ಕ್ರೀಡೆ

ಮಹಾರಾಜ ಟ್ರೋಫಿ: ಗುಲ್ಬರ್ಗ ಮೈಸ್ಟಿಕ್ಸ್‌ಗೆ “ದೇವದತ್ತ” ಜಯ

ಬೆಂಗಳೂರು: ದೇವದತ್ತ ಪಡಿಕ್ಕಲ್‌ (78*) ಅವರ ಆಕರ್ಷಕ ಅರ್ಧ ಶತಕ ಮತ್ತು ವಿದ್ವತ್‌ ಕಾವೇರಪ್ಪ ಮತ್ತು ಮನೋಜ್‌ ಅವರ ಆಕರ್ಷಕ ಬೌಲಿಂಗ್‌ ನೆರವಿನಿಂದ ಮಹಾರಾಜ ಟ್ರೋಫಿಯಲ್ಲಿ ಗುಲ್ಬರ್ಗ ಮೈಸ್ಟಿಕ್ಸ್‌ ತಂಡ ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 6 ವಿಕೆಟ್‌ ಗಳ ಜಯ ಗಳಿಸಿದೆ.

ಜಯ ಗಳಿಸಲು 145 ರನ್‌ಗಳ ಅಲ್ಪ ಮೊತ್ತವನ್ನು ಬೆಂಬತ್ತಿದ ಗುಲ್ಬರ್ಗ ಮೈಸ್ಟಿಕ್ಸ್‌ ದೇವದತ್ತ ಪಡಿಕ್ಕಲ್‌ ಅವರು ಅಜೇಯ 78 ರನ್‌ (61 ಎಸೆತ, 7 ಬೌಂಡರಿ 4 ಸಿಕ್ಸರ್‌) ನೆರವಿನಿಂದ ಇನ್ನೂ 15 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿತು. ಬೆಂಗಳೂರು ಪರ ಜಗದೀಶ ಸುಚಿತ್‌ ಹಾಗೂ ರೋನಿತ್‌ ಮೋರೆ ತಲಾ 1 ವಿಕೆಟ್‌ ಗಳಿಸಿದರು.

ಸಾಧಾರಣ ಮೊತ್ತ ಗಳಿಸಿದ ಬೆಂಗಳೂರು:
ಗುಲ್ಬರ್ಗ ಮೈಸ್ಟಿಕ್ಸ್‌ನ ವಿದ್ವತ್‌ ಕಾವೇರಪ್ಪ (31ಕ್ಕೆ 3) ಹಾಗೂ ಮನೋಜ್‌ ಭಾಂಡಗೆ (23ಕ್ಕೆ3) ಅವರ ಬೌಲಿಂಗ್‌ ದಾಳಿಗೆ ತತ್ತರಿಸಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಹಾರಾಜ ಟ್ರೋಪಿಯಲ್ಲಿ 21ನೇ ಪಂದ್ಯದಲ್ಲಿ 144 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿದೆ.

ಟಾಸ್‌ ಗೆದ್ದ ಗುಲ್ಬರ್ಗ ಮೈಸ್ಟಿಕ್ಸ್‌ ನಾಯಕ ಮನೀಶ್‌ ಪಾಂಡೆ ಪೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿರುವುದನ್ನು ತಂಡದ ಬೌಲರ್‌ಗಳು ಉತ್ತಮ ರೀತಿಯಲ್ಲಿಯೇ ಸಮರ್ಥಿಸಿಕೊಂಡರು. ನಿನ್ನೆ ಶತಕ ಸಿಡಿಸಿದ್ದ ಎಲ್‌.ಆರ್‌. ಚೇತನ್‌ ಕೇವಲ 6 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದು ತಂಡದ ರನ್‌ ಗಳಿಕೆಗೆ ಆರಂಭದಲ್ಲೇ ಕಡಿವಾಣ ಬೀಳುವಂತೆ ಮಾಡಿತು.

ನಾಯಕ ಮಯಾಂಕ್‌ ಆಗರ್ವಾಲ್‌ (28) ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಸೇರಿದ್ದು ತಂಡದ ಬೃಹತ್‌ ಮೊತ್ತದ ಗುರಿಗೆ ಅಡ್ಡಿಯಾಯಿತು. ಕೆ.ವಿ. ಅನೀಶ್‌ (20), ಶಿವಕುಮಾರ್‌ ರಕ್ಷಿತ್‌ (16), ಕ್ರಾಂತಿ ಕುಮಾರ್‌ (17), ಜಗದೀಶ ಸುಚಿತ್‌ (17) ಹೀಗೆ ಬೆಂಗಳೂರಿನ ಬ್ಲಾಸ್ಟರ್ಸ್‌ನ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ಪೆವಿಲಿಯನ್‌ ಹಾದಿ ಹಿಡಿದರು.

ಗುಲ್ಬರ್ಗ ಮೈಸ್ಟಿಕ್ಸ್‌ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ರೀತಿಯ ಬೌಲಿಂಗ್‌ ಪ್ರದರ್ಶಿಸಿರುವುದು ಗಮನಾರ್ಹ. ವಿದ್ವತ್‌ ಕಾವೇರಪ್ಪ ಹಾಗೂ ಮನೋಜ್‌ ಭಾಂಡಗೆ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಒಟ್ಟು ಆರು ವಿಕೆಟ್‌ ಹಂಚಿಕೊಂಡರು. ವಿದ್ವತ್‌ ಕಾವೇರಪ್ಪ 31 ರನ್‌ಗೆ 3 ವಿಕೆಟ್‌ ಗಳಿಸಿದರೆ, ಮನೋಜ್‌ ಭಾಂಡಗೆ 23 ರನ್‌ಗೆ 3 ವಿಕೆಟ್‌ ಗಳಿಸಿ ಬೆಂಗಳೂರಿನ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಹಿಂದೆ ಮೈಸೂರು ವಾರಿಯರ್ಸ್‌ ಪರ ಆಡುತ್ತಿದ್ದ ಕುಶಲ್‌ ವಾಧ್ವಾನಿ ಈ ಬಾರಿ ಬೆಂಗಳೂರು ತಂಡದಲ್ಲಿದ್ದು, ಮಹಾರಾಜ ಟ್ರೋಫಿಯ ಮೊದಲ ಪಂದ್ಯದಲ್ಲೇ ಬೆಂಗಳೂರಿನ ನಾಯಕ ಮಯಾಂಕ್‌ ಅಗರ್ವಾಲ್‌ ಅವರ ವಿಕೆಟ್‌ ಕಬಳಿಸಿ ತಂಡಕ್ಕೆ ಉತ್ತಮ ರೀತಿಯಲ್ಲಿ ನೆರವಾದರು. ಮನೋಜ್‌ ಭಾಂಡಗೆ ಮಧ್ಯಮ ಕ್ರಮಾಂಕದ ಆಟಗಾರರ ವಿಕೆಟ್‌ ಗಳಿಸಿ ಯಶಸ್ವಿ ಬೌಲರ್‌ ಎನಿಸಿದರು. ವಾಧ್ವಾನಿ 17 ರನ್‌ಗೆ 2 ವಿಕೆಟ್‌ ಗಳಿಸುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್‌ 9 ವಿಕೆಟ್‌ ನಷ್ಟಕ್ಕೆ ​144 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು.

ಸಂಕ್ಷಿಪ್ತ ಸ್ಕೋರ್‌:
ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 144 (ಮಯಾಂಕ್‌ ಅಗರ್ವಾಲ್‌ 28, ಅನೀಶ್‌ 20, ಕ್ರಾಂತಿ ಕುಮಾರ್‌ 17, ಕಾವೇರಪ್ಪ 31ಕ್ಕೆ 3, ಮನೋಜ್‌ 23ಕ್ಕೆ 3, ಕುಶಾಲ್‌ ವಾಧ್ವಾನಿ 17 ಕ್ಕೆ 2).

ಗುಲ್ಬರ್ಗ ಮೈಸ್ಟಿಕ್ಸ್‌: 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 150 (ದೇವದತ್ತ ಪಡಿಕ್ಕಲ್‌ 78*). ಜಸ್ವತ್‌ ಆಚಾರ್ಯ 18, ಮನೀಶ್‌ ಪಾಂಡೆ 13, ಕ್ರಾಂತಿ ಕುಮಾರ್‌ 16ಕ್ಕೆ 1)

andolana

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

7 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

7 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

9 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

11 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

15 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

15 hours ago