ಜಿಂಬಾಬ್ವೆ ತಂಡವು ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಮೆಂಟ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್ ವಿಂಡೀಸ್ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್ ತಂಡದ ವಿರುದ್ಧ 304 ರನ್ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.
ಜಿಂಬಾಬ್ವೆ ಐಸಿಸಿ ಏಕದಿನ ವಿಶ್ವಕಪ್ ಕ್ವಾಲಿಫೈಯರ್ ಟೂರ್ನಮೆಂಟ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್ ವಿಂಡೀಸ್ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್ ತಂಡದ ವಿರುದ್ಧ 304 ರನ್ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್‌ನಲ್ಲಿ 300 (317) ರನ್ಗಳ ಅಂತರದ ಜಯ ಸಾಧಿಸಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್‌ನಲ್ಲಿ 300 (317) ರನ್ಗಳ ಅಂತರದ ಜಯ ಸಾಧಿಸಿದೆ.
ಇನ್ನೂ ಈ ಪಂದ್ಯಕ್ಕೆ ಬರುವುದಾದರೆ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 50 ಓವರ್ಗಳಲ್ಲಿ 408 ರನ್ ಗಳಿಸಿತ್ತು. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಜಿಂಬಾಬ್ವೆ ತಂಡದ ಮೊದಲ 400 ಪ್ಲಸ್ ರನ್ ಆಗಿದೆ.
ತಂಡದ ನಾಯಕ ಸೀನ್ ವಿಲಿಯಮ್ಸನ್ 101 ಎಸೆತಗಳಲ್ಲಿ 174 ರನ್ಗಳಿಸಿದರೆ, ಜೋಯ್ಲಾರ್ಡ್ ಗುಮ್ಬೀ 78, ಸಿಕಂದರ್ ರಾಜಾ 48, ರಿಯಾನ್ ಬರ್ಲ್ 47 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಯುಎಸ್ ತಂಡ ಕೇವಲ 104 ರನ್ಗಳಿಗೆ ಸರ್ವಪತನಗೊಂಡಿತ್ತು. ರಿಚರ್ಡ್ ನಗರವಾ 25ಕ್ಕೆ2, ಬ್ರಾಡ್ ಇವಾನ್ಸ್ 20ಕ್ಕೆ1, ರಾಜಾ 15ಕ್ಕೆ2, ಲ್ಯೂಕ್ ಜಾಂಗ್ವೆ 21ಕ್ಕೆ1 ಹಾಗೂ ಬರ್ಲ್18ಕ್ಕೆ 1 ವಿಕೆಟ್ ಪಡೆದಿದ್ದರು.
ಇನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ಗಳ ಅಂತರ ಜಯ ಸಾಧಿಸಿದ ಟಾಪ್ 5 ತಂಡಗಳನ್ನು ನೋಡುವುದಾದರೆ, ಭಾರತ 317ರನ್ಗಳ ಜಯ vs ಶ್ರೀಲಂಕಾ, ಜಿಂಬಾಬ್ವೆ 304 ರನ್ಗಳ ಜಯ vs ಅಮೆರಿಕಾ, ನ್ಯೂಜಿಲ್ಯಾಂಡ್ 290ರನ್ಗಳ ಜಯ vs ಐರ್ಲೆಂಡ್, ಆಸ್ಟ್ರೇಲಿಯಾ 275 ರನ್ಗಳ ಜಯ vs ಅಫ್ಭಾನಿಸ್ತಾನ, ದಕ್ಷಿಣ ಆಫ್ರಿಕಾ 272ರನ್ಗಳ ಜಯ vs ಜಿಂಬಾಬ್ವೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…