ಬೆಂಗಳೂರು: ವಿವೋ ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 34-29 ಅಂಕಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.
ತೆಲುಗು ಟೈಟಾನ್ಸ್ ಪರ ವಿನಯ್ ಹಾಗೂ ರಜನೀಶ್ ತಲಾ 7 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿಂದ ಪಾರುಮಾಡಲಾಗಲಿಲ್ಲ. ಪ್ರಥಮಾರ್ಧ ಕೊನೆಯಲ್ಲಿ ನೀಡಿದ ದಿಟ್ಟ ಹೋರಾಟವನ್ನು ಮರು ಪ್ರದರ್ಶನ ನೀಡುವಲ್ಲಿ ತೆಲುಗು ಟೈಟಾನ್ಸ್ ವಿಫಲವಾಯಿತು. ಬೆಂಗಳೂರು ಬುಲ್ಸ್ ಪ್ರಥಮಾರ್ಧದ ಪ್ರಮಾದಗಳನ್ನು ತಿದ್ದಿಕೊಂಡು ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ದ್ವಿತಿಯಾರ್ಧಲ್ಲಿ ಇತ್ತಂಡಗಳು ಸಮಬಲದ ಹೋರಾಟ ನೀಡಿದವು. ಪಂದ್ಯ 23-23ರಲ್ಲಿ ಹೆಚ್ಚಿನ ಸಮಬ ಮುಂದುವರಿದಿತ್ತು. ಆದರೆ ಬೆಂಗಳೂರು ತಂಡದ ರೈಡರ್ ಭರತ್ 7 ನಿಮಿಷ ಬಾಕಿ ಇರುವಾಗ ಗಳಿಸಿದ ಎರಡು ಅಂಕ ಪಂದ್ಯಕ್ಕೆ ತಿರುವು ನೀಡಿತು. ಬುಲ್ಸ್ 25-23ರಲ್ಲಿ ಮುನ್ನಡೆ ಕಂಡಿತು. ತೆಲುಗು ಟೈಟಾನ್ಸ್ ದ್ವಿತಿಯಾರ್ಧದಲ್ಲಿ ಆಲೌಟ್ ಆಗುವು ಮೂಲಕ ಬೆಂಗಳೂರು 30-25ರಲ್ಲಿ ಮುನ್ನಡೆ ಕಾಯ್ದುಕೊಂಡಿತು.
ಇತ್ತಂಡಗಳ ನಾಯಕರು ದ್ವಿತಿಯಾರ್ಧದಲ್ಲಿ ಅಂಕಗಳ ಖಾತೆ ತೆರೆದಿರುವುದು ವಿಶೇಷ. ಬೆಂಗಳೂರು ಬುಲ್ಸ್ ನಾಯಕ ಮಹೇಂದರ್ ಸಿಂಗ್ ಎಡ ಭಾಗದ ಡಿಫೆಂಡರ್, ತೆಲುಗು ಟೈಟಾನ್ಸ್ ತಂಡದ ನಾಯಕ ರವಿಂದರ್ ಪಹಲ್ ಬಲ ಭಾಗದ ಡಿಫೆಂಡರ್ ಪ್ರಥಮಾರ್ಧದಲ್ಲಿ ಇಬ್ಬರೂ ನಾಯಕರು ತಂಡದ ಪರ ಅಂಕ ಗಳಿಸುವಲ್ಲಿ ವಿಫಲರಾಗಿದ್ದರು,
ಸಮಬಲದ ಪ್ರಥಮಾರ್ಧ: ಬೆಂಗಳೂರು ಬುಲ್ಸ್ ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರಥಮಾರ್ಧಲ್ಲಿ ಮೇಲುಗೈ ಸಾಧಿಸುತ್ತದೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಕೊನೆಯ ಕ್ಷಣದಲ್ಲಿ ತಕ್ಕ ತಿರುಗೇಟು ನೀಡಿದ ತೆಲುಗು ಟೈಟಾನ್ಸ್ 17-17 ಅಂಗಳಿಂದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.
ನಾಯಕ ಮಹೇಂದರ್ ಸಿಂಗ್ ಮುಂದಾಳತ್ವದಲ್ಲಿ ಅಂಗಣಕ್ಕಿಳಿದ ಬೆಂಗಳೂರು ಬುಲ್ಸ್ ತಂಡ ಆರಂಭದಲ್ಲಿ ನಿರಂತರ ಎರಡು ಅಕಂಗಳನ್ನು ಎದುರಾಳಿ ತಂಡಕ್ಕೆ ನೀಡಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತು. ಆದರೆ ಈ ನಿರಾಸೆ ಕೆಲ ಕ್ಷಣಗಳಿಗೆ ಮಾತ್ರ ಸೀಮಿತವಾಗಿತ್ತು. ಪ್ರೇಕ್ಷಕರ ಪ್ರೋತ್ಸಾಹದಲ್ಲಿ ಸಿಡಿದೆದ್ದ ತಂಡ ಪ್ರಥಮಾರ್ಧದ ಒಂದು ಹಂತದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಆಲೌಟ್ ಆಗುವ ಮೂಲಕ ತೆಲುಗು ಟೈಟಾನ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
ಬೆಂಗಳೂರು ಪರ ವಿಕಾಶ್ ಕಂಡೋಲ 4 ಅಂಕಗಳನ್ನು ರೈಡಿಂಗ್ ಮೂಲಕ ಗಳಿಸಿದರು. ನೀರಜ್ ನರ್ವಾಲ್ ಕೂಡ ರೈಡಿಂಗ್‌ನಲ್ಲಿ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾಗಿದ್ದರು. ಆದರೆ ತೆಲುಗು ಟೈಟಾನ್ಸ್ ಪರ ರಜನೀಶ್ ಹಾಗೂ ವಿನಯ್ ತಲಾ 4 ಅಂಕಗಳನ್ನು ಗಳಿಸಿ ತಂಡ ತಿರುಗೇಟು ನೀಡಲು ನೆರವಾದರು.
ಬೆಂಗಳೂರು ಬುಲ್ಸ್‌ನ ನೀರಜ್ ನರ್ವಾಲ್ 4 ಮತ್ತು ಟ್ಯಾಕಲ್‌ನಲ್ಲಿ ಸೌರಭ್ ನರ್ವಾಲ್ 3 ಅಂಕಗಳನ್ನು ಗಳಿಸಿ ಒಂದು ಹಂತದವರೆಗೆ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು.
ದಾವಣಗೆರೆ/ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…
ಬೆಂಗಳೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೈಕೋರ್ಟ್…
ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…
ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್ ಎಲ್‌ಪಿಜಿ ಹೊತ್ತ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು…
ಚಿತ್ತಾಪುರ: ಕಾಂಗ್ರೆಸ್ ಸರ್ಕಾರ ರೈತರ ಅಭ್ಯುದಯಕ್ಕೆ ಶ್ರಮಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನುಡಿದರು.…