ರಾಜ್ಯ

ಕಾಂಗ್ರೆಸ್ ಕುರ್ಚಿ ಕದನ : ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ಸಿದ್ಧತೆ

ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಗೊಂದಲ ಶೀಘ್ರವಾಗಿ ಪರಿಹಾರ ಕಾಣದಿದ್ದರೆ ಪ್ರತಿಪಕ್ಷ ಬಿಜೆಪಿ, ರಾಜ್ಯಪಾಲರಿಗೆ ಹೆಹಲಿಗೆ ತೆರಳಿ ದೂರು ನೀಡಲು ಮುಂದಾಗಿದೆ.

ಇನ್ನು ೩-೪ ದಿನಗಳವರೆಗೆ ಇದೇ ಪರಿಸ್ಥಿತಿ ಮುಂದುವರಿದರೆ, ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ ಮನವಿ ಮಾಡಲಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್‌ನ ವಿರೋಧದ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಕ್ಕೆ ಮನವಿ ಮಾಡಿಕೊಳ್ಳಲಿದೆ.

ಇದನ್ನು ಓದಿ: ಮೊದಲ ಬಾರಿಗೆ ಹೇಳಿಕೆ ಬದಲಿಸಿದ ಸಿಎಂ : ಹೈಕಮಾಂಡ್ ಸೂಚಿಸಿದರೆ ಮುಂದುವರಿಯುವೆ ಎಂದ ಸಿದ್ದರಾಮಯ್ಯ

ಕಳೆದ ೧೦ ದಿನಗಳಿಂದ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಜನರ ಕಷ್ಟಗಳನ್ನು ಕೇಳುವವರೇ ಇಲ್ಲದಂತಾಗಿದೆ. ಕೆಲವು ಕಡೆ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬೆಂಗಳೂರಿನಂತಹ ಮಹಾನಗರದಲ್ಲೇ ಜನ ನಿಬಿಡ ಪ್ರದೇಶದಲ್ಲೇ ಎಟಿಎಂಗೆ ತುಂಬಬೇಕಾಗಿದ್ದ ಹಣವನ್ನು ದೋಚುತ್ತಾರೆ ಎಂದರೆ ಯಾರಿಗೂ ಕಾನೂನಿನ ಭಯವೇ ಇಲ್ಲದಂತಾಗಿದೆ. ಹೀಗಾಗಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಸ್ಪಷ್ಟವಾದ ನಿರ್ದೇಶನ ನೀಡುವಂತೆ ಕೋರಲಿದ್ದಾರೆ.

ಈಗಾಗಲೇ ರಾಜ್ಯಪಾಲರ ಭೇಟಿಗೆ ಅಧಿಕಾರಿಗಳಿಂದ ಸಮಯವಕಾಶವನ್ನು ನಿಗದಿಪಡಿಸುವಂತೆ ಬಿಜೆಪಿ ಮನವಿ ಮಾಡಿದೆ ಎಂದು ಗೊತ್ತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣದ ನಡುವೆ ಅಧಿಕಾರಕ್ಕಾಗಿ ಪ್ರತಿದಿನ ಕಿತ್ತಾಟ ನಡೆಯುತ್ತಿದೆ. ಸಚಿವರು ತಮ್ಮ ಜವಾಬ್ದಾರಿಗಳನ್ನು ಮರೆತು ಕುರ್ಚಿ ಉಳಿಸಿಕೊಳ್ಳುವ ನೆಪದಲ್ಲಿ ಇಲಾಖೆಯ ಕೆಲಸವನ್ನು ಮರೆತಿದ್ದಾರೆ. ಇದರ ಪರಿಣಾಮವಾಗಿ ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕಾದ ಅಗತ್ಯವಿದೆ ಎಂದು ಮನವಿಯಲ್ಲಿ ಮನವರಿಕೆ ಮಾಡಿಕೊಡಲಿದೆ.

ಆಂದೋಲನ ಡೆಸ್ಕ್

Recent Posts

ಮರಿಗಳೊಂದಿಗೆ ಹುಲಿ ಕಂಡು ಪುಳಕಿತರಾದ ಪ್ರವಾಸಿಗರು

ಮಹೇಂದ್ರ ಹಸಗೂಲಿ ತಾಯಿ ಹುಲಿ ನಾಪತ್ತೆಯಾಗಿದ್ದರಿಂದ ಮರಿಗಳನ್ನು ಪಾಲನೆ ಮಾಡಿದ್ದ ಅರಣ್ಯ ಇಲಾಖೆ  ಗುಂಡ್ಲುಪೇಟೆ: ಬಂಡೀಪುರದ ಸಫಾರಿಗೆ ಹೋಗಿದ್ದ ಪ್ರವಾಸಿಗರು…

12 mins ago

ಕೆರೆಗಳಿಗೆ ಪುನಶ್ಚೇತನ; ವನ್ಯಜೀವಿಗಳಿಗಿಲ್ಲ ನೀರಿನ ಕೊರತೆ

ನಾಗರಹೊಳೆ ಅರಣ್ಯದಲ್ಲಿ ಬೇಸಿಗೆಗೂ ಮುನ್ನವೇ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡ ಅರಣ್ಯ ಇಲಾಖೆ ವೀರನಹೊಸಹಳ್ಳಿ: ಈ ಬಾರಿ ಬೇಸಿಗೆಗೂ ಮುನ್ನವೇ…

15 mins ago

ವಾಣಿಜ್ಯ ಸಿಲಿಂಡರ್ ಅಭಾವ ಶುರು

ದಿನೇಶ್ ಕುಮಾರ್ ಹೆಚ್.ಎಸ್. ಒಂದೆಡೆ ಬೆಲೆ ಏರಿಕೆ ಬಿಸಿ, ಮತ್ತೊಂದೆಡೆ ವಾಣಿಜ್ಯ ಸಿಲಿಂಡರ್ ಕೊರತೆ ಎದುರಾಗುವ ಆತಂಕ ಇರಾನ್‌ನ ಹೊರ್ಮುಜ್…

19 mins ago

ಸಂಧಾನ ಯಶಸ್ವಿ : ಮುಷ್ಕರ ಹಿಂಪಡೆದ ವೈದ್ಯರು

 ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ  (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…

8 hours ago

ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಜೆಡಿಎಸ್‌ಗೆ 1 ಸೀಟು

ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…

10 hours ago

ಎಲ್‌ಪಿಜಿ ಸಿಲಿಂಡರ್‌ ವ್ಯತ್ಯಯ, ಬೆಲೆ ಏರಿಕೆ : ಬಾಯಿ ಬಿಡದ ಬಿಜೆಪಿ ; ಡಿ.ಕೆ.ಶಿವಕುಮಾರ್‌ ಆರೋಪ

ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…

10 hours ago