ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುನಿನ 2ನೇ ಏಕದಿನ ಪಂದ್ಯ ರಾಂಚಿಯಲ್ಲಿ ಆರಂಭವಾಗಿದ್ದು, ಟಾಸ್ ಗೆದ್ದ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ತಂಡದಲ್ಲಿ ಮೂವರು ಸ್ಪಿನ್ನರ್ಗಳಿಗೆ ಅವಕಾಶ ನೀಡಲಾಗಿದೆ. ಅವರಲ್ಲಿ ಒಬ್ಬರು ಆರ್‌ಸಿಬಿಯ ಸ್ಪಿನ್ ಆಲ್‌ರೌಂಡರ್ ಶಹಬಾಜ್ ಅಹ್ಮದ್. ಈ ಹಿಂದೆ ಶಹಬಾಜ್ ಅಹ್ಮದ್, ಟೀಮ್ ಇಂಡಿಯಾದಲ್ಲಿ ಆಯ್ಕೆಯಾಗಿದ್ದರೂ, ಅವರಿಗೆ ಆಡುವ XI ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ಬಂಗಾಳವನ್ನು ಮುನ್ನಡೆಸಿರುವ ಶಹಬಾಜ್ ಅದ್ಭುತ ಆಲ್‌ರೌಂಡರ್ ಆಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವುದರ ಜೊತೆಗೆ ಅದ್ಭುತ ಫೀಲ್ಡರ್ ಕೂಡ ಆಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಶಹಬಾಜ್ ಅಹ್ಮದ್ ಆಯ್ಕೆಯಾಗಿದ್ದರು. ಸರಣಿ ಆರಂಭಕ್ಕೂ ಮುನ್ನ ಇಂಜುರಿಗೊಂಡಿದ್ದ ವಾಷಿಂಗ್ಟನ್ ಸುಂದರ್ ಬದಲಿಯಾಗಿ, ಶಹಬಾಜ್ ಅಹ್ಮದ್ಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಆ ಪ್ರವಾಸದಲ್ಲಿ ಅವರಿಗೆ ಆಡುವ ಇಲೆವೆನ್ನಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಆದರೆ ಶಹಬಾಜ್ ಅಹ್ಮದ್, ಇಂದು ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡುವ ಅವಕಾಶ ಸಿಕ್ಕಿದೆ.
ಬಂಗಾಳದ ಪರ ಕ್ರಿಕೆಟ್ ಆಡುವ ಶಹಬಾಜ್ ಮೂಲತಃ ಹರಿಯಾಣದ ಮೇವಾತ್ ಜಿಲ್ಲೆಯವರು. ಆದರೆ, ಅವರು ಹರಿಯಾಣದಿಂದ ಬಂಗಾಳಕ್ಕೆ ಹೋಗುವುದರ ಹಿಂದೆ ಒಂದು ಕಥೆಯಿದೆ. ವಾಸ್ತವವಾಗಿ ಶಹಬಾಜ್ ಅವರ ತಂದೆಗೆ ಶಹಬಾಜ್ ಅಹ್ಮದ್ ಇಂಜಿನಿಯರ್ ಆಗಬೇಕೆಂಬ ಕನಸಿತ್ತು. ಹೀಗಾಗಿ ತಂದೆಯ ಕನಸಿನಂತೆ ಇಂಜಿನಿಯರಿಂಗ್ ಮಾಡಲು ಕಾಲೇಜ್ ಸೇರಿಕೊಂಡ ಶಹಬಾಜ್ಗೆ 3 ವರ್ಷಗಳ ಬಳಿಕ ಕ್ರಿಕೆಟ್ ಮೇಲಿನ ಒಲವು ಹೆಚ್ಚಾಯಿತು. ಇದನ್ನು ಕಂಡ ಅವರ ತಂದೆ ಶಹಬಾಜ್ಗೆ ಕ್ರಿಕೆಟ್ ಅಥವಾ ಓದು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದರು. ಇದನ್ನು ಕೇಳಿದ ಶಹಬಾಜ್ ಕ್ರಿಕೆಟ್ ಆಡಲು ನಿರ್ಧರಿಸಿದರು.
7 ಪಂದ್ಯಗಳಲ್ಲಿ 6 ಶತಕ
ಮೊದಲು ಗುರ್ಗಾಂವ್‌ನ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಶಹಬಾಜ್, ಗೆಳೆಯ ಪ್ರಮೋದ್ ಚಾಂಡಿಲನ ಇಚ್ಛೆಯಂತೆ ಬಂಗಾಳಕ್ಕೆ ಹೋಗಿ ತಪನ್ ಮೆಮೋರಿಯಲ್ ಕ್ಲಬ್ ಸೇರಿಕೊಂಡರು. ಈ ಕ್ಲಬ್‌ಗಾಗಿ ಮೊದಲ 7 ಪಂದ್ಯಗಳಲ್ಲಿ 6 ಶತಕಗಳನ್ನು ಬಾರಿಸಿದ ಶಹಬಾಜ್ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ತೋರಿದರು. ಈ ಪ್ರದರ್ಶನ ನೋಡಿದ ಬಂಗಾಳ ಕ್ರಿಕೆಟ್ ಸಂಸ್ಥೆ ಅವರನ್ನು ಪ್ರಥಮ ದರ್ಜೆಯ ಕ್ರಿಕೆಟ್ಗೆ ಆಯ್ಕೆ ಮಾಡಿತು.
ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…
ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…
ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ…
ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…
ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…