾಡಿ ಆಶೀರ್ವಾದ ಪಡೆಯುವ ಪದ್ಧತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ನನ್ನ ಪದ್ಧತಿಯಂತೆ ಇಂದು ಇಲ್ಲಿಗೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದು ಹೋಗುತ್ತೇನೆ. ನಾವು ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ. ಇನ್ನೂ ಹೆಚ್ಚಿಗೆ ಶಕ್ತಿ ನೀಡಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದೇನೆ. ನುಡಿದಂತೆ ನಡೆಯಲು ಆ ದೇವರು ಶಕ್ತಿ ಕೊಟ್ಟಿದ್ದಾನೆ, ಇದು ನಮ್ಮ ಭಾಗ್ಯ, ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದರು.
ಮಂಜುನಾಥನ ಬಳಿಗೆ ರಾಜ್ಯದ ಮಹಿಳೆಯರು ಉಚಿತವಾಗಿ ಬಂದಿದ್ದಾರೆ. ವ್ಯಾಪಾರ ವಹಿವಾಟು ಜೋರಿದೆ. ಎಲ್ಲರೂ ತೀರ್ಥಯಾತ್ರೆ, ಧರ್ಮಾ ಯಾತ್ರೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಜನ ಕೊಟ್ಟ ಶಕ್ತಿ ಅವರಿಗೆ ಋಣವನ್ನು ತೀರಿಸಿದ್ದೇವೆ. ಆ ಉಪಕಾರ ಸ್ಮರಣೆಯನ್ನು ಇಟ್ಟುಕೊಳ್ಳುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಬಳಿಕ ಡಿಕೆ ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಈ ವೇಳೆ ಸ್ಥಳೀಯ ಕಾಂಗ್ರೇಸ್ ನಾಯಕರೊಡನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಲೋಕಸಭೆ ಚುನಾವಣೆಯ ಕಣ ರಂಗೇರುತ್ತಿರುವ ಮಧ್ಯಯೇ ಡಿಸಿಎಂ ಡಿಕೆ ಶಿವಕುಮಾರ್ ಇಂದು ಇಡೀ ದಿನ ಟೆಂಪನ್ ರನ್ ಆರಂಭಿಸಿದ್ದಾರೆ.
ಟಿ.ಕೆ.ಹರೀಶ್ (ಲೇಖಕರು ಹಿರಿಯ ಸಹಾಯಕ ನಿರ್ದೇಶಕರು) ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ಪರಿಸರ ಜಾಗೃತಿ ಮೂಡಿಸಬೇಕು ಮೈಸೂರು ತನ್ನದೇ ಆದ ಸುಂದರವಾದ…
ಮೈಸೂರು ನಗರದ ಹೊರವಲಯಗಳಲ್ಲಿ ಹಾಗೂ ಕೆಲವೊಮ್ಮೆ ಮಧ್ಯಭಾಗದಲ್ಲಿ ಅನಧಿಕೃತವಾಗಿ ವೈದ್ಯ ಜೋಪಡಿಗಳು ತಲೆ ಎತ್ತುತ್ತಿವೆ. ಈ ನಾಟಿ ವೈದ್ಯರು ಆರೋಗ್ಯ…
ನೆರೆಯ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ರವರು, ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಪ್ರವೇಶಕ್ಕಾಗಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಶಾಲೆಯ…
ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಸಾಕಷ್ಟು ಬಸ್ ಸೌಲಭ್ಯವಿಲ್ಲದೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಶನಿವಾರ, ಭಾನುವಾರಗಳಂದು ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ…
ನವೀನ್ ಡಿಸೋಜ ವಿದ್ಯುತ್ ತಂತಿ ತಗುಲಿ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಬೆನ್ನಲ್ಲೇ ಸಾರ್ವಜನಿಕರಿಗೆ ಅರಿವು ಮೂಡಿಸಲು ಮುಂದಾದ ಇಲಾಖೆ …
ದಿನೇಶ್‌ಕುಮಾರ್ ಎಚ್.ಎಸ್. ಮಧುಮೇಹಿಗಳಿಗೆ ಬಲು ಪ್ರೀತಿ; ಕೆಜಿ ನೇರಳೆ ಹಣ್ಣು ೨೦೦ ರೂ.ನಿಂದ ೨೫೦ ರೂ.ವರೆಗೆ ಮಾರಾಟ ಮೈಸೂರು: ಅಪಾರ…