ಕ್ರೀಡೆ

ಇದು ʼಆರ್‌ಸಿಬಿʼಯ ಹೊಸ ಅಧ್ಯಾಯ: ವಿರಾಟ್‌ ಕೊಹ್ಲಿ

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ʼಅನ್‌ಬಾಕ್ಸ್‌ʼ ಈವೆಂಟ್‌ ಅದ್ದೂರಿಯಾಗಿ ನಡೆಯಿತು.

ಈ ಈವೆಂಟ್‌ನಲ್ಲಿ ಆರ್‌ಸಿಬಿಯ ಹೆಸರಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರ್‌ ಹೆಸರನ್ನು ʼರಾಯಲ್‌ ಚಾಲೆಂಜರ್ಸ್‌ ಬೆಂಗಳೂರುʼ ಎಂದು ಅಧಿಕೃತವಾಗಿ ಬದಲಾಯಿಸಿದೆ.

ಇದೇ ವೇಳೆ ಆರ್‌ಸಿಬಿ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು. ನೀಲಿ ಮತ್ತು ಕೆಂಪು ಬಣ್ಣ ಸಂಯೋಜನೆಯ ಜೆರ್ಸಿಯನ್ನು ಆರ್‌ಸಿಬಿ ನಾಯಕ ಫಾಫ್‌ ಡು ಪ್ಲೆಸ್ಸಿ, ವಿರಾಟ್‌ ಕೊಹ್ಲಿ ಮತ್ತು ಆರ್‌ಸಿಬಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾ ಅನಾವರಣಗೊಳಿಸಿದರು.

ಈ ಬಗ್ಗೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ “ಹೊಸ ಅಧ್ಯಾಯಕ್ಕೆ ಸಮಯ ಬಂದಿದೆ. ನಿಮ್ಮ ತಂಡ, ನಿಮ್ಮ ಆರ್‌ಸಿಬಿ” ಎಂದು ಬರೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿ ವಿರಾಟ್‌ ಕೊಹ್ಲಿ ʼಇದು ಆರ್‌ಸಿಬಿ ಯ ಹೊಸ ಅಧ್ಯಾಯʼ ಎಂದು ಕನ್ನಡದಲ್ಲೇ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದರು.

ಅನ್‌ ಬಾಕ್ಸ್‌ ಕಾರ್ಯಕ್ರಮಕ್ಕೂ ಮೊದಲು ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ ಮಹಿಳಾ ತಂಡದ ವಿಜಯೋತ್ಸವ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ವೇಗಿ ಆರ್‌. ವಿನಯ್‌ ಕುಮಾರ್‌ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಹಾಲಿವುಡ್‌ ರ್ಯಾಪರ್‌ ಆಲನ್‌ ವಾಕರ್‌, ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಉಪಸ್ಥಿತರಿದ್ದರು.

andolanait

Recent Posts

ಡಿ.ಕೆ.ಶಿವಕುಮಾರ್‌ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್‌: ಬುಧವಾರ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಬುಧವಾರ ರಾಜ್ಯದ ನೂತನ ಸಿಎಂ ಆಗಿ ಡಿಕೆಶಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ…

54 mins ago

ಓದುಗರ ಪತ್ರ: ಕ್ರಿಕೆಟ್ ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರಿಡಿ

ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಸೂರ್ಯನಗರದಲ್ಲಿ ನಿರ್ಮಾಣಗೊಳ್ಳಲಿರುವ ದೇಶದ ಎರಡನೇ ಅತಿದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರದಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ.…

2 hours ago

ಓದುಗರ ಪತ್ರ: ನಾಳಿನ ನೆರಳಿಗೆ ಇಂದೇ ಗಿಡ ನೆಡೋಣ

ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ…

2 hours ago

ಓದುಗರ ಪತ್ರ: ಸಿದ್ದರಾಮಯ್ಯನವರ ಆಡಳಿತ ಮಾದರಿ

ರಾಜ್ಯದಲ್ಲಿ ಅತ್ಯಂತ ಪ್ರಬಲ ನಾಯಕರಲ್ಲಿ ಸಿದ್ದರಾಮಯ್ಯನವರೂ ಕೂಡ ಒಬ್ಬರು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದರ ಮೂಲಕ ಅವರ ಆಡಳಿತ…

2 hours ago

ಸಿದ್ದು ರಾಜೀನಾಮೆ; ಒಂದು ಯುಗದ ಅಂತ್ಯ!

ಕೆ.ಪಿ.ನಾಗರಾಜ್, ಮೈಸೂರು ಕರ್ನಾಟಕ ರಾಜಕೀಯ ವ್ಯಾಕರಣವನ್ನೇ ಬದಲಾಯಿಸಿದ ಸಿದ್ದರಾಮಯ್ಯ ಮೈಸೂರು ರಾಜಕಾರಣ ಅಂದರೆ ಒಮ್ಮೆ ಒಡೆಯರ್ ಯುಗ, ನಂತರ ದೇವರಾಜ…

2 hours ago

ಗಾಂಧಿಯ ಸರಳತೆಯತ್ತ ನಡೆಯುತ್ತಿರುವ ಯುವಜನತೆ

ಮಹಾತ್ಮ ಗಾಂಧೀಜಿ ಅವರ ಆತ್ಮಕತೆಗೆ ನೂರು ವರ್ಷ ಸಂದಿರುವುದು ಸಂತಸದ ವಿಷಯ. ಇವತ್ತು ಗಾಂಧಿಜಿ ಅವರ ವಿಚಾರಕ್ಕೆ ಏನಾಗುತ್ತಿದೆ? ಆಚಾರಕ್ಕೆ…

4 hours ago