ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಟೀಮ್ ಇಂಡಿಯಾ ಆಟಗಾರರ ಯೋ ಯೋ ಟೆಸ್ಟ್ನಲ್ಲಿ ಶುಭ್ಮನ್ ಗಿಲ್ ಅತ್ಯಧಿಕ ಅಂಕಗಳಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಲವು ವಿಭಾಗಗಳಲ್ಲಿ ನಡೆಸಲಾದ ಈ ಟೆಸ್ಟ್ನಲ್ಲಿ ಗಿಲ್ ಒಟ್ಟು 18.7 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದರೆ, ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ.
ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದ ಪ್ರಿನ್ಸ್ ಶುಭ್ಮನ್ : ಯೋ ಯೋ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಫಿಟ್‍ನೆಸ್ ವಿಷಯದಲ್ಲಿ ಇದುವರೆಗೆ ಕೊಹ್ಲಿಯೇ ಕಿಂಗ್ ಎನ್ನಲಾಗಿತ್ತು. ಅದರಂತೆ ಈ ಬಾರಿ ಕೂಡ 17.2 ಅಂಕಗಳಿಸುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು. ಆದರೆ ಶುಭ್ಮನ್ ಗಿಲ್ ಸರದಿ ಬಂದಾಗ ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದರು. ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್ ಒಟ್ಟು 18.7 ಅಂಕಗಳಿಸಿ ಟೀಮ್ ಇಂಡಿಯಾದ ಫಿಟ್‍ನೆಸ್ ಫ್ರೀಕ್ ಎನಿಸಿಕೊಂಡರು.
ಕಟ್ ಆಫ್ ಲೆವೆಲ್ : ಯೋ ಯೋ ಟೆಸ್ಟ್ನಲ್ಲಿ ಉತೀರ್ಣರಾಗಲು ಆಟಗಾರರು ಕನಿಷ್ಠ 16.5 ಅಂಕಗಳನ್ನು ಗಳಿಸಲೇಬೇಕು. ಮೊದಲ ಸುತ್ತಿನಲ್ಲಿ ವಿಫಲರಾದರೆ ಮತ್ತೆ ಅವಕಾಶಗಳನ್ನು ನೀಡಲಾಗುತ್ತದೆ. ಈ ಮೂಲಕ 16.5 ಅಂಕಗಳನ್ನು ಗಳಿಸಿದರೆ ಮಾತ್ರ ಯೋ ಯೋ ಟೆಸ್ಟ್ನಲ್ಲಿ ಪಾಸ್ ಎಂದು ನಿರ್ಧರಿಸಲಾಗುತ್ತದೆ.
ಬಹುತೇಕ ಆಟಗಾರರು ಪಾಸ್ : ಈ ಬಾರಿಯ ಯೋ ಯೋ ಟೆಸ್ಟ್ನಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಪಾಸ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಅತ್ಯಧಿಕ ಅಂಕಗಳಿಸಿರುವುದು ಶುಭ್ಮನ್ ಗಿಲ್. ಹಾಗೆಯೇ ಬಹುತೇಕ ಆಟಗಾರರು 16.5 ಹಾಗೂ 17 ರ ನಡುವೆ ಅಂಕಗಳಿಸಿ ತಮ್ಮ ಟಾಸ್ಕ್ ಪೂರೈಸಿದ್ದಾರೆ.
ಕೆಎಲ್ ರಾಹುಲ್ಗೆ ನೋ ಟೆಸ್ಟ್ : ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ಏಷ್ಯಾ ಕಪ್ ಮೀಸಲು ಆಟಗಾರ) ಮತ್ತು ಕೆಎಲ್ ರಾಹುಲ್ ಅವರು ಯೋ ಯೋ ಟೆಸ್ಟ್ನಲ್ಲಿ ಭಾಗವಹಿಸಿಲ್ಲ. ಇಲ್ಲಿ ಕೆಲ ಆಟಗಾರರು ಐರ್ಲೆಂಡ್ ಸರಣಿಯಿಂದ ಹಿಂತಿರುಗಿರುವ ಕಾರಣ ಅವರಿಗೆ ವಿನಾಯಿತಿ ನೀಡಲಾಗಿದೆ. ಇತ್ತ ಕೆಎಲ್ ರಾಹುಲ್ ಸಂಪೂರ್ಣ ಫಿಟ್ ಆಗಿರದ ಕಾರಣ ಅವರು ಯೋ ಯೋ ಟೆಸ್ಟ್ನಲ್ಲಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ.
ಏನಿದು ಯೋ ಯೋ ಟೆಸ್ಟ್? : ಟೀಮ್ ಇಂಡಿಯಾ ಆಟಗಾರರ ಫಿಟ್‍ನೆಸ್ ಟೆಸ್ಟ್ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಇಲ್ಲಿ ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ಈ ಫಿಟ್‍ನೆಸ್ ಟೆಸ್ಟ್ನಲ್ಲಿ 20 ಮೀಟರ್ ಅಳತೆಯಲ್ಲಿ ಎರಡು ಕೋನಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಇಲ್ಲಿ ಆಟಗಾರನು ಓಟವನ್ನು ಆರಂಭಿಸಿ, ಎರಡು ಲೈನ್ಗಳಲ್ಲಿಟ್ಟಿರುವ ಕೋನಗಳ ಬೀಪ್ ಧ್ವನಿಯನ್ನು ಅನುಸರಿಸಿ ತನ್ನ ದೂರವನ್ನು ಕ್ರಮಿಸಬೇಕಾಗುತ್ತದೆ.
ಹಾಗೆಯೇ ಈ ಟೆಸ್ಟ್ನಲ್ಲಿ 8.15 ನಿಮಿಷದೊಳಗೆ 2 ಕಿ. ಮೀಟರ್ ಓಡಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಅಂಕಗಳು ತಂತ್ರಾಂಶ ಆಧಾರಿತವಾಗಿದ್ದು, ಹೀಗಾಗಿ ಯಾವುದೇ ಸುತ್ತಿನಲ್ಲಿ ಎಡವಿದರೂ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿಯೇ ಯೋ ಯೋ ಟೆಸ್ಟ್ ಪಾಸಾಗುವುದು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮಡಿಕೇರಿ: ಮನೆಯ ವಾಷಿಂಗ್ ಮಷಿನ್‌ನೊಳಗೆ ಸುಮಾರು ೧೦ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಅಡಗಿದ್ದ ಘಟನೆ ಮಡಿಕೇರಿ ತಾಲೂಕಿನ…
ಬೆಂಗಳೂರು: ‘ಯೋಜನೆ ಉಚಿತ, ಬೆಲೆ ಏರಿಕೆ ಖಚಿತ.’ ಅಗತ್ಯ ವಸ್ತುಗಳ ದರ ಏರಿಕೆ ಬಗ್ಗೆ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಪೀಠ…
ಮೈಸೂರು: ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ ನೂತನ ತಾರಾಲಯವನ್ನು ಅವರು ಉದ್ಘಾಟಿಸಲಿದ್ದಾರೆ…
ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…
ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…