ಕ್ರೀಡೆ

IPL 2025 | ಕೆಕೆಆರ್‌ಗೆ ಸುಲಭ ಜಯ ; ಸೋತ ರಾಜಸ್ಥಾನ್‌

ಗುವಾಹಟಿ: ಸಂಘಟಿತ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ಅತಿಥೇಯ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದ ಕೆಕೆಆರ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮತ್ತೊಂದೆಡೆ ಆರ್‌ಆರ್‌ ತಾನಾಡಿದ ಮೊದಲೆರೆಡು ಪಂದ್ಯಗಳಲ್ಲಿಯೂ ಸೋತು ನಿರಾಸೆ ಅನುಭವಿಸಿದೆ.

ಇಲ್ಲಿನ ಬಾರ್ಸಪರ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್‌ ಮತ್ತು ಆರ್‌ಆರ್‌ ನಡುವಣ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಆರ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 151 ರನ್‌ ಗಳಿಸಿತು. ಈ ಮೊತ್ತ ಬೆನ್ನತ್ತಿದ ಕೆಕೆಆರ್‌ 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿ 8 ವಿಕಟ್‌ಗಳ ಅಂತರದಿಂದ ಗೆಲುವು ದಾಖಲಿಸಿತು.

ಆರ್‌ಆರ್‌ ಇನ್ನಿಂಗ್ಸ್‌: ತನ್ನ ತವರು ನೆಲದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ಆರ್‌ಆರ್‌ಗೆ ನಿರೀಕ್ಷಿತ ಆರಂಭ ಕಂಡುಬರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸ್ಯಾಮ್ಸನ್‌ 13(11), ಜೈಸ್ವಾಲ್‌ 29(24) ರನ್‌ ಗಳಿಸಿ ವೇಗವಾಗಿ ಔಟಾದರು.

ನಂತರ ಬಂದ ನಾಯಕ ರಿಯಾನ್‌ ಪರಾಗ್‌ ಅಬ್ಬರಿಸುವ ಹಾಗೆ ಕಂಡರೂ 25(15) ರನ್‌ ಗಳಿಸಿ ಔಟಾದರು. ತಂಡಕ್ಕೆ ಮತ್ತೊಮ್ಮೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಧ್ರುವ್‌ ಜುರೆಲ್‌ 33(28) ರನ್‌ ಗಳಿಸಿದ್ದೆ ತಂಡದ ಪರ ವೈಯಕ್ತಿಕ ಗರಿಷ್ಠ ರನ್‌ ಆಗಿತ್ತು.

ಉಳಿದಂತೆ ನಿತೀಶ್‌ ರಾಣಾ 8(9), ವನಿಂದು ಹಸರಂಗ 4(4), ಶುಭಂ ದುಬೆ 9(12), ಹೆಟ್ಮಾಯರ್‌ 7(8), ಜೋಫ್ರಾ ಆರ್ಚರ್‌ 16(7) ರನ್‌ ಗಳಿಸಿ ಔಟಾದರು. ತೀಕ್ಷಣ ಹಾಗೂ ತುಷಾರ್‌ ದೇಶ್‌ಪಾಂಡೆ ಔಟಾಗದೇ 1(1) ಮತ್ತು 2(1) ರನ್‌ ಕಲೆಹಾಕಿದರು.

ಕೆಕೆಆರ್‌ ಪರ ವರುಣ್‌ ಚಕ್ರವರ್ತಿ, ಮೋಯಿನ್‌ ಅಲಿ, ಹರ್ಷಿತ್‌ ರಣಾ, ವೈಭವ್‌ ಅರೋರಾ ತಲಾ 2 ವಿಕೆಟ್‌ ಪಡೆದರು.

ಕೆಕೆಆರ್‌ ಇನ್ನಿಂಗ್ಸ್‌: ಈ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್‌ಗೆ ಕ್ವಿಂಟನ್‌ ಡಿ ಕಾಕ್‌ ಆಸರೆಯಾದರು. ಆರಂಭಿಕ ಬ್ಯಾಟರ್‌ ಮೊಯೀನ್‌ ಅಲಿ 5(12) ರನ್‌ ಗಳಿಸಿ ಇಲ್ಲದ ರನ್‌ ಕದಿಯಲು ಹೋಗಿ ರನ್‌ಔಟ್‌ ಆಗಿ ಹೊರ ನಡೆದರು. ಬಳಿಕ ಬಂದ ನಾಯಕ ಅಜಿಂಕ್ಯಾ ರಹಾನೆ 18(15) ಕೂಡಾ ಹೆಚ್ಚುಹೊತ್ತು ನಿಲ್ಲಲಿಲ್ಲ.

ನಂತರ ಒಂದಾದ ಕ್ವಿಂಟನ್‌ ಡಿ ಕಾಕ್‌ ಹಾಗೂ ರಘುವಂಶಿ ತಂಡದ ದಿಕ್ಕನ್ನೇ ಬದಲಾಯಿಸಿದರು. ತಮ್ಮ ಬಲವಾದ ಹೊಡೆತಗಳ ಮೂಲಕ ಆರ್‌ಆರ್‌ ಬೌಲರ್‌ಗಳನ್ನು ಕಾಡಿದರು. ಡಿಕಾಕ್‌ ಔಟಾಗದೇ 61 ಎಸೆತಗಳಲ್ಲಿ 8 ಬೌಂಡರಿ ಹಾಗೂ ಭರ್ಜರಿ 6 ಸಿಕ್ಸರ್‌ ಸಹಿತ 97 ರನ್‌ ಗಳಿಸಿದರು. ರಘುವಂಶಿ 22(17) ರನ್‌ ಗಳಿಸಿ ಔಟಾಗದೇ ಉಳಿದು ಡಿಕಾಕ್‌ಗೆ ಸಾಥ್‌ ನೀಡಿದರು.

ಆರ್‌ಆರ್ ಪರ ಹಸರಂಗ ಒಂದು ವಿಕೆಟ್‌ ಪಡೆದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಭಾನುವಾರವಾದರೂ ತಪ್ಪಿಸುವಂತಿಲ್ಲ: ನವೆಂಬರ್‌.1ರಂದು ಶಾಲೆಗಳಲ್ಲಿ ರಾಜ್ಯೋತ್ಸವ ಕಡ್ಡಾಯ

ಬೆಂಗಳೂರು: ನವೆಂಬರ್‌ 1ರಂದು ಭಾನುವಾರ ಬಂದರೂ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಡ್ಡಾಯ ಎಂದು ರಾಜ್ಯ ಸರ್ಕಾರ…

31 mins ago

ಗುಂಡ್ಲುಪೇಟೆ: ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ

ಗುಂಡ್ಲುಪೇಟೆ: ತಾಲ್ಲೂಕಿನ ವಡಯ್ಯನಪುರ ಹಾಗೂ ಬೊಮ್ಮಲಾಪುರ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಕೊನೆಗೂ ಬೋನಿಗೆ ಬಿದ್ದಿದೆ. ಬೊಮ್ಮಲಾಪುರ…

53 mins ago

ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಚಿರತೆ ದಾಳಿ

ಹನೂರು: ತಾಲ್ಲೂಕಿನ ಗುಂಡಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ದನ-ಕುರಿ ಮೇಯಿಸಲು ಹೋಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ…

2 hours ago

ಮೈಸೂರು: ಬಾಲಕಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣ: ಕಾಮುಕನಿಗೆ ಗಲ್ಲು ಶಿಕ್ಷೆ

ಮೈಸೂರು: ಮೈಸೂರಿನಲ್ಲಿ ಕಳೆದ ವರ್ಷದ ದಸರಾ ವೇಳೆ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು…

2 hours ago

ಸಯ್ಯಾಜಿರಾವ್ ರಸ್ತೆಯಲ್ಲಿ ಕುಸಿದು ಬಿದ್ದ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ; ಕಾರು, ಆಟೋ ಜಖಂ

ಮೈಸೂರು: ದಸರಾ ದೀಪಾಲಂಕಾರದ ನಡುವೆ ಅವಘಡವೊಂದು ಸಂಭವಿಸಿದೆ. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ ಬೃಹತ್ ವಿದ್ಯುತ್ ದೀಪಾಲಂಕಾರದ ಕಂಬ ಕುಸಿದು ಬಿದ್ದಿದ್ದು,…

3 hours ago

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

6 hours ago